»   » 'ಸರಿಗಮಪ'ಗೆ ಸಿಕ್ಕಿಯೇ ಬಿಟ್ಟರು 'ಮಹಾಗುರು'ಗಳು.!

'ಸರಿಗಮಪ'ಗೆ ಸಿಕ್ಕಿಯೇ ಬಿಟ್ಟರು 'ಮಹಾಗುರು'ಗಳು.!

Posted By:
Subscribe to Filmibeat Kannada

ಕನ್ನಡದ ಮನೋರಂಜನಾ ವಾಹಿನಿಯಲ್ಲಿ ರಿಯಾಲಿಟಿ ಶೋಗಳ ಮೂಲಕ ಅತೀ ಹೆಚ್ಚು 'ಟಿ.ಆರ್.ಪಿ' ಹೊಂದಿರುವ ಕಾರ್ಯಕ್ರಮ 'ಜೀ ವಾಹಿನಿ'ಯ 'ಸರಿಗಮಪ'.

ಕಳೆದ 14 ಸೀಸನ್ ನಿಂದ ಪ್ರೇಕ್ಷಕರನ್ನ ರಂಜಿಸುತ್ತಾ ಬರುತ್ತಿರುವ ಈ ರಿಯಾಲಿಟಿ ಶೋ ನಿಂದ ಗಾಯಕ ಹಾಗೂ ಸಂಗೀತ ನಿರ್ದೇಶಕ ರಾಜೇಶ್ ಕೃಷ್ಣನ್ ಜೀ ಕುಟುಂಬದಿಂದ ಹೊರನಡೆದಿದ್ರು. ರಾಜೇಶ್ ಜಾಗಕ್ಕೆ ಯಾರು ಬರ್ತಾರೆ ಎನ್ನುವ ವಿಚಾರವಾಗಿ ಸಾಕಷ್ಟು ಚರ್ಚೆಗಳಾಗಿದ್ವು.

ಆಡಿಷನ್ಸ್ ಮುಗಿಸಿ ಸ್ಪರ್ಧಿಗಳನ್ನ ಆಯ್ಕೆ ಮಾಡಿರುವ ಜೀ ವಾಹಿನಿ ಡಿಸೆಂಬರ್ 9 ರಿಂದ ಸರಿಗಮಪ ಸೀಸನ್ 14 ಪ್ರಸಾರ ಮಾಡಲು ಸಜ್ಜಾಗಿದೆ. ರಾಜೇಶ್ ಕೃಷ್ಣನ್ ಜಾಗಕ್ಕೆ ಸಂಗೀತ ನಿರ್ದೇಶಕ ಹಾಗೂ ಗಾಯಕ 'ರಘು ದೀಕ್ಷಿತ್' ಬರ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಗಾಸಿಪ್ ತೆರೆ ಎಳೆದಿರುವ ಜೀ ಕನ್ನಡ ವಾಹಿನಿ ಮಹಾಗುರುಗಳ ಸ್ಥಾನಕ್ಕೆ 'ನಾದಬ್ರಹ್ಮ ಹಂಸಲೇಖ' ಅವ್ರನ್ನ ಆಯ್ಕೆ ಮಾಡಿದೆ. ಮುಂದೆ ಓದಿರಿ....

ನಾದಬ್ರಹ್ಮನ ಬಳಿ ಸಂಗೀತ ಕಲಿಯುವ ಅವಕಾಶ

ಸರಿಗಮಪ ಸೀಸನ್ 14 ನಲ್ಲಿ ಮಹಾಗುರುಗಳಾಗಿ ಹಂಸಲೇಖ ಇರಲಿದ್ದಾರೆ. ಈ ಸೀಸನ್ ನಲ್ಲಿ ಬರುವ ಮಕ್ಕಳಿಗೊಂದು ಸುವರ್ಣ ಅವಕಾಶ ಸಿಕ್ಕಿದ್ದು ಹಂಸಲೇಖರ ಬಳಿ ಸಂಗೀತ ಪಾಠ ಕಲಿಯುವ ಅವಕಾಶ ಲಭಿಸಲಿದೆ.

ಸುವರ್ಣಾವಕಾಶ ಜೊತೆ ಸರಿಗಮಪ

ಈ ಬಾರಿ ಹಂಸಲೇಖ ಮಹಾಗುರುಗಳ ಸ್ಥಾನ ತುಂಬಿರೋದ್ರಿಂದ ಶೋ ನಲ್ಲೂ ಸಾಕಷ್ಟು ಬದಲಾವಣೆಯನ್ನ ಕಾಣಬಹುದಾಗಿದೆ. ಮುಂದಿನವಾರ (ಡಿಸೆಂಬರ್ 9) ದಿಂದ ಸೀಸನ್ 14 ಗೆ ಚಾಲನೆ ಸಿಗಲಿದ್ದು, ದೇಸಿ ಕಲೆ ಹಾಗೂ ದೇಸಿ ಪ್ರತಿಭೆಗಳಿಗೆ ಹೆಚ್ಚಿನ ಮನ್ನಣೆ ಸಿಗಲಿದೆ.

ಓಲ್ಡ್ ಇಸ್ ಗೋಲ್ಡ್

ಹಂಸಲೇಖ ಅವರ ಜೊತೆಯಾಗಿ ಈ ಹಿಂದಿನ ಸೀಸನ್ ನಲ್ಲಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಗಾಯಕ ವಿಜಯ್ ಪ್ರಕಾಶ್ ಸಾಥ್ ನೀಡಲಿದ್ದಾರೆ. ಹಳೆ ಹಾಡುಗಳ ಜೊತೆಯಲ್ಲಿ ಹೊಸ ಟ್ಯೂನ್ಸ್ ಗಳ ಸಮಾಗಮವಾಗಲಿದೆ.

ಹಾಡುವ ಮಕ್ಕಳ ಪೋಷಕರಿಗೆ ಅರ್ಪಣೆ

ಡಿಸೆಂಬರ್ 9 ರಿಂದ ಸಂಜೆ 7-30ಕ್ಕೆ ಸರಿಗಮಪ ಕಾರ್ಯಕ್ರಮ ಶುರುವಾಗಲಿದೆ. ಒಂದಷ್ಟು ಬದಲಾವಣೆಯೊಂದಿಗೆ ಬರ್ತಿರೋ ಸರಿಗಮಪ ತಂಡ ಈ ಬಾರಿಯ ಶೋ ವನ್ನ ಮಕ್ಕಳ ಪೋಷಕರಿಗಾಗಿ ಅರ್ಪಣೆ ಮಾಡಿರೋದು ವಿಶೇಷ.

English summary
Kannada Music Director Hamsalekha to judge Saregamapa season 14 along with Arjun Janya and Vijaya Prakash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada