»   » ಕಲಾಕುಂಚದಲ್ಲಿ ಅರಳಿತ್ತು ಜಗ್ಗೇಶ್ ತಾಯಿಯ ಬಹುದೊಡ್ಡ ಕನಸು

ಕಲಾಕುಂಚದಲ್ಲಿ ಅರಳಿತ್ತು ಜಗ್ಗೇಶ್ ತಾಯಿಯ ಬಹುದೊಡ್ಡ ಕನಸು

Posted By:
Subscribe to Filmibeat Kannada

''ಚಿತ್ರರಂಗಕ್ಕೆ ಕಾಲಿಟ್ಟು ದೊಡ್ಡ ನಟನಾಗಿ ಬೆಳೆಯಬೇಕು'' - ಇದು ನಟ ಜಗ್ಗೇಶ್ ರವರ ಆಸೆ ಮಾತ್ರ ಅಲ್ಲ. ಜಗ್ಗೇಶ್ ತಾಯಿ ನಂಜಮ್ಮ ನವರ ಬಹುದೊಡ್ಡ ಕನಸು ಕೂಡ ಹೌದು. ತಮ್ಮ ಕನಸನ್ನ ಕಲಾಕುಂಚದ ಮೂಲಕ ಅರಳಿಸಿದ್ದರು ಜಗ್ಗೇಶ್ ತಾಯಿ ನಂಜಮ್ಮ.

ಹೌದು, ನಟ ಜಗ್ಗೇಶ್ ರವರ ತಾಯಿ ನಂಜಮ್ಮ ಬಹಳ ಚೆನ್ನಾಗಿ ಚಿತ್ರ ಬಿಡಿಸುತ್ತಿದ್ದರು. ಮಗ ದೊಡ್ಡ ನಟನಾಗಬೇಕು ಎಂದುಕೊಂಡಿದ್ದ ನಂಜಮ್ಮ ಬಿಡಿಸಿದ ಚಿತ್ರ ಇದು...

ಜಗ್ಗೇಶ್ ತಾಯಿ ಬಿಡಿಸಿರುವ ಚಿತ್ರ ಇದು

ಜಗ್ಗೇಶ್ ತಾಯಿ ನಂಜಮ್ಮ ಬಿಡಿಸಿರುವ ಈ ಚಿತ್ರವನ್ನ ಸೂಕ್ಷ್ಮವಾಗಿ ಗಮನಿಸಿ...

ಎಡಬದಿಯಲ್ಲಿ ಶೂಟಿಂಗ್ ನಡೆಯುತ್ತಿದೆ... ಕ್ಯಾಮರಾ ಇದೆ... ವಿಲನ್ ಗೆ ಹೀರೋ ಹೊಡೆಯುತ್ತಿದ್ದಾನೆ... ಪ್ಯಾರಾಚ್ಯೂಟ್ ಹಾಗೂ ಹೆಲಿಕಾಫ್ಟರ್ ಕೂಡ ಇದೆ...

ಜಗ್ಗೇಶ್ ತಾಯಿಯ ಆಸೆ

ಇದೆಲ್ಲವನ್ನ ನೋಡಿ ಜನ ಚಪ್ಪಾಳೆ ತಟ್ಟುತ್ತಿರುವುದನ್ನ ಬಲಬದಿಯಲ್ಲಿ ನೀವು ಕಾಣ್ಬಹುದು. ಮಗ (ಜಗ್ಗೇಶ್) ಹೀಗೆ ನಟಿಸುತ್ತಿದ್ದರೆ, ಜನ ಚಪ್ಪಾಳೆ ತಟ್ಟಬೇಕು ಎಂಬುದು ತಾಯಿ ನಂಜಮ್ಮ ನವರ ಬಯಕೆ ಆಗಿತ್ತು.

ತಾಯಿಯ ಕನಸನ್ನ ಈಡೇರಿಸಿದ ಮಗ

ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಇದೆ. ಅದೇನಪ್ಪಾ ಅಂದ್ರೆ, ಚಿತ್ರದಲ್ಲಿ 'ಸೂರ್ಯ' ಝಗಮಗಿಸುತ್ತಿದ್ದಾನೆ. ''ಸೂರ್ಯ ಇರುವವರೆಗೂ ಮಗನ (ಜಗ್ಗೇಶ್) ಹೆಸರು ಉಳಿಯಬೇಕು'' ಎನ್ನುವುದು ನಂಜಮ್ಮ ನವರ ಕನವರಿಕೆ. ಆ ಕನವರಿಕೆಯನ್ನ ಜಗ್ಗೇಶ್ ಈಡೇರಿಸಿದ್ದಾರೆ. ಕೋಟ್ಯಾಂತರ ಅಭಿಮಾನಿಗಳು ಜಗ್ಗೇಶ್ ಉಸಿರಿನಲ್ಲಿ ಬೆರೆತ್ತಿದ್ದಾರೆ.

ಅದ್ಭುತ ಕಲ್ಪನೆ

ಸಣ್ಣ-ಪುಟ್ಟ ಪಾತ್ರಗಳಿಂದ ಬಣ್ಣದ ಬದುಕಿಗೆ ಅಡಿಯಿಟ್ಟ ನಟ ಜಗ್ಗೇಶ್ ಖಳನಟನಾಗಿ, ಹಾಸ್ಯ ನಟನಾಗಿ, ನಾಯಕ ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಜಗ್ಗೇಶ್ ಬೆಳೆದ ಕಥೆಯೇ ರೋಚಕ. ಅದಕ್ಕಿಂತ ಹೆಚ್ಚಾಗಿ ಜಗ್ಗೇಶ್ ತಾಯಿಯ ಕಲ್ಪನೆಯೇ ಅತ್ಯದ್ಭುತ. ['ವೀಕೆಂಡ್ ವಿತ್ ರಮೇಶ್' ಮೊದಲೆರಡು ಸೀಸನ್ ಗಳತ್ತ ಜಗ್ಗೇಶ್ ಮುಖ ಮಾಡ್ಲಿಲ್ಲ.! ಯಾಕೆ.?]

English summary
A beautiful Drawing by Jaggesh's mother Nanjamma was revealed in Zee Kannada Channel's popular show 'Weekend with Ramesh-3'. Take a loot at the picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada