For Quick Alerts
  ALLOW NOTIFICATIONS  
  For Daily Alerts

  ಮಾಧುರಿ, ಭಾವನಾ, ಪೂಜಾ ಬಿಟ್ರೆ ಎಲ್ಲಾ ವೇಸ್ಟ್: ವೆಂಕಟ್

  By ರಾಘವೇಂದ್ರ ಸಿ.ವಿ
  |

  ಬಿಗ್ ಬಾಸ್ ಬಗ್ಗೆ ಮಾತನಾಡಿದ ದೊಡ್ಮನೆಯಲ್ಲಾದ ಕೆಲವು ಘಟನೆಗಳನ್ನು ನೆನಪು ಮಾಡಿಕೊಂಡು ಮೆಲುಕುಹಾಕಿದರು. ದೊಡ್ಮನೆಯಲ್ಲಿ ಮಾಧುರಿ, ಭಾವನಾ ಬೆಳಗೆರೆ ಮತ್ತು ಪೂಜಾ ಗಾಂಧಿ ಹೊರತಾಗಿ ಉಳಿದವರೆಲ್ಲರೂ ಮುಖವಾಡ ಧರಿಸಿದ್ದಾರೆ.

  ಹಣಕ್ಕಾಗಿ ತಮ್ಮನ್ನು ತಾವು ಮಾರಿಕೊಳ್ಳುತ್ತಿದ್ದಾರೆ ಅದಕ್ಕೆ ನಾನು ಅಲ್ಲಿಂದ ಜನಗಳಲ್ಲಿ ವೋಟ್ ಮಾಡುವ ಬದಲು ನಾಯಿಗೆ ಬನ್ ಹಾಕಿ ಎಂದು ವಿನಂತಿಸಿಕೊಂಡಿದ್ದು ಮತ್ತು ಅಲ್ಲಿನ ಎಲ್ಲಾ ಟಾಸ್ಕ್ ಗಳು ಒಂದೊಂದು ಸಂದೇಶ ಕೊಡುತ್ತವೆ ಅದರಲ್ಲೂ ನನ್ನ ಅಪ್ಪನ ಚಪ್ಪಲಿಯನ್ನು ತಲೆಯ ಮೇಲೆ ಹೊರಲು ನಾನು ಪುಣ್ಯ ಮಾಡಿದ್ದೆ ಇದಕ್ಕಾಗಿ ಬಿಗ್ ಬಾಸ್ ಗೆ ನಾನು ಚಿರಋಣಿಯಾಗಿರುತ್ತೇನೆ

  ಹಾಗೇ ತನ್ನ ಈ ಜನಪ್ರಿಯತೆಗೆ ಕಾರಣರಾದ ಮಾಧ್ಯಮಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮಾಧ್ಯಮದವರು ನನ್ನ ಪರವಾಗಿ ಕಾರ್ಯಕ್ರಮವನ್ನು ಮಾಡುವಾಗ ನನ್ನ ಕಂಡರೆ ಆಗದಿರುವರು ಅದನ್ನು ವಿರೋಧಿಸಿದ್ದರು ಆಗಲೂ ಕರ್ನಾಟಕದ ಜನ ನನ್ನ ಬೆಂಬಲಕ್ಕೆ ನಿಂತರು ಎಂದು ವೆಂಕಟ್ ಖುಷಿಯಿಂದ ಹೇಳುತ್ತಾರೆ.

  ಒಂದು ರಾಜಕೀಯ ಪಕ್ಷಕ್ಕೆ ಬೆಂಬಲಿಸಿ ಪ್ರಚಾರ ಮಾಡುತ್ತಿದ್ದ ಶ್ರುತಿ ಬಿಗ್ ಬಾಸ್ ಮನೆಯಲ್ಲಿ ರಾಜಕಾರಣಿಗಳನ್ನು ಕೆಟ್ಟದಾಗಿ ಬೈಯುತ್ತಾರೆ ಅಲ್ಲದೆ ಹೆಚ್ಚು ನಾಟಕವಾಡುತ್ತಾರೆ ಎಂದು ಶ್ರುತಿಯವರನ್ನು ತರಾಟೆಗೆ ತೆಗೆದುಕೊಂಡರು.

  ರವಿಯವರ ಮೇಲಿನ ಹಲ್ಲೆಯ ಬಗ್ಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವೆಂಕಟ್, ರವಿ ತುಂಬಾ ಒಳ್ಳೆಯವರು ಅವರು ತುಂಬಾ ಪ್ರೊವೋಕ್ ಮಾಡುತ್ತಿದ್ದರು ಅದೊಂದು ಕೆಟ್ಟ ಗಳಿಗೆ ತಾಳ್ಮೆ ಕಳೆದುಕೊಂಡು ಹಲ್ಲೆ ಮಾಡಿಬಿಟ್ಟೆ ಎನ್ನುತ್ತಾ ನಾನು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಜನ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡುವುದು ಕಡಿಮೆಯಾಗಿದ್ದು ಟಿ ಅರ್ ಪಿ ಕುಸಿದಿದೆ ಎಂದರು

  English summary
  Huccha Venkat speaks about Bigg Boss Kannada 3 contestants during an exclusive interview with Filmibeat Kannada. Except Bhavana Belagere, Pooja Gandhi and Madhuri all others are fake and not trustworthy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X