twitter
    For Quick Alerts
    ALLOW NOTIFICATIONS  
    For Daily Alerts

    ನಿರ್ಮಾಪಕರು, ವಿತರಕರಿಗೆ ಹಣದ ಹೊಳೆ ಹರಿಸಿದ 'ಕಾಂತಾರ': ಟಿವಿ ರೈಟ್ಸ್ ಕೊಂಡುಕೊಂಡವರಿಗೆ ನಷ್ಟ ಕಾದಿದ್ಯಾ?

    |

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಸಿನಿಮಾ 50 ದಿನಗಳ ಹೊಸ್ತಿಲಲ್ಲಿ ಇದೆ. ಬಾಕ್ಸಾಫೀಸ್‌ನಲ್ಲಿ ನೂರಾರು ಕೋಟಿ ಕೊಳ್ಳೆ ಹೊಡೆದು ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಕಲೆಕ್ಷನ್‌ಗಿಂತ ಹೆಚ್ಚು ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಪ್ರತಿಯೊಬ್ಬರು ಸಿನಿಮಾ ನೋಡಿ ಅದ್ಭುತ ಅನುಭವ ಪಡೆದಿದ್ದಾರೆ. ನಿರ್ಮಾಪಕರು, ವಿತರಕರಿಗೆ ಸಿನಿಮಾ ಭರ್ಜರಿ ಲಾಭ ತಂದುಕೊಟ್ಟಿದೆ. ಮುಂದಿನ ಕಥೆ ಏನು? ಎನ್ನುವ ಚರ್ಚೆ ಶುರುವಾಗಿದೆ.

    ಮುಂದಿನ ವಾರವೇ 'ಕಾಂತಾರ' ಓಟಿಟಿಗೆ ಬರುತ್ತೆ ಎನ್ನಲಾಗುತ್ತಿದೆ. ಮತ್ತೊಂದ್ಕಡೆ ಚಿತ್ರದ ಸ್ಯಾಟಲೈಟ್ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗುತ್ತಿದೆ. ಬರೀ ಕನ್ನಡದಲ್ಲಿ ಮಾತ್ರ ಸಿನಿಮಾ ರಿಲೀಸ್ ಮಾಡೋಣ ಎಂದುಕೊಂಡಿದ್ದ ಹೊಂಬಾಳೆ ಫಿಲ್ಮ್ಸ್‌ಗೆ ಪರಭಾಷೆಗೆ ಡಬ್ ಮಾಡಿದ ಮೇಲೆ ಹೆಚ್ಚು ಲಾಭ ಆದಂತಾಗಿದೆ. ಅಷ್ಟೇ ಅಲ್ಲ ಪರಭಾಷೆಯ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಕೂಡ ಒಳ್ಳೆ ಬ್ಯುಸಿನೆಸ್ ಮಾಡ್ತಿದೆ. ಹಾಗಾಗಿ ನಿರ್ಮಾಪಕರಿಗೆ 'ಕಾಂತಾರ' ಅಕ್ಷಯ ಪಾತ್ರೆಯಂತಾಗಿದೆ. ಹಲವು ಮೂಲಗಳಿಂದ ಭರ್ಜರಿ ವರಮಾನ ಬರ್ತಿದೆ.

    ಥಿಯೇಟರ್‌ಗಳಲ್ಲಿ ಸಿನಿಮಾ ಇನ್ನು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಆದರೂ ಶೀಘ್ರದಲ್ಲೇ ಸಿನಿಮಾ ಡಿಜಿಟಲ್‌ ಫ್ಲಾಟ್‌ ಫಾರ್ಮ್‌, ನಂತರ ಸ್ಮಾಲ್‌ ಸ್ಕ್ರೀನ್‌ಗೆ ಎಂಟ್ರಿ ಬಗ್ಗೆ ಚರ್ಚೆ ನಡೀತಿದೆ. ಥಿಯೇಟರ್‌ಗಳಲ್ಲಿ ನೋಡಿದ ಸಿನಿಮಾವನ್ನು ಜನ ಟಿವಿಯಲ್ಲಿ ನೋಡುತ್ತಾರಾ ಎನ್ನುವ ಅನುಮಾನ ಶುರುವಾಗಿದೆ.

    ಟಿವಿಯಲ್ಲಿ ಒಳ್ಳೆ ರೇಟಿಂಗ್ ಬರುತ್ತಾ?

    ಟಿವಿಯಲ್ಲಿ ಒಳ್ಳೆ ರೇಟಿಂಗ್ ಬರುತ್ತಾ?

    ಸಿನಿಮಾಗಿರೋ ಕ್ರೇಜ್, ಹೈಪ್ ನೋಡಿ ಎಂಟರ್‌ಟೈನ್‌ಮೆಂಟ್ ಚಾನಲ್‌ಗಳು ಭಾರೀ ಮೊತ್ತಕ್ಕೆ ಸ್ಯಾಟಲೈಟ್ ರೈಟ್ಸ್ ಕೊಂಡುಕೊಳ್ಳುತ್ತಾರೆ. 'ಕಾಂತಾರ' ಚಿತ್ರದ ಟಿವಿ ರೈಟ್ಸ್ ಅನ್ನು ಒಂದೊಂದು ಭಾಷೆಯಲ್ಲಿ ಒಂದು ಚಾನಲ್ ಕೊಂಡುಕೊಳ್ಳುತ್ತಿದೆ. ಡಿಮ್ಯಾಂಡ್‌ಗೆ ತಕ್ಕಂತೆ ಭಾರೀ ಮೊತ್ತವನ್ನೇ ತೆತ್ತು ಖರೀದಿಸುತ್ತಿದ್ದಾರೆ. ಆದರೆ ಚಿತ್ರಕ್ಕೆ ಒಳ್ಳೆ ಟಿಆರ್‌ಪಿ ರೇಟಿಂಗ್ ಬರುತ್ತಾ ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ಯಾಕೆಂದರೆ ಟಿವಿಯಲ್ಲಿ ಯಾವುದೇ ಸಿನಿಮಾ ಪ್ರಸಾರ ಆದರೂ ಅದರ ಸೋಲು, ಗೆಲುವು ನಿರ್ಧಾರ ಆಗುವುದು ಈ ರೇಟಿಂಗ್‌ನಿಂದಲೇ.

    'ಕಾಂತಾರ' ಅದ್ಭುತ ರೆಸ್ಪಾನ್ಸ್ ಸಿಗುತ್ತಾ?

    'ಕಾಂತಾರ' ಅದ್ಭುತ ರೆಸ್ಪಾನ್ಸ್ ಸಿಗುತ್ತಾ?

    ಥಿಯೇಟರ್‌ಗಳಲ್ಲಿ ದೊಡ್ಡಮಟ್ಟದಲ್ಲಿ ಸಕ್ಸಸ್ ಕಂಡ ಸಿನಿಮಾಗಳನ್ನು ಜನ ಟಿವಿಯಲ್ಲಿ ನೋಡಲು ಹಿಂದೇಟು ಹಾಕುತ್ತಾರೆ. ಇನ್ನು ಓಟಿಟಿ ಜಮಾನ ನಡೀತಿರುವುದರಿಂದ ಜನ ಥಿಯೇಟರ್‌ ನಂತರ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ನೋಡಿಬಿಡುತ್ತಾರೆ. ಯಾರು ಕೂಡ ಟಿವಿಯಲ್ಲಿ ಬರುವವರೆಗೂ ಕಾಯುವುದಿಲ್ಲ. ಇತ್ತೀಚೆಗೆ ಯಶ್ ನಟನೆಯ KGF- 2 ಸಿನಿಮಾ 1250 ಕೋಟಿ ಕಲೆಕ್ಷನ್ ಮಾಡಿ ಬ್ಲಾಕ್‌ಬಸ್ಟರ್‌ ಹಿಟ್ ಆಗಿತ್ತು. ತಮಿಳಿನ 'ವಿಕ್ರಂ' ಸಿನಿಮಾ 250 ಕೋಟಿ ಬಾಚಿತ್ತು. ಆದರೆ ಎರಡೂ ಸಿನಿಮಾಗಳು ಮೊದಲ ಬಾರಿ ಟಿವಿಯಲ್ಲಿ ಪ್ರೀಮಿಯರ್ ಆದಾಗ ಕಮ್ಮಿ ಟಿಆರ್‌ಪಿ ಬಂದಿತ್ತು. ಬಾಕ್ಸಾಫೀಸ್‌ನಲ್ಲಿ ಸೋಲುಂಡಿದ್ದ ತಮಿಳಿನ 'ಬೀಸ್ಟ್' ಸಿನಿಮಾ ಕೂಡ 'ವಿಕ್ರಂ'ಗಿಂತ ಒಳ್ಳೆ ರೇಟಿಂಗ್ ಪಡೆದುಕೊಂಡಿತ್ತು.

    ಕೋಟ್ಯಂತರ ಜನ 'ಕಾಂತಾರ' ನೋಡಿದ್ದಾರೆ

    ಕೋಟ್ಯಂತರ ಜನ 'ಕಾಂತಾರ' ನೋಡಿದ್ದಾರೆ

    ನಿಜ ಹೇಳಬೇಕು ಅಂದರೆ 'ಕಾಂತಾರ' ಸಿನಿಮಾವನ್ನು ಎಲ್ಲಾ ಭಾಷೆ ಸೇರಿ ಕೋಟ್ಯಂತರ ಜನ ನೋಡಿದ್ದಾರೆ. ಬರೀ ಕರ್ನಾಟಕದಲ್ಲೇ 1 ಕೋಟಿಗೂ ಅಧಿಕ ಟಿಕೆಟ್ ಮಾರಾಟವಾಗಿ ದಾಖಲೆ ಬರೆದಿತ್ತು. ಪದೇ ಪದೇ ಸಿನಿಮಾ ನೋಡಿದವರಿಗೆ ಲೆಕ್ಕವಿಲ್ಲ. ಹಾಗಾಗಿ ಜನ ಜಾಹೀರಾತುಗಳ ನಡುವೆ ಈ ಚಿತ್ರವನ್ನು ಟಿವಿಯಲ್ಲಿ ವೀಕ್ಷಿಸಲು ಹಿಂದೇಟು ಹಾಕುವುದೇ ಹೆಚ್ಚು. ಇದನ್ನು ಮೀರಿ ಸಿನಿಮಾ ಒಳ್ಳೆ ರೇಟಿಂಗ್ ಪಡೆಯುತ್ತಾ ಕಾದು ನೋಡಬೇಕು.

    ನ. 24ಕ್ಕೆ ಓಟಿಟಿಯಲ್ಲಿ 'ಕಾಂತಾರ'

    ನ. 24ಕ್ಕೆ ಓಟಿಟಿಯಲ್ಲಿ 'ಕಾಂತಾರ'

    ಯಾವುದೇ ಸಿನಿಮಾ 48 ದಿನಗಳ ನಂತರ ಓಟಿಟಿಗೆ ಬಂದುಬಿಡುತ್ತೆ. ಕೆಲವೊಮ್ಮೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದರೆ ಓಟಿಟಿ ಸ್ಟ್ರೀಮಿಂಗ್ ಡೇಟ್ ಮುಂದೂಡಲಾಗುತ್ತದೆ. ನವೆಂಬರ್ 24ಕ್ಕೆ ಅಮೇಜಾನ್ ಪ್ರೈಮ್‌ನಲ್ಲಿ 'ಕಾಂತಾರ' ಸಿನಿಮಾ ಪ್ರಸಾರ ಆಗುತ್ತದೆ ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ.

    English summary
    Huge demand for satellite rights of Rishab Shetty Starrer Kantara. Leading channel acquires the telugu, malayalam satellite rights of divine blockbuster Kantara. Know more.
    Thursday, November 17, 2022, 15:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X