For Quick Alerts
  ALLOW NOTIFICATIONS  
  For Daily Alerts

  ಚಿರಂತನ್ ಮೋಸ ಮಾಡುತ್ತಿದ್ದಾರೆ ಎಂದು ಭಾರ್ಗಿಗೆ ಗೊತ್ತಾಗಿ ಬಿಡುತ್ತಾ?

  |

  ಸಿ ಎಸ್ ಪಿ ಆಫೀಸಿನಲ್ಲಿ ಕೆಲಸ ಮಾಡುತ್ತಿರುವ ಹರಿಕುಮಾರ್ ದೊಡ್ಡ ತಲೆನೋವಾಗಿ ಕಾಡುತ್ತಿದ್ದಾರೆ. ಸಿ ಎಸ್ ಪಿ ಹೇಳದೆ ಕೇಳದೆ 50 ಸಾವಿರ ಹಣವನ್ನು ಖರ್ಚು ಮಾಡಿದ್ದಾರೆ. ಹರಿಕುಮಾರ್ ದೊಡ್ಡ ಸಮಸ್ಯೆ ಅಂದರೆ ಆತನಿಗೆ ಇನ್ನು ಹುಡುಗಿ ಸಿಗುತ್ತಿಲ್ಲ. ಅಮ್ಮ ಮಗ ಇಬ್ಬರು ಹುಡುಗಿ ಹುಡುಕಿ ಹುಡುಕಿ ಸುಸ್ತಾಗಿದ್ದಾರೆ.

  ಇದರಿಂದ ಸಾಕಷ್ಟು ಹಣ ಕೂಡ ಖರ್ಚಾಗಿದೆ. ಸಿ ಎಸ್ ಪಿ ಹಣವನ್ನೆ ಬಳಸಿಕೊಂಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಿ ಎಸ್ ಪಿ ಹರಿಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೊಂದೆಡೆ ನಿಶ್ಚಿತಾರ್ಥ ಮುಗಿಸಿಕೊಂಡು ಬಂದ ಜಾನಕಿಯನ್ನು ದೇವಕಿ ಸಾಕಷ್ಟು ವಿಚಾರಿಸುತ್ತಿದ್ದಾರೆ.

  ದೇವಕಿ ಕಣ್ಣಿಗೆ ಬೀಳುತ್ತ ಸುದ್ದಿ ಪತ್ರಿಕೆಯಲ್ಲಿದ್ದ ಜಾನಕಿ-ನಿರಂಜನ್ ಫೋಟೋ?

  ನಿರಂಜನ್ ಮತ್ತು ಜಾನಕಿ ಇಬ್ಬರು ಗಂಡ ಹೆಂಡತಿ ಎನ್ನುವ ವಿಚಾರ ಮನೆಯವರಿಗೆ ಯಾವಾಗ ಗೊತ್ತಾಗುತ್ತೆ ಎನ್ನುವುದು ಪ್ರೇಕ್ಷಕರಲ್ಲಿ ಕುತೂಹಲವಿದೆ. ಇದರ ನಡುವೆ ನಿರಂಜನ್ ಮನೆಯವರಿಗೆಲ್ಲ ಬಂದ ಲಾಭದಿಂದ ಉಡುಗೊರೆಗಳನ್ನು ತಂದು ನೀಡಿದ್ದಾರೆ. ಚಿರಂತನ್ ನಾಟಕದ ವಿಚಾರ ಮೀರಾ ಅವರಿಗೆ ಗೊತ್ತಾಗಿದೆ.

  ಹರಿ ಕುಮಾರ್ ಗೆ ಸಾಲ ನೀಡಿದ ಶಾಮಲ

  ಹರಿ ಕುಮಾರ್ ಗೆ ಸಾಲ ನೀಡಿದ ಶಾಮಲ

  ಹುಡುಗಿ ಹುಡುಕಿ ಹುಡುಕಿ ತುಂಬಾ ಸಣ್ಣಗೆ ಆಗಿದ್ದಾರೆ ಹರಿಕುಮಾರ್. ಈ ಬಗ್ಗೆ ಶಾಮಲ ವಿಚಾರಿಸುತ್ತಿದ್ದಾರೆ. ಹರಿಕುಮಾರ್ ಕತೆ ಕೇಳಿ ಶಾಮಲ ಒಳಗೊಳಗೆ ನಗುತ್ತಿದ್ದಾರೆ. ಹರಿಕುಮಾರ್ ಸಣ್ಣ ಆದ ಕತೆ ಕೇಳಿ ಶಾಮಲ ಜೋರಾಗಿ ನಗುತ್ತಿದ್ದಾರೆ. ಸಿ ಎಸ್ ಪಿ ಅವರಿಗೆ ಹಣ ವಾಪಾಸ್ ಕೊಡಲು ಶಾಮಲ ಬಳಿ ಹಣ ಕೇಳುತ್ತಿದ್ದಾರೆ ಹರಿಕುಮಾರ್. ಹರಿಕುಮಾರ್ ಗೆ 50 ಸಾವಿರ ಸಾಲ ನೀಡಿದ್ದಾರೆ ಶಾಮಲ.

  ವರುಷ ತುಂಬಿದ ಹರುಷದಲ್ಲಿ 'ಮಗಳು ಜಾನಕಿ' ತಂಡ

  ಚಿರಂತನ್ ಮೇಲೆ ಮೀರಾಗೆ ಅನುಮಾನ

  ಚಿರಂತನ್ ಮೇಲೆ ಮೀರಾಗೆ ಅನುಮಾನ

  ಚಿರಂತತನ್ ಜೊತೆ ಮೀರಾ ಮೊದಲ ಬಾರಿಗೆ ಮಾತನಾಡಿದ್ದಾರೆ. ಉಜ್ವಲ ಶೇಖರ್ ನೋಡಲು ಬಂದಿದ್ದಾರೆ ಎಂದು ಮೀರಾ ಚಿರಂತನ್ ಅವರಿಗೆ ಹೇಳಿದ್ದಾರೆ. ಅಲ್ಲದೆ ಚಿರಂತನ್ ಯಾರಿಗೂ ಹೇಳಬಾರದು ಎಂದು ಮೀರಾ ಬಳಿ ಮಾತು ತೆಗೆದುಕೊಂಡಿದ್ದಾರೆ. ಆದ್ರೆ ಮೀರಾ ಸತ್ಯ ಏನು ಅಂತ ಹೇಳಬೇಕು ಎಂದು ಕೇಳಿಕೊಂಡಿದ್ದಾರೆ. ಆದ್ರೆ ಮೀರಾಗೆ ಚಿರಂತನ್ ಮೇಲೆ ಅನುಮಾನ ಮೂಡಿದೆ.

  ಸಿ ಎಸ್ ಪಿ ಹಣವನ್ನು ಅವರೆ ನೀಡಿದ ಹರಿ

  ಸಿ ಎಸ್ ಪಿ ಹಣವನ್ನು ಅವರೆ ನೀಡಿದ ಹರಿ

  ಹರಿಕುಮಾರ್ ಶಾಮಲ ಅವರ ಬಳಿ ಸಾಲ ಪಡೆದ ಹಣವನ್ನು ಸಿ ಎಸ್ ಪಿ ಅವರಿಗೆ ನೀಡಿದ್ದಾರೆ. ಆ ಹಣ ತನ್ನದೆ ಎನ್ನುವುದು ಅವರಿಗೆ ಗೊತ್ತಾಗಿದೆ. ಸಿ ಎಸ್ ಪಿ ಅವರು ಪೊಲೀಸ್ ಗೆ ಹಿಡಿದು ಕೊಡುತ್ತಾರೆ ಎಂದು ಭಯಬಿದ್ದು ಹಣನ್ನು ನೀಡಿರುವುದಾಗಿ ಹೇಳಿದ್ದಾರೆ. ಅಲ್ಲದೆ ಇನ್ನು ರಜೆ ಬೇಕು ಎಂದು ಕೇಳಿ ಸಿ ಎಸ್ ಪಿ ಬಳಿ ಸರಿಯಾಗಿ ಉಗಿಸಿಕೊಂಡಿದ್ದಾರೆ ಹರಿಕುಮಾರ್.

  'ಮಗಳು ಜಾನಕಿ' ಧಾರಾವಾಹಿಯ ಕಿರಿಯ ಪಾತ್ರಧಾರಿ ಇಂಚರಾ

  ಮನೆಯವರಿಗೆ ಗಿಫ್ಟ್ ಕೊಟ್ಟ ನಿರಂಜನ್

  ಮನೆಯವರಿಗೆ ಗಿಫ್ಟ್ ಕೊಟ್ಟ ನಿರಂಜನ್

  ಖುಷಿಯಿಂದ ನಿಂರಜನ್ ಎಲ್ಲರಿಗೂ ಬಟ್ಟೆ ತಂದು ಕೊಟ್ಟಿದ್ದಾರೆ. ಕಂಪನಿಯ ಲಾಭದಿಂದ ಎಲ್ಲರಿಗು ಬಟ್ಟೆ ತಂದು ಕೊಟ್ಟು ಖುಷಿ ಪಡಿಸಿದ್ದಾರೆ ನಿರಂಜನ್. ಅಲ್ಲದೆ ಅಮ್ಮನಿಗೆ 30 ಸಾವಿರದ ಚೆಕ್ ನೀಡಿದ್ದಾರೆ ನಿರಂಜನ್. ನಿರಂಜನ್ ಗೆ ಬಂದ ಲಾಭದಿಂದ ಮನೆಯವರು ಫುಲ್ ಖುಷ್ ಆಗಿದ್ದಾರೆ. ಇನ್ನು ಮುಂದೆಯಾದ್ರು ಕಷ್ಟ ಬಗೆಹರಿಯಿತು ಎನ್ನುವ ಸಂತಸದಲ್ಲಿ ಮನೆಯವರಿದ್ದಾರೆ.

  ಮೀರಾ ಬಳಿ ಸಹಾಯ ಕೇಳಿದ ಚಿರಂತನ್

  ಮೀರಾ ಬಳಿ ಸಹಾಯ ಕೇಳಿದ ಚಿರಂತನ್

  ಉಜ್ವಲ ಶೇಖರ್ ಬಗ್ಗೆ ಯಾರಿಗೂ ಹೇಳಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ಇದರಿಂದ ಚಿರಂತನ್ ಏನನ್ನು ಮುಚ್ಚಿದ್ದಾರೆ ಎಂದು ಕೇಳುತ್ತಿದ್ದಾರೆ. ಈ ವಿಚಾವನ್ನ ಯಾಕೆ ಹೇಳಬಾರದು ಎಂದು ಚಿರಂತನ್ ಅನ್ನ ಕೇಳುತ್ತಿದ್ದಾರೆ. ಆದ್ರೆ ಉಜ್ವಲ ಯಾವುದೊ ವಿಚಾರದಲ್ಲಿ ಚಿರಂತನ್ ಅನ್ನು ಸಿಲುಕಿಸಲು ನೋಡುತ್ತಿದ್ದಾರೆ. ಹಾಗಾಗಿ ಈ ವಿಚಾರ ಗೊತ್ತಾದರೆ ಮದುವೆ ನಿಂತು ಹೋಗುತ್ತೆ, ಮನೆಯವರ ಬಳಿ ಹೇಳಬೇಡಿ ಎಂದು ಕೇಳಿಕೊಳ್ಳುತ್ತಿದ್ದಾರೆ ಚಿರಂತನ್.

  ಜಾನಕಿಗೆ ಸೀರೆ ಗಿಫ್ಟ್ ಮಾಡಿದ ನಿರಂಜನ್

  ಜಾನಕಿಗೆ ಸೀರೆ ಗಿಫ್ಟ್ ಮಾಡಿದ ನಿರಂಜನ್

  ಮನೆಯವರಿಗೆಲ್ಲ ಗಿಫ್ಟ್ ತಂದು ಕೊಟ್ಟಿದ್ದಾರೆ. ಹಾಗೆ ಜಾನಕಿಗೆ ಸೀರೆ ಮತ್ತು ಮಲ್ಲಿಗೆ ಹೂ ತಂದು ಕೊಟ್ಟಿದ್ದಾರೆ. ಕಂಪೆನಿಯಿಂದ ಲಾಭವನ್ನು ಎಲ್ಲರಿಗೂ ಹಂಚಿದ್ದಾರೆ ನಿರಂಜನ್. ಜಾನಕಿ ಮಾಡಿದ ಸಹಾಯವನ್ನು ಹೊಗಳುತ್ತ ಜಾನಕಿಗೆ ಗಿಫ್ಟ್ ಅನ್ನು ನೀಡಿದ್ದಾರೆ. ನಿರಂಜನ್ ನೀಡಿದ ಉಡುಗೊರೆಯಿಂದ ಜಾನಕಿ ಭಾವುಕರಾಗಿದ್ದಾರೆ. ಅಲ್ಲದೆ ಈ ಅದೃಷ್ಟಲಕ್ಷ್ಮಿ ಯಾವಾಗಲು ನನ್ನದೆ ಆಗಿರಲಿ ಎನ್ನುವ ಆಸೆಯನ್ನು ಜಾನಕಿ ಬಳಿ ವ್ಯಕ್ತಪಡಿಸಿದ್ದಾರೆ ನಿರಂಜನ್.

  English summary
  Hari Kumar approaches Shyamala and pleads with her to lend him money. He explains to Shyamala that he is indebted to CSP and needs to return the money at the earliest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X