»   » ನನ್ನ ಬಗ್ಗೆ ಯಾರೇನೇ ಅಂದ್ರೂ 'ಐ ಡೋಂಟ್ ಕೇರ್' ಅಂದ ತಂಗ್ಯವ್ವ

ನನ್ನ ಬಗ್ಗೆ ಯಾರೇನೇ ಅಂದ್ರೂ 'ಐ ಡೋಂಟ್ ಕೇರ್' ಅಂದ ತಂಗ್ಯವ್ವ

Posted By:
Subscribe to Filmibeat Kannada

ಬಿಗ್ ಬಾಸ್ ಮನೆಯಿಂದ ಔಟ್ ಆಗಿರುವ ಗಗನಸಖಿ ನೇಹಾ ಗೌಡ ಅವರು ಸೂಪರ್ ಸಂಡೇ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರ ಜೊತೆ ಬಿಗ್ ಮನೆಯಲ್ಲಿ ತಮಗಾದ ಅನುಭವ ಗಳನ್ನು ಹಂಚಿಕೊಳ್ಳುವುದರ ಜೊತೆಗೆ ಮನೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನದ ಹಲವಾರು ವಿಷಯಗಳನ್ನು ಕಲಿತುಕೊಂಡಿದ್ದಾಗಿ ಮತ್ತು ನನಗೆ ನನ್ನ ಜೀವನದಲ್ಲಿ ಒಂದು ಒಳ್ಳೆಯ ಅನುಭವ ಆಗಿದೆ. ಎಲ್ಲರೊಂದಿಗೆ ಬೆರೆಯುವ ಅವಕಾಶವನ್ನು ಬಿಗ್ ಬಾಸ್ ವೇದಿಕೆ ನನಗೆ ಒದಗಿಸಿ ಕೊಟ್ಟಿದೆ ಎಂದು ನೇಹಾ ಗೌಡ ನುಡಿದರು.[ಬಿಗ್ ಬಾಸ್ ವೇದಿಕೆಯಲ್ಲಿ ಶಿವರಾಜ್-ಸುದೀಪ್ ಅಪೂರ್ವ ಮಿಲನ]

I dont care to the another person, says Neha Gowda

ಹೀಗೆ ಮಾತಾಡ್ತ ಮಾತಾಡ್ತ ಕಿಚ್ಚ ಸುದೀಪ್ ಅವರು ಮನೆಯಲ್ಲಿ ನಟ ಚಂದನ್ ಅವರು ನೇಹಾ ಅವರ ಬಗ್ಗೆ ಮಾತಾಡಿದ ವಿಡಿಯೋವನ್ನು ತೋರಿಸಿದರು. ವಿಡಿಯೋದಲ್ಲಿ ಚಂದನ್ ಅವರು ನೇಹಾಳ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದರು.[ಅಣ್ಣ ರೆಹಮಾನ್ ಗೆ ಶಿಕ್ಷೆ ಕೊಟ್ಟ ತಂಗಿ ನೇಹ ಗೌಡ.!]

'ಅವಳಿಗೆ ಗಗನಸಖಿ ಉದ್ಯೋಗ ಇರೋದು ಡೌಟು. ಅವಳ ಇಂಗ್ಲೀಷ್ ಅಷ್ಟೊಂದು ಸರಿ ಇಲ್ಲಾ, ತುಂಬಾ ಕೆಟ್ಟದಾಗಿದೆ' ಎಂದೆಲ್ಲಾ ಮಾತನಾಡಿಕೊಂಡಿದ್ದರು.

I dont care to the another person, says Neha Gowda

ಇದನ್ನೆಲ್ಲಾ ನೋಡಿದ ಗಗನಸಖಿ ನೇಹಾ ಮಾತ್ರ ಕಿಚ್ಚ ಸುದೀಪ್ ಅವರಿಗೆ ಕೂಲ್ ಆಗಿಯೇ ಉತ್ತರ ನೀಡಿದರು. 'ನನ್ನ ಬಗ್ಗೆ ತಿಳಿದುಕೊಳ್ಳದೇ ಇರುವವರು ಅದೇನೇ ಮಾತನಾಡಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಯಾರೇ ಏನೇ ಅಂದರೂ 'ಐ ಡೋಂಟ್ ಕೇರ್' ಎಂದು ಸಖತ್ ಪಂಚ್ ಡೈಲಾಗ್ ಮೂಲಕ ತಿರುಗೇಟು ನೀಡಿದರು.

English summary
Bigg Boss Kannada 3: I dont care to the another person says eliminated candidate Neha Gowda.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada