»   » ಬಿಗ್ ಬಾಸ್ ಮನೆಗೆ ಹೃತಿಕ್ ಸೋದರಿ ಸುನೈನಾ ಎಂಟ್ರಿ?

ಬಿಗ್ ಬಾಸ್ ಮನೆಗೆ ಹೃತಿಕ್ ಸೋದರಿ ಸುನೈನಾ ಎಂಟ್ರಿ?

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಿಗ್ ಬಾಸ್ 9ರ ಡಬ್ಬಲ್ ಟ್ರಬಲ್ ನಲ್ಲಿ ಸಲ್ಮಾನ್ ಅವರು ನಂ.1 ಫ್ಲರ್ಟ್ ಅಂಕಿತ್ ಗೇರ ಅಚ್ಚರಿಯ ಎಕ್ಸಿಟ್ ನಂತರ ಅಂಕಿತ್ ಗೇರ ಮಾಜಿ ಗೆಳತಿ ರೂಪಲ್ ತ್ಯಾಗಿ ಇತ್ತೀಚೆಗೆ ಮನೆಯಿಂದ ಹೊರನಡೆದಿದ್ದಾರೆ. ಈಗ ಗೇರ ಹಾಗೂ ರೂಪಲ್ ಜಾಗಕ್ಕೆ ಸಾಹಿಲ್, ಸಂಯುಕ್ತಾ ಸಿಂಗ್ ಹಾಗೂ ಹೃತಿಕ್ ಸೋದರಿ ಸುನೈನಾ ಎಂಟ್ರಿ ಕೊಡುವ ಸುದ್ದಿ ಬಂದಿದೆ.

ಗೇರ ಅವರ ಸ್ಥಾನಕ್ಕೆ ಮತ್ತೊಬ್ಬ ಯುವ ನಟನನ್ನು ಮಎನ್ಯೋಳಗೆ ಕಳಿಸಲು ಕಲರ್ಸ್ ವಾಹಿನಿ ಸಿದ್ಧತೆ ನಡೆಸಿದ್ದು, ಎಕ್ಸ್ ಕ್ಯೂಸ್ ಮಿ, ಸ್ಟೈಲ್ ಚಿತ್ರ ಖ್ಯಾತಿಯ ವಿವಾದಿತ ನಟ ಸಾಹಿಲ್ ಖಾನ್ ಎಂಟ್ರಿ ಬಹುತೇಕ ಖಚಿತವಾಗಿದೆ. ಈ ಮೂಲಕ ಕೀತ್ ಸಿಕ್ವೇರಾ ಹಾಗೂ ಪ್ರಿನ್ಸ್ ನರುಲಾ ಅವರಿಗೆ ಪೈಪೋಟಿ ನೀಡಲಿದ್ದಾನೆ ಎಂಬ ಮಾತಿದೆ. [ಫ್ಲರ್ಟ್ ಮಾಡುವ ಅಂಕಿತ್ ಹೊರಕ್ಕೆ]

ಹೃತಿಕ್ ಅವರ ಸೋದರಿ ಸುನೈನಾ ಅವರು ಒಂದು ದಿನದ ಮಟ್ಟಿಗಾದರೂ ಬಿಗ್ ಬಾಸ್ ಮನೆಯಲ್ಲಿ ಉಳಿಯುವುದು ನನ್ನ ಆಸೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ಸ್ಪರ್ಧಿಯಾಗಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆಯುವಂತೆ ಕಲರ್ಸ್ ವಾಹಿನಿಯಿಂದ ಆಹ್ವಾನ ಕಳಿಸಲಾಗಿದೆ.[ಮನೆಗೆ ಏಳು ಜೋಡಿ, ಸಲ್ಮಾನ್ ಮತ್ತೆ ಮೋಡಿ]

ಜೊತೆಗೆ ಕೀತ್ ಸಿಕ್ವೇರಾ ಅವರ ಮಾಜಿ ಪತ್ನಿ ಸಂಯುಕ್ತಾ ಕೂಡಾ ಬಿಗ್ ಬಾಸ್ ಮನೆಗೆ ಬರಲು ಉತ್ಸುಕರಾಗಿದ್ದಾರೆ. ಅದರೆ, ಈ ಮೂವರಲ್ಲಿ ಉಪಸ್ಥಿತಿ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಕಲರ್ಸ್ ವಾಹಿನಿ ವಕ್ತಾರರು ನೀಡಿಲ್ಲ. ಏನಾಗುತ್ತೋ ಕಾದು ನೋಡಬೇಕಿದೆ.

ಸಾಹಿಲ್ ಖಾನ್ ರಿಂದ ಬಿಗ್ ಬಾಸ್ ಮನೆ ಪ್ರವೇಶ?

ನಟ ಸಾಹಿಲ್ ಖಾನ್ ಅವರು ಹಲವಾರು ವಿವಾದಕ್ಕೆ ಸಿಲುಕಿದ್ದರು. ನಟ ಜಾಕಿ ಶ್ರಾಫ್ ಅವರ ಪತ್ನಿ ಆಯೇಷಾ ಜೊತೆ ಅಫೇರ್, 5 ಕೋಟಿ ರು ವಂಚನೆ ಆರೋಪ ಹೊತ್ತಿದ್ದರು. ಈಗ ವಿವಾದ ಬಗ್ಗೆ ಮತ್ತೊಮ್ಮೆ ಮಾತನಾಡಲು ಮನೆಗೆ ಬರುವ ನಿರೀಕ್ಷೆಯಿದೆ.

ನಟಿ ಸಂಯುಕ್ತಾ

ಬಿಗ್ ಬಾಸ್ ಸ್ಪರ್ಧಿ ಕೀತ್ ಸಿಕ್ವೇರಾ ಅವರ ಜೊತೆ 7 ವರ್ಷ ದಾಂಪತ್ಯದಲ್ಲಿದ್ದ ಸಂಯುಕ್ತಾ ಅವರು ನಂತರ ವಿಚ್ಛೇದನ ಪಡೆದುಕೊಂಡಿದ್ದರು. ಬಾಲಿವುಡ್ ನಲ್ಲಿ ಅಯೂಬ್ ಖಾನ್ ಜೊತೆ ಸಲಾಮಿ ಎಂಬ ಚಿತ್ರದಲ್ಲೂ ನಟಿಸಿದ್ದರು. ಈಗ ಕೀತ್ ಅವರ ಮಾಜಿ ಪತ್ನಿಯಾಗಿರುವ ಸಂಯುಕ್ತಾ ಎಂಟ್ರಿ ಬಗ್ಗೆ ಮಾತು ಕೇಳಿ ಬಂದಿದೆ.

ಕೀತ್ ಗೆ ತ್ರಿಬ್ಬಲ್ ಟ್ರಬಲ್

ಡಬ್ಬಲ್ ಟ್ರಬಲ್ ಬಿಗ್ ಬಾಸ್ ನಲ್ಲಿ ಕೀತ್ ಗೆ ಈಗ ತ್ರಿಬ್ಬಲ್ ಟ್ರಬಲ್ ಶುರುವಾಗಬಹುದು. ಸಂಯುಕ್ತಾ ಎಂಟ್ರಿ ಕೊಟ್ಟರೆ ಕೀತ್ ಹಾಗೂ ಹಾಲಿ ಗೆಳತಿ ರೊಶೆಲ್ ಹಾಗೂ ಮಂದನಾ ಕರಿಮಿ ಜೊತೆ ಕೀತ್ ಹೇಗೆ ನಡೆದುಕೊಳ್ಳುತ್ತಾರೆ ಕಾದುನೋಡಬೇಕಿದೆ.

ಹೃತಿಕ್ ರೋಷನ್ ಅಕ್ಕ ಸುನೈನಾ ರೋಷನ್

ಹೃತಿಕ್ ರೋಷನ್ ಅಕ್ಕ ಸುನೈನಾ ರೋಷನ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಳ್ಳಲು ಸಿದ್ಧರಾಗಿದ್ದಾರೆ.

ಸುನೈನಾ ಹಾಗೂ ರಾಜೀವ್ ಪಾಲ್ ಜೋಡಿ

ಸುನೈನಾ ಹಾಗೂ ರಾಜೀವ್ ಪಾಲ್ ಜೋಡಿಯಾಗಿ ಕೆಲವರ್ಷಗಳ ಕಾಲ ಇದ್ದರು ಅದರೆ ಅದು ಅಧಿಕೃತವಾಗಿರಲಿಲ್ಲ. ಇಬ್ಬರ ನಡುವೆ ಗೆಳೆತನ ಮಾತ್ರ ಇದೆ ಎಂದು ಸುದ್ದಿ ಬಂದಿತ್ತು. ಕ್ಯಾನ್ಸರ್, ಹೃತಿಕ್ ರೋಷನ್ ದಾಂಪತ್ಯ ಕಲಹ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಇರುವ ಕುತೂಹಲವನ್ನು ತಣಿಸಲು ಸುನೈನಾ ಎಂಟ್ರಿ ಕೊಟ್ಟರೂ ಅಚ್ಚರಿ ಪಡಬೇಕಾಗಿಲ್ಲ.

English summary
There are rumours of possible wild card entries on Bigg Boss 9 house. Immediately after Ankit Gera's exit, there were speculations of Xcuse Me and Style actor Sahil Khan's entry as a wild card contestant. It was said that Sahil would fill the place of Ankit and would accompany as partner to Arvind Vegda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada