For Quick Alerts
  ALLOW NOTIFICATIONS  
  For Daily Alerts

  'ವೀಕೆಂಡ್ ವಿತ್ ರಮೇಶ್'ಗೆ ಈ ವಾರದ ಅತಿಥಿ ಗಂಗಾವತಿ ಪ್ರಾಣೇಶ್

  By Bharath Kumar
  |

  ಜೀ ಕನ್ನಡದಲ್ಲಿ ಪ್ರಸಾರವಾಗುವ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮಕ್ಕೆ ಈ ವಾರದ ಅತಿಥಿಯಾಗಿ ಉತ್ತರ ಕರ್ನಾಟಕದ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರು ಆಗಮಿಸಲಿದ್ದಾರೆ.

  ಈ ವಾರದ ಕಾರ್ಯಕ್ರಮದಲ್ಲಿ ಸಾಧಕರಾಗಿರುವ ಪ್ರಾಣೇಶ್ ಅವರು, ತಮ್ಮ ಬಾಲ್ಯ, ತಮ್ಮ ವೃತ್ತಿ ಬದುಕು, ಶಾಲಾ ದಿನಗಳು, ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಲಿದ್ದಾರೆ.[ಪ್ರಾಣೇಶ್ ಅವರ ಹೊಸ ಪ್ರೋಮೋ ನೋಡಿ]

  ಗಂಗಾವತಿ ಪ್ರಾಣೇಶ್ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಬೀಚಿ ಸಾಹಿತ್ಯದಿಂದ ಪ್ರಭಾವಿತರಾದ ಪ್ರಾಣೇಶ್, ಆ ಸಾಹಿತ್ಯದಲ್ಲಿರುವ ಹಾಸ್ಯವನ್ನು ಮೈಗೂಡಿಸಿಕೊಂಡು ಅದನ್ನೇ ಇತರರಿಗೆ ಹಂಚುವ ಕಾಯಕವನ್ನು 1994 ರಿಂದ ಆರಂಭಿಸಿದರು. ವಿಶ್ವದ ವಿವಿದೆಡೆ 1000 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನ ನೀಡಿದ್ದಾರೆ. ಕೇವಲ ಭಾಷಣದಲ್ಲಷ್ಟೇ ತಬಲಾ, ಕೊಳಲು, ಸಂಗೀತಗಳಲ್ಲೂ ಪ್ರಾವಿಣ್ಯತೆ ಹೊಂದಿದ್ದಾರೆ.[ಪ್ರಾಣೇಶ್ ಅವರ ಪ್ರೋಮೋ ನೋಡಿ]

  ಆಸ್ಟ್ರೇಲಿಯಾ, ಸಿಂಗಪೂರ್, ಥೈಲಾಂಡ್, ಮಲೇಶಿಯಾ, ಹಾಂಕಾಂಗ್, ಅಮೆರಿಕ ಮುಂತಾದ ನಗರಗಳಲ್ಲೆಲ್ಲಾ ಅವರ ಕಾರ್ಯಕ್ರಮಗಳು ಜನಪ್ರಿಯಗೊಂಡಿವೆ. ಅಷ್ಟೆ ಅಲ್ಲದೆ, ಕನ್ನಡದ ಕೆಲವು ಸಿನಿಮಾಗಳಲ್ಲು ಕೂಡ ಪ್ರಾಣೇಶ್ ಅವರ ಅಭಿನಯಿಸಿದ್ದಾರೆ.

  ಇಂತಹ ಸಾಧಕರ ಜೀವನ ಕಥೆ ಈ ವಾರದ ವೀಕೆಂಡ್ ಟೆಂಟ್ ನಲ್ಲಿ ಮೂಡಲಿದ್ದು, ಈಗಾಗಲೇ ಅವರ ಕಾರ್ಯಕ್ರಮದ ಪ್ರೋಮೋಗಳು ಬಿಡುಗಡೆಯಾಗಿವೆ.[ಪ್ರಾಣೇಶ್ ಅವರ ಹೊಸ ಪ್ರೋಮೋ ನೋಡಿ]

  ಏಪ್ರಿಲ್ 15 ರಂದು ರಾತ್ರಿ 9 ಗಂಟೆಗೆ ನಿಮ್ಮ ನೆಚ್ಚಿನ ಜೀ ಕನ್ನಡದಲ್ಲಿ 'ವೀಕೆಂಡ್ ವಿತ್ ರಮೇಶ್-3' ಪ್ರಸಾರವಾಗಲಿದೆ.

  English summary
  Stand-up comedian Gangavathi Pranesh is the special guest in this week’s Weekend with Ramesh 3 show. Pranesh, who is popularly known as Gangavathi Pranesh, hails from Gangavathi of Koppal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X