For Quick Alerts
  ALLOW NOTIFICATIONS  
  For Daily Alerts

  5 ರೂಪಾಯಿಗಾಗಿ ಮೈಕ್ ಹಿಡಿದ ಪ್ರಾಣೇಶ್ ಇನ್ನು ಮೈಕ್ ಬಿಟ್ಟಿಲ್ಲ!

  By Bharath Kumar
  |

  ಉತ್ತರ ಕರ್ನಾಟಕದ ಮಾತಿನ ಮಲ್ಲ, ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರ ಹಾಸ್ಯ ಕಾರ್ಯಕ್ರಮಗಳು ಅಂದ್ರೆ ಜನರು ಮುಗಿಬಿದ್ದು ನೋಡುತ್ತಾರೆ. ತಮ್ಮ ಕಲಾತ್ಮಕ ಮಾತಿನ ಶೈಲಿಯಿಂದ ಜನರನ್ನ ಕೂತಲ್ಲೇ ಎದ್ದು ಬಿದ್ದು ನಗಿಸುವಂತೆ ಮಾಡುವ ಕಲಾಚತುರ ಪ್ರಾಣೇಶ್.

  ಪ್ರಾಣೇಶ್ ಅವರಲ್ಲಿ ಈ ಕಲೆ ಹುಟ್ಟಿಕೊಂಡಿದ್ದು ಹೇಗೆ? ಮೊದಲ ಭಾರಿಗೆ ಪ್ರಾಣೇಶ್ ಮೈಕ್ ಹಿಡಿದಿದ್ದು ಯಾವಾಗ? ಕನ್ನಡ ಸಾಹಿತ್ಯದಲ್ಲಿ ಇಷ್ಟೊಂದು ಆಸಕ್ತಿ ಮೂಡಲು ಕಾರಣವೇನು?['ವೀಕೆಂಡ್ ವಿತ್ ರಮೇಶ್'ಗೆ ಈ ವಾರದ ಅತಿಥಿ ಗಂಗಾವತಿ ಪ್ರಾಣೇಶ್]

  ಈ ಎಲ್ಲ ಪ್ರಶ್ನೆಗಳು ಎಲ್ಲರನ್ನು ಕಾಡುತ್ತೆ. 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮಕ್ಕೆ ಅತಿಥಿಯಾಗಿದ್ದ ಪ್ರಾಣೇಶ್ ಈ ಎಲ್ಲ ಕುತೂಹಲಗಳನ್ನ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ......

  ಗಣಿತ ಅಂದ್ರೆ ಅಸಹ್ಯ!

  ಗಣಿತ ಅಂದ್ರೆ ಅಸಹ್ಯ!

  ಪ್ರಾಣೇಶ್ ಅವರಿಗೆ ಮೊದಲಿನಿಂದಲೂ ಗಣಿತ ವಿಷಯ ಅಂದ್ರೆ ಇಷ್ಟವಿಲ್ಲ. ಶಾಲೆ, ಕಾಲೇಜುಗಳಲ್ಲೂ ಗಣಿತದಿಂದ ದೂರವಿರುತ್ತಿದ್ದರು. ಎಲ್ಲ ವಿಷ್ಯಗಳಲ್ಲೂ ಪಾಸ್ ಆದರೂ, ಗಣಿತದಲ್ಲಿ ಮಾತ್ರ ಪಾಸ್ ಆಗುತ್ತಿರಲಿಲ್ಲ.['ನಗುವಿನ ಅರಸ' ಪ್ರಾಣೇಶ್ ಆತ್ಮೀಯರೊಬ್ಬರನ್ನ ನೆನೆದು ಕಣ್ಣೀರಿಟ್ಟರು! ಯಾರದು?]

  ಕನ್ನಡದಲ್ಲಿ ಹೆಚ್ಚಿನ ಆಸಕ್ತಿ

  ಕನ್ನಡದಲ್ಲಿ ಹೆಚ್ಚಿನ ಆಸಕ್ತಿ

  ಗಣಿತ ವಿಷ್ಯದಲ್ಲಿದ್ದ ನಿರಾಸಕ್ತಿ, ಕನ್ನಡ ಭಾಷೆಯ ಮೇಲೆ ಹೆಚ್ಚು ಆಸಕ್ತಿ ಮೂಡಿಸುವಂತೆ ಮಾಡಿತು. ಹೀಗಾಗಿ, ಚಿಕ್ಕ ವಯಸ್ಸಿನಿಂದಲೇ ಕನ್ನಡ ಭಾಷೆ ಮೇಲೆ ಹಿಡಿತ ಹೆಚ್ಚಾಯಿತು.

  ಪ್ರಾಣೇಶ್ ಮೊದಲು ಮೈಕ್ ಹಿಡಿದಿದ್ದು!

  ಪ್ರಾಣೇಶ್ ಮೊದಲು ಮೈಕ್ ಹಿಡಿದಿದ್ದು!

  'ಉದಯ ಚಂದ್ರಿಕ' ನಾಟದ ಪ್ರಚಾರದ ವೇಳೆ ಗಂಗಾವತಿ ಪ್ರಾಣೇಶ್ ಅವರು ಮೊಟ್ಟ ಮೊದಲ ಬಾರಿಗೆ ಮೈಕ್ ಹಿಡಿದರು. 5 ರೂಪಾಯಿಗಾಗಿ ಆಗ ಮೈಕ್ ಹಿಡಿದಿದ್ದರು. ಟಾಂಗಾ (ಕುದುರೆ ಗಾಡಿ) ಗಾಡಿಯಲ್ಲಿ ಮೈಕ್ ಹಿಡಿದುಕೊಂಡು, ನಾಟಕ ನೋಡಿ ಎಂದು ಪ್ರಚಾರ ಮಾಡಿದ್ದರು.

  ಆ ದಿನಗಳನ್ನ ನೆನೆದ ಸ್ನೇಹಿತ!

  ಆ ದಿನಗಳನ್ನ ನೆನೆದ ಸ್ನೇಹಿತ!

  ''ಗಂಗಾವತಿ ಮಹಾವೀರ್ ಸರ್ಕಲ್ ನಲ್ಲಿ ಟಾಂಗಾ ಗಾಡಿಯೊಂದು ಬರುತ್ತಿತ್ತು. ಅದರಲ್ಲಿ ಚಿಕ್ಕ ದ್ವನಿಯಲ್ಲಿ ವಾಯ್ಸ್ ಕೇಳುತ್ತಿತ್ತು. ಕೆಳಗೆ ಇಳಿದು ಪಾಂಪ್ಲೇಟ್ ಹಂಚುತ್ತಿದ್ದ. ಅಂದು ಪ್ರಾಣೇಶ್ ಅವರು ಖಾಕಿ ಚಡ್ಡಿ, ಬಿಳಿ ಅಂಗಿ ಧರಿಸಿದ್ದರು. ನಾನು ಖಾಕಿ ಚಡ್ಡಿ, ಬಿಳಿ ಅಂಗಿ ತೊಟ್ಟಿದ್ದೆ. ಅಲ್ಲಿಂದ ಶುರುವಾಯಿತು ಪ್ರಾಣೇಶ್ ಅವರು ಜರ್ನಿ ಮತ್ತು ನಮ್ಮಿಬ್ಬರ ಕಥೆ'' -ಶರದ್ ಕುಮಾರ್ ದಂಡಿ, ಸ್ನೇಹಿತ

  ಮೈಕ್ ನಿಂದ ಬದುಕು ಕಟ್ಟಿಕೊಂಡ ಪ್ರಾಣೇಶ್

  ಮೈಕ್ ನಿಂದ ಬದುಕು ಕಟ್ಟಿಕೊಂಡ ಪ್ರಾಣೇಶ್

  ಅಂದು ಪ್ರಾಣೇಶ್ ಅವರು ಹಿಡಿದ ಮೈಕ್ ಇನ್ನು ಬಿಟ್ಟಿಲ್ಲ. ಆ ಮೈಕ್ ನಿಂದನೇ ಒಂದು ಬದುಕು ಕಟ್ಟಿಕೊಂಡಿದ್ದಾರೆ. ಅದರಿಂದ ಈ ಸಾಧನೆ ಮಾಡಿದ್ದಾರೆ.

  ರಾಜ್ ಕುಮಾರ್ ಚಿತ್ರಗಳಂದ್ರೆ ಇಷ್ಟ!

  ರಾಜ್ ಕುಮಾರ್ ಚಿತ್ರಗಳಂದ್ರೆ ಇಷ್ಟ!

  ರಾಜ್ ಕುಮಾರ್ ಚಿತ್ರಗಳಂದ್ರೆ ಪ್ರಾಣೇಶ್ ಅವರಿಗೆ ತುಂಬಾ ಇಷ್ಟವಂತೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಒಂದೊಂದು ಸಿನಿಮಾವನ್ನ ಮೂರ್ನಾಲ್ಕು ಸಲ ನೋಡುವಷ್ಟು. 'ದಾರಿ ತಪ್ಪಿದ ಮಗ' ಚಿತ್ರವನ್ನ ಬರೋಬ್ಬರಿ 15 ಸಲ ನೋಡಿರುವುದಾಗಿ ತಮ್ಮ ನೆನಪನ್ನ ಮೆಲುಕು ಹಾಕಿದರು.

  English summary
  Stand-up comedian Gangavathi Pranesh Shared His Experience in Weekend with Ramesh 3 show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X