»   » ಹೊಸ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಹುಚ್ಚ ವೆಂಕಟ್!

ಹೊಸ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಹುಚ್ಚ ವೆಂಕಟ್!

Posted By:
Subscribe to Filmibeat Kannada

ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಎಲ್ಲೂ ಕಾಣ್ತಿಲ್ವಲ್ಲ. ಎಲ್ಲೋದ್ರೂ ಎಂಬ ಕುತೂಹಲ ಅವರ ಅಭಿಮಾನಿಗಳಿದ್ದು. ಆದ್ರೆ, ಹುಚ್ಚ ವೆಂಕಟ್ ಮಾತ್ರ ಸದ್ದು ಸುದ್ದಿಯಿಲ್ಲದೇ ಹೊಸ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲ ತಮ್ಮ ಜೋಡಿ ಜೊತೆ ಸೂಪರ್ ಜೋಡಿ ಆಟವಾಡೋಕೆ ರೆಡಿಯಾಗಿದ್ದಾರೆ.

'ಬಿಗ್ ಬಾಸ್ ಸೀಸನ್-3' ರಲ್ಲಿ ಸ್ವರ್ಧಿಯಾಗಿದ್ದ ವೆಂಕಟ್, ಸಹ ಸ್ವರ್ಧಿ ರವಿ ಮುರೂರು ಅವರ ಮೇಲೆ ದೈಹಿಕ ಹಲ್ಲೆ ಮಾಡಿ ಶೋನಿಂದ ಹೊರಬಂದಿದ್ದರು. ಅದಾದ ನಂತರ ಬೇರೆ ಯಾವುದೇ ಕಿರುತೆರೆ ಕಾರ್ಯಕ್ರಮದಲ್ಲೂ ವೆಂಕಟ್ ಕಾಣಿಸಿಕೊಂಡಿಲ್ಲ. ಬಟ್, ಮತ್ತೆ 'ಬಿಗ್ ಬಾಸ್' ಅಯೋಜಕರು 'ಬಿಗ್ ಬಾಸ್ ಸೀಸನ್-4' ಕಾರ್ಯಕ್ರಮಕ್ಕೆ ಅತಿಥಿಯಾಗಿ ಹುಚ್ಚ ವೆಂಕಟ್ ಅವರನ್ನ ಕಳುಸಿದರು. ಆದ್ರೆ, ಎರಡನೇ ಬಾರಿ ವೆಂಕಟ್, ಒಳ್ಳೆ ಹುಡುಗ ಪ್ರಥಮ್ ಮೇಲೆ ಹಲ್ಲೆ ಮಾಡಿ ಬಂದರು.['ಬಿಗ್' ಅವಾಂತರ: 'ಒಳ್ಳೆ ಹುಡುಗ' ಪ್ರಥಮ್ ಗೆ ಪಂಚ್ ಕೊಟ್ಟ ಹುಚ್ಚ ವೆಂಕಟ್.! ]

ಅಷ್ಟೇ ಅದಾದ ನಂತರ ವೆಂಕಟ್ ಹೆಸರು ಕೇಳಿಸಲೇ ಇಲ್ಲ. ಈಗ ಕಿರುತೆರೆಯ ಹೊಸ ರಿಯಾಲಿಟಿ ಶೋನಲ್ಲಿ ಹುಚ್ಚ ವೆಂಕಟ್ ಎಂಟ್ರಿಯಾಗಿದ್ದು, ಆರಂಭದಲ್ಲೇ ಡೈಲಾಗ್, ಡ್ಯಾನ್ಸ್ ಅಂತ ಕುಣಿದು ಕುಪ್ಪಳಿಸಿದ್ದಾರೆ.

'ಸೂಪರ್ ಜೋಡಿ-2'ನಲ್ಲಿ ವೆಂಕಟ್!

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗುತ್ತಿರುವ 'ಸೂಪರ್ ಜೋಡಿ-2' ರಿಯಾಲಿಟಿ ಶೋನಲ್ಲಿ ಹುಚ್ಚ ವೆಂಕಟ್ ಸ್ವರ್ಧಿಯಾಗಿ ಅಖಾಡಕ್ಕೀಳಿದಿದ್ದಾರೆ.

ವೆಂಕಟ್ ಜೋಡಿ ರಚನಾ

'ಸೂಪರ್ ಜೋಡಿ-2' ಕಾರ್ಯಕ್ರಮ ಜೋಡಿ ಆಟವಾಗಿದ್ದು, ಹುಚ್ಚ ವೆಂಕಟ್ ಗೆ ಈ ಶೋನಲ್ಲಿ ಮಾಡೆಲ್ ರಚನಾ ಜೊತೆಯಾಗಿದ್ದಾರೆ.[ಹುಚ್ಚ ವೆಂಕಟ್ ಮತ್ತು ರಚನಾ ಜೋಡಿ ನೋಡಿ]

ಮೊದಲ ದಿನ ಭರ್ಜರಿ ಡ್ಯಾನ್ಸ್

'ಸೂಪರ್ ಜೋಡಿ ಸೀಸನ್-2' ಕಾರ್ಯಕ್ರಮ ಶುರುವಾಗಿದ್ದು, ರಮೇಶ್ ಅರವಿಂದ್ ಅದ್ದೂರಿಯಾಗಿ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭರ್ಜರಿ ಎಂಟ್ರಿ ಕೊಟ್ಟ ಹುಚ್ಚ ವೆಂಕಟ್ ಕೋಟಿಗೊಬ್ಬ ಚಿತ್ರದ ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡಿ ರಂಜಿಸಿದರು.[ಹುಚ್ಚ ವೆಂಕಟ್ ಡ್ಯಾನ್ಸ್ ನೋಡಿ]

ಅಕುಲ್ ಗೆ ವೆಂಕಟ್ ಕೊಟ್ರು ಟಾಂಗ್!

ಮಾತಿನ ಮಲ್ಲ ಅಕುಲ್ ಬಾಲಾಜಿ, ಕಾರ್ಯಕ್ರಮ ನಿರೂಪಣೆ ಮಾಡೋದ್ರಲ್ಲಿ ನಿಪುಣ. ಇನ್ನೂ ಬೇರೆಯವರನ್ನ ಕಾಲೆಳೆಯುವುದರಲ್ಲಿ ಅವರೇ ನಿಸ್ಸೀಮರು. ಆದ್ರೆ, ಸೂಪರ್ ಜೋಡಿಯ ಮೊದಲ ದಿನ ಅಕುಲ್ ಬಾಲಾಜಿಗೆ ವೆಂಕಟ್ ಪಂಚಿಂಗ್ ಡೈಲಾಗ್ ಮೂಲಕ ಟಾಂಗ್ ಕೊಟ್ಟಿದ್ದಾರೆ.[ವೆಂಕಟ್ ಡೈಲಾಗ್ ವಿಡಿಯೋ ನೋಡಿ]

ಈ ವಾರದಿಂದ ಶುರು

ಇದೇ ಜನವರಿ 7 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ. ಮೊದಲ ದಿನ ವಿಶೇಷ ಕಾರ್ಯಕ್ರಮದ ಚಿತ್ರೀಕರಣ ಮುಗಿದಿದ್ದು, ಶನಿವಾರ ರಾತ್ರಿ ಪ್ರಸಾರವಾಗಲಿದೆ.

English summary
Actor, director and producer Huccha Venkat, will be participating in the reality show Super Jodi 2, hosted by Akul Balaji. The show will go on air from January 7 at 8pm. Super Jodi 2 will be aired on Saturday and Sunday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada