For Quick Alerts
  ALLOW NOTIFICATIONS  
  For Daily Alerts

  ರವಿ ಬೆಳಗೆರೆ ಪುತ್ರಿ ಭಾವನಾ, ರೆಹಮಾನ್ ಮೇಲೆ ಹುಚ್ಚ ವೆಂಕಟ್ ಗರಂ

  By Harshitha
  |

  ಅಂತೂ ವೀಕ್ಷಕರ ಅಚ್ಚುಮೆಚ್ಚಿನ ಹುಚ್ಚ ವೆಂಕಟ್ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹೊರಬಿದ್ದಿದ್ದಾರೆ. ಹೊರಗೆ ಬರಬರುತ್ತಲೇ ಗಾಯಕ ರವಿ ಮುರೂರು, ಟಿವಿ9 ಸುದ್ದಿ ವಾಹಿನಿ ಆಂಕರ್ ರೆಹಮಾನ್ ಮತ್ತು ಭಾವನಾ ಬೆಳಗೆರೆ ವಿರುದ್ಧ ಗರಂ ಆಗಿದ್ದಾರೆ.

  'ಬಿಗ್ ಬಾಸ್' ಮನೆಯಲ್ಲಿ ಎಲ್ಲರೂ ನಾಟಕ ಮಾಡ್ತಿದ್ದಾರೆ ಎನ್ನುವ ಹುಚ್ಚ ವೆಂಕಟ್, ಶ್ರೀನಗರ ಕಿಟ್ಟಿ ಪತ್ನಿ ಹಾಗೂ ಪತ್ರಕರ್ತ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಮತ್ತು ರೆಹಮಾನ್ ಮೇಲೆ ಮಾಧ್ಯಮಗಳ ಮುಂದೆ ಬಾಯಿಗೆ ಬಂದ ಹಾಗೆ ಬೈದಿದ್ದಾರೆ. ['ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೆ ಹುಚ್ಚ ವೆಂಕಟ್ ಹೇಳಿದ್ದೇನು?]

  ''ಬಿಗ್ ಬಾಸ್' ಶೋ ನಿಂದ ಆಚೆ ಬಂದಿರುವುದು ನನಗೆ ಖುಷಿ. ನನಗೆ ಬೇಸರವಾಗಿಲ್ಲ. ಯಾಕಂದ್ರೆ ಅಲ್ಲಿ ಯಾರೂ ನನಗೆ ಇಷ್ಟ ಆಗಿಲ್ಲ. ನಾನು ಯಾರನ್ನೂ ಮಿಸ್ ಮಾಡಿಕೊಳ್ಳಲ್ಲ'' ಅಂತ ಹೇಳ್ತಾ ರೆಹಮಾನ್ ಮತ್ತು ಭಾವನಾ ಬೆಳಗೆರೆ ಬಗ್ಗೆ ಹುಚ್ಚ ವೆಂಕಟ್ ಮಾತಿಗಿಳಿದರು. ಮುಂದೆ ಓದಿ.....

  'ಬಿಗ್ ಬಾಸ್' ಮನೆ ಒಳಗೆ ಸಿಗರೇಟ್.!

  'ಬಿಗ್ ಬಾಸ್' ಮನೆ ಒಳಗೆ ಸಿಗರೇಟ್.!

  ''ರವಿ ಬೆಳಗೆರೆ ಮಗಳು ನನ್ನ ಬಗ್ಗೆ ಮಾತನಾಡಿದ್ದು ಬೇಜಾರಾಯ್ತು. ಹೆಣ್ಮಕ್ಕಳು ಸಿಗರೇಟ್ ಸೇದ್ತಾರಾ. ಅವರು ಎಣ್ಣೆನೂ ಹಾಕ್ತಾರಂತೆ. ಅದನ್ನೆಲ್ಲಾ ಮನೆಯಲ್ಲಿ ಕೂತ್ಕೊಂಡು ಹೇಳ್ತಿದ್ರು. ನನಗೆ ಹೇಗೆ ಆಗ್ಬೇಡ'' - ಹುಚ್ಚ ವೆಂಕಟ್. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

  ಇತಿಹಾಸ ತೆಗೆಯುವವರು ಅವರು

  ಇತಿಹಾಸ ತೆಗೆಯುವವರು ಅವರು

  ''ಎಲ್ಲರ ಇತಿಹಾಸ ತೆಗೀತಾರೆ ಅವರು. ಅವರ ಇತಿಹಾಸ ತೆಗೆಯೋರು ಯಾರು.? ಹಾಯ್ ಬೆಂಗಳೂರು ರಿಪೋರ್ಟರ್ ಅಂದ್ರೆ ಎಲ್ಲರೂ ನಡುಗುತ್ತಾರೆ ಅಂತಾರೆ. ಅವರು ಹೇಗಿರ್ಬೇಕು?'' - ಹುಚ್ಚ ವೆಂಕಟ್

  ಬ್ಲಾಕ್ ಮೇಲ್ ಮಾಡಿದ್ರಾ?

  ಬ್ಲಾಕ್ ಮೇಲ್ ಮಾಡಿದ್ರಾ?

  ''ಎಷ್ಟೋ ಜನಕ್ಕೆ ಪರ್ಸನಲ್ ವಿಷಯ ಇಟ್ಕೊಂಡು ಅವರು ಬ್ಲಾಕ್ ಮೇಲ್ ಮಾಡಿದ್ದಾರೆ ಅಲ್ವಾ. ಏನೇನೋ ವಿಚಾರಗಳನ್ನ ಇಟ್ಕೊಂಡು ಲವ್ ಮಾಡದೇ ಇದ್ದರೂ ಬೇರೆ ತರಹ ಕನೆಕ್ಟ್ ಮಾಡ್ತಿದ್ರಲ್ವಾ. ಪರ್ಸನಲ್ ವಿಷಯಗಳನ್ನ ಬರೆದಿದ್ದಾರೆ ಅಲ್ವಾ. ಅಂತದ್ರಲ್ಲಿ ಅವರು ಹೇಗಿರ್ಬೇಕು'' - ಹುಚ್ಚ ವೆಂಕಟ್ [ಕೆರಳಿದ ಕಿಚ್ಚ ಸುದೀಪ್ ಗೆ ಓಪನ್ ಚಾಲೆಂಜ್ ಹಾಕಿದ ಹುಚ್ಚ ವೆಂಕಟ್.!]

  ರೆಹಮಾನ್ ಬಗ್ಗೆ

  ರೆಹಮಾನ್ ಬಗ್ಗೆ

  ''ಅವನಿಗೆ ನರೇಂದ್ರ ಮೋದಿ ಯಾರು ಅಂತ ಗೊತ್ತಿಲ್ಲ. ರೆಹಮಾನ್ ನ ಅಲ್ಲೇ ಹೊಡೀಬೇಕಿತ್ತು ನಾನು. ಅಂತವರನ್ನೆಲ್ಲಾ ಯಾಕೆ ಆಂಕರ್ ಮಾಡ್ಬೇಕು. ಬಹಳ ಮಾತಾಡ್ತಾನೆ. ಹೇಡಿ ನನ್ ಮಗ ಅವನು'' - ಹುಚ್ಚ ವೆಂಕಟ್

  ಅಪ್ರಯೋಜಕ ಯಾರು?

  ಅಪ್ರಯೋಜಕ ಯಾರು?

  ''ರೆಹಮಾನ್ ನನ್ನ ಅಪ್ರಯೋಜಕ ಅಂದ. ಬಿಗ್ ಬಾಸ್ ಗೆ ಹೋಗಿ ನನ್ನಿಂದ ಪ್ರಯೋಜನ ಆಗಿಲ್ವ?'' - ಹುಚ್ಚ ವೆಂಕಟ್

  ಮಾಹಿತಿ ಕೃಪೆ - TV9 Kannada

  English summary
  After getting evicted from Bigg Boss Kannada 3, Huccha Venkat abused TV9 Kannada Channel Anchor Rahman and Bhavana Belegere. Read the article to know what Huccha Venkat told about Rahman and Bhavana Belegere.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X