»   » ಯೂಟ್ಯೂಬ್ ನಲ್ಲೇ ಸಿನಿಮಾ ರಿಲೀಸ್ ಮಾಡ್ತಾರಂತೆ ಹುಚ್ಚ ವೆಂಕಟ್.!

ಯೂಟ್ಯೂಬ್ ನಲ್ಲೇ ಸಿನಿಮಾ ರಿಲೀಸ್ ಮಾಡ್ತಾರಂತೆ ಹುಚ್ಚ ವೆಂಕಟ್.!

Posted By:
Subscribe to Filmibeat Kannada

ಪಾಯಿಂಟ್ ಗೆ ಬರುವ ಮುಂಚೆ ಕೊಂಚ ನಿಮ್ಮ ಮೈಂಡ್ ನ ರಿವೈಂಡ್ ಮಾಡಿಕೊಳ್ಳಿ....

ಹುಚ್ಚ ವೆಂಕಟ್ ನಿರ್ದೇಶನದ, ನಿರ್ಮಾಣದ, ನಟನೆಯ 'ಹುಚ್ಚ ವೆಂಕಟ್' ಸಿನಿಮಾ ರಿಲೀಸ್ ಆದಾಗ ಥಿಯೇಟರ್ ಕಡೆ ಯಾರೂ ಮುಖ ಮಾಡ್ಲಿಲ್ಲ. ಇದರಿಂದ ರೊಚ್ಚಗೆದ್ದ ಹುಚ್ಚ ವೆಂಕಟ್ ಖಾಸಗಿ ಸುದ್ದಿ ವಾಹಿನಿ ಮುಂದೆ ತಮ್ಮ ಆಕ್ರೋಶವನ್ನ ಹೊರಹಾಕಿದ್ದರು.

ಯೂಟ್ಯೂಬ್ ನಲ್ಲಿ ಈ ಕ್ಲಿಪ್ ಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ತು. ಇಂತಹ ಹತ್ತು ಹಲವು ವಿಡಿಯೋಗಳನ್ನ ಹುಚ್ಚ ವೆಂಕಟ್ ಯೂಟ್ಯೂಬ್ ನಲ್ಲೇ ರಿಲೀಸ್ ಮಾಡಿದರು. ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗ್ಬೇಕಿದ್ದ ಹುಚ್ಚ ವೆಂಕಟ್ ಯೂಟ್ಯೂಬ್ ನಲ್ಲಿ ಜನಪ್ರಿಯರಾದರು. [ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?]

huccha-venkat

ಇದೇ ಕಾರಣಕ್ಕೆ, ಅವರ ಮುಂದಿನ ಚಿತ್ರವನ್ನ ಯೂಟ್ಯೂಬ್ ನಲ್ಲೇ ರಿಲೀಸ್ ಮಾಡ್ತಾರಂತೆ ಹುಚ್ಚ ವೆಂಕಟ್.! ''ನಾನ್ಯಾರ್ ಗೊತ್ತಾ? ಹುಚ್ಚ ವೆಂಕಟ್. ನನ್ ವಿಡಿಯೋ ನೋಡಿದ್ದೀರಾ ಯೂಟ್ಯೂಬ್ ನಲ್ಲಿ?'' ಅಂತ ಇತರರೊಂದಿಗೆ ಪರಿಚಯ ಮಾಡಿಕೊಳ್ಳುವ ಹುಚ್ಚ ವೆಂಕಟ್, ''ಯೂಟ್ಯೂಬ್ ನಲ್ಲಿ ನನಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ವರ್ಲ್ಡ್ ವೈಡ್ ಫಾಲೋವರ್ಸ್ ಇದ್ದಾರೆ. ಎಲ್ಲರಿಗೂ ರೀಚ್ ಆಗ್ಲಿ ಅಂತ ನನ್ನ ಮುಂದಿನ ಸಿನಿಮಾನ ನಾನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡ್ತೀನಿ'' ಅಂತ 'ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಹೇಳಿದ್ದಾರೆ. [ಸ್ಮಶಾನದಲ್ಲಿ ಹುಚ್ಚ ವೆಂಕಟ್ ಹೊಸ ಸಿನಿಮಾ ಮುಹೂರ್ತ.!]

ಅಬ್ಬಬ್ಬಾ....ಇಂತಹ ಐಡಿಯಾ ಹೊಳಿಯೋದು ಬರೀ ಹುಚ್ಚ ವೆಂಕಟ್ ಗೆ ಮಾತ್ರ ಬಿಡಿ.!

English summary
YouTube Star Huccha Venkat has revealed that he will release his upcoming film in YouTube.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada