»   » ಎಡಗಾಲಿಟ್ಟು 'ಬಿಗ್ ಬಾಸ್' ಮನೆಗೆ ಅಂದರ್ ಆದ ಹುಚ್ಚ ವೆಂಕಟ್

ಎಡಗಾಲಿಟ್ಟು 'ಬಿಗ್ ಬಾಸ್' ಮನೆಗೆ ಅಂದರ್ ಆದ ಹುಚ್ಚ ವೆಂಕಟ್

Posted By:
Subscribe to Filmibeat Kannada

ಅಂತೂ ಎಲ್ಲರ ಕಾತರಕ್ಕೆ ಬ್ರೇಕ್ ಬಿದ್ದಿದೆ. ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಕಾರ್ಯಕ್ರಮದ ಮೂರನೇ ಆವೃತ್ತಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಿದೆ.

ಎಲ್ಲರ ನಿರೀಕ್ಷೆಯಂತೆ ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ 'ಬಿಗ್ ಬಾಸ್-3'ನಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಏಳನೇ Contestant ಆಗಿ 'ಬಿಗ್ ಬಾಸ್' ವೇದಿಕೆಗೆ ಬಂದ ಹುಚ್ಚ ವೆಂಕಟ್ ತಮ್ಮದೇ ಶೈಲಿಯಲ್ಲಿ ಮಾತಿಗಿಳಿದರು.

ತಮ್ಮ ಫೇವರಿಟ್ ಕಲರ್ 'ನೀಲಿ' ಕೋಟ್ ತೊಟ್ಟು ವೇದಿಕೆಗೆ ಬಂದ ಹುಚ್ಚ ವೆಂಕಟ್, ''ನನ್ ಮಗಂದ್....ಎಲ್ಲಾ ಸೈಲೆಂಟ್ ಆಗಿರ್ಬೇಕ್....ನಾನ್ ಮಾತಾಡ್ಬೇಕಾದ್ರೆ ಎಲ್ಲಾ ಸೈಲೆಂಟ್ ಆಗಿರ್ಬೇಕ್....ಅರ್ಥ ಆಯ್ತಾ...'' ಅಂತ ಆವಾಜ್ ಹಾಕಿದರು. [ಹುಚ್ಚನ ಕಂಡು ಕಿಚ್ಚ ಕೂಡಾ ಸೈಲಂಟ್, ವೆಂಕಟ್ ಟ್ರೆಂಡಿಂಗ್]

'ಬಿಗ್ ಬಾಸ್'ಮನೆಯಲ್ಲಿ ಹುಚ್ಚ ವೆಂಕಟನ ಹುಚ್ಚಾಟ ಇಷ್ಟಕ್ಕೆ ಮುಗೀಲಿಲ್ಲ....ಮುಂದೆ ಓದಿ......

ಎಲ್ಲರೂ 'ಹುಚ್ಚ ವೆಂಕಟ್' ಅಂತಲೇ ಕರೀಬೇಕು.!

'ಬಿಗ್ ಬಾಸ್' ಮನೆಗೆ ಅಂದರ್ ಆಗುತ್ತಲೇ ಎಲ್ಲರಿಗೂ ಹುಚ್ಚ ವೆಂಕಟ್ ಹೇಳಿದಿಷ್ಟು. ''ನನ್ನ ಹೆಸರು ಹುಚ್ಚ ವೆಂಕಟ್. ಎಲ್ಲರೂ ಹುಚ್ಚ ವೆಂಕಟ್ ಅಂತ್ಲೇ ಕರಿಯಬೇಕು.'' ['ಬಿಗ್ ಬಾಸ್' ಮನೆಗೆ ಎಂಟ್ರಿ ಪಡೆದುಕೊಂಡ 15 ಖಿಲಾಡಿಗಳು ಸ್ವಾಮಿ ಇವರು!]

ಇದೇ ಮಾತು ಸುದೀಪ್ ಕಿವಿಗೂ ಬಿತ್ತು.!

''ವೆಂಕಟ್ ಅವ್ರೇ...''ಅಂತ ಸುದೀಪ್ ಮಾತನಾಡುವುದಕ್ಕೆ ಶುರುಮಾಡಿದಾಗಲೂ, 'ಹುಚ್ಚ ವೆಂಕಟ್' ಅದೇ ರಾಗ ಹಾಡಿದರು. ಅದಕ್ಕೆ ಸುದೀಪ್ ನೀಡಿದ ರಿಯಾಕ್ಷನ್ ಹೀಗಿತ್ತು - ''ನೀವು ನೀವಾಗಿರಿ....ನಾವು ನಾವಾಗಿರ್ತೀವಿ..''

ಹೆಣ್ಮಕ್ಕಳಿಗೆ ಹುಚ್ಚ ವೆಂಕಟ್ ವಾರ್ನಿಂಗ್.!

''ಬಿಗ್ ಬಾಸ್' ಮನೆಯಲ್ಲಿ ಯಾರೂ ತುಂಡು ಬಟ್ಟೆ ಧರಿಸುವ ಹಾಗಿಲ್ಲ'' ಅಂತ ಮನೆಯ ಎಲ್ಲಾ ಹೆಣ್ಮಕ್ಕಳಿಗೂ ಹುಚ್ಚ ವೆಂಕಟ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಎಡಗಾಲಿಟ್ಟು ಮನೆ ಪ್ರವೇಶ.!

ಎಲ್ಲರಿಗೂ ಒಂದು ದಾರಿ ಆದ್ರೆ, ಎಡವಟ್ಟನಿಗೆ ಒಂದು ದಾರಿ ಅಂತೆ.! ಹಾಗೇ, ಎಲ್ಲರೂ ಬಲಗಾಲಿಟ್ಟು 'ಬಿಗ್ ಬಾಸ್' ಮನೆ ಒಳಗೆ ಹೋದರೆ, ಹುಚ್ಚ ವೆಂಕಟ್ ಮಾತ್ರ ''ನಾನು ಎಡಗಾಲಿಟ್ಟು ಹೋಗ್ತೀನಿ'' ಅಂತ ಎಡಗಾಲಿಟ್ಟು ಮನೆ ಪ್ರವೇಶ ಮಾಡಿದರು.

ಗಾಬರಿ ಬಿದ್ದ ಶೃತಿ.!

ಮನೆ ಒಳಗೆ ಬಂದಕೂಡಲೆ ಹುಚ್ಚ ವೆಂಕಟ್ ರನ್ನ ನೋಡಿ ನಟಿ ಶೃತಿ ಗಾಬರಿ ಆದರು.

ಕೃತಿಕಾ ಮತ್ತು ಜಯಶ್ರೀಗೆ ಖಡಕ್ ಇನ್ಸ್ಟ್ರಕ್ಷನ್.!

ಸ್ವಲ್ಪ ಎಕ್ಸ್ ಪೋಸ್ ಆಗುವ ಉಡುಗೆ ತೊಟ್ಟಿದ್ದ ಕಿರುತೆರೆ ನಟಿ ಕೃತಿಕಾ ಮತ್ತು ಮಾಡೆಲ್ ಜಯಶ್ರೀಗೆ ಹುಚ್ಚ ವೆಂಕಟ್ ''ಇನ್ಮುಂದೆ ಇಂತಹ ಬಟ್ಟೆಗಳನ್ನ ಧರಿಸಬಾರದು. ಮೈತುಂಬ ಬಟ್ಟೆ ಹಾಕಿಕೊಳ್ಳಬೇಕು'' ಅಂತ ಸುಗ್ರೀವಾಜ್ಞೆ ಹೊರಡಿಸಿದರು.

ಮಾಧುರಿಗೆ 'ಹುಚ್ಚ ವೆಂಕಟ್' ಕಂಡ್ರೆ ಭಯ.!

ಇತರೆ ಸ್ಪರ್ಧಿಗಳಲ್ಲಿ ಯಾರನ್ನ ಕಂಡ್ರೆ ಭಯ ಅಂತ ಕಿಚ್ಚ ಸುದೀಪ್ ಕೇಳಿದಾಗ, ''ಮಿಸ್ಟರ್ ವೆಂಕಟ್' ಅಂದ್ರೆ ಭಯ'' ಅಂತ ನಟಿ ಮಾಧುರಿ ಇಟಗಿ ಹೇಳಿದರು.

'ಹುಚ್ಚ' ನಾನೇ ಎಂದ ಕಿಚ್ಚ.!

2001ನೇ ಇಸವಿಯಲ್ಲೇ 'ಹುಚ್ಚ' ಆದವನು ನಾನು ಅಂತ 'ಹುಚ್ಚ ವೆಂಕಟ್'ಗೆ ಕಿಚ್ಚ ಸುದೀಪ್ ಟಾಂಗ್ ನೀಡಿದರು.

'ಬಿಗ್ ಬಾಸ್' ಮುಖ ತೋರಿಸ್ತಾರಂತೆ ಹುಚ್ಚ ವೆಂಕಟ್.!

'ಬಿಗ್ ಬಾಸ್' ಮನೆಗೆ ಹುಚ್ಚ ವೆಂಕಟ್ ಕಾಲಿಟ್ಟಿರುವುದೇ ಬಿಗ್ ಬಾಸ್ ಯಾರು ಅಂತ ನಾಡಿನ ಜನತೆಗೆ ಮುಖ ತೋರಿಸುವುದಕ್ಕಂತೆ.! ನೋಡೋಣ, ಶೋ ಮುಗಿಯುವ ಹೊತ್ತಿಗೆ ಹುಚ್ಚ ವೆಂಕಟ್ ಯಾರನ್ನ 'ಬಿಗ್ ಬಾಸ್' ಅಂತ ಒಪ್ಪಿಕೊಳ್ಳುತ್ತಾರೆ ಅಂತ.

English summary
YouTube Star Huccha Venkat was the show stopper in Bigg Boss Kannada 3 premiere show for his mad acts. Read to know what all Huccha Venkat did in the premiere show of Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada