For Quick Alerts
  ALLOW NOTIFICATIONS  
  For Daily Alerts

  ಫಿನಾಲೆ ಮುಗಿದ ಕೂಡಲೆ 'ಬಿಗ್ ಬಾಸ್' ಮನೆಯೊಳಗೆ ಗ್ರ್ಯಾಂಡ್ ಪಾರ್ಟಿ.!

  By Harshitha
  |

  ಅಂತೂ ಹದಿನೈದು ವಾರಗಳ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಮುಕ್ತಾಯಗೊಂಡಿದೆ. ಕನ್ನಡ rapper ಚಂದನ್ ಶೆಟ್ಟಿ 'ಬಿಗ್ ಬಾಸ್' ವಿನ್ನರ್ ಆಗಿದ್ದಾರೆ. ಇನ್ನೂ ಸೇಲ್ಸ್ ಮ್ಯಾನ್ ದಿವಾಕರ್ ಮೊದಲ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

  ಟಾಪ್ 2 ಹಂತ ತಲುಪಿದ್ದ ಚಂದನ್ ಶೆಟ್ಟಿ ಹಾಗೂ ದಿವಾಕರ್ ರವರನ್ನ ಕಿಚ್ಚ ಸುದೀಪ್ 'ಬಿಗ್ ಬಾಸ್' ಮನೆಯೊಳಗೆ ಹೋಗಿ ವೇದಿಕೆ ಮೇಲೆ ಕರ್ಕೊಂಡ್ ಬಂದ್ರು. ಹಾಗೆ ವೇದಿಕೆ ಮೇಲೆ ಫೈನಲ್ 2 ಸ್ಪರ್ಧಿಗಳನ್ನು ಕರ್ಕೊಂಡ್ ಬರುವ ಮುನ್ನ 'ಬಿಗ್ ಬಾಸ್' ಮನೆಯ ಲೈಟ್ ಗಳನ್ನೆಲ್ಲ ಸುದೀಪ್ ಆಫ್ ಮಾಡಿ ಬಂದಿದ್ರು. ಮತ್ತೆ ಈ ಲೈಟ್ ಗಳೆಲ್ಲ ಆನ್ ಆಗುವುದು ಮುಂದಿನ ಸೀಸನ್ ನಲ್ಲೇ ಎಂದು ಸುದೀಪ್ ಹೇಳಿದ್ದರು.

  ಆದ್ರೆ, ಗ್ರ್ಯಾಂಡ್ ಫಿನಾಲೆ ಚಿತ್ರೀಕರಣ ಮುಗಿದ ಕೂಡಲೆ 'ಬಿಗ್ ಬಾಸ್' ಮನೆಯೊಳಗಿನ ಎಲ್ಲ ಲೈಟ್ಸ್ ಆನ್ ಆಗಿದೆ. ಅಷ್ಟೇ ಅಲ್ಲ, ಅದೇ 'ಬಿಗ್' ಮನೆಯೊಳಗೆ ಗ್ರ್ಯಾಂಡ್ ಪಾರ್ಟಿ ನಡೆದಿದೆ.

  ವೀಕ್ಷಕರ ಆಸೆ ಈಡೇರಿತು: ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆದ್ದುಬಿಟ್ಟರು.!

  ಹೌದು, 106 ದಿನಗಳ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಸಮಾಪ್ತಿ ಆದ್ಮೇಲೆ, 'ಬಿಗ್ ಬಾಸ್' ಮನೆಯೊಳಗೆ ಕಲರ್ಸ್ ಸೂಪರ್ ವಾಹಿನಿ ಡಿನ್ನರ್ ಪಾರ್ಟಿ ಆಯೋಜಿಸಿತ್ತು. ಈ ಪಾರ್ಟಿಯಲ್ಲಿ ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್, 'ಬಿಗ್ ಬಾಸ್' ಕಾರ್ಯಕ್ರಮದ ತಂತ್ರಜ್ಞರು, ಸ್ಪರ್ಧಿಗಳೆಲ್ಲ ಭಾಗವಹಿಸಿದ್ದರು. ಇಲ್ಲಿಂದಲೇ, ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪುಟದಿಂದ ಲೈವ್ ಕೂಡ ಮಾಡಲಾಗಿದೆ.

  ಚಂದನ್ ಶೆಟ್ಟಿ ಸಂಯೋಜಿಸಿರುವ 'ಟಕೀಲ' ಹಾಡಿಗೆ ಎಲ್ಲರೂ ಕುಣಿದು ಕುಪ್ಪಳಿಸಿದ್ದಾರೆ. ಸಂಭ್ರಮದಲ್ಲಿದ್ದ ಚಂದನ್ ಶೆಟ್ಟಿ, ತಮ್ಮನ್ನ ಗೆಲ್ಲಿಸಿದ ಕನ್ನಡಿಗರಿಗೆ ಹೃತ್ಪೂರ್ವಕ ನಮನಗಳನ್ನ ಸಲ್ಲಿಸಿದರು.

  English summary
  Grand Party was organised inside Bigg Boss house after Grand Finale shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X