Don't Miss!
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- News
ಪಾಕಿಸ್ತಾನ: ಕರಾಚಿಯ ಮಸೀದಿಯ ಮೇಲೆ ಮತ್ತೊಂದು ದಾಳಿ- ವಿಡಿಯೋ
- Automobiles
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- Sports
ಸ್ಪಿನ್ನರ್ಗಳ ವಿರುದ್ಧ ಪರದಾಡುವ ಕೊಹ್ಲಿಗೆ ಆಸಿಸ್ ಸರಣಿಗೂ ಮುನ್ನ ಪಠಾಣ್ 'ಆಕ್ರಮಣಕಾರಿ' ಸಲಹೆ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತವರು ಮನೆ ಸೇರಿದ ಅಮೂಲ್ಯ: ವೇದಾಂತ್ ಹೆಂಡತಿ ಮಾತನ್ನು ಕೇಳುತ್ತಾನಾ..?
'ಗಟ್ಟಿಮೇಳ' ಧಾರಾವಾಹಿಯಲ್ಲಿ ಅಮೂಲ್ಯ ಸದ್ಯ ಡುಪ್ಲಿಕೇಟ್ ವೈದೇಹಿ ಹಿಂದೆ ಬಿದ್ದಿದ್ದಾಳೆ. ವೇದಾಂತ್ ಅಮ್ಮ ಎಂದುಕೊಂಡು ಮನೆಗೆ ಬಂದಿರುವ ಚಂದ್ರ ಯಾರು ಎಂದು ಪತ್ತೆ ಹಚ್ಚಲು ಮುಂದಾಗಿದ್ದಾಳೆ. ಆದರೆ, ಈ ಬಗ್ಗೆ ಯಾವುದೇ ಮಾಹಿತಿ, ಸಾಕ್ಷಿ ಆಕೆಗೆ ಇನ್ನು ಸಿಕ್ಕಿದ್ದಂತೆ ಇಲ್ಲ.
ಅಲ್ಲದೇ ಅಮೂಲ್ಯಗೆ ಸಾಕ್ಷಿ ಇಲ್ಲದೇ ಮನೆಯಲ್ಲೂ ಯಾರ ಬಳಿಯೂ ಸತ್ಯ ಹೇಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಅಮೂಲ್ಯ ಸುಹಾಸಿನಿ ಮತ್ತು ಚಂದ್ರ ಹಿಂದೆಯೇ ಇದ್ದಾಳೆ. ಅವರಿಬ್ಬರ ನಡುವೆ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುತ್ತಿದ್ದಾಳೆ.
ಪಾರು
ಕೈಯಿಂದ
ತಪ್ಪಿಸಿಕೊಂಡ
ಮೋನಿಕಾ!
ಶಾಕ್
ಆದ
ಪಾರು?
ದೇವಸ್ಥಾನಕ್ಕೆ, ಆಶ್ರಮಕ್ಕೆ ಹೋಗುತ್ತೇನೆ ಎಂದು ಸುಳ್ಳು ಹೇಳಿ ಚಂದ್ರ, ತೇಜಸ್‌ನನ್ನು ಭೇಟಿಯಾಗಲೂ ಮುಂದಾಗಿದ್ದಾಳೆ. ಅವಳನ್ನೇ ಹಿಂಬಾಲಿಸಿದ ಅಮೂಲ್ಯಗೆ ಚಂದ್ರ ಬಣ್ಣ ತಿಳಿದಿದೆ. ಇದನ್ನೆಲ್ಲಾ ವೀಡಿಯೋ ಮಾಡಿದ್ದಾಳೆ.

ಅಮೂಲ್ಯಗೆ ಜೋರು ಮಾಡಿದ ಚಂದ್ರ
ಮನೆಗೆ ಬಂದ ಅಮೂಲ್ಯ, ಚಂದ್ರಳ ಮೇಲೆ ಕೂಗಾಡಿದ್ದಾಳೆ. ಯಾರು ನೀನು, ನಮ್ಮ ಮನೆಗೆ ಯಾಕೆ ಬಂದೆ ಎಂದು ಬೈಯುತ್ತಾಳೆ. ಆದರೆ ಚಂದ್ರ ವಾಪಸ್ ಅಮೂಲ್ಯಳಿಗೆ ಜೋರು ಮಾಡಿ ಬೈಯುತ್ತಾಳೆ. ಇಬ್ಬರು ವಾದ ಮಾಡುತ್ತಾರೆ. ಅಮೂಲ್ಯ, ಚಂದ್ರಾಗೆ ವೀಡಿಯೋ ತೋರಿಸಿ ಯಾರು ನೀನು, ನಿನಗೂ ತೇಜಸ್‌ಗೂ ಏನು ಸಂಬಂಧ, ನಮ್ಮ ಮನೆಗೆ ಯಾಕೆ ಬಂದೆ ಎಂದು ಪ್ರಶ್ನೆ ಮಾಡುತ್ತಾಳೆ. ಚಂದ್ರ ಬಗ್ಗುವುದಿಲ್ಲ. ಅಮೂಲ್ಯಳಿಗೆ ಎದುರುತ್ತರ ಕೊಡುತ್ತಾಳೆ.

ವೇದಾಂತ್ ಕೋಪಕ್ಕೆ ಸುಹಾಸಿನಿ ಕಾರಣ
ಈ ವೇಳೆ ಸುಹಾಸಿನಿ ಬೇಕಂತಲೇ ಚಂದ್ರಳನ್ನು ತಳ್ಳುತ್ತಾಳೆ. ಆಗ ವೇದಾಂತ್ ಬಂದು ಅಮೂಲ್ಯಗೆ ಬೈಯುತ್ತಾನೆ. ಅಮೂಲ್ಯ ಸತ್ಯ ಹೇಳಿದರೂ ಕೇಳುವುದಿಲ್ಲ. ವೀಡಿಯೋ ತೋರಿಸಲು ಬಂದರೂ ಕೂಡ ವೇದಾಂತ್ ಕೇಳದೇ ಅಮೂಲ್ಯ ಮೇಲೆ ಕೈ ಮಾಡಲು ಕೈ ಎತ್ತುತ್ತಾನೆ. ಆಗ ಅಮೂಲ್ಯ ಕೋಪ ಮಾಡಿಗೊಂಡು ರೂಮಿಗೆ ಹೋಗುತ್ತಾಳೆ. ಸುಹಾಸಿನಿ ಮಾಡಿದ ಕೆಲಸದಿಂದ ಅಮೂಲ್ಯ, ವೇದಾಂತ್ ಎದುರು ಕೆಟ್ಟವಳಾಗಿದ್ದಾಳೆ. ವೇದಾಂತ್ ಕೂಡ ಹೆಂಡತಿ ಮಾತು ಕೇಳದೇ ತಪ್ಪು ಮಾಡಿದ್ದಾನೆ.

ಮನೆ ಬಿಟ್ಟು ಬಂದ ಅಮೂಲ್ಯ
ಅಮೂಲ್ಯ, ವೇದಾಂತ್ ಮೇಲೆ ಕೋಪ ಮಾಡಿಕೊಂಡು ಮನೆಯಿಂದ ಹೊರಡುತ್ತಾಳೆ. ಮನೆಯಲ್ಲಿ ಯಾರು ತಡೆದರೂ ಕೇಳುವುದಿಲ್ಲ. ಎಲ್ಲರಿಗೂ ವಾಪಸ್ ಬುದ್ಧಿ ಹೇಳಿ ಮನೆಯಿಂದ ಹೊರಡುತ್ತಾಳೆ. ಅಮೂಲ್ಯ ಸೀದಾ ತನ್ನ ತವರು ಮನೆಗೆ ಹೋಗುತ್ತಾಳೆ. ಅಮೂಲ್ಯ ಮನೆಯಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ವಿವರಿಸುತ್ತಾಳೆ. ಅಮೂಲ್ಯ ಮನೆ ಬಿಟ್ಟು ಬಂದಿದ್ದಕ್ಕೆ ಮೊದಲು ಭಯಪಡುತ್ತಾರೆ. ನಂತರ ಸುಮ್ಮನಾಗುತ್ತಾರೆ. ವೇದಾಂತ್‌ಗೆ ಎಲ್ಲವೂ ಅರ್ಥವಾಗುತ್ತದೆ ಎಂದು ಸಮಾಧಾನ ಮಾಡುತ್ತಾರೆ. ಅಮೂಲ್ಯ ಕೂಡ ವೇದಾಂತ್ ಬಂದು ಕ್ಷಮೆ ಕೇಳುವವರೆಗೂ ಹೋಗುವುದಿಲ್ಲ ಎಂದು ಹೇಳುತ್ತಾಳೆ.

ಅಮೂಲ್ಯ ವೇದಾಂತ್‌ಗೆ ಸತ್ಯ ಹೇಳುತ್ತಾಳಾ..?
ಮನೆಯಲ್ಲಿ ಎಲ್ಲರೂ ವೇದಾಂತ್‌ಗೆ ಬೈಯುತ್ತಾರೆ. ನೀನು ಅಮೂಲ್ಯ ಮೇಲೆ ಕೈ ಎತ್ತಬಾರದಿತ್ತು. ಅಮೂಲ್ಯ ಮೇಲೆ ಅಷ್ಟು ಪ್ರೀತಿ ಇಟ್ಟಿರುವ ನೀನು ಹೀಗೆ ಮಾಡಬಾರದಿತ್ತು ಎಂದು ಹೇಳುತ್ತಾರೆ. ಇನ್ನು ಸಾರ್ಥಕ್, ವೇದಾಂತ್‌ಗೆ ಬುದ್ಧಿ ಹೇಳುತ್ತಾನೆ. ಮೊದಲು ಹೋಗಿ ಅಮೂಲ್ಯಳನ್ನು ಮನೆಗೆ ವಾಪಸ್ ಕರೆದುಕೊಂಡು ಬನ್ನಿ. ಮುಂದಿನ ಸಲ ಹೀಗೆ ನಡೆಯದಂತೆ ನೋಡಿಕೊಳ್ಳಿ ಎನ್ನುತ್ತಾನೆ. ಇನ್ನು ಅಮೂಲ್ಯ ವೇದಾಂತ್ ಗೆ ಸತ್ಯ ಹೇಳುತ್ತಾಳಾ..?