»   » ಹಳ್ಳಿ ಹೈದ ಪ್ಯಾಟೆಗ್ ಬಂದ ಗ್ರ್ಯಾಂಡ್ ಫಿನಾಲೆ ಝಲಕ್ ನೋಡಿ

ಹಳ್ಳಿ ಹೈದ ಪ್ಯಾಟೆಗ್ ಬಂದ ಗ್ರ್ಯಾಂಡ್ ಫಿನಾಲೆ ಝಲಕ್ ನೋಡಿ

Posted By:
Subscribe to Filmibeat Kannada

ಖಾಸಗಿ ಚಾನಲ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಳ್ಳಿ ಹೈದ ಪ್ಯಾಟೆಗ್ ಬಂದ ಸೀಸನ್-2 ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದಿದ್ದು, ಇದೇ ಶುಕ್ರವಾರ (ಅಕ್ಟೋಬರ್ 16) ರಾತ್ರಿ 7.30ಕ್ಕೆ ಗ್ರ್ಯಾಂಡ್ ಫಿನಾಲೆ 70ನೇ ಸಂಚಿಕೆಯ ಕಾರ್ಯಕ್ರಮ ನಿಮ್ಮ ಮನೆಯ ಟಿವಿಯಲ್ಲಿ ಮೂಡಿಬರಲಿದೆ.

ಸದ್ಯಕ್ಕೆ ಯಾರು ವಿಜೇತರು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದ್ದು, ಇದೀಗ ಇರುವ ನಾಲ್ಕು ಜನರಲ್ಲಿ ಯಾರು ಗೆಲುವಿನ ಪಟ್ಟ ಹೊತ್ತುಕೊಳ್ಳುತ್ತಾರೆ ಅಂತ ಎಲ್ಲರಲ್ಲೂ ಕುತೂಹಲವಿದೆ. ಸದ್ಯಕ್ಕೆ ಪುನೀತ್, ಭೌತೀಶ್, ಭಾಸ್ಕರ್ ಹಾಗೂ ಶಿವಕುಮಾರ್ ಇವರಲ್ಲಿ ಗೆಲುವಿನ ಕಿರೀಟ ಯಾರ ಮುಡಿಗೇರುತ್ತದೆ ಅಂತ ಕೌಂಟ್ ಡೌನ್ ಶುರುವಾಗಿದೆ

ಸುಮಾರು 69 ಸಂಚಿಕೆಯಲ್ಲಿ ವಿವಿಧ ಟಾಸ್ಕ್ ಗಳನ್ನು ಪೂರೈಸಿರು ಹಳ್ಳಿ ಹೈದರು ಇದೀಗ ಗೆಲ್ಲುವ ಆತುರದಲ್ಲಿದ್ದಾರೆ. ಒಟ್ನಲ್ಲಿ ವೀಕ್ಷಕರ ಮನೆ-ಮನ ಗೆದ್ದ ಈ ರಿಯಾಲಿಟಿ ಶೋ ನ ಅಂತಿಮ ಸಮರ ಈ ವೀಕೆಂಡ್ ನಲ್ಲಿ ನಡೆಯಲಿದೆ.

ಈ ಸುಸಂದರ್ಭದಲ್ಲಿ ಫಿನಾಲೆಯ ವಿನ್ನರ್ ಅನ್ನು ಗುರುತಿಸಲು ಸುವರ್ಣ ಪರಿವಾರದ ಎಲ್ಲ ಸದಸ್ಯರು ತಮ್ಮ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ವೀಕ್ಷಕರಿಗೆ ಮನೋರಂಜನೆಯನ್ನು ನೀಡಿದ್ದಾರೆ.

ಇನ್ನು ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಅಂದರೆ ನಟ ಅರುಣ್ ಸಾಗರ್ ಹಾಗೂ 'ಉಗ್ರಂ' ಖ್ಯಾತಿಯ ಶ್ರೀಮುರಳಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ನಟ ಮುರಳಿ ಅವರು ಗೆದ್ದ ಹಳ್ಳಿ ಹೈದನನ್ನು ಇಡೀ ಕನ್ನಡ ನಾಡಿಗೆ ಪರಿಚಯಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ನಮ್ಮ ಹಳ್ಳಿ ಹೈದರ ಸಖತ್ ಪರ್ಫಾಮೆನ್ಸ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

ಯಲ್ಲಾಪುರದ ಮುಗ್ದ ಭಾಸ್ಕರ

ತನ್ನದೇ ಒಂದು ಪುಟ್ಟ ಜಗತ್ತಿನಲ್ಲಿರುವ ಯಲ್ಲಾಪುರದ ಮುಗ್ದ ಮನಸ್ಸಿನ ಹುಡುಗ, ಪರೋಪಕಾರಿಯಾಗಿ ಹಾಗೂ ಪ್ರಮಾಣಿಕವಾಗಿ ಎಲ್ಲರ ಮನಗೆದ್ದ ಭಾಸ್ಕರ ತನ್ನ ಜೊತೆಗಾತಿಯೊಂದಿಗೆ ನೀಡಿದ ಸಖತ್ ಡಾನ್ಸ್. ಈ ಬಾರಿ ಸಹೃದಯದ ಭಾಸ್ಕರ ಗೆಲ್ಲುತ್ತಾನ ನೋಡೋಣ

ಮಾತಿನ ಮೋಡಿಗಾರ ಪುನೀತ್

ಉತ್ತಮ ಮಾತುಗಾರ, ನೃತ್ಯ ಕಲಾವಿದ ಜೊತೆಗೆ ಪವರ್ ಸ್ಟಾರ್ ಪುನೀತ್ ಅವರ ಕಟ್ಟಾ ಅಭಿಮಾನಿ ಪುನೀತ್ ದೈಹಿಕವಾಗಿ ಬಲಾಢ್ಯನಲ್ಲದಿದ್ದರೂ ಕೊಟ್ಟ ಎಲ್ಲಾ ಟಾಸ್ಕ್ ಗಳನ್ನು ಗೆದ್ದಿರುವ ಪುನೀತ್ ಫಿನಾಲೆಯ ಕಿರೀಟ ತನ್ನ ಮುಡಿಗೇರಿಸಿಕೊಳ್ಳುತ್ತಾನ, ನೋಡೊಣ.

ಹಿಪಾಪ್ ಸ್ಟೈಲ್ ನ ಭೌತೀಶ್

ಇಡೀ ಸಂಚಿಕೆಯುದ್ದಕ್ಕೂ ತಮ್ಮ ಹಿಪಾಫ್ ಸ್ಟೈಲ್ ನಿಂದ ವೀಕ್ಷಕರಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿರುವ ಭೌತೀಶ್ ಎಲಿಮಿನೇಟ್ ಆಗಿ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡು ಮತ್ತೆ ವಾಪಸಾದ ಇವರು ಗೆಲ್ಲುತ್ತಾರ ಅಂತ ನೋಡಬೇಕಿದೆ.

ಶಿವಕುಮಾರ್

ಬಲಿಷ್ಠ ಯುವಕ ಹಾಗೂ ಸಕಲ ನೈಪುಣ್ಯತೆಯನ್ನು ಹೊಂದಿರುವ ಶಿವಕುಮಾರ್ ತಮ್ಮ ಜೋಡಿ ಚಂದನಾ ಜೊತೆ ಕೊಟ್ಟ ಜಬರ್ದಸ್ತ್ ಡಾನ್ಸ್ ನ ಒಂದು ಝಲಕ್

ನಟ 'ಉಗ್ರಂ' ಶ್ರೀಮುರಳಿ

ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದ ವಿಶೇಷ ಆಕರ್ಷಣೆ 'ಉಗ್ರಂ' ಖ್ಯಾತಿಯ ಶ್ರೀಮುರಳಿ ಅವರು ವಿನ್ನರ್ ಯಾರು ಅಂತ ಘೋಷಣೆ ಮಾಡಲಿದ್ದಾರೆ

ನಟ ಅರುಣ್ ಸಾಗರ್

ಬೆಂಗಳೂರು ಬೆಣ್ಣೆ ದೋಸೆ ಖ್ಯಾತಿಯ ನಟ ಅರುಣ್ ಸಾಗರ್ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ತಮ್ಮ ಹಾಸ್ಯ ಚಟಾಕಿಯನ್ನು ಹಾರಿಸಿ ವೀಕ್ಷಕರನ್ನು ಮನರಂಜಿಸಿದ್ದಾರೆ

ರಜನಿ-ವಿಷ್ಣು ಡಾನ್ಸ್

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಖುಷಿ ಧಾರಾವಾಹಿಯ ರಜನಿ ಹಾಗೂ ವಿಷ್ಣು ಅವರು ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ನೀಡಿದ ಡಾನ್ಸ್ ನ ಒಂದು ಝಲಕ್

English summary
The popular reality show, “Halli Haida Pyatege Bandha Season 2” on Suvarna channel is all set for a grand finale on Friday (October 16th). Popular Kannada film actor, 'Ugram' Srimurali and Actor Arun Sagar will be the main attraction of the grand finale.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada