Don't Miss!
- Sports
IND vs NZ 2nd T20: ಕಿವೀಸ್ ವಿರುದ್ಧ ಹೋರಾಡಿ ಗೆದ್ದ ಭಾರತ; ಸರಣಿ ಸಮಬಲ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗಟ್ಟಿಮೇಳದಲ್ಲಿ ವೇದಾಂತ್ ಲುಕ್ ಬದಲಾವಣೆ!
ಜೀ ಕನ್ನಡದಲ್ಲಿ ಮೂಡಿ ಬರುವ ಧಾರಾವಾಹಿಗಳು ಒಂದಕ್ಕಿಂತ ಒಂದು ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿವೆ. ಎಲ್ಲಾ ಧಾರಾವಾಹಿಗಳ ಕಥೆಯೂ ಕೂಡ ಒಂದಕ್ಕಿಂತ ಒಂದು ಚೆನ್ನಾಗಿವೆ ಎನ್ನುವ ಅಭಿಪ್ರಾಯ ಪಡೆದುಕೊಂಡಿವೆ. ವಿಭಿನ್ನವಾದ ಕಥೆಯನ್ನು ಹೊತ್ತು ಬರುವ ಧಾರಾವಾಹಿಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ಇನ್ನು ಗಟ್ಟಿಮೇಳ ಧಾರಾವಾಹಿ ಶುರುವಾದಾಗಿನಿಂದ ಇಂದಿನವರೆಗೂ ಟಾಪ್ ಸ್ಥಾನದಲ್ಲೇ ಇದೆ. ಇದರಲ್ಲಿ ಅಮೂಲ್ಯ ಹಾಗೂ ವೇದಾಂತ್ ಕಿತ್ತಾಟವನ್ನು ಪ್ರೇಕ್ಷಕರು ಖುಷಿಪಟ್ಟು ನೋಡುತ್ತಾರೆ. ಬಜಾರಿ ಅಮೂಲ್ಯ ಡೈಲಾಗ್‌ಗಳು ತುಂಬಾನೇ ಫೇಮಸ್ ಆಗಿವೆ.
ತಮಿಳಿಗೆ
ಹೊರಟ
ಪಾರು
ಖ್ಯಾತಿಯ
ಮೋಕ್ಷಿತಾ
ಪೈ!
ಇದರಲ್ಲಿ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ನಾಲ್ಕು ಹೆಣ್ಣು ಮಕ್ಕಳ ಬದುಕಿನ ಪಯಣ ಹಾಗೂ ಅಕ್ಕ-ತಂಗಿಯರೆಲ್ಲರೂ ಒಂದೇ ಮನೆಗೆ ಸೊಸೆಯಾಗಿ ಹೋಗುವ ಕಥೆ. ಈಗಾಗಲೇ ಇಬ್ಬರು ಹೆಣ್ಣು ಮಕ್ಕಳು ಶ್ರೀಮಂತರ ಮನೆಯ ಅಣ್ಣ-ತಮ್ಮನನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈಗ ಮೂರನೇ ತಂಗಿಯೂ, ಮೂರನೇ ತಮ್ಮನನ್ನು ಪ್ರೀತಿಸುತ್ತಿದ್ದು, ಮದುವೆಯಾಗುವುದು ಬಾಕಿ ಇದೆ.

ಹೊಸ ಲುಕ್‌ನಲ್ಲಿ ವೇದಾಂತ್ ಮಿಂಚು!
ಈ ಜೋಡಿಗಳ ಡೈಲಾಗ್, ಡ್ರೆಸ್ ಎಲ್ಲವೂ ಟ್ರೆಂಡ್ ಕ್ರಿಯೇಟ್ ಮಾಡುತ್ತಲೇ ಇರುತ್ತವೆ. ಅಮೂಲ್ಯ ಮದುವೆಗೂ ಮುನ್ನ, ಭಾರತೀಯ ಸಂಪ್ರದಾಯದಂತೆ ಲಂಗ-ದಾವಣಿ ಹಾಕಿ ಟ್ರೆಂಡ್ ಕ್ರಿಯೇಟ್ ಮಾಡಿದ್ದಳು. ಇನ್ನು ಮದುವೆಯಾದ ಮೇಲೆ ಭಾರತೀಯ ನಾರಿಯಂತೆ ಸೀರೆಯುಟ್ಟು ಮಿಂಚುತ್ತಿದ್ದಾಳೆ. ಅಮುಲ್ಯ ಲುಕ್ ಅನ್ನು ಕೂಡ ಅಭಿಮಾನಿಗಳು ಇಷ್ಟ ಪಡುತ್ತಾರೆ. ಇನ್ನು ಇದೀಗ ಅಮೂಲ್ಯ ಹಾಗೂ ವೇದಾಂತ್ ಜೋಡಿ ಮತ್ತೊಂದು ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೇನೆಂದರೆ, ಎಲೆಕ್ಷನ್‌ಗೆ ನಿಂತಿರುವ ಪೋಸ್ ನಲ್ಲಿ ಇಬ್ಬರೂ ಕಾಣಿಸಿಕೋಮಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಯಾಕಾಗಿ ಎಂದು ಹಲವರು ಕೇಳಿದ್ದಾರೆ. ಇನ್ನೂ ಕೆಲವರು ಧಾರಾವಾಹಿಯಲ್ಲಿ ಎಲೆಕ್ಷನ್ ಇದ್ಯಾ ಅಂತಲೂ ಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ಸಿಕ್ಕ ಉತ್ತರವೇ ಬೇರೆ. ಅದೇನೆಂದರೆ, ಜನಕ್ಕೆ ಹೊಸ ಲುಕ್ ಗಳಿಂದ ಆಗಾಗ ಕಾಣಿಸಿಕೊಳ್ಳಬೇಕು.
ಬಾಲನ
ಪ್ಲ್ಯಾನ್
ಸಕ್ಸಸ್:
ದಿವ್ಯಾ
ಈಗ
ಇಂಗು
ತಿಂದ
ಮಂಗ!

ಅಮೂಲ್ಯ, ವೇದಾಂತ್ ಪ್ರೀತಿಗೆ ಸೋತ ಪ್ರೇಕ್ಷಕರು!
ಗಟ್ಟಿಮೇಳ ಧಾರಾವಾಹಿಯಲ್ಲಿ ಬಜಾರಿ ಅಮೂಲ್ಯ ಹಾಗೂ ಸೈಲೆಂಟ್ ವೇದಾಂತ್ ಇಬ್ಬರೂ ಪ್ರೀತಿಯಲ್ಲಿ ಸಿಲುಕಿ ಮದುವೆಯಾದ ಕಥೆಯೇ ಅದ್ಭುತವಾಗಿತ್ತು. ಹುಡುಗಿಯರು ಎಂದರೆ ಕಿಲೋ ಮೀಟರ್ ದೂರ ಹೋಗುತ್ತಿದ್ದ ವೇದಾಂತ್, ಅಮೂಲ್ಯಳನ್ನು ತನಗೇ ಗೊತ್ತಿಲ್ಲದೆ ಪ್ರೀತಿಸಲು ಶುರು ಮಾಡಿದ. ಇನ್ನು ಅಮೂಲ್ಯ ಬಾಯಿ ತುಂಬಾ ಎಲ್ಲರನ್ನೂ ಬೈಯುತ್ತಲೇ ವೇದಾಂತ್ ಮನ ಗೆದ್ದಳು. ಇವರಿಬ್ಬರ ಪ್ರೀತಿಯ ಎಪಿಸೋಡ್ ಗಳು ಅದ್ಭುತವಾಗಿ ಮೂಡಿ ಬಂದಿತ್ತು.

ತಾಜ್ ಮಹಲ್‌ನಲ್ಲಿ ಪ್ರಪೋಸ್!
ವೇದಾಂತ್ ಅಮೂಲ್ಯಳನ್ನು ಪ್ರೀತಿಸಲು ಶುರು ಮಾಡಿದ ಮೇಲೆ, ಹೇಳಿಕೊಳ್ಳಲು ತುಂಬಾ ಒದ್ದಾಡಿದ್ದ. ಅಮೂಲ್ಯ ಬಳಿ ಪ್ರೀತಿ ಹೇಳಿಕೊಂಡರೆ ಸೋಲುತ್ತೀನಿ ಎಂಬ ಭಯದಲ್ಲೇ ಹಲವು ದಿನ ಕಳೆದ ವೇದಾಂತ್, ಕೊನೆಗೂ ಅಮೂಲ್ಯಳನ್ನು ಬಿಟ್ಟಿರಲಾರದೇ ಪ್ರಪೋಸ್ ಮಾಡಿಯೇ ಬಿಟ್ಟಿದ್ದ. ಪ್ರಪೋಸ್ ಮಾಡುವ ಸಲುವಾಗಿ ಅಮೂಲ್ಯಳನ್ನು ತಾಜ್ ಮಹಲ್ ಗೆ ಕರೆದುಕೋಮಡು ಹೋಗಿದ್ದ ವೇದಾಂತ್. ತಾಜ್ ಮಹಲ್ ಎದುರಿಗೆ ಪ್ರಪೋಸ್ ಮಾಡಿ ಟ್ರೆಂಡ್ ಕ್ರಿಯೇಟ್ ಮಾಡಿದ್ದರು ಎಂದರೆ ತಪ್ಪಾಗೋದಿಲ್ಲ.

ಮದುವೆಯಾದ ವೇದಾಂತ್, ಅಮೂಲ್ಯ!
ವೇದಾಂತ್ ಪ್ರೀತಿಯನ್ನು ಒಪ್ಪಿಕೊಂಡು ಮದುವೆಯಾದ ಅಮೂಲ್ಯ, ಅಕ್ಕನ ಜೊತೆಗೆ ಒಂದೇ ಮನೆಯಲ್ಲಿ ಸುಖ ಸಂಸಾರ ನಡೆಸುತ್ತಿದ್ದಾಳೆ. ಮನೆಯವರೆಲ್ಲರನ್ನೂ ಅರ್ಥ ಮಾಡಿಕೊಂಡು. ಯಾರ ಬಳಿ ಹೇಗಿರಬೇಕು..? ಯಾರಿಗೆ ಏನು ಬೇಕು ಎಂಬುದನ್ನು ತಿಳಿದುಕೊಂಡು ನಡೆಯುತ್ತಿದ್ದಾಳೆ. ಇನ್ನು ವೇದಾಂತ್ ನನ್ನು ಕೂಡ ತುಂಬಾ ಚೆನ್ನಾಗಿ ಅರ್ಥ ಮಾಕೊಂಡಿರುವ ಅಮೂಲ್ಯ, ಮನೆಯಲ್ಲಿ ಎಲ್ಲರನ್ನು ಸೂಕ್ಷ್ಮವಾಗಿ ಗಮನಿಸುತ್ತಾಳೆ. ಮನೆಯವರ ಮನ ಗೆಲ್ಲುವುದರ ಜೊತೆಗೆ ಪ್ರೇಕ್ಷಕರ ಮನದಲ್ಲೂ ಜಾಗ ಗಿಟ್ಟಿಸಿಕೊಂಡಿದ್ದಾಳೆ.