For Quick Alerts
ALLOW NOTIFICATIONS  
For Daily Alerts

  ಬಿಗ್‍ಬಾಸ್ ಕನ್ನಡ 6 ಜೊತೆ ಹೆಲೊ ಆಪ್ ಬಳಸಿ, ಶೂಟಿಂಗ್ ನೋಡಿ

  |

  ಪ್ರಮುಖ ಪ್ರಾದೇಶಿಕ ಸಾಮಾಜಿಕ ಮಾಧ್ಯಮ ತಾಣವು ಈಗ ಬಿಗ್‍ಬಾಸ್ ಕನ್ನಡ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಬಳಕೆದಾರರಿಗೆ ತಮ್ಮ ಮೆಚ್ಚಿನ ಬಿಗ್‍ಬಾಸ್ ಸ್ಪರ್ಧಿ ಜೊತೆಗೆ ವಿಶೇಷ ಟಾಸ್ಕ್ ಜೊತೆಗೆ ಸಹಯೋಗ ಹೊಂದಲು ನೆರವಾಗಲಿದೆ. ಹೆಲೊ ಜೊತೆಗಿನ ಪಾಲುದಾರಿಕೆ ಜೊತೆಗೆ ಇದೇ ಮೊದಲಬಾರಿಗೆ ಬಿಗ್ ಬಾಸ್ ಕನ್ನಡವು ಸಾಮಾಜಿಕ ಮಾಧ್ಯಮದ ಜೊತೆಗೆ ಕೈಜೋಡಿಸಿದಂತಾಗಿದೆ

  ತಮಿಳುನಾಡಿನಲ್ಲಿ ಸೂಪರ್ ಸಿಂಗರ್ ಜೂನಿಯರ್ ಜೊತೆಗೆ ಯಶಸ್ವಿ ಪಾಲುದಾರಿಕೆಯ ಬಳಿಕ ಈಗ, ಹೆಸರಾಂತ ಪ್ರಮುಖ ಪ್ರಾದೇಶಿಕ ಭಾಷೆಯ ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ ಹೆಲೊ ಇಂದು ಕರ್ನಾಟಕದ ಮಾರುಕಟ್ಟೆಯಲ್ಲಿ ಬಿಗ್‍ಬಾಸ್ ಕನ್ನಡ (ಬಿಬಿಕೆ) 6ನೇ ಆವೃತ್ತಿಯ ಜೊತೆಗೆ ಪಾಲುದಾರಿಕೆ ಹೊಂದಿರುವುದನ್ನು ಪ್ರಕಟಿಸಿದೆ.

  'ಬಿಗ್ ಬಾಸ್': ಫಿನಾಲೆ ವಾರಕ್ಕೆ ಹೋಗುವ ಅರ್ಹತೆ ಇವರಲ್ಲಿ ಯಾರಿಗಿದೆ.?

  ಇದರೊಂದಿಗೆ ಬಿಬಿಕೆ ಇದೆ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮ ವೇದಿಕೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಂತೆ ಆಗಿದ್ದು, ಇದು ಪ್ರಾದೇಶಿಕ ವೀಕ್ಷಕರನ್ನು ತಮ್ಮ ಮೆಚ್ಚಿನ ರಿಯಾಲಿಟಿ ಟಿ.ವಿ. ಶೋಗಳಿಗೆ ಇನ್ನಷ್ಟು ಹತ್ತಿರವಾಗಿಸುವ ಹೆಲೊ ಕಾರ್ಯಕ್ಕೆ ಒತ್ತಾಸೆಯಾಗಿದೆ.

  ಭಾರತದ ಹೆಸರಾಂತ, ಜನಪ್ರಿಯ ರಿಯಾಲಿಟಿ ಶೋ ಎಂದೇ ಹೆಸರಾಗಿರುವ ಬಿಗ್ ಬಾಸ್ ಒಟ್ಟು ನೂರು ದಿನ ನಡೆಯಲಿದೆ ಒಟ್ಟು 20 ಮಂದಿ ಸಾಮಾನ್ಯ ಜನರುಇದ್ದು, ಇವರು 15 ಸುತ್ತಿನ ಟಾಸ್ಕ್‍ಗಳಲ್ಲಿ ಪಾಲ್ಗೊಳ್ಳಬೇಕಾಗಿದೆ. ಅಂತಿಮವಾಗಿ ಒಬ್ಬರು ಉಳಿಯಲಿದ್ದು, ವಿಜೇತರಾಗಲಿದ್ದಾರೆ.

  ಬಿಗ್ ಬಾಸ್ ಸೀಸನ್ 6 ರೀವೈಂಡ್

  ಕಳೆದ ಕೆಲವು ವರ್ಷಗಳಲ್ಲಿ ಷೋ ಏಳು ವಿವಿಧ ಭಾಷೆಗಳಲ್ಲಿ ನಡೆದಿದೆ. ಇವುಗಳಲ್ಲಿ ಹಿಂದಿ, ಮರಾಠಿ, ಬಂಗಾಳಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿದೆ. ಕನ್ನಡ ಆವೃತ್ತಿಯನ್ನು ಅಕ್ಟೋಬರ್ 21, 2018ರಂದು ಶುರು ಮಾಡಿದ್ದು, ಜನವರಿ 8ರಂದಲ್ಲಿ ಇದ್ದಂತೆ ಬಿಬಿಕೆ ಷೋನಲ್ಲಿ ಅಕ್ಷತಾ ಪಾಂಡವಪುರ, ಆಂಡ್ರ್ಯೂ ಜಯಪಾಲ್, ಧನರಾಜ್ ಸಿ.ಎಂ., ಕವಿತಾ ಗೌಡ, ಎಂ.ಜೆ. ರಾಕೇಶ್, ನವೀನ್ ಸಜ್ಜು, ಆರ್.ಜೆ. ರ್ಯಾಪಿಡ್ ರಶ್ಮಿ ಮತ್ತು ಶಶಿಕುಮಾರ್ ಇದ್ದಾರೆ. ಈ ಷೋ ಅನ್ನು ಸುದೀಪ್ ಸಂಜೀವ್ ನಡೆಸಿಕೊಡುತ್ತಿದ್ದಾರೆ.


  ಹೆಲೊ ಬಳಕೆದಾರು ಈಗ ತಮ್ಮ ಮೆಚ್ಚಿನ ಬಿಬಿಕೆ ಸ್ಪರ್ಧಿಯನ್ನು ಹೆಲೊದಲ್ಲಿ #ಬಿಗ್‍ಬಾಸ್ ಚಾಲೆಂಜ್ ಹ್ಯಾಶ್‍ಟ್ಯಾಗ್ ಹಾಗೂ ವೈಯಕ್ತಿಕ ಖಾತೆಗಳನ್ನು ಬಳಸಿ ಹ್ಯಾಶ್‍ಟ್ಯಾಗ್ #ಬಿಗ್ ಬಾಸ್ ಚಾಲೆಂಜ್ ಮೂಲಕವು ಹಿಂಬಾಲಿಸಬಹುದು. ಹೆಲೊ ಬಳಕೆದಾರರು ಈಗ ತಮ್ಮ ಆಯ್ಕೆಯ ಸ್ಪರ್ಧಿಗೆ ಟಾಸ್ಕ್ ಆಯ್ಕೆ ಮಾಡಬಹುದಿದ್ದು, ಬಳಕೆದಾರರಿಗೆ ಹಿಂಬಾಲಿಸಲು ಕೋರಬಹುದು.

  ಶೂಟಿಂಗ್ ತಾಣಕ್ಕೆ ಭೇಟಿ ನೀಡಬಹುದು

  ಜನವರಿ 12, 19ರಂದು ನಾಲ್ವರು ಅದೃಷ್ಟಶಾಲಿ ಹೆಲೊ ಬಳಕೆದಾರರಿಗೆ ಶೂಟಿಂಗ್ ತಾಣಕ್ಕೆ ಭೇಟಿ ನೀಡಲು ಹಾಗೂ ನೇರಸಂವಹನ ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ಸಿಗಲಿದೆ. ಈ ನಡುವೆ, ಹೆಲೊ ದೈನಿಕ ಹ್ಯಾಶ್‍ಟ್ಯಾಗ್ ಅನ್ನು ಆರಂಭಿಸಲಿದ್ದು, ಶೋ ಕುರಿತು ಚರ್ಚೆಗೆ ವೇದಿಕೆ ಒದಗಿಸಲಿದೆ. ಎಲ್ಲ ಎಂಟು ಸ್ಪರ್ಧಿಗಳು ತಮ್ಮ ಅಭಿಮಾನಿಗಳು, ಬೆಂಬಲಿಗರ ಜೊತೆಗೆ ವಿಶೇಷವಾಗಿ ಹೆಲೊದಲ್ಲಿ ಬಿಬಿಕೆ ಅವಧಿಯಲ್ಲಿ ಚರ್ಚೆ ನಡೆಸುವರು.

  'ಬಿಗ್ ಬಾಸ್ ಕನ್ನಡ ಜೊತೆಗೆ ಅತ್ಯಂತ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಸಾಮಾಜಿಕ ಮಾಧ್ಯಮ ತಾಣವಾದ ಹೆಲೊ ಸಹಯೋಗ ಹೊಂದುತ್ತಿರುವುದು ನಮಗೆ ಸಂತಸ ಮೂಡಿಸಿದೆ' ಎಂದು ಹೆಲೊದ ಮುಖ್ಯಸ್ಥ (ನಿರ್ವಹಣೆ) ಶ್ಯಾಮಾಂಗ ಬರೂಹಾ ಅವರು ಹೇಳಿದರು.

  ‘ಭಾರತೀಯರು ತಮ್ಮನ್ನು ತಾವು ಉತ್ತಮವಾಗಿ ಬಿಂಬಿಸಿಕೊಳ್ಳಲು ವೇದಿಕೆ ಒದಗಿಸುವ ಬದ್ಧತೆಯೊಂದಿಗೆ ನಾವು ಬಿಬಿಕೆ ಬೆಂಬಲಿಗರಿಗೆ ಒಂದು ಅವಕಾಶವನ್ನು ಕೊಡುತ್ತಿದ್ದೇವೆ. ಇಲ್ಲಿ ಹಿಂಬಾಲಿಸುವುದಷ್ಟೇ ಅಲ್ಲ, ತಮ್ಮದೇ ಭಾಷೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ' ಎಂದು ಹೇಳಿದರು.

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಎರಡನೇ ಫೈನಲಿಸ್ಟ್ ಧನರಾಜ್.!

  ಹೆಲೊ ಪ್ರಸ್ತುತ ಭಾರತೀಯ 14 ಭಾಷೆಗಳಲ್ಲಿ ಲಭ್ಯ

  ಹೆಲೊ ಪ್ರಸ್ತುತ ಭಾರತೀಯ 14 ಭಾಷೆಗಳಲ್ಲಿ ಲಭ್ಯವಿದೆ. ಇದರಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ ಕೂಡಾ ಸೇರಿದೆ.ಕನ್ನಡ ಈ ಆ್ಯಪ್‍ನಲ್ಲಿ ಜನಪ್ರಿಯ ಭಾಷೆಯಾಗಿದ್ದು, ಬಳಕೆದಾರರು ಇಲ್ಲಿ ಹೊಸ ಗೆಳೆಯರನ್ನು ಪಡೆಯಲು, ನಗೆಹನಿ ವಿನಿಮಯ ಮಾಡಿಕೊಳ್ಳಲು, ಟ್ವಿಟ್, ಮೆಮ್ಸ್ ಹಂಚಿಕೆ ಮಾಡಿಕೊಳ್ಳಲು, ವಾಟ್ಸಾಪ್ ಸ್ಟೇಟಸ್, ಶುಭಾಶಯ, ಕೋಟ್‍ಗಳು, ಶಾಯರಿಗಳ ವಿನಿಮಯ ಮಾಡಿಕೊಳ್ಳಲು ಹಾಗೂ ಲೇಟೆಸ್ಟ್ ಸುದ್ದಿಗಳನ್ನು ಹಿಂಬಾಲಿಸಲು, ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು ಸಹಕಾರಿಯಾಗಿದೆ.

  ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬೆಂಬಲಿತ, ಅತ್ಯಧಿಕ ವಿಶ್ಲೇಷಕರಿರುವ ಹೆಲೊ ಸಂಬಂಧಿತ ಅಡಕಗಳನ್ನು ಶಿಫಾರಸು ಮಾಡಲಿದೆ. ಬಳಕೆಗೆ ಸುಲಭವಾಗಿರುವ ಸಂವಹನದ ಮೂಲಕ ‘ಹೆಲೊ' ವೀಕ್ಷಣೆಗೆ ಸಂತಸವಾಗಿರುವ ನಿಟ್ಟಿನಲ್ಲಿ ಅಡಕಗಳನ್ನು ಒದಗಿಸಲಿದೆ. ಈ ಎಲ್ಲ ಅಡಕಗಳು ಹೆಲೊದಲ್ಲಿ ಬಳಕೆದಾರರೇ ರೂಪಿಸಿದ, ಅಪ್ ಲೋಡ್ ಮಾಡಿದ ಅಡಕಗಳಾಗಿವೆ.

  ಹೆಲೋ ಅಪ್ಲಿಕೇಷನ್ ಕುರಿತು

  ಹೆಲೊ ಭಾರತದ ಪ್ರಮುಖ ಪ್ರಾದೇಶಿಕ ಸಾಮಾಜಿಕ ಮಾಧ್ಯಮ ತಾಣವಾಗಿದ್ದು, ನಿಜವಾದ ದೇಸಿ ಮನಸ್ಥಿತಿ ಯವರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ನಮ್ಮ ಗುರಿ ಜೀವನಶೈಲಿಗೆ ಹೊಸ ರಂಗು ತುಂಬುವುದೇ ಆಗಿದೆ. ಬಳಕೆದಾರರಿಗೆ ತಮ್ಮದೇ ಭಾಷೆಯಲ್ಲಿ ಅಡಕಗಳನ್ನು ಸೃಷ್ಟಿಸಲು, ಹಂಚಿಕೆ ಮಾಡಿಕೊಳ್ಳಲು ವೇದಿಕೆ ಒದಗಿಸಲಿದೆ.

  ಒಟ್ಟು 14 ಭಾಷೆಗಳಲ್ಲಿ ಲಭ್ಯವಿದ್ದು, ಇದರಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ಇನ್ನೂ ಅನೇಕ ಭಾಷೆಗಳು ಸೇರಿವೆ. ಹೆಲೊ ವೇದಿಕೆಯು ಹೊಸ ಗೆಳೆಯರನ್ನು ಸಂಪಾದಿಸಲು, ನಗೆಹರಿ, ಮೆಮ್ಸ್, ವಾಟ್ಸಾಪ್ ಸ್ಟೇಟಸ್ ಅಪ್‍ಡೇಟ್ಸ್, ಶುಭಾಶಯ, ಕೋಟ್‍ಗಳು, ಶಾಯರಿ ಹಾಗೂ ಇನ್ನೂ ಅನೇಕ ಸುದ್ದಿ, ಅನಿಸಿಕೆಗಳನ್ನು ಹಂಚಿಕೆ ಮಾಡಿಕೊಳ್ಳಲು ವೇದಿಕೆ ಒದಗಿಸಲಿದೆ.

  ಹೆಲೊ ಮುಖ್ಯ ಕಚೇರಿಯು ನವದೆಹಲಿಯಲ್ಲಿ ಇದ್ದು, 2018ರ ಸಾಲಿನಲ್ಲಿ ಗೂಗಲ್ ಪ್ಲೇಸ್ಟೋರ್ ನ ಉನ್ನತ ಆ್ಯಪ್‍ಗಳ ಪಟ್ಟಿಯಲ್ಲಿ ಸೇರಿದೆ. ಹೆಲೊ ಭಾರತದಲ್ಲಿ ಐಒಎಸ್ ಮತ್ತು ಅಂಡ್ರಾಯಿಡ್ ವೇದಿಕೆಗಳಲ್ಲಿ ಲಭ್ಯವಿದೆ.

  ಪ್ರಥಮ್ ಆಟಕ್ಕೆ ಬಕ್ರಾ ಆದ 'ಮಾರ್ಡನ್ ರೈತ' ಶಶಿ.!

  English summary
  After the grand success of its partnership with Super Singer Junior in Tamil Nadu, Helo, India's leading regional language social media platform, today announced its unique partnership with Bigg Boss Kannada (BBK) Season 6, for the Karnataka market. This partnership marks the first time BBK has partnered with a social media platform to engage their audience and is a testament to Helo’s ongoing commitment to bringing regional audiences closer to their favourite reality television shows.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more