»   » ನಾನು ಯಾವತ್ತಿದ್ರೂ ರಾಜನೇ, ಎಂದ ಹುಚ್ಚ ವೆಂಕಟ್!

ನಾನು ಯಾವತ್ತಿದ್ರೂ ರಾಜನೇ, ಎಂದ ಹುಚ್ಚ ವೆಂಕಟ್!

Posted By:
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ ಅರಸ-ಗುಲಾಮ ಟಾಸ್ಕ್ ನಲ್ಲಿ, ಗುಲಾಮನಾದ ಹುಚ್ಚ ವೆಂಕಟ್ ತನ್ನ ಹಠ ಬಿಡಲಿಲ್ಲ. ಅಲ್ಲದೆ ಬಿಗ್ ಬಾಸ್ ಮನೆಯಲ್ಲಿ ರಾಜನಾಗಿ ಮೆರೆಯುತ್ತಿದ್ದ ಹುಚ್ಚ ವೆಂಕಟ್ ಯಾರ ಆದೇಶಕ್ಕೂ ಡೋಂಟ್ ಕೇರ್ ಎನ್ನದೆ ಹಠ ಸಾಧಿಸಿದರು.

ಟಾಸ್ಕ್ ಮಾಡಲು ಯಾರು ಎಷ್ಟೇ ಕರೆದರೂ, ಬಾರದ ಹುಚ್ಚ ವೆಂಕಟ್ ಗೆ ರೆಹಮಾನ್ ಮತ್ತೆ ಆವಾಜ್ ಹಾಕಿದರು, ನೀವು ಮಾತಾಡೋದೆಲ್ಲಾ, ಸುಳ್ಳು, ಎಲ್ಲಾ ಪೊಳ್ಳು, ನಿಮ್ಮ ಕೈಯಲ್ಲಿ ಏನೂ ಮಾಡಕ್ಕಾಗಲ್ಲ, ಕೇವಲ ಒಂದು ಟಾಸ್ಕ್ ಮಾಡಕ್ಕಾಗಲ್ಲ, ಇನ್ನು ನೀವೇನು ಮಾಡ್ತೀರಾ, ಭಾರಿ ಕೊಚ್ಚಿಕೊಳ್ತಾ ಇದ್ರಿ, ಅದು ಮಾಡ್ತೀನಿ, ಇದು ಮಾಡ್ತೀನಿ ಅಂತ, ಈಗೇನು ಮಾಡಕ್ಕಾಗಲ್ವಾ ಎಂದು ರೆಹಮಾನ್ ಹುಚ್ಚ ವೆಂಕಟ್ ಅವರನ್ನು ಇನ್ನೂ ಕೆರಳಿಸಿದರು.[ನನ್ಮಗಂದ್, ಸೇವಕ ಆಗಲ್ಲ ಅಂದ ವೆಂಕಟ್‌ಗೆ ಫುಲ್ ಆವಾಜ್!]

Huccha Venkat shows his true color, not true character

ಇದಕ್ಕೆ ವೆಂಕಟ್ ಅವರು ನಾನು ಚಪ್ಪಲಿ ಮುಟ್ಟಲ್ಲ, ಕಾಲು ಒತ್ತಲ್ಲ, ಇದಕ್ಕೆ ಒಪ್ಪಿದರೆ ನಾನು ಟಾಸ್ಕ್ ಮಾಡ್ತೀನಿ ಎಂದಾಗ, ಉಳಿದವರು ಅದು ಹೇಗೋ ಒಪ್ಪಿಸಿ ಕರೆತಂದರು. ಆದರೆ ರೆಹಮಾನ್ ಮತ್ತೆ ಉಲ್ಟಾ ಹೊಡೆದ ಕಾರಣ ವೆಂಕಟ್ ಮತ್ತೆ ಹಿಂದೆ ಸರಿದರು. ಜೊತೆಗೆ ಎಲ್ಲರ ಚುಚ್ಚು ಮಾತುಗಳಿಂದ ಬೇಸರಗೊಂಡ ಹುಚ್ಚ ವೆಂಕಟ್ ಕ್ಯಾಮರ ಮುಂದೆ ನಿಂತು ಬಿಗ್ ಬಾಸ್ ಜೊತೆ ತಮ್ಮ ಅಳಲು ತೋಡಿಕೊಂಡರು.[ಬಿಗ್ ಬಾಸ್ ಮನೆಯಲ್ಲಿ ವೆಂಕಟ್ ದಬ್ಬಾಳಿಕೆ, ಕಣ್ಣೀರಿಟ್ಟ ರೆಹಮಾನ್!]

'ರೆಹಮಾನ್ ತುಂಬಾ ಮಾತಾಡ್ತಾ ಇದ್ದಾನೆ. ನಾನು ಇನ್ನು ಮಾತಾಡಲ್ಲ, ನಾನಿನ್ನು ಟಾಸ್ಕ್ ಮಾಡೋದೇ ಇಲ್ಲ. ಜನರು ಅಥವಾ ನೀವು ನನ್ನನ್ನು ಡೈರೆಕ್ಟ್ ನಾಮಿನೇಟ್ ಮಾಡಿ. ನಾನಿನ್ನು ಇಲ್ಲಿ ಇರಲ್ಲ, ಟಾಸ್ಕ್ ಸಹ ಮಾಡಲ್ಲ, ಈ ವಾರನೇ ನನ್ನನ್ನು ಮನೆಯಿಂದ ಆಚೆ ಕಳಿಸಿ ಎಂದು ಬಿಗ್ ಬಾಸ್ ಗೆ ಕ್ಯಾಮರ ಮೂಲಕ ಹೇಳಿ ವೆಂಕಟ್ ಅವರು ಪಟ್ಟು ಹಿಡಿದು ಕುಳಿತರು.

ಒಟ್ನಲ್ಲಿ ಹುಚ್ಚ ವೆಂಕಟ್ ಅವರನ್ನು ಪುಸಲಾಯಿಸುವಲ್ಲಿ ಕೊನೆಗೂ ಯಶಸ್ವಿಯಾಗದ, ಮನೆಯವರು ಡೈಲಾಗ್ ಬಾಷಾ ನನ್ನು ಅವರಷ್ಟಕ್ಕೆ ಬಿಟ್ಟುಬಿಟ್ಟರು.

English summary
Kind and slave task in Bigg Boss Kannada 3 has put every contestant to show their true character. But, few people like Huccha Venkat have showing their true color, in stead of true character. Venkat did not accept to become slave, because he thinks he is king. The reality show is being aired on Colors Kannada TV channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada