For Quick Alerts
  ALLOW NOTIFICATIONS  
  For Daily Alerts

  ಆರತಿಗೆ ಸತ್ಯ ಹೇಳಿದ ಅಜ್ಜಿ: ವೈದೇಹಿ ಯಾರೆಂದು ಗೊತ್ತಾಯ್ತಾ..?

  By ಪ್ರಿಯಾ ದೊರೆ
  |

  'ಗಟ್ಟಿಮೇಳ' ಧಾರಾವಾಹಿಯಲ್ಲಿ ವೇದಾಂತ್ ಅನುಮಾನಕ್ಕೆ ಸ್ಪಷ್ಟ ಉತ್ತರವೇ ಸಿಗಲಿಲ್ಲ. ಅವರ ತಾಯಿ ಯಾರು.? ಈ ಪತ್ರವನ್ನು ಯಾರು ಯಾಕೆ ಬರೆದರು ಎಂಬ ಗೊಂದಲ ಸೃಷ್ಟಿಯಾಗಿದೆ. ಆದರೆ ವೇದಾಂತ್ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

  ಅಮೂಲ್ಯಗೆ ಈಗ ವೇದಾಂತ್‌ಗೆ ಬಂದ ಪತ್ರ ಹಾಗೂ ಅವಳಿಗೆ ಬಂದಿದ್ದ ಪತ್ರ ಎರಡೂ ತಲೆಕೆಡಿಸಿವೆ. ನಮ್ಮ ಮನೆಯ ಇಂಚಿಂಚು ಗೊತ್ತಿರುವವರು ಈ ಪತ್ರವನ್ನು ಬರೆದಿದ್ದಾರೆ. ಅವರ ಉದ್ದೇಶ ಒಳ್ಳೆಯದೇ ಆಗಿದೆ.

  ಚಂದ್ರ ವೇದಾಂತ್ ಎದುರು ಸಿಕ್ಕಿ ಹಾಕಿಕೊಂಡಳಾ: ವೈದೇಹಿ ಯಾರೆಂದು ತಿಳಿಯಿತಾ?ಚಂದ್ರ ವೇದಾಂತ್ ಎದುರು ಸಿಕ್ಕಿ ಹಾಕಿಕೊಂಡಳಾ: ವೈದೇಹಿ ಯಾರೆಂದು ತಿಳಿಯಿತಾ?

  ಇನ್ನು ಮನೆಯಲ್ಲಿ ವೈದೇಹಿ ಎಂಬ ಹೆಸರಿನಲ್ಲಿ ಬಂದಿರುವವರು ಮತ್ತು ಸುಹಾಸಿನಿ ಸೇರಿ ಏನೋ ನಡೆಸುತ್ತಿದ್ದಾರೆ. ಆದರೆ ನಮಗೆ ಅದು ಅರ್ಥವಾಗುತ್ತಿಲ್ಲ. ಅಮೂಲ್ಯಗೆ ಚಂದ್ರ ಮತ್ತು ಸುಹಾಸಿನಿ ಮೇಲೆ ಅನುಮಾನ ಬಂದಿದೆ.

  ಆದ್ಯಳಿಂದ ಸತ್ಯ ತಿಳಿದ ಅಮೂಲ್ಯ

  ಆದ್ಯಳಿಂದ ಸತ್ಯ ತಿಳಿದ ಅಮೂಲ್ಯ

  ಆದ್ಯ ತನ್ನ ತಾಯಿ ವೈದೇಹಿಗೆ ಪ್ರೀತಿಯಿಂದ ತಲೆ ಬಾಚುತ್ತಿರುತ್ತಾಳೆ. ಆದರೆ ಚಂದ್ರಗೆ ಇಷ್ಟವಿರುವುದಿಲ್ಲ. ಹೇಗಾದರೂ ಮಾಡಿ ಆದ್ಯಳಿಂದ ತಪ್ಪಿಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿರುತ್ತಾಳೆ. ಅಮೂಲ್ಯ ಬರುತ್ತಿದ್ದಂತೆ ಚಂದ್ರ ಎಸ್ಕೇಪ್ ಆಗಿ ಬಿಡುತ್ತಾಳೆ. ಆಗ ಅಮೂಲ್ಯ ಆದ್ಯಳನ್ನು ಏನೂ ತಲೆ ಬಾಚುತ್ತಿದ್ದೆ ಎಂದು ಕೇಳುತ್ತಾಳೆ. ಅದಕ್ಕೆ ಆದ್ಯ ಖುಷಿಯಿಂದ ನನಗೆ ಅಮ್ಮನಿಗೆ ಅಲಂಕಾರ ಮಾಡಲು ಇಷ್ಟ ಎಂದು ಹೇಳುತ್ತಾಳೆ. ಆಗ ಅಮೂಲ್ಯ ಚಂದ್ರ ಮೊನ್ನೆ ಹಾಕಿದ ಡ್ರೆಸ್ ಕೂಡ ಆದ್ಯಳೇ ತೆಗೆದುಕೊಟ್ಟಿದ್ದು ಎಂದು ಹೇಳುತ್ತಾಳೆ. ಆದರೆ ಆದ್ಯ ತಾನೂ ಏನನ್ನೂ ತೆಗೆದುಕೊಟ್ಟಿಲ್ಲ ಎಂದು ಹೇಳುತ್ತಾಳೆ. ಇದರಿಂದ ಅಮೂಲ್ಯಗೆ ಚಂದ್ರ ಸುಳ್ಳು ಹೇಳಿರುವುದನ್ನು ಅರ್ಥ ಮಾಡಿಕೊಳ್ಳುತ್ತಾಳೆ.

  ಸಿಕ್ಕಿ ಹಾಕಿಕೊಂಡ ಚಂದ್ರ

  ಸಿಕ್ಕಿ ಹಾಕಿಕೊಂಡ ಚಂದ್ರ

  ಇನ್ನು ಚಂದ್ರ ಹೊರಗಡೆ ಹೊರಟಿರುತ್ತಾಳೆ. ಆಗ ಸುಹಾಸಿನಿ ಚಂದ್ರಗೆ ಬೈಯುತ್ತಾಳೆ. ಹೀಗೆ ಪ್ರತಿ ದಿನ ನೀನು ಮನೆಯಿಂದ ಹೊರಗೆ ಹೋಗುತ್ತಿದ್ದರೆ ಕಷ್ಟವಾಗುತ್ತದೆ. ಮನೆಯಲ್ಲಿ ಎಲ್ಲರಿಗೂ ಅನುಮಾನ ಬರುತ್ತದೆ ಎಂದು ಹೇಳುತ್ತಾಳೆ. ಇದೇ ಸಮಯಕ್ಕೆ ಬರುವ ಅಮೂಲ್ಯ, ಚಂದ್ರಾಳಿಗೆ ಚಮಕ್ ಕೊಡುತ್ತಾಳೆ. ನೀವು ಸಕತ್ ಆಗಿ ಡಬಲ್ ಆಕ್ಟಿಂಗ್ ಮಾಡುತ್ತೀರಾ ಎನ್ನುತ್ತಾಳೆ. ಆಗ ಎಲ್ಲರೂ ಶಾಕ್ ಆಗುತ್ತಾರೆ. ಆದರೆ, ಮಾಡ್ರನ್ ಹಾಗೂ ಟ್ರೆಡಿಷನಲ್ ಬಟ್ಟೆ ಬಗ್ಗೆ ಹೇಳ್ದೆ ಎನ್ನುತ್ತಾಳೆ. ಇನ್ನು ಎಲ್ಲಿಗೆ ಹೊರಟಿದೀರಿ ಎಂದು ಕೇಳುತ್ತಾಳೆ. ಚಂದ್ರ ದೇವಸ್ಥಾನಕ್ಕೆ ಎಂದು ಹೇಳುತ್ತಾಳೆ. ಆಗ ಅಮೂಲ್ಯ ತಾನೂ ಬರುವುದಾಗಿ ಹೇಳುತ್ತಾಳೆ.

  ಅಮೂಲ್ಯ ಅನುಮಾನಕ್ಕೆ ಪುಷ್ಠಿ

  ಅಮೂಲ್ಯ ಅನುಮಾನಕ್ಕೆ ಪುಷ್ಠಿ

  ಚಂದ್ರಗೆ ಏನು ಮಾಡಬೇಕು ಎಂಬುದೇ ಗೊತ್ತಾಗುವುದಿಲ್ಲ. ಆಗ ಸುಹಾಸಿನಿ, ಚಂದ್ರ ಅನಾಥಾಶ್ರಮಕ್ಕೆ ಹೋಗುತ್ತಿದ್ದಾಳೆ. ಅವಳಿಗೆ ಅಲ್ಲಿನ ಸ್ನೇಹಿತರನ್ನು ಮಾತನಾಡಿಸುವ ಆಸೆ ಎಂದು ಹೇಳಿ ಚಂದ್ರಳನ್ನು ಬಚಾವ್ ಮಾಡಿಸುತ್ತಾಳೆ. ಆದರೆ, ವೇದಾಂತ್‌ಗೆ ಇದ್ಯಾವುದೂ ಅರ್ಥವಾಗುವುದಿಲ್ಲ. ಬಟ್ ಅಮೂಲ್ಯ, ಚಂದ್ರಳ ನಡವಳಿಕೆ ಮತ್ತಷ್ಟು ಅನುಮಾನಕ್ಕೆ ಪುಷ್ಠಿ ಕೊಡುತ್ತದೆ. ಅಮೂಲ್ಯ, ಚಂದ್ರಳನ್ನು ಫಾಲೋ ಮಾಡುತ್ತಾಳಾ ಕಾದು ನೋಡಬೇಕಿದೆ.

  ವೈದೇಹಿ ಯಾರೆಂದು ಆರತಿಗೆ ಗೊತ್ತಾಯ್ತಾ..?

  ವೈದೇಹಿ ಯಾರೆಂದು ಆರತಿಗೆ ಗೊತ್ತಾಯ್ತಾ..?

  ಇತ್ತ ಅಜ್ಜಿಗೆ ತಮ್ಮ ಪ್ಯ್ಲಾನ್ ಠುಸ್ ಆಯಿತಲ್ಲ ಎಂದು ಬೇಸರ ಮಾಡಿಕೊಂಡಿರುತ್ತಾಳೆ. ವೈದೇಹಿ ಬಳಿ ಇದೆಲ್ಲವನ್ನೂ ಮಾತನಾಡುತ್ತಿರುತ್ತಾಳೆ. ಆಗ ಆರತಿ ಬರುತ್ತಾಳೆ. ವೈದೇಹಿ ಸತ್ಯವನ್ನು ಮುಚ್ಚಿಡಲು ಯತ್ನಿಸುತ್ತಾಳೆ. ಆದರೆ ಅಜ್ಜಿ ಸುಮ್ಮನಿರದೇ ಆರತಿ ಬಳಿ ಎಲ್ಲಾ ಸತ್ಯವನ್ನು ಹೇಳಿ ಬಿಡುತ್ತಾಳೆ. ವೈದೇಹಿ ಎಂದು ಹೇಳಿಕೊಂಡು ಬಂದಿರುವ ಚಂದ್ರ ನಿಮ್ಮ ಅತ್ತೆ ಅಲ್ಲ. ಸುಹಾಸಿನಿ ಎಲ್ಲರೂ ಸೇರಿ ನಾಟಕವಾಡುತ್ತಿದ್ದಾರೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಆರತಿ ಗೊಂದಲಕ್ಕೆ ಬೀಳುತ್ತಾಳೆ.

  English summary
  Gattimela serial 12th december Episode Written Update. Amulya doubts on Chandra and suhasini. She tries to reveal truth. But suhasini saves chandra.
  Monday, December 12, 2022, 20:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X