For Quick Alerts
  ALLOW NOTIFICATIONS  
  For Daily Alerts

  ಜೋಡಿ ನಂ.1: ದಂಪತಿಗಳ ಜೊತೆ ಸೀರಿಯಲ್ ತಾರೆಯರು!

  By ಪ್ರಿಯಾ ದೊರೆ
  |

  ಜೀ ಕನ್ನಡ ವಾಹಿನಿಯಲ್ಲಿ ಪ್ರತೀ ವೀಕೆಂಡ್‌ನಲ್ಲೂ ಏನಾದರೂ ಒಂದು ವಿಶೇಷತೆಗಳು ಇದ್ದೇ ಇರುತ್ತದೆ. ಪ್ರತೀ ವೀಕೆಂಡ್ ಈ ಬಾರಿ ಹೊಸತೇನಿದೆ ಎಂದು ನೋಡಲು ಪ್ರೇಕ್ಷಕರು ಕೂಡ ಕಾಯುತ್ತಿರುತ್ತಾರೆ. ಅದರಲ್ಲೂ ಹಬ್ಬದ ಸೀಸನ್ ಅಂದರೆ, ಮನರಂಜನೆ ದುಪ್ಪಟ್ಟಾಗುತ್ತದೆ.

  ಸೆಲೆಬ್ರಿಟಿಗಳ ಜೊತೆಗೆ ರಿಯಾಲಿಟಿ ಶೋಗಳಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿಸುವ ವಾಹಿನಿ ಈ ವಾರ ಮತ್ತೊಂದು ವಿಶೇಷತೆಯಿಂದ ಕೂಡಿದೆ. ಅದು ಏನು..? ಈ ವಾರ ಅಂತಹ ಸ್ಪೆಷಲ್‌ ಕಾರ್ಯಕ್ರಮ ಯಾವುದಿದೆ ಎನ್ನುವುದನ್ನು ಮುಂದೆ ಓದಿ...

  ಕನ್ನಡ ಧಾರಾವಾಹಿಗಳ ಟಿಆರ್‌ಪಿ ರೇಟಿಂಗ್: ಈ ವಾರ ನಂ 1 ಸೀರಿಯಲ್ ಯಾವುದು?ಕನ್ನಡ ಧಾರಾವಾಹಿಗಳ ಟಿಆರ್‌ಪಿ ರೇಟಿಂಗ್: ಈ ವಾರ ನಂ 1 ಸೀರಿಯಲ್ ಯಾವುದು?

  ರಿಯಾಲಿಟಿ ಶೋಗಳಲ್ಲಿ ಅದ್ಭುತಗಳು ನಡೆಯುತ್ತಿರುತ್ತವೆ. ರಿಯಾಲಿಟಿ ಶೋಗಳೆಂದರೆ ಅದೊಂದು ಭಾವನೆಗಳ ಅಡ್ಡ. ಹಲವು ನೋವು ನಲಿವುಗಳನ್ನು ನೆನಪಿಸುವ ವೇದಿಕೆ. ನಗು-ಅಳುವಿನ ಮಿಶ್ರಿಣವೇ ಈ ರಿಯಾಲಿಟಿ ಶೋಗಳು.

  ಸಂಬಂಧಗಳನ್ನು ಗಟ್ಟಿ ಮಾಡುವ ವೇದಿಕೆ!

  ಸಂಬಂಧಗಳನ್ನು ಗಟ್ಟಿ ಮಾಡುವ ವೇದಿಕೆ!

  ರಿಯಾಲಿಟಿ ಶೋಗಳಿಂದಾಗಿ ಯಾವತ್ತೋ ಮಾಡಿದ ತಪ್ಪಿಗೆ, ಕಳೆದು ಹೋದ ಸಂಬಂಧಗಳನ್ನು ಹುಡುಕಿ ಸೇರುವ ಬಗೆಯೇ ಚೆಂದ. ನಕ್ಕು ನಲಿದು, ಡ್ಯಾನ್ಸ್, ಡ್ರಾಮಾ, ಕಾಮಿಡಿಗಳ ಮೂಲಕ ಎಲ್ಲಾ ನೆನಪಿಸುವಂತ ಫ್ಲಾಟ್ ಫಾರ್ಮ್ ಅಂತಾನೆ ಹೇಳಬಹುದು. ಯಾವತ್ತು ಹೇಳಲಾಗದ ಆ ಒಂದು ಮಾತನ್ನು ಹೇಳಿ ದೂರವಾಗಿದ್ದ ಸಂಬಂಧಗಳನ್ನು ಹತ್ತಿರ ಕರೆಸುತ್ತೆ. ಡ್ಯಾನ್ಸ್ ಒಂದಷ್ಟು ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತೆ. ಇನ್ನು 'ಜೋಡಿ ನಂ.1' ರಿಯಾಲಿಟಿ ಶೋ ಅಂತು ದಂಪತಿಗಳು ನಡುವಿನ ಪ್ರೀತಿಯನ್ನು ಹೆಚ್ಚಿಸಿ, ವೈಮನಸ್ಸನ್ನು ದೂರ ಮಾಡುತ್ತದೆ.

  ಶಿವಣ್ಣನೊಂದಿಗೆ ಹಾಡಿ, ಕುಣಿದು, ನಲಿದ ಕಾಫಿನಾಡು ಚಂದು!ಶಿವಣ್ಣನೊಂದಿಗೆ ಹಾಡಿ, ಕುಣಿದು, ನಲಿದ ಕಾಫಿನಾಡು ಚಂದು!

  ಹಬ್ಬ ಬಲು ಜೋರು!

  ಹಬ್ಬ ಬಲು ಜೋರು!

  ಈ ವೀಕೆಂಡ್‌ನಲ್ಲಿ 'ಜೋಡಿ ನಂ.1' ಕಾರ್ಯಕ್ರಮ ವಿಶೇಷವಾಗಿರಲಿದೆ. ಜನರನ್ನು ರಂಜಿಸಲು ದಂಪತಿಗಳನ್ನು ಖುಷಿ ಪಡಿಸಲು ಸೀರಿಯಲ್‌ ತಾರೆಯರು ಕೂಡ ಬರುತ್ತಿದ್ದಾರೆ. 'ಜೋಡಿ ನಂ.1' ಕಾರ್ಯಕ್ರಮದಲ್ಲಿ ಈ ವಾರ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಹೀಗಾಗಿ ಈ ವಾರ ಹಬ್ಬದ ಮನರಂಜನೆಯನ್ನು ಡಬಲ್ ಮಾಡಲು ಕಿರುತೆರೆಯ ನಟಿಯರು ಕೂಡ ಬಂದಿದ್ದು, ಎಲ್ಲರೂ ಸೇರಿ ಹಬ್ಬವನ್ನು ಆಚರಿಸಿದ್ದಾರೆ. ಇದರ ಪ್ರೋಮೋಗಳನ್ನು ಈಗಾಗಲೇ ರಿಲೀಸ್ ಮಾಡಿದ್ದು, ಜನರು ಕಾರ್ಯಕ್ರಮ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. 'ಜೊತೆ ಜೊತೆಯಲಿ', 'ಗಟ್ಟಿಮೇಳ' ಸೇರಿದಂತೆ ಎಲ್ಲಾ ಧಾರಾವಾಹಿಯಿಂದಲೂ ನಟಿಯರು ಆಗಮಿಸಿದ್ದಾರೆ.

  ಗಣೇಶ ಹಬ್ಬದ ಸಂಭ್ರಮ!

  ಗಣೇಶ ಹಬ್ಬದ ಸಂಭ್ರಮ!

  'ಜೋಡಿ ನಂ.1' ಕಾರ್ಯಕ್ರಮದಲ್ಲಿ ಮಕ್ಕಳಿಗೆ ಗಣೇಶನಂತೆ ಅಲಂಕಾರ ಮಾಡಿದ್ದಾರೆ. ಈ ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೆ ಎಂದು ಕಾರ್ಯಕ್ರಮವನ್ನು ನೋಡಿಯೇ ತಿಳಿಯಬೇಕು. ಈ ಗಣಪನನ್ನು ನೋಡಿದ ಪುಷ್ಪಾ ಅಲಿಯಾಸ್‌ ಅಪೂರ್ವಶ್ರೀ ಅವರ ಕಣ್ಣಲ್ಲಿ ಗಂಗಾ ಕಾವೇರಿನೇ ಸುರಿದಿದೆ. ಸ್ಪರ್ಧಿಗಳೊಂದಿಗೆ ಸೇರಿ ತಾರೆಯರು ಮೋದಕಗಳನ್ನು ಗುಳುಂ ಸ್ವಾಹ ಮಾಡಿದ್ದಾರೆ. ಮೋದಕ ತಿನ್ನುವಾಗ ಎಲ್ಲರೂ ಹನುಮಂತನಂತೆ ಕಂಡಿದ್ದು, ಹೆಚ್ಚು ತಿಂದವರೇ ವಿನ್ನರ್. ಇನ್ನು ಸ್ಪರ್ಧಿಗಳು ಚಕ್ಕುಲಿ ಮಾಡಿದ್ದು ಒಂದೊಂದು ಚಕ್ಕುಲಿಗಳೂ ಒಂದೊಂದು ಶೇಪ್‌ನಲ್ಲಿವೆ.

  'ಜೋಡಿ ನಂ.1' ಜೋಡಿಗಳು!

  'ಜೋಡಿ ನಂ.1' ಜೋಡಿಗಳು!

  ಈ ರಿಯಾಲಿಟಿ ಶೋನಲ್ಲಿ ಹಿರಿಯ ನಟ ಅಭಿಜೀತ್ ಮತ್ತು ಅವರ ಪತ್ನಿ, ಕಾಮಿಡಿ ಕಿಂಗ್ ಕೃಷ್ಣೇಗೌಡ ಮೇಸ್ಟ್ರು ದಂಪತಿ, ಕಂಬದ ರಂಗಯ್ಯ ಹಾಗೂ ಪತ್ನಿ, ನಟ ಸಂತೋಷ್ ಹಾಗೂ ಪತ್ನಿ, ಮಿತ್ರಾ ಹಾಗೂ ಪತ್ನಿ, ನಟ ನಿನಾದ್ ಹರ್ತ್ಸಾ ಹಾಗೂ ರಮ್ಯಾ, ಗೋವಿಂದೇ ಗೌಡ ಹಾಗೂ ದಿವ್ಯಾ, ಮತ್ತು ನಟಿ ನೇಹಾ ಪಾಟೀಲ್ ಹಾಗೂ ಅವರ ಪತಿ ಭಾಗವಹಿಸಿದ್ದಾರೆ. ಇನ್ನು ಈ ಶೋ ಅನ್ನು ನಟಿ ಮಾಳವಿಕಾ ಅವಿನಾಶ್, ನಟ ನೆನಪಿರಲಿ ಪ್ರೇಮ್ ಜಡ್ಜ್ ಮಾಡುತ್ತಿದ್ದಾರೆ. ನಟಿ, ನಿರೂಪಕಿ ಶ್ವೇತಾ ಚೆಂಗಪ್ಪಾ ಆಂಕರಿಂಗ್ ಜವಾಬ್ದಾರಿಯನ್ನು ಹೊತ್ತಿದ್ದಾರೆ.

  English summary
  Ganesha Festival Celebration In Zee kannada New Reality Show Jodi No.1,
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X