For Quick Alerts
  ALLOW NOTIFICATIONS  
  For Daily Alerts

  ಸ್ಮಶಾನದಲ್ಲಿ ಹುಚ್ಚ ವೆಂಕಟ್ ಹೊಸ ಸಿನಿಮಾ ಮುಹೂರ್ತ.!

  By Harshitha
  |

  ಹುಚ್ಚ ವೆಂಕಟ್ ಅಂದ್ರೇನೆ ಹಾಗೆ...ಅವರೇ ಬೇರೆ, ಅವರ ಸ್ಟೈಲೇ ಬೇರೆ...ಸದಾ ನೀಲಿ ಬಟ್ಟೆ ತೊಡುವುದರಿಂದ 'ಬ್ಲೂ ಸ್ಟಾರ್' ಅಂತ ಫೇಮಸ್ ಆಗಿರುವ ಹುಚ್ಚ ವೆಂಕಟ್ ಹೊಸ ಸಿನಿಮಾ ಮಾಡೋಕೆ ಸಿದ್ಧತೆ ನಡೆಸುತ್ತಿದ್ದಾರೆ.

  'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹೊರ ಬಂದ ಕೂಡಲೆ, ಅವರ ನೂತನ ಚಿತ್ರದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಲಿದೆ.

  ಸಾಮಾನ್ಯವಾಗಿ ಚಿತ್ರದ ಮುಹೂರ್ತ ಸಮಾರಂಭ ಅಂದ್ರೆ, ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ, ಇಲ್ಲಾಂದ್ರೆ ಯಾವುದಾದರೂ ದೇವಸ್ಥಾನದಲ್ಲಿ ನಡೆಯುವುದು ವಾಡಿಕೆ. ಆದ್ರೆ, ಮುಹೂರ್ತ ಸಮಾರಂಭಕ್ಕೆ ಹುಚ್ಚ ವೆಂಕಟ್ ಫಿಕ್ಸ್ ಮಾಡಿರುವ ಜಾಗ ಯಾವ್ದು ಗೊತ್ತಾ? ಸ್ಮಶಾನ.!

  ಅಚ್ಚರಿ ಆದರೂ ಇದೇ ಸತ್ಯ. ತಮ್ಮ ಹೊಸ ಸಿನಿಮಾ ಮುಹೂರ್ತವನ್ನ ಹುಚ್ಚ ವೆಂಕಟ್ ಸ್ಮಶಾನದಲ್ಲಿ ನೆರವೇರಿಸುತ್ತಾರಂತೆ. ಹಾಗಂತ ಸ್ವತಃ ಹುಚ್ಚ ವೆಂಕಟ್ 'ಬಿಗ್ ಬಾಸ್' ಮನೆಯಲ್ಲಿ ಹೇಳಿದ್ದಾರೆ. [ಪೊರ್ಕಿ ಹುಚ್ಚ ವೆಂಕ್ಟನ ಕಾವೇರಿ... ಐ ಮಿಸ್ ಹರ್ ಸಾಂಗ್]

  ''ನಾನು ಇಲ್ಲಿಂದ ಆಚೆ ಬಂದ ಕೂಡಲೆ, ಸ್ಮಶಾನದಲ್ಲಿ ಸಿನಿಮಾ ಮುಹೂರ್ತ ಮಾಡಿ, ಸಾಂಗ್ ಶೂಟ್ ಮಾಡ್ತೀನಿ'' ಅಂತ ಹುಚ್ಚ ವೆಂಕಟ್ ಹೇಳಿದ್ದಾರೆ.

  ಸ್ಮಶಾನ ಅಂದಕೂಡಲೆ, ಹಾರರ್ ಸಿನಿಮಾ ಇರಬಹುದಾ ಅಂತ ಲೆಕ್ಕ ಹಾಕ್ಬೇಡಿ. ಇದು ರೌಡಿಸಂ ಸಿನಿಮಾ. ಚಿತ್ರದಲ್ಲಿ ಹೀರೋಯಿನ್ ಯಾರು ಅನ್ನೋದೇ 'ಸಸ್ಪೆನ್ಸ್' ಅಂತಾರೆ ಹುಚ್ಚ ವೆಂಕಟ್.

  English summary
  YouTube Star Huccha Venkat has revealed that his new movie muhoortha will be held in Graveyard. The movie launch will happen as soon as he gets out of Bigg Boss house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X