For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಮನೆಗೆ ಆಟೋ ರಾಜ ಗಣೇಶ್

  By Rajendra
  |

  ಇದ್ದದ್ದನ್ನು ಇದ್ದಂಗೆ ತೋರಿಸುವ ಕನ್ನಡ ಒನ್ ಅಂಡ್ ಓನ್ಲಿ ರಿಯಾಲಿಟಿ ಶೋ 'ಬಿಗ್ ಬಾಸ್' ಮನೆಗೆ ಗೋಲ್ಡನ್ ಸ್ಟಾರ್ ಗಣೇಶ್ ಎಂಟ್ರಿ ಕೊಡುತ್ತಿದ್ದಾರೆ. ಇದೇ ಜೂನ್ 28ರಂದು ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ಶೋನ ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಿದ್ಧವಾಗಿದೆ.

  ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ತಮ್ಮ 'ಆಟೋ ರಾಜ' ಚಿತ್ರದ ಪ್ರಚಾರಕ್ಕಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಬಿಗ್ ಬಾಸ್ ಶೋಗೆ ಭೇಟಿ ನೀಡುತ್ತಿದ್ದಾರೆ. ಆಟೋ ರಾಜ [ವಿಮರ್ಶೆ ಓದಿರಿ] ಚಿತ್ರದಲ್ಲಿನ ಹಾಡಿಗೆ ಬಿಗ್ ಬಾಸ್ ಶೋನಲ್ಲಿ ಹೆಜ್ಜೆ ಹಾಕಲಿದ್ದಾರೆ.

  ಈಗಾಗಲೆ ಅವರು ಸೆಟ್ಸ್ ನಲ್ಲಿದ್ದು ಶೂಟಿಂಗ್ ಭರದಿಂದ ಸಾಗಿದೆ. ಗಣೇಶ್ ಜೊತೆ ಈಗಾಗಲೆ ಎಲಿಮೇಟ್ ಆಗಿರುವ ಸ್ಪರ್ಧಿಗಳು ಹೆಜ್ಜೆ ಹಾಕಲಿದ್ದಾರೆ. ವಿಜಯ್ ರಾಘವೇಂದ್ರ, ಅರುಣ್ ಸಾಗರ್, ನರೇಂದ್ರ ಬಾಬು ಶರ್ಮಾ ಹಾಗೂ ನಿಕಿತಾ ಫೈನಲ್ ತಲುಪಿರುವುದು ಗೊತ್ತೇ ಇದೆ.

  ಈ ನಾಲ್ಕು ಮಂದಿಯಲ್ಲಿ ಯಾರಿಗೆ ವಿಜಯ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದು ತಿಳಿಯಲು ಇನ್ನು ಕೆಲವೇ ಕೆಲವು ಗಂಟೆಗಳು ಮಾತ್ರ ಬಾಕಿ ಇದೆ. ಗೆದ್ದ ಸ್ಪರ್ಧಿಗೆ ರು.50 ಲಕ್ಷ ನಗದು ಬಹುಮಾನ ಸಿಗಲಿದೆ.

  ಇನ್ನು ಗಣೇಶ್ ಅಭಿನಯದ 'ಆಟೋ ರಾಜ' ಚಿತ್ರದ ಬಗ್ಗೆ ಹೇಳಬೇಕಾದರೆ ಚಿತ್ರ ಎರಡನೇ ವಾರ ಪ್ರದರ್ಶನ ಕಾಣುತ್ತಿದ್ದು, ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅದರಲ್ಲೂ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಚಿತ್ರವನ್ನು ನೋಡಿ ಖುಷಿಪಡುತ್ತಿದ್ದಾರೆ. ಒಟ್ಟಾರೆಯಾಗಿ ಶಂಕರ್ ನಾಗ್ ಸರ್ಕಲ್ ನಿಂದ ಗಣೇಶ ಭವನದ ತನಕ ಆಟೋ ಸದ್ದು ಮಾಡುತ್ತಿದೆ. (ಏಜೆನ್ಸೀಸ್)

  English summary
  Golden Star Ganesh will be on Etv Kannada's reality show Bigg Boss grand finale. He will dance during the finale of the show. The evicted contestents also share the stage along with Ganesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X