For Quick Alerts
  ALLOW NOTIFICATIONS  
  For Daily Alerts

  ಸಂಜನಾ ಪತಿ ಇನ್ನು ಬದುಕಿದ್ದಾರೆ : ಏಳು ವರ್ಷದ ನಂತರ ಕಾಣಿಸಿಕೊಂಡ ನಿರಂಜನ್ ಭಾವ

  |

  ಮಗಳು ಜಾನಕಿ ಧಾರವಾಹಿಯಲ್ಲಿ ಮತ್ತೊಂದು ರೋಚಕ ಸಂಗತಿ ಎದುರಾಗುತ್ತಿದೆ. ಪತಿಯನ್ನು ಕಳೆದುಕೊಂಡು ಏಳು ವರ್ಷಗಳಿಂದ ನೋವಿನಲ್ಲೆ ಏಕಾಂಗಿ ಜೀವನ ನಡೆಯುತ್ತಿರುವ ಸಂಜನಾಳಿಗೆ ಎರಡನೆ ಮದುವೆ ಮಾಡಿಸುವ ಪ್ರಸ್ತಾಪ ಮಾಡಿದ್ದಾರೆ ಜಾನಕಿ. ಆದ್ರೆ ಆಗಲೆ ಸಂಜನಾಗೆ ಮತ್ತೊಂದು ಶಾಕ್ ಎದುರಾಗಿದೆ.

  ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದ ವಿಚಾರ ಅಂದ್ರೆ ಅಂದ್ರೆ ಹರಿಕುಮಾರ್ ವಿದಾಯ. ಸಿ ಎಸ್ ಪಿ ಜೊತೆ ಕೆಲಸ ಮಾಡುತ್ತಿದ್ದ ಹರಿಕುಮಾರ್ ಕೆಲಸ ಬಿಟ್ಟು, ಊರು ಬಿಟ್ಟು ಬೇರೆ ಊರಿಗೆ ತೆರಳುತ್ತಿದ್ದಾರೆ. ಭಾವುಕವಾಗಿ ಮಾತನಾಡಿದ ಹರಿಕುಮಾರ್ ಮಾತುಗಳು ಶಾಮಲಾ ಅವರಿಗೆ ಮಾತ್ರವಲ್ಲದೆ ನೋಡುಗರ ಕಣ್ಣಂಚಲ್ಲೂ ನೀರು ತುಂಬಿಕೊಳ್ಳುವಂತಿದೆ.

  ಸಿ ಎಸ್ ಪಿಗೆ ಉಡುಗೊರೆ ಕೊಟ್ಟು ಕೆಲಸ ಬಿಟ್ಟು ಹೋದ ಹರಿಕುಮಾರ್ ಸಿ ಎಸ್ ಪಿಗೆ ಉಡುಗೊರೆ ಕೊಟ್ಟು ಕೆಲಸ ಬಿಟ್ಟು ಹೋದ ಹರಿಕುಮಾರ್

  ಹರಿ ಕುಮಾರ್ ಇನ್ಮುಂದೆ ಕಾಣಿಸಿಕೊಳ್ಳುದಿಲ್ಲಾ ಎನ್ನುವ ನಿರಾಸೆ ಪ್ರೇಕ್ಷಕರನ್ನು ಕಾಡುತ್ತಿದೆ. ಮತ್ತೊಂದೆಡೆ ಜಾನಕಿ ಸಂಜನಾ ಅವರಿಗೆ ಎರಡನೆ ಮದುವೆ ಮಾಡಿಸುವ ಬಗ್ಗೆ ಮಾತನಾಡಿದ್ರೆ, ಸಂಜನಾ ಮಾತ್ರ ಜಾನಕಿ ಕಂಡ್ರೆ ಕೋಪ ಮಾಡಿಕೊಳ್ಳುತ್ತಾರೆ. ಇದೆಲ್ಲದರ ನಡುವೆ ಸಂಜನಾಗೆ ದೊಡ್ಡ ಶಾಕ್ ಒಂದು ಎದುರಾಗಿದೆ.

  ಅಂತು ಹರಿಕುಮಾರ್ ಗೆ ಮದುವೆ ಆಯಿತು

  ಅಂತು ಹರಿಕುಮಾರ್ ಗೆ ಮದುವೆ ಆಯಿತು

  ಸೋದರ ಮಾವನ ಮಗಳು ಸಹನಾ ಮದುವೆಗೆ ಅಂತ ಹೋಗಿದ್ದ ಹರಿಕುಮಾರ್ ಅಲ್ಲೆ ಮದುವೆ ಆಗಿ ಬಂದಿದ್ದಾರೆ. ಹರಿಕುಮಾರ್ ದಿಢೀರ್ ಮದುವೆಯ ಬಗ್ಗೆ ಸಿ ಎಸ್ ಪಿ ಕುಟುಂಬದವರ ಮುಂದೆ ಹೇಳಿಕೊಂಡಿದ್ದಾರೆ. ಮದುಮಗ ಓಡಿ ಹೋದ ಕಾರಣದಿಂದ ಹಸೆಮಣೆ ಮೇಲಿದ್ದ ಮಾವನ ಮಗಳ ಕತ್ತಿಗೆ ತಾಳಿಕಟ್ಟಿದ್ದಾರೆ ಹರಿಕುಮಾರ್. ಸೋದರ ಮಾವನ ಮಗಳನ್ನು ಮದುವೆ ಆಗುವುದಾಗಿ ಹೇಳಿ ಮದುವೆವರಿಗೂ ಮುಂದುವರೆದಿದ್ದ ಮದುಮಗ ಬೇರೆ ಯಾರನ್ನು ಪ್ರೀತಿಸುತ್ತಿರುವುದಾಗಿ ಹೇಳಿ ಓಡಿಹೋಗಿದ್ದಾರಂತೆ. ಹಾಗಾಗಿ ಮಾವನ ಮಗಳನ್ನೇ ಮದುವೆಯಾಗಿದ್ದಾರೆ ಹರಿಕುಮಾರ್.

  ಪತಿಯ ಏಳನೆ ವರ್ಷದ ತಿಥಿ ಕಾರ್ಯದಲ್ಲಿ ಸಂಜನಾಪತಿಯ ಏಳನೆ ವರ್ಷದ ತಿಥಿ ಕಾರ್ಯದಲ್ಲಿ ಸಂಜನಾ

  ಜಾನಕಿಯನ್ನು ತರಾಟೆಗೆ ತೆಗೆದುಕೊಂಡ ಸಂಜನಾ

  ಜಾನಕಿಯನ್ನು ತರಾಟೆಗೆ ತೆಗೆದುಕೊಂಡ ಸಂಜನಾ

  ಸಂಜನಾ ಮಗಳು ಇಂಚರಾ ರಾಕೆಟ್ ಬೇಕು ಅಂತ ಹಠ ಹಿಡಿದಿದ್ದಳು. ಆದ್ರೆ ಸಂಜನಾ ಬಳಿ ಹಣ ಇಲ್ಲ ಎನ್ನುವ ಕಾರಣಕ್ಕೆ ಮಗಳಿಗೆ ರಾಕೆಟ್ ಕೊಡಿಸಿರಲಿಲ್ಲ. ಆದ್ರೆ ಜಾನಕಿ ಇಂಚರಾಗೆ ರಾಕೆಟ್ ತಂದು ಕೊಟ್ಟಿದ್ದಾರೆ. ಇದರಿಂದ ಸಿಟ್ಟಿಗೆದ್ದಿರುವ ಸಂಜನಾ ಜಾನಕಿ ಮೇಲೆ ರೇಗಾಡಿದ್ದಾರೆ. ಮಗಳಿಗೆ ತಂದು ಕೊಡಲು ನಾನಿದ್ದೀನಿ, ನೀನೇನು ಚಿಕ್ಕಮ್ಮನಾ, ಅತ್ತೆನಾ ಎಂದು ಜಾನಕಿ ಮೇಲೆ ರೇಗಾಡಿದ್ದೀರಿ. ಮಗಳ ವಿಚಾರದಲ್ಲಿ ಹೊರಗಡೆಯವರು ತಲೆ ಹಾಕುವುದು ಇಷ್ಟವಿಲ್ಲ ಎಂದು ಸಂಜನಾ ಖಡಕ್ ಆಗಿ ಜಾನಕಿಗೆ ಹೇಳಿದ್ದಾರೆ.

  ಹರಿ ಕುಮಾರ್ ಭಾವುಕ ವಿಧಾಯಕ

  ಹರಿ ಕುಮಾರ್ ಭಾವುಕ ವಿಧಾಯಕ

  ಸಿ ಎಸ್ ಪಿ ಮನೆಯನ್ನು, ಕೆಲಸವನ್ನು ಬಿಟ್ಟುಹೋಗುತ್ತಿರುವ ಹರಿಕುಮಾರ್ ಭಾವುಕರಾಗಿ ಮಾತನಾಡಿದ್ದಾರೆ. ಜೊತೆಗೆ ಶಾಮಲ ಕೂಡ ಭಾವುಕರಾಗಿದ್ದಾರೆ. ಶಾಮಲಾ ಮತ್ತು ಹರಿ ಕುಮಾರ್ ಕಾಂಬಿನೇಶನ್ ಚೆನ್ನಾಗಿ ವರ್ಕೌಟ್ ಆಗಿತ್ತು. ಯಾವಾಗಲು ಹರಿಕಮಾರ್ ಕಾಲೆಳೆಯುತ್ತಿದ್ದರು ಶಾಮಲ. ಆದ್ರೀಗ ಹರಿಕುಮಾರ್ ಬಿಟ್ಟುಹೋಗುತ್ತಿರುವ ವಿಚಾರಕೇಳಿ ಶಾಮಲ ಅವರು ಕೂಡ ಕಣ್ಣೀರಾಕಿದ್ದಾರೆ. ಎಲ್ಲರನ್ನು ಬಿಟ್ಟುಹೋಗುತ್ತಿರುವುದು ನನಗೂ ಬೇಸರ ಆಗುತ್ತಿದೆ ಎಂದು ಹೇಳಿ ಹೊರಟುಹೋಗಿದ್ದಾರೆ.

  ಫೇಸ್ ಬುಕ್ ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಧಾರಾವಾಹಿ 'ಮಗಳು ಜಾನಕಿ'ಫೇಸ್ ಬುಕ್ ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಧಾರಾವಾಹಿ 'ಮಗಳು ಜಾನಕಿ'

  ಉಜ್ವಲ ಶೇಖರ್ ನೆನಪಲ್ಲಿ ಚಿರಂತನ್

  ಉಜ್ವಲ ಶೇಖರ್ ನೆನಪಲ್ಲಿ ಚಿರಂತನ್

  ಚಿರಂತನ್ ಉಜ್ವಲಾ ಶೇಖರ್ ನೆನಪಲ್ಲಿ ಮುಳುಗಿ ಹೋಗಿದ್ದಾರೆ. ಚಂಚಲ ಮತ್ತು ರಶ್ಮಿ ಅವರು ಎಷ್ಟು ಕರೆದರು ಉಜ್ವಲ ಶೇಖರ್ ನೆನಪಿನಲ್ಲಿದ್ದರು. ಆಗ ರಶ್ಮಿ ಅವರು ಚಿರಂತನ್ ಬುದ್ಧಿ ಹೇಳಿದ್ದಾರೆ. ಮನೆಯವರಿಗೂ ಬೇಸರ ಆಗಿರುತ್ತೆ, ತಂದೆ ತಾಯಿಗೆ ಬೇಸರ ಮಾಡಬಾರದು. ರಾಜು ಚೌಧರಿ ಅವರು ಒಳ್ಳೆಯವರು, ಅಂತವರಿಗೆ ಬೇಸರ ಮಾಡಬಾರದು ಈಗ ಹೋಗಿ ಚಿರಂತನ್ ಮನೆಯವರ ಆಶೀರ್ವಾದ ತೆಗೆದುಕೊಂಡು ಬರುವಂತೆ ರಶ್ಮಿ ಹೇಳಿದ್ದಾರೆ.

  ಸಂಜನಾ ಪತಿ ಇನ್ನು ಬದುಕಿದ್ದಾರೆ

  ಸಂಜನಾ ಪತಿ ಇನ್ನು ಬದುಕಿದ್ದಾರೆ

  ಏಳು ವರ್ಷಗಳಿಂದ ಪತಿ ಸತ್ತೋಗಿದ್ದಾರೆ ಅಂತ ಅಂದು ಕೊಂಡಿದ್ದ ಸಂಜನಾಗೆ ಪತಿಯನ್ನು ನೋಡಿ ದಿಢೀರ್ ಶಾಕ್ ಆಗಿದೆ. ಟಿವಿಯಲ್ಲಿ ಸಂಜನಾ ಪತಿ ಕಾಣಿಸಿಕೊಂಡಿದ್ದಾರೆ. ಪತಿ ದೊಡ್ಡ ಉದ್ಯೋಗಿಯಾಗಿದ್ದಾರೆ. ಟಿವಿಯಲ್ಲಿ ಪತಿಯನ್ನು ನೋಡುತ್ತಿದ್ದಂತೆ ಅಮ್ಮ ದೇವಕಿ ಅವರನ್ನು ಕರೆದು ತೋರಿಸಿದ್ದಾರೆ. ಆದ್ರೆ ದೇವಕಿ ನೋಡುವಷ್ಟೊತ್ತಿಗೆ ಸುದ್ದಿ ಮುಗಿದಿತ್ತು. ಅದೂ ನಿಜಕ್ಕು ಸಂಜನಾ ಪತಿನಾ, ಪತಿಯೆ ಆಗಿದ್ದರೆ ಯಾಕೆ ಏಳ ವರ್ಷಗಳ ಕಾಲ ಸಂಜನಾ ಅವರನ್ನು ಯಾಕೆ ಬಿಟ್ಟು ಹೋಗಿದ್ದರು ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ.

  English summary
  Hari Kumar arrives at CSP's house and tells him about his sudden plan to move to Chikamagalur. CSP is shocked to hear it but wishes him the best of luck on his journey to a new start.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X