»   » ಗೋಲ್ಡನ್ ಸ್ಟಾರ್ ಗಣೇಶ್ ಸ್ಪರ್ಶದಿಂದ ನಡೆದಿತ್ತು ಒಂದು ಪವಾಡ.!

ಗೋಲ್ಡನ್ ಸ್ಟಾರ್ ಗಣೇಶ್ ಸ್ಪರ್ಶದಿಂದ ನಡೆದಿತ್ತು ಒಂದು ಪವಾಡ.!

Posted By:
Subscribe to Filmibeat Kannada

ಇದಕ್ಕೆ ಅಭಿಮಾನದ ಫಲ ಎನ್ನಬೇಕೋ... ದೇವರ ಕೃಪೆ ಎಂದು ಉದ್ಗಾರ ಮಾಡಬೇಕೋ... ಅಥವಾ ಪವಾಡ ಎಂದು ಆಶ್ಚರ್ಯ ಪಡಬೇಕೋ... ನಿಮಗೆ ಬಿಟ್ಟಿದ್ದು. ಒಟ್ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ರವರ ಸ್ಪರ್ಶದಿಂದ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಕನೊಬ್ಬ ಸಾವಿನ ದವಡೆಯಿಂದ ಬಚಾವ್ ಆಗಿರುವುದು ಮಾತ್ರ ಸತ್ಯ.!

ಈ ಸತ್ಯ ಘಟನೆ ಬೆಳಕಿಗೆ ಬಂದಿದ್ದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ...

ಬ್ಲಡ್ ಕ್ಯಾನ್ಸರ್ ನಿಂದ ಗುಣಮುಖರಾಗಿರುವ ಶಶಾಂಕ್ ಹಾಗೂ ಆತನ ತಂದೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಗಣೇಶ್ ಬಗ್ಗೆ ಹೇಳಿದ್ದು ಹೀಗೆ....

ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಶಶಾಂಕ್

''ನನ್ನ ಮಗ ಶಶಾಂಕ್. ಗೋಲ್ಡನ್ ಸ್ಟಾರ್ ಗಣೇಶ್ ಅಂದ್ರೆ ಪ್ರಾಣ. ಜ್ವರ ಬಂದು ಆಸ್ಪತ್ರೆಗೆ ಆಡ್ಮಿಟ್ ಮಾಡಿದ್ಮೇಲೆ ಶಶಾಂಕ್ ಗೆ ಬ್ಲಡ್ ಕ್ಯಾನ್ಸರ್ ಇರುವುದು ನಮಗೆ ಗೊತ್ತಾಯ್ತು. ಶಶಾಂಕ್ ಕಂಡೀಷನ್ ತುಂಬಾ ಕ್ರಿಟಿಕಲ್ ಆಗಿತ್ತು. ಗಣೇಶ್ ರವರನ್ನ ನೋಡಬೇಕು ಅಂತ ಇಷ್ಟ ಪಡುತ್ತಿದ್ದ'' - ಶಶಾಂಕ್ ತಂದೆ

ಶಶಾಂಕ್ ರನ್ನ ಭೇಟಿ ಮಾಡಿದ ಗಣೇಶ್

''ನಾವು ಎಷ್ಟೇ ಟ್ರೀಟ್ಮೆಂಟ್ ಕೊಟ್ಟರೂ, ಪ್ಲೇಟ್ಲೆಟ್ ಕೌಂಟ್ ಜಾಸ್ತಿ ಆಗುತ್ತಿರಲಿಲ್ಲ. ಹತ್ತು ಸಾವಿರಕ್ಕೆ ಪ್ಲೇಟ್ಲೆಟ್ ಕೌಂಟ್ ಇಳಿದು ಬಿಟ್ಟಿತ್ತು. ಗಣೇಶ್ ದೇವರ ತರಹ ಆಸ್ಪತ್ರೆಗೆ ಬಂದರು. ಮೂರು ಗಂಟೆಗಳ ಕಾಲ ಶಶಾಂಕ್ ಜೊತೆ ಮಾತನಾಡಿ, ಆಟ ಆಡಿದರು, ಮುದ್ದಾಡಿದರು'' - ಶಶಾಂಕ್ ತಂದೆ

ಗಣೇಶ್ ಬಂದು ಹೋದ್ಮೇಲೆ ಪವಾಡ ನಡೆಯಿತು

''ಮಾರನೇ ದಿನದಿಂದ ಪವಾಡ ನಡೆಯಿತು. ಗಣೇಶ್ ಬಂದು ನನ್ನ ಮಗನನ್ನ ಮುಟ್ಟಿದ ಮೇಲೆ ಪ್ಲೇಟ್ಲೆಟ್ ಕೌಂಟ್ ಜಾಸ್ತಿ ಆಗುತ್ತಾ ಹೋಯ್ತು. ಡಾಕ್ಟರ್ ಗೂ ಆಶ್ಚರ್ಯ ಆಯ್ತು'' - ಶಶಾಂಕ್ ತಂದೆ

ಶಶಾಂಕ್ ಬದುಕಿರಲು ಕಾರಣ...

''ಗಣೇಶ್ ಸ್ಪರ್ಶ ಮಾಡಿದ ಪ್ರಭಾವೋ ಏನೋ... ಶಶಾಂಕ್ ಇವತ್ತು ಬದುಕಿರಲು ಕಾರಣ ಗಣೇಶ್'' - ಶಶಾಂಕ್ ತಂದೆ

'ಮುಂಗಾರು ಮಳೆ' ಸಿನಿಮಾ ಸಖತ್ ಇಷ್ಟ

ಅಂದ್ಹಾಗೆ, ಶಶಾಂಕ್ ಗೆ ಗಣೇಶ್ ರವರ 'ಮುಂಗಾರು ಮಳೆ' ಸಿನಿಮಾ ಅಂದ್ರೆ ಪಂಚಪ್ರಾಣ.

English summary
Golden Star Ganesh's miracle touch gives rebirth to Blood Cancer Patient Shashank.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada