»   » ವೀಕೆಂಡ್ ಸಾಧಕರ ಕುರ್ಚಿಯಲ್ಲಿ ಕೂರುವ ಮುಂಚೆ ಗಣೇಶ್ ಏನಂದ್ರು?

ವೀಕೆಂಡ್ ಸಾಧಕರ ಕುರ್ಚಿಯಲ್ಲಿ ಕೂರುವ ಮುಂಚೆ ಗಣೇಶ್ ಏನಂದ್ರು?

Posted By:
Subscribe to Filmibeat Kannada

'ವೀಕೆಂಡ್ ವಿತ್ ರಮೇಶ್ ಮೂರನೇ ಆವೃತ್ತಿಯ ಕೊನೆಯ ಅತಿಥಿ ಗೋಲ್ಡನ್ ಸ್ಟಾರ್ ಗಣೇಶ್ ಎಂಬುದು ಗೊತ್ತಿರುವ ವಿಚಾರ. ಈಗಾಗಲೇ ಗಣೇಶ್ ಅವರ ಎಪಿಸೋಡ್ ರೆಕಾರ್ಡಿಂಗ್ ಮುಗಿದಿದ್ದು, ಈಗ ಮೊದಲ ಪ್ರೋಮೋ ಬಿಡುಗಡೆಯಾಗಿದೆ.

ಕಳೆದ 15 ವರ್ಷಗಳಿಂದ ಕನ್ನಡ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿರುವ ಗಣೇಶ್, ಆರಂಭದಲ್ಲಿ ಕಾಮಿಡಿ ನಟನಾಗಿ, ನಂತರ ನಾಯಕನಟನಾಗಿ ಬೆಳೆದು ಈಗ ಗೋಲ್ಡನ್ ಸ್ಟಾರ್ ಆಗಿ ನಿಂತಿದ್ದಾರೆ.

'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟ್ ಮೇಲೆ ಕೂತ ನಟ ಗಣೇಶ್.!

Golden Star Ganesh in 'Weekend With Ramesh 3'

ಗಣೇಶ್ ಅವರು ಸಾಧಕರ ಕುರ್ಚಿಯಲ್ಲಿ ಕೂರುವುದಕ್ಕೂ ಮುಂಚೆ ತಮ್ಮ ಮನಸ್ಸಿನಲ್ಲಿದ್ದ ಮಾತುಗಳನ್ನ ಹೊರ ಹಾಕಿದ್ದಾರೆ. ''ಈ ಸಾಧಕರ ಸೀಟಿನಲ್ಲಿ ದೊಡ್ಡ ದೊಡ್ಡವರು ಕುಳಿತುಕೊಂಡಿದ್ದಾರೆ, ಈ ಸೀಟಿಗೆ ನಾನು ಎಷ್ಟು ಯೋಗ್ಯನೋ ನನಗೆ ಗೊತ್ತಿಲ್ಲ. ಬಟ್ ಕೂರಿಸಿದ್ದೀರಾ, ಥ್ಯಾಂಕೂ ವೆರಿ ಮಚ್ ಸರ್.....'' ಎಂದು ಹೇಳುವ ಮೂಲಕ ತಮ್ಮ ಜೀವನ ಜರ್ನಿಯನ್ನ ಮೆಲುಕು ಹಾಕಿದ್ದಾರೆ.

ಒಂದ್ಕಡೆ ಪವರ್ ಸ್ಟಾರ್, ಮತ್ತೊಂದೆಡೆ ಗೋಲ್ಡನ್ ಸ್ಟಾರ್: ಫುಲ್ ಧಮಾಕ.!

ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ನಟ ಗಣೇಶ್ ಭಾಗವಹಿಸಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಜೀ-ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ನಟ ಗಣೇಶ್ ಭಾಗವಹಿಸಿರುವ ಸಂಚಿಕೆಯಲ್ಲಿ, ಯಾರೆಲ್ಲಾ ಪಾಲ್ಗೊಂಡಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಸದ್ಯಕ್ಕೆ ಈ ಪ್ರೋಮೋ ನೋಡಿ ಖುಷಿ ಪಡಿ.....

English summary
Kannada Actor Ganesh has taken part in Zee Kannada Channel's popular show 'Weekend With Ramesh 3'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada