For Quick Alerts
  ALLOW NOTIFICATIONS  
  For Daily Alerts

  ಹೊಸ ರಿಯಾಲಿಟಿ ಶೋಗೆ ಗೋಲ್ಡನ್ ಸ್ಟಾರ್ ಗಣೇಶ್ ಸಾರಥಿ

  |

  ಗೋಲ್ಡನ್ ಸ್ಟಾರ್ ಗಣೇಶ್‌ಗೆ ಕಿರುತೆರೆ ಲೋಕ ಹೊಸದೇನಲ್ಲ. ಸಿನಿಮಾ ರಂಗಕ್ಕೆ ಬರುವುದಕ್ಕೆ ಮುಂಚೆ ಉದಯಟಿವಿಯಲ್ಲಿ ಪ್ರಸಾರವಾಗುವ 'ಕಾಮಿಡಿ ಟೈಂ' ಕಾರ್ಯಕ್ರಮ ನಿರೂಪಣೆ ಮಾಡ್ತಿದ್ದರು. ಚಿತ್ರಗಳಲ್ಲಿ ನಟಿಸುವುದಕ್ಕೂ ಮುಂಚೆಯೇ ಗಣೇಶ್ ಅವರು ಕಾಮಿಡಿ ಟೈಂ ಮೂಲಕ ಕನ್ನಡಿಗರ ಮನೆ ಮನೆ ತಲುಪಿದ್ದರು. ಆಮೇಲೆ ಚಿತ್ರರಂಗಕ್ಕೆ ಪ್ರವೇಶಿಸಿದ್ದು, ಮುಂಗಾರು ಮಳೆ ಅಂತಹ ಹಿಟ್ ಚಿತ್ರ ಕೊಟ್ಟಿದ್ದು ಈಗ ಇತಿಹಾಸ.

  ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವ ಗಣೇಶ್, ಸಮಯ ಬಿಡುವು ಮಾಡಿಕೊಂಡು ಕಿರುತೆರೆಗೆ ಬಂದು ಹೋಗ್ತಾ ಇರ್ತಾರೆ. ಕಾಮಿಡಿ ಟೈಂ ಶೋ ಆದ್ಮೇಲೆ ತುಂಬಾ ವರ್ಷದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಸೂಪರ್ ಮಿನಿಟ್' ಎಂಬ ಗೇಮ್ ಶೋ ನಿರೂಪಣೆ ಮಾಡಿದ್ದರು. ನಾಲ್ಕು ಆವೃತ್ತಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಗಣೇಶ್ ಈಗ ಹೊಸದೊಂದು ರಿಯಾಲಿಟಿ ಶೋಗೆ ಸಾರಥಿ ಆಗ್ತಿದ್ದಾರೆ. ಆದರೆ, ಈ ಸಲ ಕಲರ್ಸ್ ಕನ್ನಡದಲ್ಲಿ ಅಲ್ಲ, ಜೀ ಕನ್ನಡದಲ್ಲಿ. ಮುಂದೆ ಓದಿ...

  ಹೊಸ ಅವತಾರದಲ್ಲಿ ಗಣೇಶ್: ಥ್ರಿಲ್ ಆದ 'ಗೋಲ್ಡನ್' ಅಭಿಮಾನಿಗಳುಹೊಸ ಅವತಾರದಲ್ಲಿ ಗಣೇಶ್: ಥ್ರಿಲ್ ಆದ 'ಗೋಲ್ಡನ್' ಅಭಿಮಾನಿಗಳು

  ಜೀ ಕನ್ನಡಕ್ಕೆ ಬಂದ ಗಣೇಶ್

  ಜೀ ಕನ್ನಡಕ್ಕೆ ಬಂದ ಗಣೇಶ್

  'ಸೂಪರ್ ಮಿನಿಟ್' ಕಾರ್ಯಕ್ರಮದ ಮೂಲಕ ಕಲರ್ಸ್ ವಾಹಿನಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ನಟ ಗಣೇಶ್ ಈಗ, ಜೀ ಕನ್ನಡದ ಕಡೆ ಹೆಜ್ಜೆಯಿಟ್ಟಿದ್ದಾರೆ. ವರದಿಗಳ ಪ್ರಕಾರ, ಜೀ ಕನ್ನಡದಲ್ಲಿ ಮೊದಲ ಸಲ ರಿಯಾಲಿಟಿ ಶೋವೊಂದಕ್ಕೆ ಗಣೇಶ್ ನಿರೂಪಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

  ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ 'ಸಖತ್'ಗೆ ಸಿಕ್ಕಳು ನಾಯಕಿಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ 'ಸಖತ್'ಗೆ ಸಿಕ್ಕಳು ನಾಯಕಿ

   ಹೊಸ ಶೋ ಯಾವುದು?

  ಹೊಸ ಶೋ ಯಾವುದು?

  ಗೌರಿ-ಗಣೇಶ ಹಬ್ಬದ ಪ್ರಯುಕ್ತ ಜೀ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ ಮೂಡಿ ಬರುವ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ಶೋಗೆ ಗೋಲ್ಡನ್ ಸ್ಟಾರ್ ಗಣೇಶ್ ಸಾರಥಿ ಎಂದು ಅದೇ ಪ್ರೋಮೋದಲ್ಲಿ ತಿಳಿಸಲಾಗಿದೆ. ಆದರೆ, ಆ ಶೋ ಯಾವುದು? ಯಾವಾಗ ಪ್ರಸಾರ ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿ ಬಿಟ್ಟುಕೊಟ್ಟಿಲ್ಲ. ಶೀಘ್ರದಲ್ಲಿ ಇನ್ನುಳಿದ ಮಾಹಿತಿ ನೀಡಲಿದ್ದೇವೆ ಎಂದಷ್ಟು ಘೋಷಿಸಿದ್ದಾರೆ.

  'ಸಖತ್' ಚಿತ್ರದಲ್ಲಿ ಬ್ಯುಸಿ

  'ಸಖತ್' ಚಿತ್ರದಲ್ಲಿ ಬ್ಯುಸಿ

  ಸಿಂಪಲ್ ಸುನಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಸಿನಿಮಾ ಸಖತ್. ಗಣೇಶ್ ನಾಯಕನಾಗಿ ನಟಿಸಿರುವ ಈ ಚಿತ್ರ ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗುತ್ತಿದೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಗಣೇಶ್ ಮಗ ವಿಹಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ನಿಶಾ ವೆಂಕಟ್ ಕೋನಂಕಿ ಮತ್ತು ನಿಶಾಂತ್ ಈ ಚಿತ್ರ ನಿರ್ಮಾಣ ಮಾಡಿದ್ದು, ಬಹುಭಾಷಾ ನಟಿ ಸುರ್ಭಿ ಹಾಗೂ ನಿಶಿಕಾ ನಾಯ್ಡು ನಾಯಕಿಯರು. 'ಸಖತ್' ಸಿನಿಮಾ ಬಿಡುಗಡೆಗೂ ಮುಂಚೆಯೇ ಸುನಿ ಜೊತೆ ಗಣೇಶ್ ಮತ್ತೊಂದು ಚಿತ್ರ ಮಾಡ್ತಿದ್ದಾರೆ. ಆ ಚಿತ್ರವೇ 'ದಿ ಸ್ಟೋರಿ ಆಫ್ ರಾಯಗಢ'.

  'ತ್ರಿಬಲ್ ರೈಡಿಂಗ್' ಸವಾರಿ

  'ತ್ರಿಬಲ್ ರೈಡಿಂಗ್' ಸವಾರಿ

  ಸಖತ್ ಚಿತ್ರದ ಜೊತೆ ಜೊತೆಯಲ್ಲಿ 'ತ್ರಿಬಲ್ ರೈಡಿಂಗ್' ಸಿನಿಮಾ ಮಾಡುತ್ತಿದ್ದಾರೆ ಗಣೇಶ್. ಅಂದ್ಹಾಗೆ, ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಮೇಘಾ ಶೆಟ್ಟಿ, ಲವ್ ಮಾಕ್ ಟೇಲ್ ಖ್ಯಾತಿಯ ರಚನಾ ಮತ್ತು ನಟಿ ಅದಿತಿ ನಟಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಮಹೇಶ್ ಗೌಡ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ, ಹಾಸ್ಯ ನಟ ಸಾಧುಕೋಕಿಲ, ರಂಗಾಯಣ ರಘು, ರವಿಶಂಕರ್ ಗೌಡ, ಕುರಿ ಪ್ರತಾಪ್, ಡಿಂಗ್ರಿ ನಾಗರಾಜ್ ಸೇರಿದಂತೆ ಅನೇಕ ಪ್ರಸಿದ್ಧ ಕಲಾವಿದರಿದ್ದಾರೆ. ಅಂದಹಾಗೆ ತ್ರಿಬರ್ ರೈಡಿಂಗ್ ಸಿನಿಮಾಗೆ ಮಹೇಶ್ ಗೌಡ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಭಟ್ಟರ ಜೊತೆ ಗಾಳಿಪಟ 2

  ಭಟ್ಟರ ಜೊತೆ ಗಾಳಿಪಟ 2

  ಈ ಚಿತ್ರಗಳ ಜೊತೆಗೆ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮಾಡುತ್ತಿರುವ ಗಾಳಿಪಟ 2 ಸಿನಿಮಾ ಹೆಚ್ಚು ನಿರೀಕ್ಷೆ ಮೂಡಿಸಿದೆ. ಹದಿಮೂರು ವರ್ಷದ ನಂತರ ಈ ಕಾಂಬಿನೇಷನ್ ಮತ್ತೊಮ್ಮೆ ಒಂದಾಗಿದ್ದು, ಈ ಸಲ ಗಣೇಶ್‌ಗೆ ಲೂಸಿಯಾ ಪವನ್ ಕುಮಾರ್, ದಿಗಂತ್ ಸಾಥ್ ಕೊಡ್ತಿದ್ದಾರೆ.

  English summary
  Golden Star Ganesh all set to host New Reality Show in Zee Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X