»   » ಗಣೇಶ್ ಸಿನಿಮಾರಂಗಕ್ಕೆ ಬರಲು ಮೊದಲ ಮೆಟ್ಟಿಲಾಗಿದ್ದು ಈ ವ್ಯಕ್ತಿ.!

ಗಣೇಶ್ ಸಿನಿಮಾರಂಗಕ್ಕೆ ಬರಲು ಮೊದಲ ಮೆಟ್ಟಿಲಾಗಿದ್ದು ಈ ವ್ಯಕ್ತಿ.!

Posted By:
Subscribe to Filmibeat Kannada

ಗಣೇಶ್ ಅವರಿಗೆ ಸಿನಿಮಾರಂಗಕ್ಕೆ ಬರಬೇಕು ಎನ್ನುವುದು ಚಿಕ್ಕವಯಸ್ಸಿನ ಕನಸು. ಹಾಗಾಗಿಯೇ, ಸ್ಕೂಲ್ ಗೆ ಕೂಡ ಸರಿಯಾಗಿ ಹೋಗದೇ, ಮೆಜೆಸ್ಟಿಕ್ ನಲ್ಲಿ ಸಿನಿಮಾ ನೋಡಲು ಹೋಗುತ್ತಿದ್ದರು. ಕಾಲೇಜು ದಿನಗಳಲ್ಲಿ ಸಿನಿಮಾ ಕನಸು ಮತ್ತಷ್ಟು ಹೆಚ್ಚಾಗಿತು.

ಹೀಗಿರುವಾಗ, ಒಂದು ಅವಕಾಶಕ್ಕಾಗಿ ಕಾಯುತ್ತಾ ಕೂತಿದ್ದರಂತೆ ಗಣೇಶ್. ಈ ಮಧ್ಯೆ ಕಾಲೇಜ್, ಜೊತೆಗೆ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು. ಆಗಲೇ ಸಿಕ್ಕಿದ್ದು ಗಣೇಶ್ ಪಾಲಿನ ಮೊದಲ ಹೀರೋ. ಅವರ ಹೆಸರು ವೀರಮಾರೇಗೌಡ.

ಯಶಸ್ಸಿನ ಅಮಲು ಗಣೇಶ್ ನೆತ್ತಿಗೇರಿರಲಿಲ್ಲ: ಬಂದ ದಾರಿ ಮರೆಯಲಿಲ್ಲ.!

Ganesh Speaks About his Freind Veeramaregowda

ಅಡಕಮಾರನಹಳ್ಳಿಯಲ್ಲಿ ಜಾತ್ರೆಯಲ್ಲಿ ವೀರಮಾರೇಗೌಡರು ಒಂದು ನಾಟಕ ಮಾಡಿದರು. ಆ ನಾಟಕದಲ್ಲಿ ಗಣೇಶ್ ಅವರು ಕೂಡ ಅಭಿನಯಸಿದ್ದರು. ಆಗ ಗಣೇಶ್ ಅಭಿನಯ ನೋಡಿ ಇಷ್ಟಪಟ್ಟ ವೀರಮಾರೇಗೌಡರು ಗಣೇಶ್ ಗೆ ಸಹಾಯ ಮಾಡಿದರಂತೆ. ಆದರ್ಶ ಫಿಲ್ಮ್ ಇನ್ಸೂಟ್ಯೂಟ್ ನಲ್ಲಿ ಬಿ.ಆರ್.ಪಿ ಪುಟ್ಟಸ್ವಾಮಿ ಎಂಬ ಆತ್ಮೀಯರೊಬ್ಬರು ಮೂಲಕ ಗಣೇಶ್ ಬಗ್ಗೆ ಹೇಳಿ ಸಹಾಯ ಮಾಡಿ ಎಂದು ಅಲ್ಲಿಗೆ ಸೇರಿಸಿದ್ದರಂತೆ. ಇದು ಗಣೇಶ್ ಸಿನಿ ಪ್ರಪಂಚಕ್ಕೆ ಕಾಲಿಡಲು ಮೊದಲ ಮೆಟ್ಟಿಲಾಯಿತ್ತಂತೆ. ಅದಕ್ಕೆ ಕಾರಣ ಇದೇ ವೀರಮಾರೇಗೌಡರು.

'ಗೋಲ್ಡನ್ ಸ್ಟಾರ್' ಗಣೇಶ್ ಬಗ್ಗೆ ದುನಿಯಾ ವಿಜಯ್ ಏನಂದರು.?

ಆದರ್ಶ ಫಿಲ್ಮ್ ಇನ್ಸೂಟ್ಯೂಟ್ ನಲ್ಲಿ ಗಣೇಶ್ ಅವರಿಗೆ ಬೆಸ್ಟ್ ಸ್ಟೂಡೆಂಟ್ ಅವಾರ್ಡ್ ಬಂದಾಗ, ಸೂಟ್ ಹಾಕ್ಕೊಂಡು ಬನ್ನಿ ಅಂದ್ರಂತೆ. ಆಗ ಗಣೇಶ್ ಅವರು ವೀರಮಾರೇಗೌಡರ ಬಳಿ ಸೂಟ್ ತಗೊಂಡು ಹೋಗಿದ್ದರಂತೆ. ಅದನ್ನ ಈಗಲೂ ಲಕ್ಕಿ ಸೂಟ್ ಎಂದು ಜೋಪಾನವಾಗಿ ಕಾಪಾಡಿಕೊಂಡಿದ್ದಾರಂತೆ.

ಮದುವೆ ಆರ್ಕೆಸ್ಟ್ರಾದಲ್ಲಿ ಗಣೇಶ್ ಡ್ಯಾನ್ಸ್ ನೋಡಿದ್ರೆ ಎದ್ದು ಬಿದ್ದು ನಗ್ತೀರಾ!

English summary
Kannada Actor Golden Star Ganesh speaks about his struggling days in Weekend With Ramesh-3

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada