For Quick Alerts
  ALLOW NOTIFICATIONS  
  For Daily Alerts

  ರಘು-ಅನು ಮದುವೆ ಆಗಿ ಒಂದು ವರ್ಷ ಆಯ್ತು.! ಆನಿವರ್ಸರಿ ಸೆಲೆಬ್ರೇಷನ್ ಹೇಗಿತ್ತು.?

  By Harshitha
  |

  ನಿಮ್ಮ ಮದುವೆ ವಾರ್ಷಿಕೋತ್ಸವವನ್ನ ನೀವು ಹೇಗೆ ಆಚರಿಸಿಕೊಳ್ಳುತ್ತೀರಾ.? ಜೇಬು ಗಟ್ಟಿಯಾಗಿ ಇರುವವರು ತಮ್ಮ ಲೈಫ್ ಪಾರ್ಟ್ನರ್ ಜೊತೆ ಫಾರಿನ್ ಟ್ರಿಪ್ ಗೆ ಹೋಗ್ಬಬಹುದು... ಬಜೆಟ್ ಸ್ವಲ್ಪ ಕಮ್ಮಿ ಇದ್ರೆ ಇಲ್ಲೇ ಅಕ್ಕ-ಪಕ್ಕ ಕಣ್ಣು ಕೋರೈಸುವ ತಾಣಗಳಿಗೆ ಭೇಟಿ ನೀಡಿ ಖುಷಿ ಪಡಬಹುದು...

  ದೇವರ ಆಶೀರ್ವಾದ ಬಯಸುವವರು ತಮ್ಮ ಇಷ್ಟದ ದೇವಾಲಯಕ್ಕೆ ಭೇಟಿ ನೀಡಬಹುದು. ಅಥವಾ ಒಂದು ಡಿನ್ನರ್ ಪಾರ್ಟಿ ಅರೇಂಜ್ ಮಾಡಬಹುದು.

  ಮದುವೆ ವಾರ್ಷಿಕೋತ್ಸವವನ್ನ ಹೀಗೆ ಹಲವರು ತಮ್ಮ ಅಗತ್ಯ-ಇಷ್ಟಗಳಿಗೆ ತಕ್ಕಂತೆ ಆಚರಿಸಿಕೊಳ್ಳುತ್ತಾರೆ. ಇದ್ಯಾವುದು ಇಷ್ಟವಿಲ್ಲದವರು ಕೆಲಸಕ್ಕೆ ಹಾಜರ್ ಆಗುತ್ತಾರೆ.

  ಮ್ಯಾರೇಜ್ ಆನಿವರ್ಸರಿ ಬಗ್ಗೆ ನಾವು ಇಷ್ಟೆಲ್ಲ ಹೇಳಲು ಕಾರಣ ನಟಿ ಅನು ಪ್ರಭಾಕರ್ ಮುಖರ್ಜಿ ಮತ್ತು ನಟ ರಘು ಮುಖರ್ಜಿ. ಮುಂದೆ ಓದಿರಿ....

  ಒಂದು ವರ್ಷ ಕಳೆದಿದೆ

  ಒಂದು ವರ್ಷ ಕಳೆದಿದೆ

  ನಟಿ ಅನು ಪ್ರಭಾಕರ್ ಹಾಗೂ ನಟ ರಘು ಮುಖರ್ಜಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ವರ್ಷದ ಮೇಲಾಗಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಅನು ಪ್ರಭಾಕರ್ ಮುಖರ್ಜಿ-ರಘು ಮುಖರ್ಜಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು.

  ಸಂದರ್ಶನ: ನಟ ರಘು ಮುಖರ್ಜಿ ಜೊತೆ 'ಅನು'ರಾಗ ಅರಳಿದ್ದು ಹೇಗೆ.?

  ಮ್ಯಾರೇಜ್ ಆನಿವರ್ಸರಿ ಸೆಲೆಬ್ರೇಷನ್ ಹೇಗಿತ್ತು.?

  ಮ್ಯಾರೇಜ್ ಆನಿವರ್ಸರಿ ಸೆಲೆಬ್ರೇಷನ್ ಹೇಗಿತ್ತು.?

  ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡುವ ಮೂಲಕ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನ ಅನು ಪ್ರಭಾಕರ್ ಮುಖರ್ಜಿ ಹಾಗೂ ರಘು ಮುಖರ್ಜಿ ಆಚರಿಸಿಕೊಂಡರಂತೆ.

  ಮುಂದಿನ ವಾರ ನಿಮ್ಮನೆಗೆ ಬರ್ತಿದ್ದಾರೆ ಅನು ಪ್ರಭಾಕರ್ - ರಘು ಮುಖರ್ಜಿ ದಂಪತಿ

  ಸೂಪರ್ ಟಾಕ್ ಟೈಮ್ ನಲ್ಲಿ ರಘು-ಅನು

  ಸೂಪರ್ ಟಾಕ್ ಟೈಮ್ ನಲ್ಲಿ ರಘು-ಅನು

  ಕಲರ್ಸ್ ಸೂಪರ್ ವಾಹಿನಿಯಲ್ಲಿ ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಅನು ಪ್ರಭಾಕರ್ ಮುಖರ್ಜಿ ಹಾಗೂ ರಘು ಮುಖರ್ಜಿ ಭಾಗವಹಿಸಿದರು.

  ಅಕುಲ್ ಮೊದಲ ಪ್ರಶ್ನೆಯೇ 'ಆನಿವರ್ಸರಿ' ಬಗ್ಗೆ...

  ಅಕುಲ್ ಮೊದಲ ಪ್ರಶ್ನೆಯೇ 'ಆನಿವರ್ಸರಿ' ಬಗ್ಗೆ...

  ಕಾರ್ಯಕ್ರಮಕ್ಕೆ ಅನು ಪ್ರಭಾಕರ್ ಮುಖರ್ಜಿ ಹಾಗೂ ರಘು ಮುಖರ್ಜಿ ಆಗಮಿಸುತ್ತಿದ್ದಂತೆಯೇ, 'ವಿವಾಹ ವಾರ್ಷಿಕೋತ್ಸವ'ದ ಸ್ಪೆಷಾಲಿಟಿ ಬಗ್ಗೆ ಅಕುಲ್ ಬಾಲಾಜಿ ಪ್ರಶ್ನೆ ಕೇಳಿದರು. ಅದಕ್ಕೆ 'ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಿದ್ವಿ' ಎಂದು ದಂಪತಿ ಉತ್ತರ ನೀಡಿದರು. ದಂಪತಿಗೆ ದೇವರ ಮೇಲೆ ಭಕ್ತಿ ಹಾಗೂ ನಂಬಿಕೆ ಇದೆ ಎಂದು ಇದರಲ್ಲಿಯೇ ಗೊತ್ತಾಗುತ್ತದೆ.

  English summary
  How did Anu Prabhakar Mukherjee and Raghu Mukherjee celebrated their 1st Wedding Anniversary.? Read the article to know

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X