»   » ಬಿಗ್ ಬಾಸ್ ಕಾಂಪೌಂಡ್ ಹಾರಲು ಹೊರಟ ಗುರು

ಬಿಗ್ ಬಾಸ್ ಕಾಂಪೌಂಡ್ ಹಾರಲು ಹೊರಟ ಗುರು

By: ಉದಯರವಿ
Subscribe to Filmibeat Kannada

'ಮಠ' ಖ್ಯಾತಿಯ ಗುರುಪ್ರಸಾದ್ ಅವರು ಕೇವಲ ಒಬ್ಬ ಲೇಖಕನಾಗಿ, ನಿರ್ದೇಶಕನಾಗಿ, ಸಂಭಾಷಣೆಕಾರನಾಗಿ, ಕಥೆಗಾರನಾಗಿಯಷ್ಟೇ ಹೊರ ಜಗತ್ತಿಗೆ ಗೊತ್ತಿತ್ತು. ಆದರೆ ಅವರಲ್ಲೂ ಒಬ್ಬ ಮುಂಗೋಪಿ, ಇಗೋ ಉಳ್ಳ ಸಾದಾಸೀದ ಮನುಷ್ಯನ ಮುಖವಾಡ ಇದೆ ಎಂಬುದನ್ನು 'ಬಿಗ್ ಬಾಸ್' ತೋರಿಸುತ್ತಿದ್ದಾನೆ.

ಮನೆಯಲ್ಲಿ ನಡೆಯುತ್ತಿರುವ ಮಾತಿನ ಫೈಟಿಂಗ್, ಫಿಟ್ಟಿಂಗನ್ನು ಮರೆಯಲ್ಲಿ ಕುಳಿತು ನೀತೂ ಒಬ್ಬರೇ ನೋಡುತ್ತಿದ್ದಾರೆ. ಒಂದು ಕಡೆ ಅವರಿಗೆ ಸಂಭ್ರಮ ಇನ್ನೊಂದು ಕಡೆ ಅಸಹಾಕಯ ಸ್ಥಿತಿ. ಒಟ್ಟಾರೆ ಅವರ ಪಾಡು ವೀಕ್ಷಕರ ಪಾಲಿಗೆ ಮಜವಾಗಿದೆ.

ಬಿಗ್ ಬಾಸ್ ರಹಸ್ಯ ಕೋಣೆಯಲ್ಲಿ ನೀತೂ ಬಂಧಿಯಾಗಿದ್ದು. ಅವರನ್ನು ಬಿಗ್ ಬಾಸ್ ಮಾತನಾಡಿದರು. ಏನನ್ನಿಸುತ್ತಿದೆ ಎಂದು ಕೇಳಿದಾಗ, ತುಂಬಾ ರೆಸ್ಪೆಕ್ಟ್ ಮತ್ತು ಪ್ರೀತಿ ನಿಮ್ಮ ಕಡೆಯಿಂದ ಸಿಕ್ಕಿದೆ. ಅದಕ್ಕಾಗಿ ನಾನು ನಿಮಗೆ ಚಿರಋಣಿ ಎಂದರು. ನಾನು ಎಲಿಮಿನೇಟ್ ಆಗಿದ್ದೀನಿ ಎಂದುಕೊಂಡೆ. ಆದರೆ ನಾನು ಮಾನಸಿಕವಾಗಿ ದೃಢವಾಗಿದ್ದೆ. ನನ್ನ ಹೃದಯದ ಆಳದಿಂದ ಧನ್ಯವಾದಗಳು ಎಂದರು.

ನೀತೂ ರಹಸ್ಯ ಕೋಣೆಯಲ್ಲಿ ಹಳದಿ ಬಲ್ಬ್

ಒಂದು ವೇಳೆ ಬಿಗ್ ಬಾಸ್ ಬಳಿ ನೀತೂ ಮಾತನಾಡಬೇಕೆಂದರೆ ರಹಸ್ಯ ಕೋಣೆಯಲ್ಲಿ ಹಳದಿ ಬಲ್ಬ್ ಉರಿಯುವುದು. ಆಗ ನೀತೂ ಹಿಯರ್ ಫೋನನ್ನು ಕಿವಿಗೆ ಹಾಕಿಕೊಂಡು ಮಾತನಾಡಬೇಕು. ಒಂದು ವೇಳೆ ನೀತೂ ಬಿಗ್ ಬಾಸ್ ಬಳಿ ಮಾತನಾಡಬೇಕಾದರೆ ಹಳದಿ ಬಲ್ಬ್ ಪಕ್ಕದಲ್ಲಿರುವ ಬಿಳಿ ಸ್ವಿಚ್ ಒತ್ತಬಹುದು. ಅಲ್ಲಿನ ಯಾವುದೇ ಕ್ಯಾಮೆರಾ ಬಳಿ ಹೋಗಿ ಅನ್ನಿಸಿದ್ದನ್ನು ಹೇಳಬಹುದು ಎಂದು ಬಿಗ್ ಬಾಸ್ ಹೇಳಿದರು.

ಗುರು ಪ್ರಸಾದ್ ಗೆ ನಿದ್ದೆಗೆಡುವ ಶಿಕ್ಷೆ

ಈ ರಾತ್ರಿ ನನಗೆ ಟೆಕ್ನಿಕಲಿ ನಿದ್ದೆಗೆಡುವ ಶಿಕ್ಷೆಯಾಗಿದೆ. ಗೌರವ ಸಿಗದೆ ಇರುವ ಕಡೆ, ನಮ್ಮ ಪ್ರತಿಭೆಯನ್ನು ಸರಿಯಾಗಿ ಗುರುತಿಸದೇ ಇರುವ ಕಡೆ, ತಪ್ಪುತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಕಡೆ ನಾವು ನಾವಾಗಿ ಇರಲ್ಲ. ಅವರಿಗೆ ಹೇಗೆ ಬೇಕೋ ಹಾಗಿರುತ್ತೇವೆ ಎಂದು ಗುರುಪ್ರಸಾದ್ ತಮ್ಮ ಅನಿಸಿಕೆಗಳನ್ನು ಅಕುಲ್ ಜೊತೆ ಹಂಚಿಕೊಂಡರು.

ಅಕುಲ್ ಪ್ರಶ್ನೆಗಳಿಗೆ ಗುರುಗಳ ಹಾರಿಕೆ ಉತ್ತರ

ಆದರೆ ಗುರು ಹೇಳಿದ ಯಾವ ಮಾತನ್ನೂ ಅಕುಲ್ ಸ್ವೀಕರಿಸುತ್ತಿಲ್ಲ. ಅವರು ಹೇಳಿದ್ದನ್ನು ಪ್ರಶ್ನಿಸುತ್ತಲೇ ಗುರುಗಳನ್ನು ತುಂಬಾ ಇಕ್ಕಟ್ಟಿಗೆ ಸಿಕ್ಕಿಸುತ್ತಿದ್ದಾರೆ. ತಪ್ಪು ತಪ್ಪು ನಿರ್ಧಾರ ಎಂದರೆ ಯಾವುದು ಎಂದು ಕೇಳಿದರು ಅಕುಲ್, ಅದು ಜನಕ್ಕೆ ಗೊತ್ತು ಬಿಡಿ ಗುರು ಹಾರಿಕೆಯ ಉತ್ತರ ನೀಡಿದರು.

ನಿಮಗೇನು ನ್ಯಾಶನಲ್ ಅವಾರ್ಡ್ ಸಿಕ್ಕಿಲ್ಲವಲ್ಲಾ?

ನನಗೆ ಸ್ಕ್ರಿಪ್ಟ್ ರೈಟಿಂಗ್ ನಲ್ಲಿ ಬೆಸ್ಟ್ ಅವಾರ್ಡ್ ಬಂದಿದೆ. ನನಗೆ ಎಲ್ಲವೂ ಗೊತ್ತಾಗುತ್ತದೆ ಎಂದು ಗುರುಪ್ರಸಾದ್ ಗುಡುಗಿದರು. ಅದಕ್ಕೆ ಅಕುಲ್ ಮಾತನಾಡುತ್ತಾ ನ್ಯಾಶನಲ್ ಅವಾರ್ಡ್ ಏನೂ ಬಂದಿಲ್ಲವಲ್ಲ ಎಂದು ಕೇಳಿ ಗುರುಗಳನ್ನು ಇನ್ನಷ್ಟು ಕೆರಳಿಸಿದರು. ಗುರು ಪ್ರಸಾದ್ ಮನಸ್ಸಿನಲ್ಲಿ ಸಣ್ಣಗೆ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದಂತಾಯಿತು. ನೀನು ಸುಮ್ಮಸುಮ್ಮನೆ ನನ್ನನ್ನು ಟ್ರಿಗರ್ ಮಾಡಬೇಡ ಎಂದರು.

ಗುರು ಕಥೆ ಕೇಳಲು ಯಾರಿಗೂ ಇಷ್ಟವಿಲ್ಲ

ಗುರು ಪ್ರಸಾದ್ ಈ ರಾತ್ರಿ ಎಲ್ಲರಿಗೂ ಕಥೆ ಹೇಳುತ್ತೇನೆ ಎಂದು ಹೇಳಿದ್ದರು. ಆದರೆ ಮನೆಯಲ್ಲಿ ಯಾರೊಬ್ಬರೂ ಅವರ ಕಥೆ ಕೇಳಲು ಸಿದ್ಧರಿರಲಿಲ್ಲ.

ಎಲ್ಲರೂ ಕಿವಿಗೆ ಹತ್ತಿ ಇಟ್ಟುಕೊಳ್ಳುತ್ತೇನೆ ಎಂದು ಮಾತನಾಡಿಕೊಂಡರು. ಹೇಗಪ್ಪಾ ರಾತ್ರಿಯಲ್ಲಾ ಗುರು ಕಾಟ ತಡೆದುಕೊಳ್ಳುವುದು ಎಂದು ಚರ್ಚಿಸಿದರು.

ಮಲಗಿರುವ ಹೆಣಗಳಿಗೆ ನಾನು ಕಥೆ ಹೇಳಲ್ಲ

ಮಲಗಿರುವ ಹೆಣಗಳಿಗೆ ನಾನು ಕಥೆ ಹೇಳಲ್ಲ. ಬೇಕಿದ್ದರೆ ಕಾಂಪೌಂಡ್ ಹತ್ತಿ ಇಳಿದು ಮನೆಗೆ ಹೋಗುತ್ತೇನೆ ಎಂದರು. ಒಂದು ವೇಳೆ ಕಾಂಪೌಂಡ್ ಹಾರಿ ಹೋದರೆ ಏನಾಗುತ್ತದೆ ಎಂದು ಸಂತೋಷ್ ಹಾಗೂ ಆದಿ ಬಳಿ ಕೇಳಿದರು ಚರ್ಚಿಸಿದರು. ಏನೂ ಆಗಲ್ಲ ಅಲ್ಲಿ ಸೆಕ್ಯುರಿಟಿ ಇರುತ್ತದೆ ಅವರು ಬಿಡಲ್ಲ ಎಂದರು.

ಗೋಡೆ ಹಾರಿ ಹೋಗುತ್ತೇನೆ ಎಂದ ಗುರು

ಖಂಡಿತ ನಾನು ಈ ರಾತ್ರಿ ಗೋಡೆ ಹಾರಿ ಹೋಗುತ್ತೇನೆ. ನಿದ್ದೆ, ಊಟ, ಕಕ್ಕ ತಡೆದುಕೊಳ್ಳಲು ಆಗಲ್ಲ ಎಂದರು ಗುರು ಕಾಲು ಸುಟ್ಟ ಬೆಕ್ಕಿನಂತೆ ಓಡಾಡುತ್ತಿದ್ದರು. ಎಂಟು ಗಂಟೆಯಲ್ಲಿ ನೂರು ಕಥೆ ಹೇಳುತ್ತೇನೆ. ಇವರಿಗೆ ತಾಕತ್ತು ಇದೆಯಾ ಟೆಲಿಕಾಸ್ಟ್ ಮಾಡಕ್ಕೆ ಸುವರ್ಣ ವಾಹಿನಿಗೇ ಚಾಲೆಂಜ್ ಎಸೆದರು. ಒಟ್ಟಾರೆಯಾಗಿ ಗುರು ಪ್ರಸಾದ್ ಸಂಯಮ ಕಳೆದುಕೊಂಡಂತೆ ಕಂಡುಬಂದರು.

English summary
Trouble star of Bigg Boss Kannada 2 show Guruprasad challenges suvarna challenges. Even Guru thinks to escape from Bigg Boss house. But finally he controls his emotion.
Please Wait while comments are loading...