»   » 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಅಶ್ಲೀಲ ಆಡಿಷನ್: ರೊಚ್ಚಿಗೆದ್ದ ಯುವತಿಯರು!

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಅಶ್ಲೀಲ ಆಡಿಷನ್: ರೊಚ್ಚಿಗೆದ್ದ ಯುವತಿಯರು!

Posted By:
Subscribe to Filmibeat Kannada
'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಅಶ್ಲೀಲ ಆಡಿಷನ್: ರೊಚ್ಚಿಗೆದ್ದ ಯುವತಿಯರು!

ಕಿರುತೆರೆಯಲ್ಲಿ ಭಾರಿ ಜನಪ್ರಿಯತೆ ಗಳಿಸಿದ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಕಾರ್ಯಕ್ರಮ ಇದೀಗ ವಿವಾದದ ಕೇಂದ್ರಬಿಂದು ಆಗಿದೆ. ಇಂದು ನಡೆಯುತ್ತಿದ್ದ ಆಡಿಷನ್ ನಲ್ಲಿ ಯುವತಿಯರಿಗೆ ಅಶ್ಲೀಲ ಪ್ರಶ್ನೆಗಳನ್ನು ಕೇಳಲಾಗಿದ್ಯಂತೆ. ಇದರಿಂದ ಆಡಿಷನ್ ನಲ್ಲಿ ಭಾಗವಹಿಸಿದ್ದ ಯುವತಿಯರು ರೊಚ್ಚಿಗೆದ್ದಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಕಾರ್ಯಕ್ರಮದ ನಾಲ್ಕನೇ ಆವೃತ್ತಿಗಾಗಿ ಇವತ್ತು ಮಲ್ಲೇಶ್ವರಂ 18ನೇ ಅಡ್ಡ ರಸ್ತೆಯಲ್ಲಿ ಇರುವ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ವಿದ್ಯಾಲಯ (ಸ್ವಾಯತ್ತ) ಕಾಲೇಜಿನಲ್ಲಿ ಆಡಿಷನ್ ನಡೆಸಲಾಗುತ್ತಿತ್ತು. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಇದೇ ಸ್ಥಳ ದೊಡ್ಡ ರಾದ್ಧಾಂತಕ್ಕೆ ಸಾಕ್ಷಿ ಆಯ್ತು.

ಅಸಲಿಗೆ, ಆಡಿಷನ್ ನಲ್ಲಿ ನಡೆದದ್ದೇನು ಎಂಬುದರ ಸಂಪೂರ್ಣ ವಿವರ ಇಲ್ಲಿದೆ, ಓದಿರಿ...

ಆಯೋಜಕರಿಂದ ಅಶ್ಲೀಲ ನಡವಳಿಕೆ

ಆಡಿಷನ್ ನಲ್ಲಿ ಭಾಗವಹಿಸಿದ ಯುವತಿಯರಿಗೆ ರಿಯಾಲಿಟಿ ಶೋ ಆಯೋಜಕರು ಅಶ್ಲೀಲ ಹಾಗೂ ಕೀಳು ಮಟ್ಟದ ಪ್ರಶ್ನೆಗಳನ್ನು ಕೇಳಿದ್ದಾರಂತೆ.

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಆಡಿಷನ್ ನಲ್ಲಿ ಭಾಗವಹಿಸಲು ಮೆಗಾ ಅವಕಾಶ

ನೊಂದ ಯುವತಿ ಹೇಳುವುದೇನು.?

''ನಾವು ಯಾವ ತರಹದ ಡ್ರೆಸ್ ಹಾಕೊಂಡ್ ಬಂದಿದ್ದೇವೆ, ಯಾವ ತರಹ ಕಾಣ್ತೇವೆ ಅಂತೆಲ್ಲ ಆಯೋಜಕರು ಟಾಪ್ ಟು ಬಾಟಂ ನೋಡ್ತಾರೆ. ನೋಡೋಕೆ ಚೆನ್ನಾಗಿ ಕಾಣಲಿಲ್ಲ ಅಂದ್ರೆ ಡೈರೆಕ್ಟ್ ರಿಜೆಕ್ಟ್ ಮಾಡ್ತಾರೆ. ನನಗೆ ಮೂರು ಕಿಸ್ ಕೊಡು ನಿನ್ನ ಡೈರೆಕ್ಟ್ ಆಗಿ ಸೆಲೆಕ್ಟ್ ಮಾಡ್ತೀವಿ ಅಂತೆಲ್ಲ ಹೇಳ್ತಾರೆ. ಇದು ಆಡಿಷನ್ ನಾ.?'' ಅಂತ ನೊಂದ ಯುವತಿ ಮಾಧ್ಯಮಗಳ ಮುಂದೆ ನೋವು ತೋಡಿಕೊಂಡಿದ್ದಾಳೆ.

ಕಾಲೇಜು ಮುಂದೆ ರಾದ್ಧಾಂತ

ಆಡಿಷನ್ ನಲ್ಲಿ ಭಾಗವಹಿಸಿದ ಮೂರ್ನಾಲ್ಕು ಯುವತಿಯರಿಗೆ ''ನನ್ನ ಎದುರಿಗೆ ಬಟ್ಟೆ ಬದಲಿಸು, ಕಿಸ್ ಕೊಡು'' ಅಂತೆಲ್ಲ ಆಯೋಜಕರು ಕೇಳಿದ್ದಾರಂತೆ. ಹೀಗಾಗಿ, ಆಡಿಷನ್ ನಲ್ಲಿ ಭಾಗವಹಿಸಿ ಹೊರಬಂದ್ಮೇಲೆ ಯುವತಿಯರು ರೊಚ್ಚಿಗೆದ್ದಿದ್ದಾರೆ.

ಪ್ರತ್ಯೇಕ ಸಾಲು

''ಜೀನ್ಸ್ ಪ್ಯಾಂಟ್ ಧರಿಸಿ ಬಂದ ಹುಡುಗಿಯರನ್ನ ಪ್ರತ್ಯೇಕವಾಗಿ, ಫ್ರಾಕ್ ಧರಿಸಿ ಬಂದ ಹುಡುಗಿಯರನ್ನ ಪ್ರತ್ಯೇಕವಾಗಿ ಹಾಗೂ ಶಾರ್ಟ್ಸ್ ಧರಿಸಿ ಬಂದ ಹುಡುಗಿಯರನ್ನ ಪ್ರತ್ಯೇಕ ಸಾಲಿನಲ್ಲಿ ನಿಲ್ಲಿಸಲಾಗಿತ್ತಂತೆ. ಶಾರ್ಟ್ಸ್ ಮತ್ತು ಫ್ರಾಕ್ ಧರಿಸಿದ್ದವರನ್ನ ಮಾತ್ರ ಸೆಲೆಕ್ಟ್ ಮಾಡಿದ್ದಾರೆ'' ಅಂತ ಹಲವು ಹುಡುಗಿಯರು ಆರೋಪಿಸಿದ್ದಾರೆ.

ಇಂತಹ ಪ್ರಶ್ನೆ ಯಾಕೆ.?

''ಬಾಯ್ ಫ್ರೆಂಡ್ ಇದ್ದಾರಾ.? ಸೆಕ್ಸ್ ಬಗ್ಗೆ ಗೊತ್ತಿದ್ಯಾ.?'' ಅಂತೆಲ್ಲ ಪ್ರಶ್ನೆಗಳನ್ನ ಕೇಳಿದ್ದಕ್ಕೆ ಅನೇಕ ಹುಡುಗಿಯರು ಕುಪಿತಗೊಂಡಿದ್ದಾರೆ.

ಆಡಿಷನ್ ನಿಂತಿದೆ.!

ಆಡಿಷನ್ ನಡೆಯುತ್ತಿದ್ದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾದ್ದರಿಂದ ಸದ್ಯ ಆಡಿಷನ್ ಸ್ಥಗಿತಗೊಳಿಸಲಾಗಿದೆ.

ವಾಹಿನಿಯವರು ಏನಂತಾರೆ.?

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ಆಯೋಜಕರ ಬಗ್ಗೆ ಇಷ್ಟೆಲ್ಲ ಆರೋಪಗಳು ಕೇಳಿಬಂದರೂ, ಇದರ ಬಗ್ಗೆ ವಾಹಿನಿಯವರಾಗಲಿ, ಆಯೋಜಕರಾಗಲಿ ಸ್ಪಷ್ಟನೆ ನೀಡಿಲ್ಲ.

English summary
Suvarna Channel's Pyate Hudgeer Halli Lifu-4 reality show lands up in a controversy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada