Don't Miss!
- News
Budget 2023: ಇದು "ಕಾರ್ಪೊರೇಟ್ ಪ್ರೇಮಿ" ಬಜೆಟ್ ಎಂದ ಹೆಚ್. ಸಿ. ಮಹದೇವಪ್ಪ
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Automobiles
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
- Technology
ಬಜೆಟ್ ಬೆಲೆಯಲ್ಲಿ ದೂಳೆಬ್ಬಿಸಲು ಮೊಟೊ E13 ತಯಾರಿ! ಲಾಂಚ್ ಯಾವಾಗ!
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Lifestyle
ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ಧರಿಸಿರುವ ಸೀರೆಯ ವಿಶೇಷತೆ ಗೊತ್ತೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಎರಡೂ ಧಾರಾವಾಹಿಯಲ್ಲೂ ಒಂದೇ ಕಥೆ: ಪ್ರೇಕ್ಷಕರಿಗೆ ಭೋರ್ ಹೊಡೆಸುತ್ತಿರುವ ಧಾರಾವಾಹಿಗಳು!
ಧಾರಾವಾಹಿಗಳ ಕಥೆಗಳು ಒಂದಕ್ಕಿಂತಲೂ ಮತ್ತೊಂದು ವಿಭಿನ್ನವಾಗಿರುತ್ತವೆ. ಅದರಲ್ಲಿ ಬರುವ ಪಾತ್ರಗಳಿಂದ ಹಿಡಿದು ಪ್ರತಿಯೊಂದು ಕೂಡ ವಿಭಿನ್ನವಾಗಿರುವಂತೆ ಧಾರಾವಾಹಿ ತಂಡದಲ್ಲಿರುವವರೆಲ್ಲರೂ ಎಚ್ಚರ ವಹಿಸುತ್ತಾರೆ. ಕೆಲವೊಮ್ಮೆ ಪೈಪೋಟಿ ಮೇಲೆ ಕಥೆಯೂ ಸಾಗುತ್ತದೆ.
ಈ ಹಿಂದೆ ನೋಡಿದ ಧಾರಾವಾಹಿಗಳಲ್ಲಿ ಕೆಲವೊಮ್ಮೆ ಒಂದರಲ್ಲಿ ಮದುವೆ ಸೀನ್ ಇದ್ದರೆ, ಮತ್ತೊಂದರಲ್ಲೂ ಮದುವೆ ನಡೆಯುವ ಸಂದರ್ಭವನ್ನು ತರಲಾಗುತ್ತದೆ. ಒಂದರಲ್ಲಿ ಲವ್ ಸ್ಟೋರಿಗೆ ಹೆಚ್ಚು ಒತ್ತು ಕೊಟ್ಟಿದ್ದು, ಅದರ ಟಿಆರ್ ಪಿ ರೇಟಿಂಗ್ ಚೆನ್ನಾಗಿದ್ದರೆ, ಮತ್ತೊಂದು ಧಾರಾವಾಹಿಯೂ ಅದನ್ನು ಫಾಲೋ ಮಾಡುತ್ತದೆ.
ಇದು ಅಗ್ನಿಸಾಕ್ಷಿ ಧಾರಾವಾಹಿ ಮೂಡಿ ಬಂದ ದಿನಗಳಿಂದಲೂ ಸಾಮಾನ್ಯವಾಗಿದೆ. ಆದರೆ ಇದು ಪ್ರೇಕ್ಷಕರಿಗೆ ಬೋರ್ ಹೊಡೆಸುವುದಂತೂ ನಿಜ. ಕೆಲವೊಮ್ಮೆ ಪ್ರೇಕ್ಷಕರು ಧಾರಾವಾಹಿಗಳಿಗೆ 2-3 ದಿನ ಬ್ರೇಕ್ ಕೊಟ್ಟು ನೋಡಲು ಕೂಡ ಶುರು ಮಾಡಿದ್ದಾರೆ.

ಪ್ರೇಕ್ಷಕರಿಗೆ ಬೇರೆ ದಾರಿ ಇಲ್ಲ
ಧಾರಾವಾಹಿಗಳೆಲ್ಲವೂ ಎಳೆದಾಡುತ್ತಿವೆ. ಒಂದು ದಿನದ ಕಥೆಯನ್ನು ವಾರ್ಷಾನುಗಟ್ಟಲೆ ತೋರಿಸುತ್ತಿವೆ. ಪ್ರೇಕ್ಷಕರ ಕುತೂಹಲವನ್ನು ಹಿಡಿದಿಡುವ ಸಲುವಾಗಿ ಧಾರಾವಾಹಿಯ ಕಥೆಯನ್ನು ತೀರಾ ನಿಧಾನವಾಗಿ ತೋರಿಸಲಾಗುತ್ತಿದೆ. ಕೆಲ ಸ್ಟೋರಿಗಳಂತೂ ಸತ್ಯಕ್ಕೆ ಬಹಳ ದೂರವಾಗಿರುವಂತಹ ವಿಷಯಗಳನ್ನೇ ತೋರಿಸಲಾಗುತ್ತಿದೆ. ಇದು ಪ್ರೇಕ್ಷಕರಿಗೆ ಬೇಸರವನ್ನು ತರುತ್ತಿದೆ. ಆದರೆ, ಸಂಜೆ ವೇಳೆಯಲ್ಲಿ ನೋಡಲು ಬೇರೆ ಮನರಂಜನೆ ಇಲ್ಲದ ಕಾರಣ ಎಲ್ಲರೂ, ಧಾರಾವಾಹಿಯನ್ನು ನೋಡುವುದು ಅನಿವಾರ್ಯವಾಗಿದೆ. ಈ ಹಿಂದೆ ಧಾರಾವಾಹಿಗಳಲ್ಲಿ ಬರುತ್ತಿದ್ದ ಕಥೆಯನ್ನು ಪ್ರೇಕ್ಷಕರು ನಿಜವೆಂದು ನಂಬುತ್ತಿದ್ದರು. ಆದರೆ, ಈಗ ಎಲ್ಲವೂ ಸುಳ್ಳು ಎಂದು ಹೇಳುವಂತೆ ಧಾರಾವಾಹಿಗಳು ಸಾಗುತ್ತಿವೆ.

ಧಾರಾವಾಹಿಯಲ್ಲಿ ಪುರುಷರಿಗಿಲ್ಲ ಹೆಚ್ಚು ಮಹತ್ವ
ಎಲ್ಲಾ ಧಾರಾವಾಹಿಗಳಲ್ಲೂ ಹೆಂಗಸರೇ ವಿಲನ್ ಆಗಿದ್ದಾರೆ. ವಿಲನ್ ಗೆ ಸಪೋರ್ಟಿಂಗ್ ಪಾತ್ರವಾಗಿ ಪುರುಷರು ಇರುವುದನ್ನು ನೋಡಬಹುದಾಗಿದೆ. ಅತ್ತೆ, ನಾದಿನಿ, ಸೊಸೆ, ಸ್ನೇಹಿತೆ, ತಾಯಿ ಪಾತ್ರಧಾರಿಗಳೇ ವಿಲನ್ ಗಳಾಗಿದ್ದಾರೆ. ಗಟ್ಟಿಮೇಳ, ಹಿಟ್ಲರ್ ಕಲ್ಯಾಣ, ಶ್ರೀರಸ್ತು ಶುಭಮಸ್ತು, ಪುಟ್ಟಕ್ಕನ ಮಕ್ಕಳು ಸೇರಿದಂತೆ ಬಹುತೇಕ ಧಾರಾವಾಹಿಗಳಲ್ಲಿ ಹೆಂಗಸರೇ ವಿಲನ್. ಆದರೆ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಝೇಂಡೇ ಎಂಬ ಪುರುಷ ಪಾತ್ರಧಾರಿ ವಿಲನ್ ಆಗಿ ಕಾಣಿಸಿಕೊಂಡಿರುವುದು ವಿಶೇಷ. ಇನ್ನು ಎಲ್ಲಾ ಧಾರಾವಾಹಿಗಳಲ್ಲೂ ಕಥೆಯ ಒಂದೇ ಎಳೆಯನ್ನು ವರ್ಷಾನುಗಟ್ಟಲೆ ಎಳೆಯಲಾಗುತ್ತಿದೆ.

ಮಾಡದ ತಪ್ಪಿಗೆ ಶಿಕ್ಷೆ
ಈಗ ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ನನ್ನು ಮಾಳವಿಕಾ ಎಂಬಾಕೆ ಬ್ಲ್ಯಾಕ್ ಮೇಲ್ ಮಾಡಲು ಮುಂದಾಗಿದ್ದಾಳೆ. ಮೀಡಿಯಾ ಎದುರು, ಕಾರ್ತಿಕ್ ತನ್ನ ಬಳಿ ಮಿಸ್ ಬಿಹೇವ್ ಮಾಡಿದ ಎಂದು ಹೇಳಿದ್ದಾಳೆ. ಇದರ ಪರಿಣಾಮವಾಗಿ ಕಾರ್ತಿಕ್ ಕಂಪನಿಗೆ ದೊಡ್ಡ ಹೊಡೆತ ಬಿದ್ದಿದೆ. ಶೇರ್ ಮಾರ್ಕೆಟ್ ಕುಸಿಯುತ್ತಿದೆ. ಮನೆಯಲ್ಲಿ ಎಲ್ಲರೂ ಕಾರ್ತಿಕ್ ನನ್ನೇ ಬ್ಲೇಮ್ ಮಾಡುತ್ತಿದ್ದಾರೆ. ಕಾರ್ತಿಕ್ ಬಗ್ಗೆ ತಿಳಿದ ಉದ್ಯಮಿಗಳೆಲ್ಲರೂ, ಅವರ ಕಂಪನಿ ಜೊತೆಗಿನ ಒಪ್ಪಂದಗಳಿಂದ ಹಿಂದೆ ಸರಿಯುತ್ತಿದ್ದಾರೆ. ಇದೇ ರೀತಿ ಈಗ ಹಿಟ್ಲರ್ ಕಲ್ಯಾಣ ಕತೆಯೂ ಸಾಗುತ್ತಿದೆ.

ಎಜೆ ಈಗ ಆರೋಪಿ ಸ್ಥಾನದಲ್ಲಿ
ಇತ್ತ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲೂ ಇದೇ ಆಗಿದೆ. ಅಂತರಾ ಸಾವಿನ ಪ್ರಕರಣ ಸಂಬಂಧ ಎಜೆಯನ್ನು ಪೊಲೀಸರು ಅರೆಸ್ಟ್ ಮಾಡುತ್ತಾರೆ. ಇದು ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಗುತ್ತದೆ. ಎಜೆ ಕೋರ್ಟ್ ನಲ್ಲಿ ವಾದ ಮಾಡಿ, ಬೇಲ್ ಮೇಲೆ ಹೊರ ಬಂದಿದ್ದಾನೆ. ಆದರೆ, ಎಜೆ ಒಡೆತನದ ಕಂಪನಿ ಕೂಡ ಕುಸಿಯಲು ಪ್ರಾರಂಬಿಸಿದೆ. ಇನ್ನು ಎಜೆ ಭೇಟಿಗಾಗಿ ತಿಂಗಳು ಗಟ್ಟಲೆ ಕಾಯುತ್ತಿದ್ದವರೆಲ್ಲಾ, ಹಿಂದೆ ಸರಿಯುತ್ತಿದ್ದಾರೆ. ಇದರಿಂದ ದುರ್ಗಾ ಕೋಪ ಮಾಡಿಕೊಂಡಿದ್ದಾಳೆ. ಹಿಟ್ಲರ್ ಕಲ್ಯಾಣ ಹಾಗೂ ಸತ್ಯ ಎರಡೂ ಧಾರಾವಾಹಿಯಲ್ಲೂ ಒಂದೇ ತೆರನಾದ ಕಥೆಯನ್ನು ಹೆಣೆಯಲಾಗಿದ್ದು, ಪ್ರೇಕ್ಷಕರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಎರಡೂ ಧಾರಾವಾಹಿಗಳ ಕಥೆಗಾರರು ಸ್ವಲ್ಪ ಎಚ್ಚರ ವಹಿಸಬೇಕಿದೆ.