»   » ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಹರಹರ ಮಹಾದೇವ' ಮುಕ್ತಾಯ.?

ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಹರಹರ ಮಹಾದೇವ' ಮುಕ್ತಾಯ.?

Posted By:
Subscribe to Filmibeat Kannada
ಹರ ಹರ ಮಹಾದೇವ ಧಾರವಾಹಿ ಜನವರಿ 12, 2018ಕ್ಕೆ ಅಂತ್ಯವಾಗಲಿದೆ | FIlmibeat Kannada

'ಹರಹರ ಮಹಾದೇವ'... ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಪ್ರತಿನಿತ್ಯ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ. ಕಿರುತೆರೆಯಲ್ಲಿ ಹೊಸ ಪ್ರಯತ್ನದ ಮೂಲಕ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾದ 'ಹರಹರ ಮಹಾದೇವ' ಧಾರಾವಾಹಿಯನ್ನ ಕನ್ನಡ ಪ್ರೇಕ್ಷಕರು ತುಂಬಾನೇ ಮೆಚ್ಚಿಕೊಂಡಿದ್ದರು.

ಸ್ಟಾರ್ ಸುವರ್ಣ ತಂಡ ಹಾಗೂ ಧಾರಾವಾಹಿಯ ಕಲಾವಿದರು ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. 'ದೇವೊಂಕೆ ದೇವ್ ಮಹಾದೇವ್' ಹೆಸರಿನಲ್ಲಿ ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯೇ ಕನ್ನಡದಲ್ಲಿ 'ಹರಹರ ಮಹಾದೇವ' ಆಗಿತ್ತು.

ಎಂದೂ ನೋಡಿರದ ಸೆಟ್ ಗಳು, ಗ್ರಾಫಿಕ್ಸ್ ಎಫೆಕ್ಟ್ ಎಲ್ಲವನ್ನೂ ಬಳಸಿಕೊಂಡು ಧಾರಾವಾಹಿಯನ್ನ ಚಿತ್ರೀಕರಿಸಲಾಗುತ್ತಿತ್ತು. ಆರಂಭದಲ್ಲಿ ಶಿವನ ಚರಿತ್ರೆಯನ್ನ ನೋಡಲು ಉತ್ಸಾಹದಿಂದ ಇದ್ದ ಪ್ರೇಕ್ಷಕರು ಅದ್ಯಾಕೋ ಇತ್ತೀಚಿಗೆ ಶಿವನನ್ನ ನೋಡಲು ಟಿವಿ ಮುಂದೆ ಬರುತ್ತಿಲ್ಲ. ಇದರಿಂದ ಬೇಸತ್ತಿರೋ ಸ್ಟಾರ್ ಸುವರ್ಣ ಟೀಂ 'ಹರ ಹರ ಮಹಾದೇವ' ಧಾರಾವಾಹಿಯನ್ನು ನಿಲ್ಲಿಸಲು ನಿರ್ಧಾರ ಮಾಡಿದ್ಯಂತೆ..ಮುಂದೆ ಓದಿ

ಶಿವನ ಧಾರಾವಾಹಿಗಿಲ್ಲ ಟಿ ಆರ್ ಪಿ

ಪ್ರತಿನಿತ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ಹರ ಹರ ಮಹಾದೇವ' ಸೀರಿಯಲ್ ಗೆ ಟಿ ಆರ್ ಪಿ ಕಮ್ಮಿ ಆಗಿದ್ಯಂತೆ. ಆರಂಭದಲ್ಲಿದ್ದ ರೇಟಿಂಗ್ ಈಗ ಸಿಗುತ್ತಿಲ್ಲವಂತೆ.

ಜನವರಿಯಿಂದ ಶಿವನ ದರ್ಶನವಿಲ್ಲ

'ಹರ ಹರ ಮಹಾದೇವ' ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಧಾರಾವಾಹಿ. ಸುಮಾರು 300 ಕ್ಕೂ ಹೆಚ್ಚು ತಂತ್ರಜ್ಞರು ಸೀರಿಯಲ್ ನಿರ್ಮಾಣದಲ್ಲಿ ಕೆಲಸ ಮಾಡುತ್ತಿದ್ದರು. ರೇಟಿಂಗ್ ಕಮ್ಮಿ ಆಗಿರುವ ಹಿನ್ನಲೆಯಲ್ಲಿ ಜನವರಿ 12 (2018) ರಿಂದ ಧಾರಾವಾಹಿ ಪ್ರಸಾರ ನಿಲ್ಲಲಿದೆ ಎಂಬ ಸುದ್ದಿ ಹರಿದಾಡಿದೆ.

ಹುಸಿ ಆಯ್ತು ನಿರೀಕ್ಷೆ

ಆರಂಭದಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆಯನ್ನ ನೋಡಿ ಸಾಕಷ್ಟು ದಿನಗಳು 'ಹರ ಹರ ಮಹಾದೇವ' ಧಾರಾವಾಹಿಯನ್ನ ಪ್ರಸಾರ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ 'ಟಿ ಆರ್ ಪಿ' ಇಳಿಕೆ ಆದ್ದರಿಂದ ಧಾರಾವಾಹಿಯನ್ನ ಮುಗಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹೆಚ್ಚಾಗಿದೆ ಕಾಂಪಿಟೇಷನ್

ಮನೋರಂಜನಾ ವಾಹಿನಿಗಳಲ್ಲಿ ಇತ್ತೀಚಿಗೆ ಕಾಂಪಿಟೇಷನ್ ಹೆಚ್ಚಾಗಿದೆ. ಪೌರಾಣಿಕ ಹಾಗೂ ಐತಿಹಾಸಿಕ ಧಾರಾವಾಹಿಗಳು ಹೆಚ್ಚಾಗಿ ನಿರ್ಮಾಣ ಆಗುತ್ತಿವೆ. ಪ್ರೇಕ್ಷಕರನ್ನ ಸೆಳೆಯೋ ತಂತ್ರಗಳು ಕೂಡ ಜಾಸ್ತಿ ಆಗಿದೆ.

Read more about: tv star suvarna trp ಟಿವಿ
English summary
Kannada serial Hara Hara Mahadeva to go off air from Jan 2018.ಸ್ಟಾರ್ ಸುವರ್ಣ ವಾಹಿನಿಯ 'ಹರ ಹರ ಮಹಾದೇವ' ಧಾರಾವಾಹಿಯ ಪ್ರಸಾರ ನಿಲ್ಲಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X