For Quick Alerts
  ALLOW NOTIFICATIONS  
  For Daily Alerts

  ಫೋಟೋ ಆಲ್ಬಂ: ಸೂಪರ್ ಸ್ಟೈಲಿಶ್ ಲುಕ್ ನಲ್ಲಿ 'ರಾಧಾ' ಮಿಸ್

  By Harshitha
  |
  ರಾಧಾ ಮಿಸ್ ರಿಯಲ್ ಆಗಿ ಹೆಂಗಿದ್ದಾರೆ ನೋಡಿ..! | Filmibeat Kannada

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯನ್ನು ನೀವು ತಪ್ಪದೆ ನೋಡ್ತಿದ್ರೆ, ನಿಮಗೆ ರಾಧಾ ಮಿಸ್ ಪರಿಚಯ ಖಂಡಿತ ಇದ್ದೇ ಇರುತ್ತೆ.

  'ರಾಧಾ ರಮಣ' ಧಾರಾವಾಹಿಯ ಲೀಡ್ ಆ'ರಾಧ'ನಾ ಪಾತ್ರಕ್ಕೆ ಜೀವ ತುಂಬಿರುವವರು ನಟಿ ಶ್ವೇತಾ.ಆರ್.ಪ್ರಸಾದ್. ಸೀರಿಯಲ್ ನಲ್ಲಿ ಸದಾ ಸೀರೆ ಧರಿಸಿ, ಸೌಮ್ಯವಾಗಿರುವ ಶ್ವೇತಾ ನಿಜ ಜೀವನದಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್.

  ಆರ್ಕಿಟೆಕ್ಟ್ ಆಗಿದ್ದ ಶ್ವೇತಾ.ಆರ್.ಪ್ರಸಾದ್ ಕಿರುತೆರೆಗೆ ಎಂಟ್ರಿಕೊಟ್ಟಿದ್ದೇ ಆಕಸ್ಮಿಕವಾಗಿ. 'ಶ್ರೀರಸ್ತು ಶುಭಮಸ್ತು' ಹಾಗೂ 'ರಾಧಾ ರಮಣ' ಧಾರಾವಾಹಿಗಳ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಪಡೆದಿದ್ದಾರೆ ನಟಿ ಶ್ವೇತಾ.ಆರ್.ಪ್ರಸಾದ್.

  ಸೀರಿಯಲ್ ನಲ್ಲಿ ಯಾವಾಗಲೂ ಸೀರೆಯಲ್ಲೇ ಕಂಗೊಳಿಸುವ ಶ್ವೇತಾ.ಆರ್.ಪ್ರಸಾದ್ ಸೀರೆಯುಡುವ ಶೈಲಿ ಕಂಡ್ರೆ ಹಲವು ಹೆಂಗಳೆಯರಿಗೆ ಇಷ್ಟ. ಧಾರಾವಾಹಿಯಲ್ಲಿ ರಾಧಾ ಮಿಸ್ ಸೀರೆ ಲುಕ್ ನೋಡಿರುವ ನೀವು, ಶ್ವೇತಾ.ಆರ್.ಪ್ರಸಾದ್ ರವರ ಸೂಪರ್ ಸ್ಟೈಲಿಶ್ ಫೋಟೋಗಳನ್ನ ಒಮ್ಮೆ ನೋಡಿಕೊಂಡು ಬನ್ನಿ....

  ಚೆಂದಕಿಂತ ಚೆಂದ...

  ಚೆಂದಕಿಂತ ಚೆಂದ...

  'ರಾಧಾ ರಮಣ' ಧಾರಾವಾಹಿಯಲ್ಲಿ ಇರುವ ರಾಧಾ ಮಿಸ್ ಲುಕ್ ಗೂ ಈ ಫೋಟೋದಲ್ಲಿ ಕಾಣುವ ಶ್ವೇತಾ.ಆರ್.ಪ್ರಸಾದ್ ಗೂ ಅಜಗಜಾಂತರ ವ್ಯತ್ಯಾಸ ಇದೆ ಅಲ್ವಾ.?

  'ರಾಣಿ' ಮುಖವಾಡ 'ರಾಧಾ' ಮುಂದೆ ಕಳಚಿ ಬೀಳುತ್ತಾ.?'ರಾಣಿ' ಮುಖವಾಡ 'ರಾಧಾ' ಮುಂದೆ ಕಳಚಿ ಬೀಳುತ್ತಾ.?

  ಸ್ಪೆಷಲ್ ಫೋಟೋಶೂಟ್

  ಸ್ಪೆಷಲ್ ಫೋಟೋಶೂಟ್

  ಇತ್ತೀಚೆಗಷ್ಟೇ ನಟಿ ಶ್ವೇತಾ.ಆರ್.ಪ್ರಸಾದ್ ಸ್ಪೆಷಲ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆ ವೇಳೆ ಕ್ಲಿಕ್ ಆಗಿರುವ ಗ್ಲಾಮರಸ್ ಫೋಟೋ ಇದು.

  ಅನ್ವಿತಾ ಮುಂದೆ ಸಿಕ್ಕಿ ಬಿದ್ದ ರಾಣಿ: ಇಂದು ಅಲ್ಲೋಲ ಕಲ್ಲೋಲ ಗ್ಯಾರೆಂಟಿ.!ಅನ್ವಿತಾ ಮುಂದೆ ಸಿಕ್ಕಿ ಬಿದ್ದ ರಾಣಿ: ಇಂದು ಅಲ್ಲೋಲ ಕಲ್ಲೋಲ ಗ್ಯಾರೆಂಟಿ.!

  ಎಲ್ಲಾ ಉಡುಗೆಯಲ್ಲೂ ಬೆಸ್ಟ್

  ಎಲ್ಲಾ ಉಡುಗೆಯಲ್ಲೂ ಬೆಸ್ಟ್

  ಸೀರೆ, ಗೌನ್, ಜೀನ್ಸ್... ಈ ಎಲ್ಲಾ ಉಡುಗೆಯೂ ಶ್ವೇತಾ.ಆರ್.ಪ್ರಸಾದ್ ಗೆ ಪರ್ಫೆಕ್ಟ್ ಆಗಿ ಸೂಟ್ ಆಗಿದೆ. ಅದಕ್ಕೆ ಈ ಫೋಟೋಗಳೇ ಸಾಕ್ಷಿ.

  ಈಗ ರಾಣಿ ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದು ಕಷ್ಟ ಕಷ್ಟ.!ಈಗ ರಾಣಿ ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದು ಕಷ್ಟ ಕಷ್ಟ.!

  ಶ್ವೇತಾ ನಟನೆ ಆರಂಭಿಸಿದ್ದು ಹೇಗೆ.?

  ಶ್ವೇತಾ ನಟನೆ ಆರಂಭಿಸಿದ್ದು ಹೇಗೆ.?

  ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಶ್ವೇತಾ ಒಮ್ಮೆ ತಮ್ಮ ಫೋಟೋವೊಂದನ್ನ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ರಂತೆ. ಆಗ ಆ ಫೋಟೋನ ಧಾರಾವಾಹಿ ನಿರ್ಮಾಪಕಿ ಶ್ರುತಿ ನಾಯ್ಡು ನೋಡಿ ತಮ್ಮ ಸೀರಿಯಲ್ ನಲ್ಲಿ ನಟಿಸುವಂತೆ ಆಫರ್ ಕೊಟ್ಟರಂತೆ.

  ಆಕ್ಟಿಂಗ್ ಬರ್ತಿಲ್ಲಿಲ್ಲ.!

  ಆಕ್ಟಿಂಗ್ ಬರ್ತಿಲ್ಲಿಲ್ಲ.!

  ಜೀ ಕನ್ನಡ ವಾಹಿನಿಯ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಗೆ ಆಯ್ಕೆ ಆದಾಗ, ನಟನೆ ಬಗ್ಗೆ ಶ್ವೇತಾ ರಿಗೆ ಏನೂ ಗೊತ್ತಿರಲಿಲ್ಲ. ಬಳಿಕ ನಿರ್ದೇಶಕ ರಮೇಶ್ ಇಂದಿರಾ ರಿಂದ ಅಭಿನಯವನ್ನ ಶ್ವೇತಾ ಕಲಿತರು.

  ಕಲರ್ಸ್ ವಾಹಿನಿಯಿಂದ ಬುಲಾವ್

  ಕಲರ್ಸ್ ವಾಹಿನಿಯಿಂದ ಬುಲಾವ್

  'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಹಿಟ್ ಆಗುತ್ತಿದ್ದ ಹಾಗೆ, ಶ್ವೇತಾರಿಗೆ ಕಲರ್ಸ್ ಕನ್ನಡ ವಾಹಿನಿ ಕಡೆಯಿಂದ ಬುಲಾವ್ ಬಂತು. 'ರಾಧಾ ರಮಣ' ಧಾರಾವಾಹಿಯಲ್ಲಿ ಶ್ವೇತಾ ಬಿಜಿಯಾದರು.

  ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಶ್ವೇತಾ.ಆರ್.ಪ್ರಸಾದ್

  ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಶ್ವೇತಾ.ಆರ್.ಪ್ರಸಾದ್

  ಕಿರುತೆರೆಯಲ್ಲಿ ಖ್ಯಾತಿ ಪಡೆದಿರುವ ಶ್ವೇತಾ.ಆರ್.ಪ್ರಸಾದ್ 'ಕಳ್ಬೆಟ್ಟದ ದರೋಡೆಕೋರರು' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟರು.

  ಆರ್.ಜೆ ಪ್ರದೀಪ ಪತ್ನಿ ಶ್ವೇತಾ

  ಆರ್.ಜೆ ಪ್ರದೀಪ ಪತ್ನಿ ಶ್ವೇತಾ

  'ಎಫ್.ಎಂ'ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಆರ್.ಜೆ ಪ್ರದೀಪ ರವರ ಪ್ರಿಯ ಮಡದಿ ಈ ಶ್ವೇತಾ.ಆರ್.ಪ್ರಸಾದ್.

  English summary
  Have a look at stylish photos of Shwetha R Prasad of Radha Ramana fame.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X