For Quick Alerts
  ALLOW NOTIFICATIONS  
  For Daily Alerts

  'ಅಭಿನವ ಬೀಚಿ'ಯ ಸಾಧನೆ ಹಿಂದಿದೆ ಸ್ಫೂರ್ತಿಯ ಕಥೆ

  By Suneel
  |

  ಬಿಚ್ಚು ಮನಸ್ಸಿನ ಅಭಿನವ ಬೀಚಿ ಎಂತಲೇ ಕರೆಸಿಕೊಳ್ಳುವ ಕರ್ನಾಟಕದ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ವೇದಿಕೆ ಮುಂಭಾಗದಲ್ಲಿ ಎಷ್ಟೇ ಸಾವಿರ ಜನಸಂಖ್ಯೆ ಇದ್ದರೂ ಅಷ್ಟೂ ಜನರನ್ನು ನಗೆಗಡಲಲ್ಲಿ ತೇಲಿಸುವಷ್ಟು ಸೊಗಸಾಗಿ ಮಾತನಾಡುತ್ತಾರೆ.['ನಗುವಿನ ಅರಸ' ಪ್ರಾಣೇಶ್ ಆತ್ಮೀಯರೊಬ್ಬರನ್ನ ನೆನೆದು ಕಣ್ಣೀರಿಟ್ಟರು! ಯಾರದು?]

  ಗಂಗಾವತಿ ಪ್ರಾಣೇಶ್ ಅವರು ಆರಂಭಿಕ ದಿನಗಳಲ್ಲಿ ಹಾಸ್ಯ ಮಾಡುತ್ತಿದ್ದ ಬಗೆ ಹೇಗಿತ್ತು? ಅವರು ಹಾಸ್ಯಮಾಡಲು ಆಂಗಿಕ ಭಾಷೆ(ಬಾಡಿ ಲಾಂಗ್ವೇಜ್) ಕಲಿತಿದ್ದು ಯಾರಿಂದ ಎಂಬ ಹಲವು ಮಾಹಿತಿಗಳನ್ನು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

  ಪ್ರಾಣೇಶ್ ಹಾಸ್ಯ ಭಾಷಣ ಶುರುವಾಗಿದ್ದು ಅರಡೋಣ ಗ್ರಾಮದಲ್ಲಿ

  ಪ್ರಾಣೇಶ್ ಹಾಸ್ಯ ಭಾಷಣ ಶುರುವಾಗಿದ್ದು ಅರಡೋಣ ಗ್ರಾಮದಲ್ಲಿ

  ಗಂಗಾವತಿ ಪ್ರಾಣೇಶ್ ರವರು ಹಾಸ್ಯ ಭಾಷಣ ಮಾಡಲು ಶುರು ಮಾಡಿದ್ದು ಅರಡೋಣ ಅನ್ನೋ ಗ್ರಾಮದಲ್ಲಿ. ಅಂದು ಇಂದಿನ ರೀತಿಯಲ್ಲಿ ಜನರ ಅನುಭವಗಳ ಬದಲಾಗಿ ಬೀಚಿ ಸಾಹಿತ್ಯದಲ್ಲಿ ಹಾಸ್ಯ ಎಂಬ ಕಾರ್ಯಕ್ರಮ ಮಾಡುತ್ತಿದ್ದರು. ಬೀಚಿ ಅವರ ಕೃತಿಗಳಲ್ಲಿರುವ ಹಾಸ್ಯವನ್ನು ನೋಟ್ಸ್ ಮಾಡಿಕೊಂಡು ಹಾಸ್ಯ ಮಾಡುತ್ತಿದ್ದರು.[5 ರೂಪಾಯಿಗಾಗಿ ಮೈಕ್ ಹಿಡಿದ ಪ್ರಾಣೇಶ್ ಇನ್ನು ಮೈಕ್ ಬಿಟ್ಟಿಲ್ಲ!]

  ಚಿಕ್ಕ ಹಳ್ಳಿಗಳಲ್ಲಿ ಕಾರ್ಯಕ್ರಮ ಕೊಡುತ್ತಿದ್ದ ಪ್ರಾಣೇಶ್

  ಚಿಕ್ಕ ಹಳ್ಳಿಗಳಲ್ಲಿ ಕಾರ್ಯಕ್ರಮ ಕೊಡುತ್ತಿದ್ದ ಪ್ರಾಣೇಶ್

  "ಅರಡೋಣ, ಸಾಲಂಚಿ ಮರ, ಕಾರ್ಟಗಿ, ಜಲ್ಲಿಹಾಳ್ ಗಂಗಾವತಿ, ಸುತ್ತಮುತ್ತಲ ಚಿಕ್ಕ ಚಿಕ್ಕ ಹಳ್ಳಿಗಳಲ್ಲಿ, ಟಿವಿ-ಪತ್ರಿಕೆಗಳು ಹೆಚ್ಚಾಗಿ ಇರದ ಕಾಲದಲ್ಲಿ ಹಾಸ್ಯ ಕಾರ್ಯಕ್ರಮ ಕೊಡುತ್ತಿದ್ದೆ. ಅಂದು ಲಿಂಗಾರೆಡ್ಡಿ ಆಲೂರು. ಜಗದೀಶ್ ಮರ್ಲಾಂಗ್ ಹಳ್ಳಿ ಎಂಬುವವರು ಹಳ್ಳಿಗಳಿಗೆ ಕರೆಸಿ ಭಾಷಣ ಮಾಡಿಸೋರು. ಕರೆಂಟ್ ಇಲ್ಲದಾಗ ಮೇಣದ ಬತ್ತಿ ಹಚ್ಚಿಕೊಂಡೆ ಹಾಸ್ಯ ಭಾಷಣ ಮಾಡುತ್ತಿದೆ" - ಗಂಗಾವತಿ ಪ್ರಾಣೇಶ್, ಹಾಸ್ಯ ಕಲಾವಿದ

  ಬೀಚಿ ಸಾಹಿತ್ಯದಿಂದ ಹಾಸ್ಯ

  ಬೀಚಿ ಸಾಹಿತ್ಯದಿಂದ ಹಾಸ್ಯ

  "ಪ್ರಾಣೇಶ್ ಏಕಾಂತ ನಾಟಕಗಳನ್ನು ಬರೆಯುತ್ತಿದ್ದರು. ನಂತರ 'ಹಾಸ್ಯ ಬ್ರಹ್ಮ' ಬೀಚಿ ಸಾಹಿತ್ಯದಲ್ಲಿ ಹಾಸ್ಯವನ್ನು ಮಾತನಾಡಲು ಆರಂಭಿಸಿದರು. ಅವರ ಬಗ್ಗೆ ಒಳ್ಳೇ ಜ್ಞಾನ ಇದೆ ಅಂತ ಹೇಳಿ ಪ್ರೊತ್ಸಾಹ ನೀಡಿದ್ವಿ. ಮಾತಲ್ಲಿ ಹೇಗೆ ಹಾಸ್ಯದ ಪಂಚಿಂಗ್ ಮಾಡಬೇಕು ಎಂಬುದನ್ನ ಬೀಚಿ ಸಾಹಿತ್ಯದಿಂದ ನೀಟಾಗಿ ಕಲಿತಿಕೊಂಡರು" - ಮರಿಯಪ್ಪ, ಗಂಗಾವತಿ ಪ್ರಾಣೇಶ್ ಸ್ನೇಹಿತ

  ಪ್ರಾಣೇಶ್ ಅಂದಿನ ದಿನಗಳ ಬಗ್ಗೆ ಸ್ನೇಹಿತ ಶ್ರೀನಿವಾಸ್ ಹೇಳಿದ್ದು..

  ಪ್ರಾಣೇಶ್ ಅಂದಿನ ದಿನಗಳ ಬಗ್ಗೆ ಸ್ನೇಹಿತ ಶ್ರೀನಿವಾಸ್ ಹೇಳಿದ್ದು..

  " ಪ್ರಾಣೇಶ್ ಮೊದಲ ಕಾರ್ಯಕ್ರಮ ಕೊಟ್ಟ ದಿನ ಜನರು ಖುಷಿ ಪಟ್ಟು ಕೊಟ್ಟ ಸಂಭಾವನೆ 50 ರೂಪಾಯಿ. ಅಂದಿನ ದಿನ 5 ಸಾವಿರ ಕೊಟ್ಟಷ್ಟು ಖುಷಿ ಪಟ್ಟಿದ್ದರು. ನಾನು ಗಂಗಾವತಿಯಲ್ಲಿದ್ದಾಗ ಕರ್ಮವೀರ ಪತ್ರಿಕೆಗೆ ಲೇಖನ ಬರೆದಿದ್ದೆ. ನಂತರ ಹಲವರಿಗೆ ಇಷ್ಟವಾಗಿ ಅವರ ನಂಬರ್ ಕೇಳಿಕೊಂಡು ಫೋನ್ ಮಾಡೋರು. ಹಾಗೆ ಪ್ರಾಣೇಶ್ ನಂಬರ್ ಒಬ್ಬರಿಂದ ಇನ್ನೊಬ್ಬರಿಗೆ ಹೋಗಿ ಹೆಚ್ಚು ಪ್ರಚಾರ ಸಿಕ್ಕಿತು" - ಶ್ರೀನಿವಾಸ್ ಜಲ್ಲಿಹಾಳ್, ಗಂಗಾವತಿ ಪ್ರಾಣೇಶ್ ಸ್ನೇಹಿತ

  ಗಂಗಾವತಿ ಪ್ರಾಣೇಶ್ ಹಾಸ್ಯದ ಆಂಗಿಕ ಭಾಷೆ ಕಲಿತದ್ದು ಯಾರಿಂದ?

  ಗಂಗಾವತಿ ಪ್ರಾಣೇಶ್ ಹಾಸ್ಯದ ಆಂಗಿಕ ಭಾಷೆ ಕಲಿತದ್ದು ಯಾರಿಂದ?

  "ಮರಿಯಪ್ಪ ಅಂತ ರಂಗಭೂಮಿ ಕಲಾವಿದರು. ಇವತ್ತೇನಾದ್ರು ಮಿಮಿಕ್ರಿಯನ್ನು ಬಾಡಿ ಲಾಂಗ್ವೇಜ್ ಮೂಲಕ ಮಾಡೋದನ್ನ ಕಲಿತಿದ್ರೆ, ಅದು ಮರಿಯಪ್ಪ ಅವರಿಂದ. ರಕ್ತರಾತ್ರಿ ನಾಟಕದಲ್ಲಿ ನವಿಲುಪಕ್ಕಿನ್ ಪಾತ್ರ ಮಾಡಿದವರು. ಅದ್ಭುತ ಕಲಾವಿದರು. ಇವತ್ತಿಗೂ ನಾನು ಉತ್ತರ ಕರ್ನಾಟಕ ಭಾಷೆಯಲ್ಲಿ ಹಾಸ್ಯ ಮಾಡಿದ್ರೆ ಅವರು ಬಳಸುವ ಭಾಷೆಯಲ್ಲೇ ಮಾತನಾಡೋದು" - ಗಂಗಾವತಿ ಪ್ರಾಣೇಶ್, ಹಾಸ್ಯ ಕಲಾವಿದ

  English summary
  Stand-up comedian Gangavathi Pranesh revealed by whom he learned Body Language for Mimicry in 'Weekend With Ramesh-3'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X