»   » ಹುಚ್ಚ ವೆಂಕಟ್ ಹೊಸ ಕಿರಿಕ್: ಫುಲ್ ರಾಂಗ್ ಆದ ರಾಗಿಣಿ

ಹುಚ್ಚ ವೆಂಕಟ್ ಹೊಸ ಕಿರಿಕ್: ಫುಲ್ ರಾಂಗ್ ಆದ ರಾಗಿಣಿ

Written By:
Subscribe to Filmibeat Kannada

ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮೊದಲಿನಿಂದಲೂ ಐಟಂ ಸಾಂಗ್ ವಿರುದ್ಧ ಕ್ರಾಂತಿ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ತುಪ್ಪದ ಹುಡುಗಿ ರಾಗಿಣಿ ವಿರುದ್ಧ ಹಿಂದೊಮ್ಮೆ ಯ್ಯೂಟ್ಯೂಬ್ ಸ್ಟಾರ್ ಗರಂ ಆಗಿದ್ದರು.

ಇದೀಗ, ಮತ್ತೆ ನಟಿ ರಾಗಿಣಿ ವಿರುದ್ಧ ಹುಚ್ಚ ವೆಂಕಟ್ ಸಿಡಿದೆದ್ದಿದ್ದಾರೆ. ಮತ್ತೆ ಐಟಂ ಸಾಂಗ್ ವಿಚಾರಕ್ಕೆ ರಾಗಿಣಿ ಹಾಗೂ ಹುಚ್ಚ ವೆಂಕಟ್ ಮಧ್ಯೆ ದೊಡ್ಡ ಜಗಳವೇ ನಡೆದು ಹೋಗಿದೆ.[ಹೊಸ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಹುಚ್ಚ ವೆಂಕಟ್!]

ಇದಾಗಿರುವುದು 'ಸ್ಟಾರ್ ಸುವರ್ಣ ವಾಹಿನಿ'ಯಲ್ಲಿ ಪ್ರಸಾರವಾಗುವ 'ಸೂಪರ್ ಜೋಡಿ-2' ಕಾರ್ಯಕ್ರಮದಲ್ಲಿ. 'ಸೂಪರ್ ಜೋಡಿ-2'ಯಲ್ಲಿ ರಾಗಿಣಿ ಹೇಗೆ ಬಂದ್ರು, ಅಲ್ಲಿ ಹುಚ್ಚ ವೆಂಕಟ್ ಗೂ ರಾಗಿಣಿಗೂ ಏನ್ ಕಿರಿಕ್ ಆಯ್ತು ಅಂತ ಇಲ್ಲಿದೆ ನೋಡಿ...

ರಾಗಿಣಿ ವಿರುದ್ಧ ಸಿಡಿದೆದ್ದ ವೆಂಕಟ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ಸೂಪರ್ ಜೋಡಿ-2' ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಹಾಗೂ ಹುಚ್ಚ ವೆಂಕಟ್ ಮಧ್ಯೆ ಜಗಳವಾಗಿದ್ದು, ಇಬ್ಬರು ಕಾರ್ಯಕ್ರಮವನ್ನ ಅರ್ಧಕ್ಕೆ ಬಿಟ್ಟು ಎದ್ದು ಹೋಗಿರುವ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವೇದಿಕೆಯಲ್ಲೇ ಶುರುವಾಯ್ತು ಕಿರಿಕ್

'ವ್ಯಾಲೆಂಟೀನ್ ಡೇ' ವಿಶೇಷವಾಗಿ 'ಸೂಪರ್ ಜೋಡಿ-2' ರಿಯಾಲಿಟಿ ಶೋ ರಾಗಿಣಿ ಅತಿಥಿಯಾಗಿ ಆಗಮಿಸಿದ್ದಾರೆ. ಅಷ್ಟೆ ಅಲ್ಲದೇ ರಾಗಿಣಿ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು. ಈ ವೇಳೆ ರಾಗಿಣಿ ಮತ್ತು ವೆಂಕಟ್ ಮಧ್ಯೆ ಐಟಂ ಸಾಂಗ್ ಹಾಗೂ ರಾಗಿಣಿ ನೀಡಿದ ಕಾಮೆಂಟ್ ವಿಚಾರಕ್ಕೆ ಕಿರಿಕ್ ಆಗಿದೆ.

ಹುಚ್ಚ ವೆಂಕಟ್ ಹೇಳಿದ್ದೇನು?

''ನನ್ ಮಗಂದ್ ಐಟಂ ಸಾಂಗ್ ಬ್ಯಾನ್ ಮಾಡ್ಬೇಕು ಅಂತ ಇದ್ರೆ, ಮೈಕ್ ಹಾಕ್ಕೊಂಡು ಶೂಟ್ ಮಾಡೋದು ನೋಡೆ ಇಲ್ಲ ಅಂತಿದ್ರು'' ಎಂದು ವೆಂಕಟ್ ಸಿಡಿದೆದ್ದಿದ್ದಾರೆ.

ರಾಗಿಣಿ ಕೊಟ್ಟ ತಿರುಗೇಟು!

''ನಿಮ್ಮ ಅಭಿಪ್ರಾಯ ಕೇಳಿದಾಗ, ಅದನ್ನ ವ್ಯಕ್ತಪಡಿಸಿದ್ರೆ ಗೌರವವಾಗಿರುತ್ತೆ. ನಿಮ್ಮ ಅಭಿಪ್ರಾಯ ಕೇಳದೆ ಇದ್ದಾಗ, ನೀವು ಮಾತನಾಡಬಾರದು.' ಎಂದು ರಾಗಿಣಿ ವೆಂಕಟ್ ಗೆ ತಿರುಗೇಟು ಕೊಟ್ಟಿದ್ದಾರೆ.

'ಸೂಪರ್ ಜೋಡಿ'ಯಿಂದ ಹೊರಹೋದ್ರಾ ವೆಂಕಟ್!

ರಾಗಿಣಿಯ ಮಾತಿನ ನಂತರ ಹುಚ್ಚ ವೆಂಕಟ್ ಅವರು'' ಐ ವಿಲ್ ವಾಕಿಂಗ್ ಔಟ್ ಆಫ್ ದಿಸ್ ಪ್ಲೇಸ್ (ನಾನು ಇಲ್ಲಿಂದ ಹೊರ ಹೋಗುತ್ತೇನೆ)'' ಎಂದು 'ಸೂಪರ್ ಜೋಡಿ-2' ವೇದಿಕೆಯಿಂದ ಹೊರ ನಡೆದಿದ್ದಾರೆ.

ರಾಗಿಣಿನೂ ಹೊರಹೋದ್ರು!

ಹುಚ್ಚ ವೆಂಕಟ್ ಶೋ ನಿಂದ ಹೊರಹೋಗುತ್ತಿದ್ದಂತೆ ನಟಿ ರಾಗಿಣಿ ಕೂಡ ಮುಲಾಜಿಲ್ಲದೆ ಶೋ ನಿಂದ ಹೊರಹೋಗಿದ್ದಾರೆ ಎಂಬುದು ಪ್ರೋಮದಲ್ಲಿ ನೋಡಬಹುದು.

ಶರ್ಮಿಳಾ ಮಾಂಡ್ರೆ ಭಾಗಿ!

ಪ್ರೇಮಿಗಳ ದಿನದ ವಿಶೇಷ ಕಾರ್ಯಕ್ರಮದಲ್ಲಿ ಕನ್ನಡದ ನಟಿ ಶರ್ಮಿಳಾ ಮಾಂಡ್ರೆ ಕೂಡ ಅತಿಥಿಯಾಗಿ ಭಾಗವಹಿಸಿದ್ದಾರೆ.

'ಪರಪಂಚ'ದಲ್ಲಿ ಕಿರಿಕ್ ಮಾಡಿದ್ದ ವೆಂಕಟ್!

ರಾಗಿಣಿ, ದಿಗಂತ್ ಅಭಿನಯಿಸಿದ್ದ 'ಪರಪಂಚ' ಚಿತ್ರದ ವೇಳೆ, ಹುಚ್ಚ ವೆಂಕಟ್ ರಾಗಿಣಿ ವಿರುದ್ಧ ಗರಂ ಆಗಿದ್ದರು. ರಾಗಿಣಿ ಅವರು ಐಟಂ ಸಾಂಗ್ ಮಾಡಿದ್ದಾರೆ. ಆ ಹಾಡನ್ನ ಚಿತ್ರದಿಂದ ತೆಗೆದು ಹಾಕಬೇಕು ಎಂದು ವೆಂಕಟ್ ಕಿರಿಕ್ ಮಾಡಿದ್ದರು.

ಹುಚ್ಚ ವೆಂಕಟ್ ಔಟ್? ಅಥವಾ ಇನ್?

ನಿಜಕ್ಕೂ ಹುಚ್ಚ ವೆಂಕಟ್ ಶೋ ಯಿಂದ ಹೊರ ಹೋಗಿದ್ದಾರಾ? ಅಥವಾ ಅವರನ್ನ ಸಂಧಾನ ಮಾಡಿ ವಾಪಸ್ ಕರೆದುಕೊಂಡು ಬಂದಿದ್ದಾರಾ ಗೊತ್ತಿಲ್ಲ. ಇದು ಗೊತ್ತಾಗ್ಬೇಕಾದ್ರೆ, ಈ ಶನಿವಾರ ಪ್ರಸಾರವಾಗುವ ಸೂಪರ್ ಜೋಡಿ ಕಾರ್ಯಕ್ರಮ ನೋಡಬೇಕು. [ಪ್ರೋಮೋ ಇಲ್ಲಿದೆ ನೋಡಿ...]

ಚಿತ್ರ ಕೃಪೆ: ಸ್ಟಾರ್ ಸುವರ್ಣ

English summary
Huccha Venkat, is in the midst of another controversy. Actress Ragini Dwivedi, who was the celebrity judge in 'Super Jodi Season 2', commented about Huchcha Venkat’s performance, which did no go down well with the latter. Even he walks out of the show, which will be aired on Star Suvarna on this weekend.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada