»   » ಜೀ ಕನ್ನಡದಲ್ಲಿ ಗಣೇಶ್ ಮೀಟರ್ ಇರುವ ಸಿನಿಮಾ

ಜೀ ಕನ್ನಡದಲ್ಲಿ ಗಣೇಶ್ ಮೀಟರ್ ಇರುವ ಸಿನಿಮಾ

Posted By:
Subscribe to Filmibeat Kannada

'ಆಟೋ ರಾಜ' ಎಂದರೆ ಸಾಮಾನ್ಯವಾಗಿ ನೆನಪಾಗುವ ಏಕೈಕ ಹೆಸರು ಕನ್ನಡ ಚಿತ್ರರಂಗ ಕಂಡಂತಹ ಅಮೋಘ ನಟ ದಿವಂತಗ ಶಂಕರ್ ನಾಗ್. ಎಂಬತ್ತರ ದಶಕದಲ್ಲಿ ಹೊಸ ಅಲೆ ಎಬ್ಬಿಸಿದ 'ಆಟೋ ರಾಜ' ಚಿತ್ರದ ಮೂಲಕ ಅವರು ಆಟೋ ಚಾಲಕರ ಪಾಲಿಗೆ ಮನೆ ದೇವರಾಗಿ ಬದಲಾಗಿದ್ದು ಇತಿಹಾಸ.

ಈಗ ಅದೇ ಹೆಸರಿನಲ್ಲಿ ಹೊಸ 'ಆಟೋರಾಜ'ನಾಗಿ ಗೋಲ್ಡನ್ ಸ್ಟಾರ್ ಗಣೇಶ್ ಪ್ರೇಕ್ಷಕರ ಮುಂದೆ ಬಂದು ಅಭಿಮಾನಿಗಳ ಮನಗೆದ್ದಿದ್ದಾರೆ. ಕನ್ನಡಿಗರ ಅಚ್ಚುಮೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ ಅಭಿನಯದ ಸೂಪರ್ ಹಿಟ್ ಚಲನಚಿತ್ರ 'ಆಟೋರಾಜ' ಪ್ರಸಾರವಾಗಲಿದೆ. [ಆಟೋರಾಜ ಚಿತ್ರ ವಿಮರ್ಶೆ]


ಮನೆ ಮಂದಿಯಲ್ಲಾ ಸಂಸಾರ ಸಮೇತ ಕೂತು ನೋಡುವಂತಹ ಸುಂದರ ಪ್ರೇಮಕಥೆಯುಳ್ಳ 'ಆಟೋರಾಜ' ಚಿತ್ರ ಇದೇ ಭಾನುವಾರ (ಅ.27) ಸಂಜೆ 5 ಗಂಟೆಗೆ ಕನ್ನಡಿಗರ ಕಣ್ಮಣಿ ಜೀ ಕನ್ನಡದಲ್ಲಿ ವೀಕ್ಷಿಸಬಹುದು.

'ಆಟೋರಾಜ' ಚಿತ್ರದಲ್ಲಿ ಆಟೋಡ್ರೈವರ್ ಆಗಿ ಜನರ ಸೇವೆ ಮಾಡುವ ಗಣೇಶ ಜೊತೆಗೆ ರೇಡಿಯೋ ಜಾಕಿಯಾಗಿ ನೊಂದ ಮನಸುಗಳಿಗೆ ಸಾಂತ್ವನ ಹೇಳುವ ಭಾವನಾತ್ಮಕ ಸನ್ನಿವೇಶಗಳು, ಮನ ಮಿಡಿಯುವ ಹಾಡುಗಳು ಚಿತ್ರವನ್ನು ನೋಡಿಸಿಕೊಂಡು ಹೋಗುವ ಛಾತಿ ಹೊಂದಿವೆ.

ಚಿತ್ರದಲ್ಲಿ ಎವರ್ ಗ್ರೀನ್ 'ಆಟೋರಾಜ' ಶಂಕರ್ ನಾಗ್ ಕೂಡ ಬಂದು ಹೋಗುವುದು ಚಿತ್ರದ ಹೈಲೈಟ್. ಸದಾ ಕನ್ನಡ ಪ್ರೇಕ್ಷಕರ ಭಾವನೆಗಳನ್ನು ಅರಿತು. ಅವರ ಮನ ಮುಟ್ಟುವಂತಹ ಕಾರ್ಯಕ್ರಮ ನೀಡುತ್ತಿರುವ ಜೀ ಕನ್ನಡ ವಾಹಿನಿಯು ಮನೆ ಮಂದಿಯಲ್ಲ ಕೂತು ನೋಡುವ ಗುಣಮಟ್ಟದ ಚಿತ್ರಗಳನ್ನು ಮಾತ್ರ ಪ್ರಸಾರ ಮಾಡುತ್ತಿದೆ.

ಅಂತಹ ಉತ್ತಮ ಗುಣಮಟ್ಟದ ಹಾಗೂ ಕಾಮಿಡಿ ಕಮ್ ಲವ್ ಸೆಂಟಿಮೆಂಟ್ ಇರುವ ಚಿತ್ರ 'ಆಟೋರಾಜ'. ಈ ಚಿತ್ರವನ್ನು ಜೀ ಕನ್ನಡ ವಾಹಿನಿಯಲ್ಲಿ ಎಲ್ಲರೂ ನೋಡಿ ಆನಂದಿಸುವಂತಾಗಲಿ ಎಂದು ಜೀ ಕನ್ನಡ ವಾಹಿನಿ ಮುಖ್ಯಸ್ಥ ಡಾ.ಎಂ.ಗೌತಮ್ ಮಾಚಯ್ಯ ತಿಳಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Golden Star Ganesh acted romantic drama film Auto Raja will telecast on 26th October at 5pm. The film directed by Uday Prakash, which stars Ganesh, Bhama and Deepika Kamaiah in the lead roles.
Please Wait while comments are loading...