»   » 'ಬಿಗ್ ಬಾಸ್' ಸ್ಪರ್ಧಿಗಳ ಆಯ್ಕೆ ವಿಚಾರದಲ್ಲಿ ಸುದೀಪ್ ಮೂಗು ತೂರಿಸಲ್ಲ, ಯಾಕೆ.?

'ಬಿಗ್ ಬಾಸ್' ಸ್ಪರ್ಧಿಗಳ ಆಯ್ಕೆ ವಿಚಾರದಲ್ಲಿ ಸುದೀಪ್ ಮೂಗು ತೂರಿಸಲ್ಲ, ಯಾಕೆ.?

Posted By:
Subscribe to Filmibeat Kannada

''ಸುದೀಪ್ ಮನಸ್ಸು ಮಾಡಿದರೆ, 'ಬಿಗ್ ಬಾಸ್' ಮನೆ ಒಳಗೆ ನಾನು ಹೋಗಬಹುದು. ಸುದೀಪ್ ಮಾತನ್ನ 'ಬಿಗ್ ಬಾಸ್' ತಂಡ ಯಾವುದೇ ಕಾರಣಕ್ಕೂ ತಳ್ಳಿ ಹಾಕಲ್ಲ'' ಎಂಬ ನಂಬಿಕೆ ಅನೇಕರಲ್ಲಿ ಇರಬಹುದು. ಆದ್ರೆ, ಅದೆಲ್ಲವೂ ಸುಳ್ಳು. ಸುದೀಪ್ 'ಬಿಗ್ ಬಾಸ್' ಕಾರ್ಯಕ್ರಮದ ಹೋಸ್ಟ್ ಮಾತ್ರ. ಅವರಿಗೆ ಅವರದ್ದೇ ಆದ ನೀತಿ, ನಿಯಮಗಳಿವೆ. ಅದಕ್ಕೆ ಸೀಮಿತವಾಗಿ ಸುದೀಪ್ ನಡೆದುಕೊಳ್ಳಲೇಬೇಕು.

'ಬಿಗ್ ಬಾಸ್' ಕಾರ್ಯಕ್ರಮದ ಹೋಸ್ಟ್ ಆಗಿದ್ದರೂ, ಸ್ಪರ್ಧಿಗಳ ಆಯ್ಕೆ ವಿಚಾರದಲ್ಲಿ ಕಿಚ್ಚ ಸುದೀಪ್ ಎಂದೂ ಮೂಗು ತೂರಿಸುವುದಿಲ್ಲ. ಯಾಕೆ ಅಂದ್ರೆ, 'ಅದರ ಉಸಾಬರಿ ಬೇಕಾಗಿಲ್ಲ' ಎಂಬ ಮಾತು ಸುದೀಪ್ ಬಾಯಿಂದ ಬರುತ್ತೆ. ಅದಕ್ಕೆ ಕಾರಣವೂ ಇದೆ. ಆ ಕಾರಣವನ್ನ ನಿನ್ನೆ ನಡೆದ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಪತ್ರಿಕಾಗೋಷ್ಟಿಯಲ್ಲಿ ಸುದೀಪ್ ಬಹಿರಂಗ ಪಡಿಸಿದರು. ಮುಂದೆ ಓದಿರಿ....

ಇದೇ ಸತ್ಯ

''ಇಂದು ವೇದಿಕೆ ಮೇಲೆ ಕೂತಿದ್ದೇನೆ. ಆದ್ರೆ, ಈ ಬಾರಿಯ (ಬಿಗ್ ಬಾಸ್ ಕನ್ನಡ-5') ಸ್ಪರ್ಧಿಗಳು ಯಾರು ಅನ್ನೋದು ನನಗೆ ಗೊತ್ತಿಲ್ಲ. ಇದೇ ಸತ್ಯ'' ಎಂದು ಸುದೀಪ್ ಹೇಳಿದರು.

ಯಾರೋ ಮಾಡಿದ ತಪ್ಪಿಗೆ ನನ್ನ ಹೆಸರು ಬಂತು

''ಬಿಗ್ ಬಾಸ್ ಕನ್ನಡ-1' ಯಶಸ್ವಿ ಆದ್ಮೇಲೆ, ಎರಡನೇ ಸೀಸನ್ ಸ್ಪರ್ಧಿಗಳ ಹೆಸರನ್ನ ಚಾನೆಲ್ ನವರೇ ನನಗೆ ಹೇಳಿದ್ದರು. ಬಳಿಕ ಅದು ಲೀಕ್ ಆದ್ಮೇಲೆ, ''ನೀವು ಯಾರಿಗಾದರೂ ಹೇಳಿದ್ದೀರಾ'' ಅಂತ ನನಗೆ ಕೇಳಿದರು. ಬೇರೆ ಯಾರೋ ಮಾಡಿದ ತಪ್ಪಿಗೆ ಅಲ್ಲಿ ನನ್ನ ಹೆಸರು ಬಂತು. ಗೊತ್ತಿದ್ದರೆ, ತಾನೆ ನನ್ನ ಹೆಸರು ಬರುವುದು. ಹೀಗಾಗಿ, ತಿಳಿದುಕೊಳ್ಳುವುದೇ ಬೇಡ ಅಂತ ಹೊರಗೆ ಇದ್ದೇನೆ'' ಅಂತ ನಡೆದ ಘಟನೆಯೊಂದನ್ನ ಸುದೀಪ್ ನೆನಪಿಸಿಕೊಂಡರು.

ನಾನು ಯಾರನ್ನೂ ಸೂಚಿಸುವುದಿಲ್ಲ.!

''ಕಾರ್ಯಕ್ರಮಕ್ಕೆ ನಾನು ಯಾರನ್ನೂ ರೆಕ್ಮೆಂಡ್ ಮಾಡಲ್ಲ. ಸೂಚಿಸುವುದೂ ಇಲ್ಲ. ನನಗೆ ಯಾವುದೇ ಅಧಿಕಾರ ಇಲ್ಲ'' ಅಂತಲೂ ಸುದೀಪ್ ಹೇಳಿದ್ದಾರೆ.

ಅಕ್ಟೋಬರ್ 15 ರಂದು 'ಬಿಗ್ ಬಾಸ್ ಕನ್ನಡ-5' ಓಪನ್ನಿಂಗ್

ಅಂದ್ಹಾಗೆ, ಈ ಬಾರಿ 'ದೊಡ್ಮನೆ'ಯೊಳಗೆ ಯಾರೆಲ್ಲ ಹೋಗುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಅಕ್ಟೋಬರ್ 15 ರಂದು ಸಂಜೆ ಆರು ಗಂಟೆಗೆ ಲಭ್ಯವಾಗಲಿದೆ.

English summary
''I don't recommend anyone for Bigg Boss Reality show'' says Kiccha Sudeep.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X