Don't Miss!
- Sports
ಕಾಮನ್ವೆಲ್ತ್ನಲ್ಲಿ ಮೊದಲ ಪದಕ ಗೆದ್ದ ಭಾರತೀಯ ಯಾರು? ಒಟ್ಟಾರೆ ಭಾರತ ಎಷ್ಟು ಪದಕ ಗೆದ್ದಿದೆ?
- News
ಚನ್ನಪಟ್ಟಣ; ಕಾಡಾನೆ ದಾಳಿಗೆ ಮಹಿಳೆ ಬಲಿ, ಪರಿಹಾರಕ್ಕೆ ಜನರ ಪಟ್ಟು
- Automobiles
ಇದೇ ತಿಂಗಳು 11ರಂದು ಅನಾವರಣಗೊಳ್ಳಲಿದೆ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Technology
ಒನ್ಪ್ಲಸ್ ಏಸ್ ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ! ಫೀಚರ್ಸ್ ಹೇಗಿದೆ?
- Lifestyle
Mangal Gochar 2022: ಆ. 10ಕ್ಕೆ ವೃಷಭ ರಾಶಿಯಲ್ಲಿ ಮಂಗಳ ಸಂಚಾರ: ದ್ವಾದಶ ಮೇಲೆ ಬೀರಲಿರುವ ಪ್ರಭಾವವೇನು?
- Finance
ಕೇರಳ ರಾಜ್ಯ ಲಾಟರಿ: 'ಸ್ತ್ರೀಶಕ್ತಿ SS-325' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
- Travel
ಇತಿಹಾಸ ಮತ್ತು ಪ್ರಕೃತಿಯ ಮಿಶ್ರಣ ನಂದಿ ಬೆಟ್ಟಗಳು
ಅಮೂಲ್ಯ ಮೇಲೆ ವೇದಂತ್‌ಗೆ ಅನುಮಾನ!
'ಗಟ್ಟಿಮೇಳ' ಧಾರಾವಾಹಿಯಲ್ಲಿ ಆರತಿ ಈಗ ಗರ್ಭಿಣಿಯಾಗಿದ್ದಾಳೆ. ಇದು ಇಡೀ ಮನೆಯನ್ನು ಸಂಭ್ರಮಿಸುವಂತೆ ಮಾಡಿದೆ. ಅಮೂಲ್ಯ ಆರತಿಗೆ ತೊಟ್ಟಿಲನ್ನು ಗಿಫ್ಟ್ ಮಾಡಿದ್ದಾಳೆ. ಅಮೂಲ್ಯ ಮೇಲೆ ದ್ವೇಷ ಕಾರುತ್ತಿದ್ದ ಆರತಿ ಈಗ ಸ್ವಲ್ಪ ತನ್ನ ಅನುಮಾನಗಳನ್ನು ಕಡಿಮೆ ಮಾಡಿಕೊಂಡಿದ್ದಾಳೆ.
ಇದೇ ವೇಳೆಗೆ ಆರತಿ ಮಗುವಿಗೆ ವೇದಾಂತ್ ದೊಡ್ಡ ಗಿಫ್ಟ್ ಕೊಟ್ಟಿದ್ದಾನೆ. ಅದೇನೆಂದರೆ, ದೊಡ್ಡ ಶಾಲೆಯನ್ನೇ ನಿರ್ಮಿಸುತ್ತಿದ್ದಾನೆ. ಇದನ್ನು ತೋರಿಸಲು ಆರತಿ, ವಿಕ್ಕಿ, ಅಮೂಲ್ಯರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ನಡೆಯಬಾರದ ಘಟನೆ ನಡೆದು ಹೋಗಿದೆ.
ಜೀ
ಕನ್ನಡದಲ್ಲಿ
ಪ್ರಸಾರವಾಗುತ್ತಿದೆ
ಜೋಡಿ
ನಂ.1
ರಿಯಾಲಿಟಿ
ಶೋ
ಅದೇನೆಂದರೆ, ಆರತಿ ಮಗುವನ್ನು ಕೊಲ್ಲಲು ಸುಹಾಸಿನಿ ರೌಡಿಗಳನ್ನು ಕಳಿಸಿದ್ದಾಳೆ. ಆರತಿಯನ್ನು ತಳ್ಳುವ ವೇಳೆಗೆ ನೋಡಿದ ವೇದಾಂತ್ ಆಕೆಯನ್ನು ಕಾಪಾಡಿದ್ದಾನೆ. ಈ ಘಟನೆ ಮನೆಯವರನ್ನು ಕೊಂಚ ಆಘಾತಗೊಳಿಸಿದೆ.

ವೇದಾಂತ್, ಆರತಿ ಭಾವುಕ!
ಆರತಿಯನ್ನು ಉಳಿಸಲು ಹೋಗಿ ವೇದಾಂತ್ ಹೊಟ್ಟೆಗೆ ಏಟಾಗಿದೆ. ಈಗ ಆತ ರೆಸ್ಟ್ ಮಾಡುತ್ತಿದ್ದಾನೆ. ಇದೇ ವೇಳೆಗೆ ಆರತಿ ರೂಮಿಗೆ ಬಂದ ವೇದಾಂತ್, ಈ ಘಟನೆಗೂ ಅಮೂಲ್ಯ ನನ್ನನ್ನು ಮದುವೆಯಾಗಿರುವುದಕ್ಕೂ, ಅವಳ ಕಾಲು ಗುಣದಿಂದಲೇ ನಿಮ್ಮ ಮಗುವಿಗೆ ತೊಂದರೆಯಾಗುತ್ತಿದೆ ಎಂದು ಯೋಚಿಸಬೇಡಿ. ಇದರಲ್ಲಿ ಅಮೂಲ್ಯ ಪಾತ್ರ ಏನು ಇಲ್ಲ ಎಂದು ಹೇಳುತ್ತಾನೆ. ಆರತಿ ವೇದಾಂತ್ ಈ ಮಾತನ್ನು ಕೇಳಿ ಬೇಸರ ಮಾಡಿಕೊಳ್ಳುತ್ತಾಳೆ. ಇಲ್ಲ ಭಾವ ನನಗೆ ಅಮೂಲ್ಯ ಮೇಲೆ ಯಾವ ಅನುಮಾನವೂ ಇಲ್ಲ. ಇನ್ಮುಂದೆ ಹಾಗೆ ನಡೆದುಕೊಳ್ಳುವುದಿಲ್ಲ ಎನ್ನುತ್ತಾಳೆ. ಆರತಿ ಹಾಗೂ ಅಮೂಲ್ಯ ಇಬ್ಬರೂ ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ.
ಬೆಟ್ಟದ
ಹೂ:
ಅಯ್ಯೋ..
ಹೂವಿಗೆ
ಮತ್ತೊಂದು
ಮದುವೆ
ಮಾಡಲು
ಹೊರಟಿದ್ದಾನೆ
ರಾಹುಲ್..!

ಅಪ್ಪನಿಗೆ ಏಲಕ್ಕಿ ಟೀ ಕೊಟ್ಟ ಅಮೂಲ್ಯ
ಅಮೂಲ್ಯ ಅವರ ತಂದೆ ವೇದಾಂತ್ ಮನೆಯಲ್ಲೇ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಮನೆಯವರ ಕಣ್ಣಿಗೆ ಬೀಳದಂತೆ ನೈಟ್ ಶಿಫ್ಟ್ ಮಾಡುತ್ತಿದ್ದಾನೆ. ಆದರೆ ಈ ವಿಚಾರ ಅಮೂಲ್ಯಗೆ ಗೊತ್ತಾಗಿದೆ. ಹೀಗಾಗಿ ಅಮೂಲ್ಯ ಅಪ್ಪನಿಗಾಗಿ ಏಲಕ್ಕಿ ಟೀ ಮಾಡಿದ್ದಾಳೆ. ಇದನ್ನು ಕೊಡುವುದಕ್ಕೆ ಹೋದಾಗ ಅವರಿಗೆ ತಲೆ ನೋವು ಬಂದಿದೆ ಎಂದು ಗೊತ್ತಾಗಿ ಕಾಫಿ ಮಾಡಿಕೊಂಡು ಬಂದು ಕೊಟ್ಟು ಹೋಗಿದ್ದಾಳೆ. ಮಗಳು ಕೊಟ್ಟ ಕಾಫಿ ಕುಡಿದ ಅಮೂಲ್ಯ ತಂದೆ ತಲೆನೋವು ಹೋಗಿದೆ.

ತಂದೆಗಾಗಿ ಆರತಿ, ಅಮೂಲ್ಯ ಹೊಸ ಪ್ಲ್ಯಾನ್!
ಇತ್ತ ಅಮೂಲ್ಯ ಮನೆಯಲ್ಲಿ ತೊಂದರೆ ಎದುರಾಗಿದೆ. ಹಣದ ಸಮಸ್ಯೆ ಇರುವುದರಿಂದ, ಅಧಿತಿ, ಪರಿಮಳ ಕೂಡ ಕೆಲಸ ಮಾಡುತ್ತಿದ್ದಾರೆ. ಅಮೂಲ್ಯ ತಂದೆ ಮಂಜುನಾಥ್ ಕೂಡ ವಾಚ್‌ಮ್ಯಾನ್ ಆಗಿ, ಆಟೋ ಡ್ರೈವರ್ ಕೆಲಸ ಎಲ್ಲವನ್ನೂ ಮಾಡುತ್ತಿದ್ದಾರೆ. ಈ ವಿಚಾರ ತಿಳಿದ ಅಮೂಲ್ಯ ಹಾಗೂ ಆರತಿ ಸಹಾಯ ಮಾಡಲು ಮುಂದಾಗಿದ್ದಾರೆ. ಆರತಿ ತಾನು ಕೂಡಿಟ್ಟ ಹಣವನ್ನು ಕೊಡಲು ನಿರ್ಧರಿಸಿದ್ದು, ಅಮೂಲ್ಯ ತಾನು ಕೆಲಸ ಮಾಡಿದ ಸಂಬಳವನ್ನು ಕೊಡಬೇಕು ಎಂದುಕೊಂಡಿದ್ದಾಳೆ.

ಸಂಬಳ ಕೇಳಿದ ಅಮೂಲ್ಯ!
ಹೀಗಾಗಿ ಅಮೂಲ್ಯ ವೇದಾಂತ್ ತನ್ನ ಬಾಕಿ ಸಂಬಳವನ್ನು ಹೆಚ್ಚಿಸುವುದರ ಜೊತೆಗೆ ಕ್ಲಿಯರ್ ಮಾಡುವಂತೆ ಕೇಳಿದ್ದಾಳೆ. ವೇದಾಂತ್ ಇದಕ್ಕೆ ನಿರಾಕರಿಸಿದ್ದು, ಸ್ವಲ್ಪ ತರಲೆ ಮಾಡಿದ್ದಾನೆ. ಆದರೆ, ಅಮೂಲ್ಯ ಪಟ್ಟು ಹಿಡಿದು ಕೇಳಿದ್ದಕ್ಕೆ, ಕಾರಣ ಕೇಳಿದ್ದಾನೆ. ಆಗ ಅಮೂಲ್ಯ ತನಗೆ ಖರ್ಚಿದೆ ಹಣ ಬೇಕಿತ್ತು ಎಂದಾಗ ವೇದಾಂತ್ ತನ್ನ ಕಾರ್ಡ್‌ಗಳನ್ನು ನೀಡಿದ್ದಾನೆ. ಆದರೆ ಅಮೂಲ್ಯ ಅದನ್ನು ನಿರಾಕರಿಸಿದ್ದು, ವೇದಾಂತ್ ಅಮೂಲ್ಯ ಯಾವುದೋ ಪ್ಲ್ಯಾನ್ ಮಾಡಿದ್ದಾಳೆ. ಆದರೆ, ಏನು ಅಂತ ಹೇಳುತ್ತಿಲ್ಲ ಎಂದು ಯೋಚಿಸುತ್ತಿದ್ದಾನೆ.