»   » 'ನಗುವಿನ ಅರಸ' ಪ್ರಾಣೇಶ್ ಆತ್ಮೀಯರೊಬ್ಬರನ್ನ ನೆನೆದು ಕಣ್ಣೀರಿಟ್ಟರು! ಯಾರದು?

'ನಗುವಿನ ಅರಸ' ಪ್ರಾಣೇಶ್ ಆತ್ಮೀಯರೊಬ್ಬರನ್ನ ನೆನೆದು ಕಣ್ಣೀರಿಟ್ಟರು! ಯಾರದು?

Posted By:
Subscribe to Filmibeat Kannada

ಜೀ-ಕನ್ನಡದಲ್ಲಿ ಪ್ರಸಾರವಾಗುವ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮಕ್ಕೆ ಈ ವಾರ ಅತಿಥಿಯಾಗಿರುವ ಉತ್ತರ ಕರ್ನಾಟಕದ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರು ಸಾಧಕರ ಕುರ್ಚಿಯಲ್ಲಿ ಕೂತು ಕಣ್ಣೀರಿಟ್ಟಿದ್ದಾರೆ.

ಆತ್ಮೀಯರೊಬ್ಬರನ್ನ ನೆನೆದು ಗಳಗಳನೆ ಕಣ್ಣೀರಿಟ್ಟಿರುವ ಪ್ರಾಣೇಶ್, ''ಪ್ರಪಂಚದಲ್ಲಿ ಯಾವ ವಿಷ್ಯದ ಬಗ್ಗೆನಾದ್ರೂ ಮಾತಾಡ ಬಲ್ಲೆ. ಆದ್ರೆ, ನನ್ನ ತಮ್ಮನ ಬಗ್ಗೆ ಮಾತಾಡೋಕೆ ಅಗಲ್ಲ'' ಎಂದು ಭಾವುಕರಾದರು.['ವೀಕೆಂಡ್ ವಿತ್ ರಮೇಶ್'ಗೆ ಈ ವಾರದ ಅತಿಥಿ ಗಂಗಾವತಿ ಪ್ರಾಣೇಶ್]

Gangavathi Pranesh cried in Weekend With Ramesh 3

''ವಿಜ್ಞಾನದಲ್ಲಿ ಇದ್ದಿದ್ರೆ ಸಿ.ವಿ ರಾಮನ್ ಆಗ್ತಿದ್ದ. ಚಿತ್ರರಂಗದಲ್ಲಿದಿದ್ರೆ ಪುಟ್ಟಣ್ಣ ಕಣಗಲ್ ಆಗ್ತಿದ್ದ. ನನ್ನ ಪ್ರೀತಿಯ ತಮ್ಮ'' ಎಂದು ತಮ್ಮನ ಬಗ್ಗೆ ಒಂದು ಪುಸ್ತಕದಲ್ಲಿ ಮುನ್ನುಡಿ ಬರೆದಿದ್ದರಂತೆ.

ಸದಾ ಹಾಸ್ಯದ ಮೂಲಕ ಎಲ್ಲರನ್ನ ನಗಿಸುವ ಪ್ರಾಣೇಶ್ ಅವರು, ತಮ್ಮಲ್ಲಿ ಇರುವ ನೋವನ್ನ ವೀಕೆಂಡ್ ಟೆಂಟ್ ನಲ್ಲಿ ಹೊರಹಾಕಿದ್ದಾರೆ. ಪ್ರಾಣೇಶ್ ಅವರ ಬಗ್ಗೆ ಪೂರ್ತಿ ತಿಳಿದುಕೊಳ್ಳಲು ಇಂದು (ಏಪ್ರಿಲ್ 15) ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗುವ 'ವೀಕೆಂಡ್ ವಿತ್ ರಮೇಶ್-3' ನೋಡಿ.[ಪ್ರಾಣೇಶ್ ಭಾವುಕರಾದ ವಿಡಿಯೋ ನೋಡಿ]

English summary
Stand-up comedian Gangavathi Pranesh is the special guest in this week’s Weekend with Ramesh 3 show. Pranesh, who is popularly known as Gangavathi Pranesh, hails from Gangavathi of Koppal.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada