Just In
Don't Miss!
- Automobiles
ಕೈಗೆಟುಕುವ ದರದ ಕ್ವಿಡ್ ಕಾರಿನ ಟಿವಿಸಿ ಬಿಡುಗಡೆಗೊಳಿಸಿದ ರೆನಾಲ್ಟ್
- Education
IBPS PO/MT Mains Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- News
ಬೈಕ್ ಹತ್ತುವ ಮುನ್ನ ಈ ಭಯಾನಕ ಅಪಘಾತ ದೃಶ್ಯ ನೋಡಿ !
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ಗೆ ಜೆಮ್ಷೆಡ್ಪುರ ಎಫ್ಸಿ ಸವಾಲು: Live ಸ್ಕೋರ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 27ರ ಚಿನ್ನ, ಬೆಳ್ಳಿ ದರ
- Lifestyle
ಲಸಿಕೆ ಸಿಕ್ಕಿದರೂ 2021ರಲ್ಲಿ ಕೊರೊನಾವೈರಸ್ ಸಂಪೂರ್ಣ ನಾಶವಾಗಲ್ಲ:WHO ಎಚ್ಚರಿಕೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಪ್ರಥಮ್ ನನ್ನ ಎಕ್ಕಡ': ಮತ್ತೆ ರೊಚ್ಚಿಗೆದ್ದ ಹುಚ್ಚ ವೆಂಕಟ್
ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ಪ್ರಥಮ್ ಮೇಲೆ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಹಲ್ಲೆ ಮಾಡಿದ್ದು, ಎಲ್ಲರಿಗೂ ಗೊತ್ತೆ ಇದೆ. ಅದಾದ ನಂತರ ಕಿಚ್ಚ ಸುದೀಪ್, ವೆಂಕಟ್ ಮಾಡಿದ ಹಲ್ಲೆ ಖಂಡಿಸಿ ಬಿಗ್ ಬಾಸ್ ಕಾರ್ಯಕ್ರಮವನ್ನ ನಿರೂಪಣೆ ಮಾಡಲ್ಲ ಅಂತ ಘಟನೆಗೆ ಬೇಸರ ವ್ಯಕ್ತಪಡಿಸಿದ್ದರು.
ಇತ್ತ ಸುದೀಪ್ ಅವರ ನಿರ್ಧಾರವನ್ನ ಗಮನಿಸಿದ ಹುಚ್ಚ ವೆಂಕಟ್, ಬಿಗ್ ಬಾಸ್ ಹಾಗೂ ಸುದೀಪ್ ಅವರಿಗೆ ಕ್ಷಮಿಯಾಚಿಸಿದರು. ಪ್ರಥಮ್ ಮೇಲೆ ಹಲ್ಲೆ ಮಾಡಿದ್ದು ತಪ್ಪು, ನೀವು ಬಿಗ್ ಬಾಸ್ ಕಾರ್ಯಕ್ರಮವನ್ನ ನಡೆಸಿಕೊಡಬೇಕು ಎಂದು ವಿಡಿಯೋ ಬೈಟ್ ಕೂಡ ನೀಡಿದ್ದರು. ಅಮೇಲೆ, ಸುದೀಪ್ ಪ್ರೋಗ್ರಾಮ್ ನ ನಿರೂಪಣೆ ಮಾಡಿದ್ದು ಕಳೆದ ವಾರ ಕಲರ್ಸ್ ಕನ್ನಡ ಕಾರ್ಯಕ್ರಮದಲ್ಲಿ ನೋಡಿದ್ದೀರಿ.['ಬಿಗ್' ಅವಾಂತರ: 'ಒಳ್ಳೆ ಹುಡುಗ' ಪ್ರಥಮ್ ಗೆ ಪಂಚ್ ಕೊಟ್ಟ ಹುಚ್ಚ ವೆಂಕಟ್.!]
ಇನ್ನೂ ಇದೆಲ್ಲ ಬೆಳವಣಿಗೆ ಆದ ಮೇಲೆ ಯ್ಯೂಟ್ಯೂಬ್ ಸ್ಟಾರ್ ವೆಂಕಟ್ ಈ ಎಲ್ಲ ಘಟನೆಗಳ ಬಗ್ಗೆ ಸ್ವಷ್ಟಿಕರಣ ನೀಡಲು ಪ್ರೆಸ್ ಮೀಟ್ ಮಾಡಿದರು. ಈ ವೇಳೆ ಫಿಲ್ಮಿ ಬೀಟ್ ಜೊತೆ ಮಾತನಾಡಿದ ವೆಂಕಟ್, ಪ್ರಥಮ್ ಮೇಲೆ ವೆಂಕಟ್ ಹಲ್ಲೆ ಮಾಡಿದ್ದು ಯಾಕೆ? ಪ್ರಥಮ್ ಬಗ್ಗೆ ಏನು ಗೊತ್ತು ಅಂತ ನಾವು ಕೇಳಿದ ಪ್ರಶ್ನೆಗಳಿಗೆ ಗರಂ ಆಗಿ ಉತ್ತರ ಕೊಟ್ಟರು. ಮುಂದೆ ಓದಿ....

ಪ್ರಚೋದನೆ ಮಾಡಿದ್ದಕ್ಕೆ ಹೊಡೆದೆ
''ನಾನು ಯಾರು ಮೇಲೆ ಕೈ ಎತ್ತಲ್ಲ. ಹಾಗೇ ನನ್ನ ಪ್ರಚೋದನೆ ಮಾಡಿದರೇ ಯಾರನ್ನ ಬಿಡಲ್ಲ. ಕೆಲವರು ಮಾತಲ್ಲಿ ಜಗಳ ಮಾಡ್ತಾರೆ. ನಾನು ಕೈಯಲ್ಲಿ ಜಗಳ ಮಾಡ್ತಿನಿ. ಅವನು ಪ್ರಚೋದನೆ ಮಾಡಿದ, ಅದಕ್ಕೆ ಹೊಡೆದೆ''.-ಹುಚ್ಚ ವೆಂಕಟ್[ಸುದೀಪ್ ತಪ್ಪದೇ ಕೇಳಿಸಿಕೊಳ್ಳಿ... ಹುಚ್ಚ ವೆಂಕಟ್ 'ತಪ್ಪು ಮಾಡಿಲ್ಲ'ವಂತೆ.! ]

ಪ್ರಥಮ್ ಏನೂ ಒಳ್ಳೆ ಹುಡುಗ ಅಲ್ಲ
''ಕನ್ನಡ ಬಾವುಟಗೆ ಅವಮಾನ ಮಾಡಿದ್ದ, ಹೆಣ್ಣು ಮಕ್ಕಳಿಗೆ ತೊಂದರೆ ಕೊಟ್ಟಿದ್ದ, ಏಕ ವಚನದಲ್ಲಿ ಮಾತಾಡಿದ್ದ, ಅದು ನನಗೆ ನೋವು ಉಂಟಾಗುತ್ತೆ. ಒಳ್ಳೆಯವನ್ನ ಹೊಡೆದ್ರೆ ತಪ್ಪು, ಒಬ್ಬ ಕೆಟ್ಟವನ್ನ ಹೊಡೆದ್ರೆ ತಪ್ಪಲ್ಲ. ಕೆಟ್ಟವನ್ನ ಹೊಡೆದ್ರೆ, 10 ಜನ ಒಳ್ಳೆಯವರು ಚೆನ್ನಾಗಿರ್ತಾರೆ''.-ಹುಚ್ಚ ವೆಂಕಟ್[ಹುಚ್ಚ ವೆಂಕಟ್ ಕ್ಷಮೆ ಕೇಳಿದರು, ಕಿಚ್ಚ ಸುದೀಪ್ ವಾಪಸ್ ಬಂದರು.!]

ಪ್ರಥಮ್ 'ನನ್ನ ಎಕ್ಕಡ'
''ಪ್ರಥಮ್ ನನ್ನ ಎಕ್ಕಡ. ಅವನು ಇರುವೆ. ನನ್ನ ರೇಂಜ್ ಏನು? ಅವನ ರೇಂಜ್ ಏನು? ನಾನು ವರ್ಲ್ಡ್ ಫೇಮಸ್, ಅವನು ಅವನ ಏರಿಯಾನೇ ಫೇಮಸ್ ಅಲ್ಲ. ಈಗ ಬಿಗ್ ಬಾಸ್ ಗೆ ಬಂದು ಏನಾಗ್ತಾನೆ''.-ಹುಚ್ಚ ವೆಂಕಟ್[ಹುಚ್ಚ ವೆಂಕಟ್ 'ಕಿರಿಕ್': ಕೆರಳಿದ 'ಹೆಬ್ಬುಲಿ' ಕಿಚ್ಚ ಸುದೀಪ್.!]

ಜನರು ವಿಚಿತ್ರ ಪ್ರಾಣಿಗಳನ್ನ ಇಷ್ಟ ಪಡಲ್ಲ
''ಪ್ರಥಮ್ ಜನರಿಗೆ ಇಷ್ಟ ಆಗಿದ್ದಾನೆ ಅಂದ್ರೆ ನಾನು ನಂಬಲ್ಲ. ಅವನು ಫ್ರೆಂಡ್ಸ್ ವೋಟ್ ಮಾಡ್ತಿರಬೇಕು, ಅವರ ಮನೆಯವರು ವೋಟ್ ಮಾಡ್ತಿರಬೇಕು ಅಥವಾ ಕಲರ್ಸ್ ಕನ್ನಡ ಚಾನಲ್ ಗೆ ಅವನು ಇಷ್ಟ ಆಗಿರಬೇಕು. ಜನರು ಯಾವತ್ತು ವಿಚಿತ್ರ ಪ್ರಾಣಿಗಳನ್ನ ಇಷ್ಟ ಪಡಲ್ಲ''.-ಹುಚ್ಚ ವೆಂಕಟ್

ಪ್ರಥಮ್ ಬಿಗ್ ಬಾಸ್ ಗೆಲ್ಲಲ್ಲ
''ಪ್ರಥಮ್ ಬಿಗ್ ಬಾಸ್ ಅಂತೂ ಗೆಲ್ಲಲ್ಲ. ಅಲ್ಲಿ ಗೆಲ್ಲೋದು ರೇಖಾ. ಅವರು ನೈಜವಾಗಿ ಆಟವಾಡ್ತಿದ್ದಾರೆ. ಅವರೇ ಗೆಲ್ಲಬೇಕು''.-ಹುಚ್ಚ ವೆಂಕಟ್