For Quick Alerts
  ALLOW NOTIFICATIONS  
  For Daily Alerts

  ವಿಶ್ವಾಸ್ ದೇಸಾಯಿ ಪಾತ್ರದಲ್ಲಿ ಹರೀಶ್ ರಾಜ್! ಹಾಗಿದ್ದರೆ ಆರ್ಯವರ್ಧನ್ ಯಾರು?

  |

  ಜೊತೆ ಜೊತೆಯಲಿ ಧಾರಾವಾಹಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಟ ಹರೀಶ್ ರಾಜ್ ಕೂಡ ಈಗ ಎಂಟ್ರಿ ಕೊಟ್ಟಿದ್ದಾರೆ. ಹರೀಶ್ ರಾಜ್, ಆರ್ಯವರ್ಧನ್ ಪಾತ್ರಕ್ಕೆ ಬರುತ್ತಾರೆ ಅಂತ ಹೇಳಲಾಗ್ತಿತ್ತು. ಆದ್ರೆ ಹರೀಶ್ ರಾಜ್ ಅವರು ಜೊತೆ ಜೊತೆಯಲಿನಲ್ಲಿ ಬೇರೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಆರ್ಯವರ್ಧನ್ ಪಾತ್ರ ಮಾಡುತ್ತಿದ್ದ ಅನಿರುದ್ಧ್ ಸೀರಿಯಲ್‌ನಿಂದ ಹೊರಬಂದ ಮೇಲೆ, ಆ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಹಾಗೇ ಉಳಿದಿದೆ. ಆರೂರ್ ಜಗದೀಶ್ ಅವರು ನಿರ್ದೇಶಕ ಅನೂಪ್ ಭಂಡಾರಿಯನ್ನು ಈ ಪಾತ್ರಕ್ಕೆ ತರಲು ಪ್ರಯತ್ನ ಮಾಡಿದ್ರು. ಆದ್ರೆ ಅನೂಪ್ ಭಂಡಾರಿ ಅವರು ಒಪ್ಪಿದಂತಿಲ್ಲ.

  Exclusive: 'ಜೊತೆ ಜೊತೆಯಲಿ' ಹರೀಶ್ ರಾಜ್ ಎಂಟ್ರಿ ಕೊಟ್ಟಾಯ್ತು, ಕಥೆಯಲ್ಲಿ ಮೆಗಾ ಟ್ವಿಸ್ಟ್!Exclusive: 'ಜೊತೆ ಜೊತೆಯಲಿ' ಹರೀಶ್ ರಾಜ್ ಎಂಟ್ರಿ ಕೊಟ್ಟಾಯ್ತು, ಕಥೆಯಲ್ಲಿ ಮೆಗಾ ಟ್ವಿಸ್ಟ್!

  ಹರೀಶ್ ರಾಜ್ ಏನೋ ಸೀರಿಯಲ್‌ಗೆ ಬಂದಿದ್ದಾರೆ. ಆದ್ರೆ ಆರ್ಯವರ್ಧನ್ ಪಾತ್ರಕ್ಕಲ್ಲ. ಬದಲಿಗೆ ಅವರ ಸಹೋದರನಾಗಿ ಕಾಣಿಸಿಕೊಂಡಿದ್ದಾರೆ. ಹಾಗಾದ್ರೆ ಯಾರು ಆರ್ಯವರ್ಧನ್ ಆಗ್ತಾರೆ ಅನ್ನೋ ಕುತೂಹಲ ಹಾಗೇ ಉಳಿದಿದೆ. ಸದ್ಯ ವಿಶ್ವಾಸ್ ದೇಸಾಯಿ ಸುತ್ತಲು ನಡೆಯುತ್ತಾ ಇರೋದೇನು ಎನ್ನುವುದನ್ನು ಮುಂದೆ ಓದಿ.

  ವಿಶ್ವಾಸ್ ದೇಸಾಯಿ ಆದ ಹರೀಶ್ ರಾಜ್!

  ವಿಶ್ವಾಸ್ ದೇಸಾಯಿ ಆದ ಹರೀಶ್ ರಾಜ್!

  ಆರ್ಯವರ್ಧನ್ ನಿಜವಾದ ಅಮ್ಮ ಅಂದ್ರೆ ಪ್ರಿಯದರ್ಶಿನಿ. ಪ್ರಿಯದರ್ಶಿನಿ ಇನ್ನೊಬ್ಬ ಮಗ ವಿಶ್ವಾಸ್ ದೇಸಾಯಿ. ಆತ ಇಷ್ಟು ದಿನ ದುಡಿಯಲು ಹೊರ ದೇಶಕ್ಕೆ ಹೋಗಿರುತ್ತಾನೆ. ಆದ್ರೆ ಅಲ್ಲಿ 700 ಕೋಟಿ ಲಾಸ್ ಮಾಡಿಕೊಂಡು ಮನೆಗೆ ವಾಪಸ್ ಆಗಿದ್ದಾನೆ. ಅವನ ತಾಯಿ ನಾನು ಆರ್ಯವರ್ಧನ್ ಬಳಿ ಸಹಾಯ ಕೇಳ್ತೀನಿ ಅಂತ ಹೇಳ್ತಾ ಇದ್ದಾರೆ.

  ಲಾಸ್‌ನಲ್ಲಿ ವಿಶ್ವಾಸ್ ದೇಸಾಯಿ!

  ಲಾಸ್‌ನಲ್ಲಿ ವಿಶ್ವಾಸ್ ದೇಸಾಯಿ!

  ಮನೆಗೆ ಬಂದಿರುವ ವಿಶ್ವಾಸ್ ಆದಿ, ಎ.ಜೆ, ವೇದಾಂತ್‍ಗೆ ಕಾಲ್ ಮಾಡಿದ್ದಾರೆ. ಮೂವರು ಹಳೆಯ ಗೆಳೆಯ ಕರೆ ಮಾಡಿದ್ದಾನೆ ಎಂದು ಖುಷಿಯಾಗಿದ್ದಾರೆ. ಆದಿ, ವೇದಾಂತ್, ಎ.ಜೆ ಬಳಿ ವಿಶ್ವಾಸ್ ಕ್ಷಮೆ ಕೇಳುತ್ತಿದ್ದಾನೆ. ನೀವು ನನ್ನನ್ನು ನಂಬಿ ನನ್ನ ಪ್ರಾಜೆಕ್ಟ್ ಗೆ ದುಡ್ಡು ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತಾನೆ. ಅಲ್ಲದೇ ಸರಿಯಾದ ಟೈಂಗೆ ದುಡ್ಡು ವಾಪಸ್ ಕೊಡಲು ಆಗಲಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾನೆ. ಅದಕ್ಕೆ ಅವರು ಮೂವರು ನಾವ್ ಕೇಳಿಲ್ಲ ತಾನೇ, ಯಾಕಿಷ್ಟು ಬೇಸರ ಮಾಡಿಕೊಂಡಿದ್ದೀಯಾ ಎನ್ನುತ್ತಾರೆ.

  ಪ್ರಿಯದರ್ಶಿನಿ ಇಬ್ಬರು ಮಕ್ಕಳಗೆ ಕಂಟಕ!

  ಪ್ರಿಯದರ್ಶಿನಿ ಇಬ್ಬರು ಮಕ್ಕಳಗೆ ಕಂಟಕ!

  ಪ್ರಿಯದರ್ಶಿನಿ ಮನೆಗೆ ಜೋಗತವ್ವ ಬಂದಿದ್ದು ಆಕೆಗೆ ಎಚ್ಚರಿಕೆ ಕೊಟ್ಟಿದ್ದಾರೆ. ನಿನ್ನ ಇಬ್ಬರು ಮಕ್ಕಳಲ್ಲಿ ಒಬ್ಬರಿಗೆ ಕಂಟಕ ಇದೆ ಎಂದು ಹೇಳುತ್ತಾಳೆ. ಆದ್ರೆ ಯಾವ ಮಗನಿಗೆ ಎಂಬುದನ್ನು ಹೇಳುವುದಿಲ್ಲ. ಅದನ್ನು ಕೇಳಿಸಿಕೊಂಡ ಪ್ರಿಯದರ್ಶಿನಿ ಗಾಬರಿ ಆಗಿದ್ದಾಳೆ. ಯಾಕಂದ್ರೆ ಜೋಗತವ್ವ ಹೇಳಿದ ಮಾತುಗಳೆಲ್ಲಾ ನಿಜ ಆಗುತ್ತೆ ಅದಕ್ಕೆ.

  ಆರ್ಯನಿಗೆ ಕಂಟಕ!

  ಆರ್ಯನಿಗೆ ಕಂಟಕ!

  ಪ್ರಿಯದರ್ಶಿನಿಗೆ ಇಬ್ಬರು ಮಕ್ಕಳು ಒಬ್ಬ ಆರ್ಯವರ್ಧನ್, ಮತ್ತೊಬ್ಬ ವಿಶ್ವಾಸ್ ದೇಸಾಯಿ. ವಿಶ್ವಾಸ್ ದೇಸಾಯಿ ಈಗ ಸಂಕಷ್ಟದಲ್ಲಿದ್ದು, ತಾಯಿ ಬಳಿ ತನ್ನ ಕಷ್ಟ ಹೇಳಿಕೊಂಡಿದ್ದಾನೆ. ಅದಕ್ಕೆ ಪ್ರಿಯದರ್ಶಿನಿ, ಆರ್ಯವರ್ಧನ್‍ಗೆ ಹೇಳಿ ತನ್ನ ಮಗನ ಸಂಕಷ್ಟ ದೂರ ಮಾಡುವ ಪ್ರಯತ್ನದಲ್ಲಿ ಇದ್ದಾಳೆ.

  English summary
  Harish Raj As Vishwas Desayi In Jothe Jotheyali, Who Will Be Aryavardhan, know more,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X