For Quick Alerts
  ALLOW NOTIFICATIONS  
  For Daily Alerts

  ಪಬ್ಲಿಕ್ ಟಿವಿ ವಾಹಿನಿಯ ಪ್ರಸಾರ ಕಾರ್ಯಾರಂಭ

  |

  ಇಂದು ಫೆಬ್ರವರಿ 12, 2012ರ ಭಾನುವಾರದಂದು "ಜನರಿಗಾಗಿ ಜನರಿಗೋಸ್ಕರ ಪಬ್ಲಿಕ್ ಟಿವಿ" ಎಂಬ ಧ್ಯೇಯವಾಕ್ಯದೊಂದಿಗೆ ಪ್ರಾರಂಭವಾಗಿದೆ ಪಬ್ಲಿಕ್ ಟಿವಿ. ಎಚ್ ಆರ್ ರಂಗನಾಥ್ ಸಾರಥ್ಯದಲ್ಲಿ ಪ್ರಾರಂಭವಾಗಿರುವ ಈ ವಾಹಿನಿ ಜನರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು ಸಹಜವಾಗಿದೆ. ಇದಕ್ಕೆ ಕಾರಣ ಈ ಮೊದಲು ಸುವರ್ಣ 24X7 ಸುದ್ದಿ ವಾಹಿನಿಯಲ್ಲಿ ರಂಗನಾಥ್ ನಡೆಸಿಕೊಟ್ಟಿದ್ದ ಜನಮೆಚ್ಚುಗೆಗೆ ಅರ್ಹವಾದ ಕಾರ್ಯಕ್ರಮಗಳು.

  ಪಬ್ಲಿಕ್ ಟಿವಿಯ ಧ್ಯೇಯ, ಉದ್ದೇಶ ಹಾಗೂ ಗುರಿಗಳ ಬಗ್ಗೆ ಸಾರಥಿ ರಂಗನಾಥ್ ಮಾತುನೊಂದಿಗೆ ಬಿಡುಗಡೆಯಾದ ಈ ವಾಹಿನಿ, ರಾಜ್ಯದ ಮುಖ್ಯಮಂತ್ರಿ ಸದಾನಂದ ಗೌಡ 'ಸುದ್ದಿ' ಓದುವುದರೊಂದಿಗೆ ಮೊದಲ ಸುದ್ದಿ ಪ್ರಸಾರ ಮಾಡಿತು. ಬಜೆಟ್ ವಿಷಯವನ್ನು ಪ್ರಾರಂಭಿಸಿ ವಿವರಣೆ ನೀಡುವುದರೊಂದಿಗೆ ಸದಾನಂದ ಗೌಡ ಓದಿದ ಸುದ್ದಿ ಎಲ್ಲರ ಗಮನ ಸೆಳೆಯಿತು.

  ಮುಖ್ಯಮಂತ್ರಿ ಓದಿದ ಸುದ್ದಿ ಪ್ರಸಾರದ ಮಧ್ಯೆ ಹಿನ್ನೆಲೆ ಧ್ವನಿಯ ಮೂಲಕ 6 ತಿಂಗಳಿನಿಂದ ರಾಜ್ಯದಲ್ಲಿ ನಡೆದು ಗಮನಸೆಳೆದ ವಿದ್ಯಮಾನಗಳ ಸುದ್ದಿಗಳು ಹಾಗೂ ವಿಶ್ಲೇಷಣೆಗಳು ಪ್ರಸಾರವಾದವು. ಸದಾನಂದ ಗೌಡರ ಸುದ್ದಿ ಪ್ರಸಾರದ ನಂತರ ಮತ್ತೆ ರಂಗನಾಥ್ ಅವರ ನುಡಿಮುತ್ತುಗಳ ಮೂಲಕ ಪಬ್ಲಿಕ್ ಟಿವಿ ಪ್ರಸಾರ ಮುಂದುವರಿದಿದೆ.

  ವಿಶೇಷ ಅವಕಾಶ: ಇಂದು ಈ ಪಬ್ಲಿಕ್ ಟಿವಿಯಲ್ಲಿ ಮಧ್ಯಾನ್ಹ 12-30ಕ್ಕೆ ಎಚ್ ಆರ್ ರಂಗನಾಥ್ ನಡೆಸಿಕೊಡಲಿರುವ ವಿಶೇಷ ಕಾರ್ಯಕ್ರಮದಲ್ಲಿ ಅವರೊಂದಿಗೆ, 23574045/4046 ದೂರವಾಣಿ ಸಂಖ್ಯೆಯ ಮೂಲಕ ನೇರವಾಗಿ ಮಾತನಾಡಲು ವಿಶೇಷ ಅವಕಾಶವಿದೆ.

  ಸದ್ಯದಲ್ಲಿಯೇ ದೇಶದ ಮುಖ್ಯ 'ಉಪಗ್ರಹ ದೂರದರ್ಶನ' (Satellite TV) ಗಳಲ್ಲಿ ನಮ್ಮ ನಿಮ್ಮೆಲ್ಲರ ಪಬ್ಲಿಕ್ ಟಿವಿ ಪ್ರಸಾರ ಲಭ್ಯ. (ಒನ್ ಇಂಡಿಯಾ ಕನ್ನಡ)

  English summary
  Public TV a Kannada news channel has started today, on 12th February 12, 2012. This is Launched by Chief Minister Sadananda Gowda and Former Lokayuktha Justice Santhosh Hegde. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X