For Quick Alerts
  ALLOW NOTIFICATIONS  
  For Daily Alerts

  ಹೊಸ ತಂತ್ರಜ್ಞಾನದಲ್ಲಿ 'ಗುಡ್ಡದ ಭೂತ' ಧಾರಾವಾಹಿ

  By Rajendra
  |

  ತೊಂಬತ್ತರ ದಶಕದಲ್ಲಿ ಆಗಿನ ಏಕೈಕ ವಾಹಿನಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ 'ಗುಡ್ಡದ ಭೂತ' ಧಾರಾವಾಹಿ ತನ್ನ ತಾಂತ್ರಿಕತೆ, ಅಭಿನಯ, ನಿರೂಪಣೆಯಿಂದ ಅಸಾಧಾರಣವಾಗಿತ್ತು. ಈ ಧಾರಾವಾಹಿ ಎಲ್ಲರ ಕುತೂಹಲ ಕಾತುರಕ್ಕೆ ನಿರೀಕ್ಷಿಸುತ್ತಿದ್ದರು. ಆ ಧಾರಾವಾಹಿಯನ್ನು ಮತ್ತೆ ನೋಡುವ ಸೌಭಾಗ್ಯವನ್ನು ಜೀ ಕನ್ನಡ ವಾಹಿನಿ ಕಲ್ಪಿಸುತ್ತಿದೆ.

  ಈಗಾಗಲೆ ಈ ಧಾರಾವಾಹಿಯ ಪ್ರಸಾರ ಹಕ್ಕುಗಳನ್ನು ಜೀ ಕನ್ನಡ ವಾಹಿನಿ ಪಡೆದುಕೊಂಡಿದೆ. ಡಿಸೆಂಬರ್ 30ರಿಂದ ರಾತ್ರಿ 7.30ಕ್ಕೆ ಧಾರಾವಾಹಿ ಪ್ರಸಾರವಾಗಲಿದೆ. ಧಾರಾವಾಹಿಯ ಪ್ರತಿಯನ್ನು ಚೆನ್ನೈಗೆ ಕಳುಹಿಸಿ ಡಿ.ಐ ತಂತ್ರಜ್ಞಾನದ ಮೂಲಕ ಮತ್ತಷ್ಟು ಮೆರುಗು ಬರುವಂತೆ ಮಾಡಿದ್ದಾರೆ ಜೀ ಕನ್ನಡ ವಾಹಿನಿ ಮುಖ್ಯಸ್ಥ ಗೌತಮ್ ಮಾಚಯ್ಯ. [ಭಾರಿ ಗಾಳಿಸುದ್ದಿ ಹೊಡೆತಕ್ಕೆ ಸಿಲುಕಿದ ಜನಶ್ರೀ ಚಾನಲ್]

  ಈ ಧಾರಾವಾಹಿಯ ಮೇಕಿಂಗ್ ಬಗ್ಗೆ ಈಗಾಗಲೆ ಜನಶ್ರೀ ನ್ಯೂಸ್ ಚಾನಲ್ ಅದ್ಭುತವಾಗಿ ಕಾರ್ಯಕ್ರಮ ಕೊಟ್ಟಿದೆ. ಸದಾನಂದ ಸುವರ್ಣ ನಿರ್ದೇಶನ, ಜಿ.ಎಸ್.ಭಾಸ್ಕರ್ ಛಾಯಾಗ್ರಹಣ ಹಾಗೂ ಗಿರೀಶ್ ಕಾಸರವಳ್ಳಿ ತಾಂತ್ರಿಕ ನಿರ್ದೇಶನದ ಈ ಧಾರಾವಾಹಿ ಪ್ರಕಾಶ್ ರೈ ಅವರನ್ನು ಬೆಳ್ಳಿತೆರೆ ಪರಿಚಯಿಸುವಂತೆಯೂ ಮಾಡಿತ್ತು.

  ಈ ಧಾರಾವಾಹಿಯ ಚಿತ್ರೀಕರಣ ನಡೆದದ್ದು ಕುಂದಾಪುರ ಬಳಿಯ ವಡ್ಡರ್ಸೆ ಎಂಬಲ್ಲಿ. ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರ ಮನೆಯನ್ನು 'ಗುಡ್ಡದ ಭೂತ' ಧಾರಾವಾಹಿಗೆ ಬಳಸಿಕೊಳ್ಳಲಾಗಿತ್ತು. ಧಾರಾವಾಹಿಯ ನೆನಪಿಗಾಗಿ ಈ ಮನೆಯನ್ನು ಈಗಲೂ ಅವರು ಹಾಗೆಯೇ ಉಳಿಸಿಕೊಂಡಿದ್ದಾರೆ. 'ಗುಡ್ಡದ ಭೂತ' ಶೀರ್ಷಿಕೆ ಡೆನ್ನಾನಾ ಡೆನ್ನಾನಾ... ಗೀತೆ ಬಿ ಆರ್ ಛಾಯಾ ಅವರ ಕಂಠಸಿರಿಯಲ್ಲಿ ಹೊರಹೊಮ್ಮಿತ್ತು.

  ತುಳು ನಾಟಕ ಒಂದರ ಮೂಲವಾಗಿದ್ದ 'ಗುಡ್ಡದ ಭೂತ' ಧಾರಾವಾಹಿಯಲ್ಲಿ ಊರ ಹೊರಗಿನ ಮನೆಯಲ್ಲಿ ಭೂತವಿದೆ ಎಂದು ಜನ ನಂಬುವುದು. ಅದಕ್ಕೆ ಪೂರಕವಾಗಿ ಕೆಲವು ಘಟನೆಗಳು ನಡೆಯುವುದು. ಮುಂಬೈನಿಂದ ಬರುವ ಕಥಾನಾಯಕ (ಪ್ರಕಾಶ್ ರೈ) ಭೂತವನ್ನು ಪತ್ತೆ ಮಾಡಲು ಅನೇಕ ಸಾಹಸಗಳನ್ನು ಮಾಡುವುದು, ಚಿತ್ರ ವಿಚಿತ್ರ ಬೆಳವಣಿಗಳು ನಡೆಯುವುದೇ ಧಾರಾವಾಹಿಯ ಕಥಾಹಂದರ. ತಪ್ಪದೇ ನೋಡಿ. (ಒನ್ಇಂಡಿಯಾ ಕನ್ನಡ)

  English summary
  Zee Kannada general entertainment channel re-telecasts 90's popular thrilling soap 'Guddada Bhoota'. Actor Prakash Rai (Prakash Raj) played lead role in this serial. The early 90s in Kannada could not have missed Guddada Bhootha! The tune was haunting, the storyline suspenseful and people still remember the ending which was superb. Watch the serial from 30th December at 7.30 pm IST.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X