»   » ಎಚ್.ಡಿ.ದೇವೇಗೌಡ ಉಗ್ರಾವತಾರ ತಾಳಿದ ಅನೇಕರಿಗೆ ತಿಳಿಯದ ರೋಚಕ ಘಟನೆಯಿದು.!

ಎಚ್.ಡಿ.ದೇವೇಗೌಡ ಉಗ್ರಾವತಾರ ತಾಳಿದ ಅನೇಕರಿಗೆ ತಿಳಿಯದ ರೋಚಕ ಘಟನೆಯಿದು.!

Posted By:
Subscribe to Filmibeat Kannada

ಭಾರತದ ದೇಶದ ಮಾಜಿ ಪ್ರಧಾನ ಮಂತ್ರಿಗಳ ಪೈಕಿ ಸದ್ಯ ಸಕ್ರಿಯರಾಗಿರುವವರು ಕನ್ನಡಿಗ, ಮಣ್ಣಿನ ಮಗ ಎಚ್.ಡಿ.ದೇವೇಗೌಡ ಮಾತ್ರ. ಅಷ್ಟರಮಟ್ಟಿಗೆ ಇಳಿವಯಸ್ಸಿನಲ್ಲಿಯೂ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಎಚ್.ಡಿ.ದೇವೇಗೌಡ, ಹದಿಹರೆಯದ ವಯಸ್ಸಿನಲ್ಲಿ ಇದ್ದಾಗ ಬಹಳ ಕೋಪಿಷ್ಟರಾಗಿದ್ದರಂತೆ. ಅವರ ಕೋಪಕ್ಕೆ ಹಾಕಿ ಸ್ಟಿಕ್ ಎರಡು ತುಂಡಾಗಿತ್ತಂತೆ.!

ಕಾಲೇಜು ದಿನಗಳಲ್ಲಿಯೇ 'ಚಾಲೆಂಜ್' ಮಾಡಿ 'ಅಸೋಸಿಯೇಷನ್ ಪ್ರೆಸಿಡೆಂಟ್' ಆಗಿದ್ದವರು ಎಚ್.ಡಿ.ದೇವೇಗೌಡ.!

ಎಚ್.ಡಿ.ದೇವೇಗೌಡ ಉಗ್ರಾವತಾರ ತಾಳಿದ.. ಅನೇಕರಿಗೆ ತಿಳಿಯದ ರೋಚಕ ಘಟನೆಯಿಂದರ ಕುರಿತು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಹಿರಂಗ ಆಯ್ತು. ಅದನ್ನೆಲ್ಲ ಎಚ್.ಡಿ.ಡಿ ರವರ ಮಾತುಗಳಲ್ಲಿಯೇ ಓದಿರಿ....

ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇದ್ದಾಗ...

''1948-49 ರಲ್ಲಿ ಪಾಲಿಟೆಕ್ನಿಕ್ ಕಾಲೇಜ್ ಶುರು ಆಯ್ತು. ನಮಗೆ ಹಾಕಿ ಆಟ ಆಡಿ ಅಭ್ಯಾಸ. ಅವತ್ತಿನ ಕಾಲದಲ್ಲಿ ಸುಬ್ಬರಾಮಯ್ಯ ಅಂತ್ಹೇಳಿ ಡಿಸ್ಟ್ರಿಕ್ಟ್ ಮೆಡಿಕಲ್ ಆಫೀಸರ್ (ಡಿ.ಎಂ.ಓ) ಇದ್ದರು. ಅವರ ಮಗ ನೀಲಕಂಠ ರಾವ್, ಮೆಕ್ಯಾನಿಕಲ್ ವಿಭಾಗದಲ್ಲಿ ಓದುತ್ತಿದ್ದರು'' - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ.

ಇದಕ್ಕೆ ನೋಡಿ ಎಚ್.ಡಿ.ದೇವೇಗೌಡ ಅಂದ್ರೆ ವೀಕ್ಷಕರಿಗೆ ಗೌರವ, ಪ್ರೀತಿ, ಹೆಮ್ಮೆ.!

ಅಸೋಸಿಯೇಷನ್ ಪ್ರೆಸಿಡೆಂಟ್ ಆಗಿದ್ದ ನೀಲಕಂಠ ರಾವ್

''ಮೊದಲೆರಡು ವರ್ಷ ಅವರೇ ಅಸೋಸಿಯೇಷನ್ ಪ್ರೆಸಿಡೆಂಟ್ ಆಗಿದ್ದರು. ಅವರದ್ದೊಂದು ಗುಂಪು. ನಾವು ನಮ್ಮ ಪಾಡಿಗೆ ಹಾಕಿ ಆಡುತ್ತಿದ್ವಿ'' - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ.

ಎಚ್.ಡಿ.ದೇವೇಗೌಡ ರವರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಅಂತ ಗೊತ್ತಾದ್ರೆ, ನೀವೇ ಕಣ್ಣರಳಿಸುತ್ತೀರಾ.!

ಎಲೆಕ್ಷನ್ ಬಗ್ಗೆ ಮಾತು...

''ಒಂದಿನ ನಾವು ಹಾಕಿ ಆಡುವಾಗ, ಅವರು ಬಂದ್ರು. ಸುಮ್ಮನೆ ನಿಂತುಕೊಂಡ್ವಿ. ಅವರ ಸ್ನೇಹಿತ ಒಬ್ಬ ಕೇಳಿದ, ಈ ವರ್ಷ ಯಾರು ಎಲೆಕ್ಷನ್ ಗೆ ನಿಲ್ಲೋರು ಅಧ್ಯಕ್ಷ ಆಗೋಕೆ ಅಂತ'' - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ.

ಜೀವನದಲ್ಲಿ ಎಚ್.ಡಿ.ದೇವೇಗೌಡ ಮಾಡಿರುವ ಮಹಾನ್ ಶಪಥ ಏನ್ಗೊತ್ತಾ.?

ಹಾಕಿ ಬ್ಯಾಟ್ ಎರಡು ತುಂಡಾಗಿತ್ತು

''ಆ ಮನುಷ್ಯ (ನೀಲಕಂಠ ರಾವ್) 'ಅಂತಹ ಮಗ ಇಲ್ಲಿ ಯಾರಿದ್ದಾರೆ?' ಅಂತ ಹೇಳಿದ. ನನಗೆ ಬಹಳ ಕೋಪ. ನನ್ನ ಕೈಯಲ್ಲಿ ಹಾಕಿ ಬ್ಯಾಟ್ ಇತ್ತು. ಅವನ ತೊಡೆಗೆ ಹೊಡೆದೆ. ಬ್ಯಾಟ್ ಎರಡು ತುಂಡಾಯಿತು. ನರಸಿಂಹನ್ ಅಂತ ಸೂಪರ್ ಇಂಟೆಂಡೆಂಟ್, ನನ್ನನ್ನ ಕರೆದು ವಾರ್ನ್ ಮಾಡಿದ್ದರು. ಮಿಸ್ ಕಾಂಡಕ್ಟ್ ಎಂದು ಹೊರಹಾಕುತ್ತೇನೆ ಅಂತ. ಆಗ ನಾನು ತಲೆ ತಗ್ಗಿಸಿಕೊಂಡು ಹೊರಬಂದೆ. ಎಲೆಕ್ಷನ್ ನಲ್ಲಿ ನಿಂತೆ. ಚುನಾವಣೆಯಲ್ಲಿ ಗೆದ್ದೆ'' - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ.

ಪತ್ನಿ-ಸೊಸೆ ಮೇಲೆ ಆಸಿಡ್ ದಾಳಿ: ದೇಶದ ಜನತೆಗೆ ಗೊತ್ತಿಲ್ಲದ ಸತ್ಯ ಹೇಳಿದ ದೇವೇಗೌಡ.!

ಪ್ರಭಾವಿ ರಾಜಕಾರಣಿ

ಕಾಲೇಜು ದಿನಗಳಲ್ಲಿ ಚಾಲೆಂಜ್ ಮಾಡಿ, ಎಲೆಕ್ಷನ್ ನಲ್ಲಿ ನಿಂತು, ಗೆದ್ದ ಎಚ್.ಡಿ.ಡಿ ಅಸೋಸಿಯೇಷನ್ ಪ್ರೆಸಿಡೆಂಟ್ ಆದರು. ನಂತರ ರಾಜಕೀಯಕ್ಕೆ ಧುಮುಕಿದ ಎಚ್.ಡಿ.ದೇವೇಗೌಡ ಈಗಲೂ ಪ್ರಭಾವಿ ರಾಜಕಾರಣಿ

English summary
EX Prime Minister, Politician, JDS Leader, HD Devegowda spoke about his college life in Zee Kannada Channel's popular show 'Weekend With Ramesh 3'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada