»   » 'ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೆ ಹುಚ್ಚ ವೆಂಕಟ್ ಹೇಳಿದ್ದೇನು?

'ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೆ ಹುಚ್ಚ ವೆಂಕಟ್ ಹೇಳಿದ್ದೇನು?

Posted By:
Subscribe to Filmibeat Kannada

ಕೆಲವರು ಲೆಕ್ಕಹಾಕಿದಂತೆ, ಕೆಲವರ ಊಹೆಗೂ ನಿಲುಕದಂತೆ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ನಟ-ನಿರ್ದೇಶಕ ಹುಚ್ಚ ವೆಂಕಟ್ ಹೊರಬಿದ್ದಿದ್ದಾರೆ.

ಎಡಗಾಲಿಟ್ಟು 'ಬಿಗ್ ಬಾಸ್' ಮನೆ ಗೃಹಪ್ರವೇಶ ಮಾಡಿದ ಹುಚ್ಚ ವೆಂಕಟ್ ಎಡವಟ್ಟು ಮಾಡಿಕೊಂಡು ಶೋನಿಂದ ಆಚೆ ಬಂದಿದ್ದಾರೆ. ಗಾಯಕ ರವಿ ಮುರೂರುಗೆ ಎದ್ವಾತದ್ವಾ ತದಕಿ 'ಬಿಗ್ ಬಾಸ್' ಮನೆ ನಿಯಮ ಮುರಿದು ಕಿಕ್ ಔಟ್ ಆಗಿದ್ದಾರೆ ಟಿ.ಆರ್.ಪಿ ಕಿಂಗ್. ['ಬಿಗ್ ಬಾಸ್' ಮನೆಯಿಂದ ಹುಚ್ಚ ವೆಂಕಟ್ 'ಕಿಕ್'ಔಟ್ ಆಗಿದ್ಯಾಕೆ?]

ರಿಯಾಲಿಟಿ ಶೋನಿಂದ ಹೊರ ಬಂದರೂ, ಹುಚ್ಚ ವೆಂಕಟ್ ಗೆ ಕೊಂಚ ಕೂಡ ಬೇಸರವಾಗಿಲ್ಲ. ಇನ್ನೊಬ್ಬರ ಮೇಲೆ ಹಲ್ಲೆ ಮಾಡಿದರೂ, ತಾನು ಮಾಡಿದ್ದೇ ಸರಿ ಅನ್ನುವ ಅರ್ಥದಲ್ಲಿ ಹುಚ್ಚ ವೆಂಕಟ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. [ಟಿ.ಆರ್.ಪಿ ಕಿಂಗ್ ಹುಚ್ಚ ವೆಂಕಟ್ ವಿರುದ್ಧ ಗುಡುಗಿದ ಕಿಚ್ಚ ಸುದೀಪ್.!]

'ಬಿಗ್ ಬಾಸ್' ಮನೆಯಿಂದ ಹೊರಬಂದ ಮೇಲೆ ಮಾಧ್ಯಮಗಳಿಗೆ ಹುಚ್ಚ ವೆಂಕಟ್ ನೀಡಿರುವ ಹೇಳಿಕೆಯ ಯಥಾವತ್ ರೂಪ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

'ಬಿಗ್ ಬಾಸ್' ಶೋ ಒಪ್ಪಿಕೊಳ್ಳುವುದಕ್ಕೆ ಕಾರಣ?

''ನನ್ನ ಹುಟ್ಟುಹಬ್ಬ ಸೆಪ್ಟೆಂಬರ್ ನಲ್ಲಿ. ಅವಾಗ ನಾನು ಪ್ರೆಸ್ ಮೀಟ್ ಮಾಡ್ದೆ. ಆಗ ನನ್ನ ಎಲ್ಲರೂ ಕೇಳಿದ್ರು 'ಬಿಗ್ ಬಾಸ್'ಗೆ ಹೋಗ್ತೀರಾ ಅಂತ. ನಾನು ಹೋಗ್ತಿಲ್ಲ ಅಂದ್ರೂ ಹೋಗ್ತೀನಿ ಅಂತ ಪ್ರಚಾರ ಮಾಡಿದರು. ಫೇಸ್ ಬುಕ್ ನಲ್ಲೂ ಅದೇ ಶುರುವಾಯ್ತು. ಆಮೇಲೆ ನನಗೆ ಆಫರ್ ಬಂದಿದ್ದು. ಮೊದಲು ನಾನು ಗೆಸ್ಟ್ ಆಗಿ ಬರ್ತೀನಿ ಇಲ್ಲಾ ಆಂಕರಿಂಗ್ ಮಾಡ್ತೀನಿ ಅಂದೆ. ಆದ್ರೆ, ಶೆಣೈ ಸರ್ ಜೊತೆ ಮಾತನಾಡಿದ್ಮೇಲೆ ಕೆಲ ಕಂಡೀಷನ್ಸ್ ಹಾಕ್ದೆ. ಕೆಲವೊಂದು ಕೆಲಸ ನಾನು ಮಾಡಲ್ಲ ಅಂತ ಹೇಳ್ದೆ. ಅವರು ಒಪ್ಪಿಕೊಂಡರು. ಆಮೇಲೆ ಶೋಗೆ ಹೋದೆ'' - ಹುಚ್ಚ ವೆಂಕಟ್. [ಕೆರಳಿದ ಕಿಚ್ಚ ಸುದೀಪ್ ಗೆ ಓಪನ್ ಚಾಲೆಂಜ್ ಹಾಕಿದ ಹುಚ್ಚ ವೆಂಕಟ್.!]

ಕನ್ನಡಿಗರಿಗೆ ಬೇಜಾರ್ ಮಾಡ್ಬಾರ್ದು

''ನಾನು ಕನ್ನಡಿಗರಿಗೆ ಬೇಜಾರ್ ಮಾಡಿದ್ದೆ. ನನ್ನ ಸಿನಿಮಾ 'ಹುಚ್ಚ ವೆಂಕಟ್' ಎಲ್ಲಾ ಕಡೆ ರಿಲೀಸ್ ಮಾಡಿರ್ಲಿಲ್ಲ. ಯೂಟ್ಯೂಬ್ ನಲ್ಲಿ ಈಗ ರಿಲೀಸ್ ಆಗಿದೆ. ಮತ್ತೆ ಕನ್ನಡಿಗರಿಗೆ ನಾನು ನಿರಾಸೆ ಮಾಡ್ಬಾರ್ದು ಅಂತ ಶೋಗೆ ಹೋಗ್ತೀನಿ ಅಂತ ಡಿಸೈಡ್ ಮಾಡ್ದೆ. ಒಂದು ವಾರ ಹೋಗಿ ಇರ್ತೀನಿ ಸಾಕು ಅಂತ ನನ್ನ ಅಪ್ಪ ಹತ್ರ ಹೇಳ್ದಾಗ ಗೆದ್ದು ಬರಬೇಕು. ಕೋಪ ತಡ್ಕೋ ಅಂತ ಹೇಳಿದ್ರು'' - ಹುಚ್ಚ ವೆಂಕಟ್

ತಲೆ ತಗ್ಗಿಸುವ ಕೆಲಸ ಮಾಡಿಲ್ಲ.!

''ಕನ್ನಡಿಗರು ತಲೆ ತಗ್ಗಿಸುವ ಕೆಲಸ ನಾನು ಮಾಡಿಲ್ಲ. ನಾನು ಹೇಗೆ ಹೋಗಿದ್ನೋ, ಹಾಗೇ ವಾಪಸ್ ಬಂದಿದ್ದೀನಿ. ಯಾರೂ ನನ್ನ ಬದಲಾವಣೆ ಮಾಡೋಕೆ ಆಗಲ್ಲ'' - ಹುಚ್ಚ ವೆಂಕಟ್

ಬೆವರು ಸುರ್ಸಿದ್ದೀನಿ

''ನಾನು ಬೆವರು ಸುರ್ಸಿದ್ದೀನಿ. ಯಾರಿಗೂ ಬಕೆಟ್ ಹಿಡಿದಿಲ್ಲ. ನಾನು ಬದುಕಿದ್ದು ಆ ಸ್ಟೈಲ್ ನಲ್ಲಿ. ಹಸಿವು ಏನು ಅನ್ನೋದು ನನಗೆ ಗೊತ್ತು. ನನ್ನ ಬ್ಯಾಂಕ್ ಬಾಲೆನ್ಸ್ ಎಷ್ಟು ಗೊತ್ತಾ ನಿಮಗೆ. ನಾನು ಯಾರ ಹತ್ರನೂ ಕೈ ಚಾಚಲ್ಲ'' - ಹುಚ್ಚ ವೆಂಕಟ್ [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ನಾನು ಕೀಳಾಗಿ ನೋಡ್ಲಿಲ್ಲ.!

''ನಾನು ಯಜಮಾನ ಆಗ್ಬೇಕು ಅಂತಿರ್ಲಿಲ್ಲ. ನನಗೆ ಅದೇ ಬಂದಿದ್ದು. ನಾನು ರೆಹಮಾನ್ ನ ಆಳಾಗಿ ಸೆಲೆಕ್ಟ್ ಮಾಡ್ಲಿಲ್ಲ. ಬಿಗ್ ಬಾಸ್ ಹೇಳಿದ್ದು ಅದು. ನಾನು ಹೇಳ್ದೆ ರೆಹಮಾನ್ ಗೆ, ಕಾಲು ಮುಟ್ಟೋದು ಬೇಡ, ಚಪ್ಪಲಿ ಹಾಕೋದು ಬೇಡ ಅಂತ. ಆದ್ರೂ ಟಾಸ್ಕ್ ಅಂತ ಅವರೇ ಎಲ್ಲಾ ಮಾಡಿದ್ದು'' - ಹುಚ್ಚ ವೆಂಕಟ್ [ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?]

ಆಳು ಆಗಲ್ಲ.!

''ನಾನು ಆಳು ಆಗ್ಬೇಕಿತ್ತು. ನಾನು ಆಗ್ಲಿಲ್ಲ. ನಾನು ಯಾರಿಗೂ ಬಕೆಟ್ ಹಿಡಿದಿಲ್ಲ. ನನಗೆ ಅದರ ಅಭ್ಯಾಸ ಇಲ್ಲ. ಟಾಸ್ಕ್ ಆದ್ಮೇಲೆ ರವಿ ಮಾನ ಮರ್ಯಾದೆ ಇಲ್ವಾ ಅಂದ. ಹುಚ್ಚ ವೆಂಕಟ್ ಸೇನೆ ಬಗ್ಗೆ ಮಾತಾಡ್ದ. ವರ್ಲ್ಡ್ ವೈಡ್ ಇದೆ ನನ್ನ ಸೇನೆ. ಅವರ ಬಗ್ಗೆ ಮಾತಾಡಬಾರ್ದು. ನನ್ನ ಬಗ್ಗೆ ಮಾತಾಡ್ಬೇಕು'' - ಹುಚ್ಚ ವೆಂಕಟ್

ಬೇಜಾರ್ ಆಗಿಲ್ಲ

''ಬಿಗ್ ಬಾಸ್' ನಿಂದ ಹೊರಬಂದ ಬಗ್ಗೆ ನನಗೆ ಬೇಜಾರ್ ಇಲ್ಲ. ಅವನನ್ನ ಸಾಯಿಸ್ದೆ ಬಿಟ್ಟಿದ್ದೀನಲ್ಲ ಅಂತ ಬೇಜಾರು ಆಗ್ತಿದೆ'' - ಹುಚ್ಚ ವೆಂಕಟ್

ನಾನು ಮಾಡಿದ್ದು ಸರಿ

''ನಾನು ಮಾಡಿದ್ದು ತಪ್ಪು ''ಸಾರಿ'' ಅಂತ ಬಿಗ್ ಬಾಸ್ ಗೆ ಹೇಳ್ದೆ ನಾನು. ಮಾನ ಮರ್ಯಾದೆ ಅಂತ ಬಂದಾಗ ನಾನು ಸುಮ್ನೆ ಇರಲ್ಲ. ನಾನು ಮಾಡಿದ್ದು ಸರಿ. ಅದನ್ನ ಜನರೂ ಒಪ್ಪಿಕೊಳ್ತಾರೆ'' - ಹುಚ್ಚ ವೆಂಕಟ್

ಲೆಕ್ಕ ಹಾಕ್ತಾರೆ

''ಟೀ ಕುಡಿಯೋದನ್ನ ಲೆಕ್ಕ ಹಾಕ್ತಾರೆ. ನಾನು ಆರ್ಡರ್ ಮಾಡ್ತೀನಿ ಅಂತಿದ್ದ. ನಾನು ರಿಕ್ಷೆಸ್ಟ್ ಮಾಡ್ತಿದ್ದೆ, ಆರ್ಡರ್ ಮಾಡ್ತಿರ್ಲಿಲ್ಲ. ಊಟ ಮಾಡೋದನ್ನೂ ಲೆಕ್ಕ ಹಾಕಿದ್ರೆ ಬೇಜಾರ್ ಆಗಲ್ವಾ'' - ಹುಚ್ಚ ವೆಂಕಟ್

ನಾನು 'ಹುಚ್ಚ'

''ನಾನು ಹುಚ್ಚ ಹೌದು. ವಿಚಿತ್ರವಾಗಿರ್ತೀನಿ. ಆದ್ರೂ ನನ್ನಲ್ಲಿ ಒಳ್ಳೆತನ ಇದೆ.
ಚಿಕ್ಕವಯಸ್ಸಿಂದ ಹುಚ್ಚತನ ಇದೆ. ಹುಚ್ಚ ವೆಂಕಟ್ ಅಂತ ಕರೆದ್ರೆ ಖುಷಿ ಆಗುತ್ತೆ.''

ಜನ ಯಾಕ್ ಇಷ್ಟಪಡ್ತಾರೆ?

''ನಾನು ಆನ್ ಸ್ಕ್ರೀನ್, ಆಫ್ ಸ್ಕ್ರೀನ್. ವಿತ್ ಮೇಕಪ್, ವಿಥೌಟ್ ಮೇಕಪ್ ಒಂದೇ ತರಹ. ಅದಕ್ಕೆ ಜನ ನನ್ನ ಇಷ್ಟ ಪಡುವುದು' - ಹುಚ್ಚ ವೆಂಕಟ್

ನನ್ ಫ್ಯಾನ್ಸ್ ವೋಟ್ ಮಾಡ್ತಾರೆ

''ನಾಮಿನೇಟ್ ಆದಾಗ ಎಲ್ಲರೂ ನನ್ನ ಸುತ್ತ ಇರುವೆ ಮುತ್ತಿಕೊಂಡ ಹಾಗೆ ಮುತ್ತಿಕೊಳ್ತಿದ್ರು. ನನ್ ಫ್ಯಾನ್ಸ್ ಅವರಿಗೆಲ್ಲಾ ವೋಟ್ ಮಾಡ್ಲಿ ಅಂತ'' - ಹುಚ್ಚ ವೆಂಕಟ್

ಕೋಪ ತಡ್ಕೊಂಡ್ ಇದ್ದೆ

''ನಾನು ಕೋಪ ತಡ್ಕೊಂಡು ಇದ್ದೆ. ನಮ್ಮ ತಂದೆಗೆ ಮಾತು ಕೊಟ್ಟಿದೆ ಕೈ ಮಾಡಲ್ಲ ಅಂತ. ಬಟ್ ಲಿಮಿಟ್ ಮೀರಿತು. ಮಾನ ಮರ್ಯಾದೆ ವಿಷ್ಯ ಬಂದ್ರೆ ನಾನು ಸುಮ್ನೆ ಬಿಡಲ್ಲ'' - ಹುಚ್ಚ ವೆಂಕಟ್

ಎಲ್ಲರೂ ನಾಟ್ಕ ಮಾಡ್ತಾರೆ

''ನಾಟ್ಕಕ್ಕೆ ಜಾಗ ಇಲ್ಲ ಅಂತಾರೆ. ಎಲ್ಲರೂ ಮೇಕಪ್ ಮಾಡ್ಕೊಂಡು ನಾಟ್ಕ ಮಾಡ್ತಾರೆ ಅಲ್ಲಿ. ಖುಷಿ ಪಡ್ತೀನಿ ನಾನು. ನನ್ನ ತಂದೆ ತಾಯಿ ತಲೆ ಬಗ್ಗಿಸುವ ಕೆಲಸ ನಾನು ಮಾಡಲ್ಲ'' - ಹುಚ್ಚ ವೆಂಕಟ್

English summary
After getting evicted from Bigg Boss Kannada 3, Huccha Venkat has reacted to the media. Read the article to know what Huccha Venkat told about Bigg Boss Kannada 3 reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada