»   » ನಟಿ ಐಂದ್ರಿತಾ ರೇಗೆ ಸ್ವಲ್ಪವೂ ನಾಚಿಕೆ ಇಲ್ಲ.!

ನಟಿ ಐಂದ್ರಿತಾ ರೇಗೆ ಸ್ವಲ್ಪವೂ ನಾಚಿಕೆ ಇಲ್ಲ.!

Posted By:
Subscribe to Filmibeat Kannada

''ನಟಿ ಐಂದ್ರಿತಾ ರೇಗೆ ಸ್ವಲ್ಪವೂ ನಾಚಿಕೆ ಇಲ್ಲ.!'' ಹೀಗಂತ ಬೇರೆ ಯಾರೋ ಕಾಮೆಂಟ್ ಮಾಡಿದ್ದಾರೆ ಎಂದುಕೊಳ್ಳಬೇಡಿ. ''ನನಗೆ ಸ್ವಲ್ಪವೂ ನಾಚಿಕೆ ಇಲ್ಲ'' ಎಂದು ಸ್ವತಃ ನಟಿ ಐಂದ್ರಿತಾ ರೇ ನಗು ನಗುತ್ತಾ ಹೇಳಿಕೊಂಡಿದ್ದಾರೆ. ಅದು ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ....

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಡ್ಯಾನಿಶ್ ಸೇಠ್ ಜೊತೆ ನಟಿ ಐಂದ್ರಿತಾ ರೇ ಭಾಗವಹಿಸಿದರು.

''I'm not at all shy'' says Kannada Actress Aindrita Ray

ಕಾರ್ಯಕ್ರಮದ ನಿರೂಪಕ ಅಕುಲ್ ಬಾಲಾಜಿ, ''ನಾವು ಕೇಳಿ ಪಟ್ಟಿರುವುದು ಏನು ಅಂದ್ರೆ, ಐಂದ್ರಿತಾ ಸಿಕ್ಕಾಪಟ್ಟೆ shy. ಚಿಕ್ಕವಯಸ್ಸಿನಿಂದಲೂ ಸ್ವಲ್ಪ ನಾಚಿಕೆ ಸ್ವಭಾವದವರು. ಒಂದ್ಕಾಲದಲ್ಲಿ ಫೋಟೋಗಳಿಗೆ ಪೋಸ್ ಕೊಡುವುದಕ್ಕೂ ನೀವು ಯೋಚನೆ ಮಾಡುತ್ತಿದ್ದರಂತೆ. ಆದರೆ ಇತ್ತೀಚೆಗೆ ಬಿಕಿನಿ ಶೂಟ್ ಮಾಡುತ್ತಿದ್ದೀರಾ. ಇಂತಹ ಬೋಲ್ಡ್ ಸ್ಟೆಪ್ ಹೇಗೆ ತೆಗೆದುಕೊಂಡ್ರಿ'' ಎಂದು ಪ್ರಶ್ನೆಯ ಬಾಣ ಬಿಟ್ಟರು.

ಅದಕ್ಕೆ, ''ನನಗೆ ನಿಜವಾಗ್ಲೂ ಗೊತ್ತಿಲ್ಲ. ಯಾವುದೇ ಹೋಟೆಲ್ ಗೆ ಹೋದರೂ, ಊಟಕ್ಕೆ ಆರ್ಡರ್ ಮಾಡಬೇಕಾದರೂ, ನಾಚಿಕೆ ಪಟ್ಟುಕೊಳ್ಳುತ್ತಿದ್ದೆ. ಪರಿಚಯ ಇಲ್ಲದವರ ಜೊತೆಗೆ ಮಾತನಾಡಲು ಆಗುತ್ತಿರಲಿಲ್ಲ'' ಎಂದು ಐಂದ್ರಿತಾ ರೇ ಹೇಳುತ್ತಿದ್ದಾಗ, ''ಈಗ ಇಲ್ವಾ ನಾಚಿಕೆ ಸ್ವಭಾವ.?'' ಎಂದು ಅಕುಲ್ ಕೇಳಿದರು.

ಆಗ, ''ಈಗ ನಾಚಿಕೆನೇ ಇಲ್ಲಾ.!'' ಎಂದು ನಟಿ ಐಂದ್ರಿತಾ ರೇ ನಕ್ಕುಬಿಟ್ಟರು.

''ಇದು ಸಿಕ್ಕಾಪಟ್ಟೆ ಬೋಲ್ಡ್ ಸ್ಟೇಟ್ ಮೆಂಟ್'' ಎಂದು ಅಕುಲ್ ಬಾಲಾಜಿ ಕಾಮೆಂಟ್ ಮಾಡಿದ ಮೇಲೆ, ''ಸಂದರ್ಶನ ನೀಡುವುದಕ್ಕೆ ಸ್ವಲ್ಪ ನಾಚಿಕೆ ಆಗುತ್ತದೆ'' ಎಂದು ಮಂದಹಾಸ ಬೀರಿದರು ನಟಿ ಐಂದ್ರಿತಾ ರೇ.

English summary
''I'm not at all shy'' says Kannada Actress Aindrita Ray in Colors Super Channel's popular show 'Super Talk Time'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada