»   » ಎರಡು ಜಡೆ ಸೇರಿದರೆ ಜಗಳ, ಅಂಥದ್ರಲ್ಲಿ ರಾಗಿಣಿ-ರಕ್ಷಿತಾ ಫ್ರೆಂಡ್ಸ್ ಆಗಿದ್ದು ಹೇಗೆ.?

ಎರಡು ಜಡೆ ಸೇರಿದರೆ ಜಗಳ, ಅಂಥದ್ರಲ್ಲಿ ರಾಗಿಣಿ-ರಕ್ಷಿತಾ ಫ್ರೆಂಡ್ಸ್ ಆಗಿದ್ದು ಹೇಗೆ.?

Posted By:
Subscribe to Filmibeat Kannada
ರಕ್ಷಿತಾ ರಾಗಿಣಿ ಸ್ನೇಹದ ಗುಟ್ಟು ಏನು ಗೊತ್ತಾ ?| Filmibeat Kannada

'ಹೆಣ್ಣಿಗೆ ಹೆಣ್ಣೇ ಶತ್ರು'... 'ಎರಡು ಜಡೆ ಸೇರಿದರೆ ಜಗಳ' ಎಂಬ ಮಾತುಗಳಿವೆ... ವಟ ವಟ ಅಂತ ಮಾತನಾಡುವ ಮಾತುಗಳಿಂದಲೇ ಕೋಳಿ ಜಗಳ ಶುರು ಆಗುತ್ತೆ. ಸ್ಯಾಂಡಲ್ ವುಡ್ ಕೂಡ ಇಂತಹ ಕೋಳಿ ಜಗಳಕ್ಕೆ ಅನೇಕ ಬಾರಿ ಸಾಕ್ಷಿ ಆಗಿದೆ.

ಒಬ್ಬರು ಹೀರೋಯಿನ್ ಗೆ ಇನ್ನೊಬ್ಬರು ಹೀರೋಯಿನ್ ಕಂಡ್ರೆ ಆಗಲ್ಲ.. ಅವರಿಗೆ ಇವರು ಆಗಲ್ವಂತೆ, ಇವರಿಗೆ ಅವರು ಆಗಲ್ವಂತೆ ಎಂಬ ಅಂತೆ-ಕಂತೆ ಆಗಾಗ ಕಿವಿಗೆ ಬೀಳುತ್ತಲೇ ಇರುತ್ತದೆ. ಅಂಥದ್ರಲ್ಲಿ ಕಳೆದ ಐದಾರು ವರ್ಷಗಳಿಂದ 'ಕ್ರೇಜಿ ಕ್ವೀನ್' ರಕ್ಷಿತಾ ಹಾಗೂ ರಾಗಿಣಿ ದ್ವಿವೇದಿ ಕ್ಲೋಸ್ ಫ್ರೆಂಡ್ಸ್.!

ಅರಳು ಹುರಿದ ಹಾಗೆ ಮಾತನಾಡುವ ರಕ್ಷಿತಾಗೂ, ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡುವ ರಾಗಿಣಿಗೂ ಎಲ್ಲಿಂದೆಲ್ಲಿಯ ಸಂಬಂಧ.? ಇಬ್ಬರೂ 'ಕುಚ್ಚಿಕ್ಕು' ಗೆಳತಿಯರು ಆಗಿದ್ದು ಹೇಗೆ.? ಸಂಪೂರ್ಣ ವಿವರ ಇಲ್ಲಿದೆ ಓದಿರಿ...

ನಂ.1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದಲ್ಲಿ ರಾಗಿಣಿ-ರಕ್ಷಿತಾ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ರಕ್ಷಿತಾ ಹಾಗೂ ರಾಗಿಣಿ ದ್ವಿವೇದಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಇಲ್ಲೇ ತಮ್ಮ ಸ್ನೇಹದ ಬಗ್ಗೆ ರಾಗಿಣಿ ಹಾಗೂ ರಕ್ಷಿತಾ ಮನಬಿಚ್ಚಿ ಮಾತನಾಡಿದರು.

ಅದೇ ಪ್ರಶ್ನೆ, ಅದೇ ಉತ್ತರ, ಮತ್ತೆ ಸುದೀಪ್ ಹೆಸರು ತೆಗೆದ ರಾಗಿಣಿ

ರಕ್ಷಿತಾಗೆ ರಾಗಿಣಿ ಫ್ಯಾನ್.!

ನೀವು ನಂಬ್ತೀರೋ, ಬಿಡ್ತಿರೋ... ರಕ್ಷಿತಾಗೆ ರಾಗಿಣಿ ದೊಡ್ಡ ಅಭಿಮಾನಿ. ರಕ್ಷಿತಾ ಅವರ 'ಸುಂಟರಗಾಳಿ' ಹಾಡು ನೋಡಿ, ಅವರಿಗೆ ಫ್ಯಾನ್ ಆಗಿದ್ರಂತೆ ರಾಗಿಣಿ. ಆ ಇಂಟ್ರೆಸ್ಟಿಂಗ್ ಕಥೆ ಇಲ್ಲಿದೆ, ಓದಿರಿ...

ಶಿವಣ್ಣನ ಶೋ ಗೆ ಬಂದ್ರು 'ರಾ' ಸ್ಟಾರ್ಸ್

ಪಾರ್ಟಿಯಲ್ಲಿ ಇಬ್ಬರ ಮೊದಲ ಭೇಟಿ

''ನಾವಿಬ್ಬರು ಭೇಟಿ ಆಗಿದ್ದು ಒಂದು ಪಾರ್ಟಿಯಲ್ಲಿ. ನಾನು ಪಾರ್ಟಿ ನಡೆಯುತ್ತಿದ್ದ ಜಾಗದ ಒಳಗೆ ಹೋದಾಗ, ಕಾರ್ನರ್ ಟೇಬಲ್ ನಲ್ಲಿ ರಕ್ಷಿತಾ ಕುಳಿತಿದ್ದರು. ಆಗ ನನಗೆ ಯಾರೋ ಬಂದು ರಕ್ಷಿತಾ ಇಲ್ಲಿದ್ದಾರೆ ಅಂತ ಹೇಳಿದರು. ನಾನು ರಕ್ಷಿತಾ ಅವರ ದೊಡ್ಡ ಅಭಿಮಾನಿ. ಅವರ 'ಸುಂಟರಗಾಳಿ' ಹಾಡನ್ನ 15 ಬಾರಿ ನಾನು ನೋಡಿರಬಹುದು. ಆ ಹಾಡಲ್ಲಿ ಅವರ ಡ್ಯಾನ್ಸ್ ನನಗೆ ತುಂಬಾ ಇಷ್ಟ ಆಗಿತ್ತು. ಅವರನ್ನ ಮೀಟ್ ಮಾಡಲೇಬೇಕು ಅಂತ ಅಂದುಕೊಂಡಿದ್ದೆ. ಪಾರ್ಟಿಯಲ್ಲಿ ಅವರನ್ನ ನೋಡಿದಾಗ ಅಕ್ಷರಶಃ ಓಡಿ ಹೋಗಿ ತಬ್ಬಿಕೊಂಡಿದ್ದೇನೆ. ಅಲ್ಲಿಂದ ನಮ್ಮ ಸ್ನೇಹ ಶುರು ಆಯ್ತು. ರಕ್ಷಿತಾಗೆ ಅಭಿಮಾನಿ ಆಗಿದ್ದವಳು ಇಂದು ಸ್ನೇಹಿತೆ ಆಗಿದ್ದೇನೆ'' - ರಾಗಿಣಿ ದ್ವಿವೇದಿ, ನಟಿ

ಒಂದು ದಿನವೂ ಜಗಳ ಆಡಿಲ್ಲ!

''ನಾವಿಬ್ಬರು ಎಲ್ಲೇ ಹೋದರೂ ಜೋರಾಗಿ ಮಾತನಾಡುತ್ತೇವೆ. ಎಲ್ಲರೂ ನಮ್ಮನ್ನೇ ನೋಡುತ್ತಲಿರುತ್ತಾರೆ. ಐದಾರು ವರ್ಷಗಳಲ್ಲಿ ಒಂದು ದಿನ ಕೂಡ ರಾಗಿಣಿ ಜೊತೆಗೆ ಜಗಳ ಆಡಿಲ್ಲ'' - ರಕ್ಷಿತಾ, ನಟಿ

English summary
Read the article to know How Kannada Actress Ragini Dwivedi and Rakshita Prem became friends.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X