»   » 'ಮಜಾ ಟಾಕೀಸ್'ನಲ್ಲಿ ಸೃಜನ್ ಜೊತೆ ರಾಧಿಕಾ ಕುಮಾರಸ್ವಾಮಿ ಮಸ್ತ್ ಮಜಾ

'ಮಜಾ ಟಾಕೀಸ್'ನಲ್ಲಿ ಸೃಜನ್ ಜೊತೆ ರಾಧಿಕಾ ಕುಮಾರಸ್ವಾಮಿ ಮಸ್ತ್ ಮಜಾ

Posted By:
Subscribe to Filmibeat Kannada

ಕನ್ನಡ ಚಿತ್ರರಂಗಕ್ಕೆ ನಟಿ ರಾಧಿಕಾ ಕುಮಾರಸ್ವಾಮಿ ಗುಡ್ ಬೈ ಹೇಳಿದ್ದಾರಂತೆ. 'ಇಟ್ಟಿಗೆ ಬಿಜಿನೆಸ್' ಶುರು ಮಾಡಿದ್ದಾರಂತೆ. ಬೇರೆ ಮದುವೆ ಆಗಿದ್ದಾರಂತೆ. ಬೆಂಗಳೂರು ಬಿಟ್ಟು ಹೋಗಿದ್ದಾರಂತೆ....ಹೀಗೆ ಹೇಳುತ್ತಾ ಹೋದರೆ ನಟಿ ರಾಧಿಕಾ ಕುಮಾರಸ್ವಾಮಿ ಸುತ್ತ ಹಬ್ಬಿದ ಅಂತೆ-ಕಂತೆಗಳು ಪುರಾಣಗಳು ಮುಗಿಯುವುದೇ ಇಲ್ಲ.

ಗಾಸಿಪ್ ಗಳಿಂದ ಬೇಸರಗೊಂಡು, ಗಾಂಧಿನಗರದಿಂದ ಕೊಂಚ ದೂರ ಉಳಿದಿದ್ದ ನಟಿ ರಾಧಿಕಾ ಕುಮಾರಸ್ವಾಮಿ 'ಮಜಾ ಟಾಕೀಸ್' ನಲ್ಲಿ ಪ್ರತ್ಯಕ್ಷವಾಗಿದ್ದಾರೆ.

ಈ ವಾರದ ಅತಿಥಿ ರಾಧಿಕಾ ಕುಮಾರಸ್ವಾಮಿ

ಸೃಜನ್ ಲೋಕೇಶ್ ನಿರೂಪಣೆ ಇರುವ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಮಜಾ ಟಾಕೀಸ್'ನ ಈ ವಾರದ ಅತಿಥಿ ನಟಿ ರಾಧಿಕಾ ಕುಮಾರಸ್ವಾಮಿ. [ದಿಢೀರ್ ನಾಪತ್ತೆ ಆಗಿದ್ದ ರಾಧಿಕಾ ಕುಮಾರಸ್ವಾಮಿ ಪತ್ತೆ ಆಗಿದ್ದೆಲ್ಲಿ.?]

ಕಳೆದ ವಾರ ರಮ್ಯಾ ಬಂದಿದ್ದರು!

'ಮಜಾ ಟಾಕೀಸ್'ಗೆ ಸ್ಯಾಂಡಲ್ ವುಡ್ ಕ್ವೀನ್, ಕಾಂಗ್ರೆಸ್ ರಾಜಕಾರಣಿ ರಮ್ಯಾ ಕಳೆದ ವಾರವಷ್ಟೇ ಕಾಲಿಟ್ಟಿದ್ದರು. ಈ ವಾರದ ಅತಿಥಿ ನಟಿ ರಾಧಿಕಾ ಕುಮಾರಸ್ವಾಮಿ.

ವಿವಾದ-ಗಾಸಿಪ್ ಬಗ್ಗೆ ಮಾತಿಲ್ಲ!

'ಮಜಾ ಟಾಕೀಸ್'ನಲ್ಲಿ ವಿವಾದ/ಗಾಸಿಪ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಒಂದೆರಡು ಸ್ಟೆಪ್ ಹಾಕಿ, ಸಖತ್ 'ಮಜಾ' ಮಾಡಿದ್ದಾರೆ ನಟಿ ರಾಧಿಕಾ ಕುಮಾರಸ್ವಾಮಿ. [ಹೊಸ ಮದುವೆ ಗುಲ್ಲು: ನಟಿ ರಾಧಿಕಾ ಕುಮಾರಸ್ವಾಮಿ ಬಾಯ್ಬಿಟ್ಟ ಸತ್ಯ ಏನು?]

ಅವತಾರ ನೋಡಿ....

ನಟಿ ರಾಧಿಕಾ ಕುಮಾರಸ್ವಾಮಿ ಅತಿಥಿ ಆಗಿ ಭಾಗವಹಿಸಿರುವ ಸಂಚಿಕೆಯಲ್ಲಿ ಅಪರ್ಣ ಮತ್ತು ಶ್ವೇತಾ ಚೆಂಗಪ್ಪ ರವರ ಅವತಾರ ಹೇಗಿದೆ ಅಂತ ಒಮ್ಮೆ ನೋಡ್ಬಿಡಿ...

[ಅರೇ..ಮರಳಿ ಟ್ರ್ಯಾಕ್ ಗೆ ಬಂದ್ರಾ 'ಸ್ವೀಟಿ' ರಾಧಿಕಾ ಕುಮಾರಸ್ವಾಮಿ?]

ಮಿಸ್ ಮಾಡ್ಬೇಡಿ

ನೀವು ರಾಧಿಕಾ ಕುಮಾರಸ್ವಾಮಿ ಫ್ಯಾನ್ ಆಗಿದ್ದರೆ, ಈ ಶನಿವಾರದ (29/10/2016) 'ಮಜಾ ಟಾಕೀಸ್' ಕಾರ್ಯಕ್ರಮ ಮಿಸ್ ಮಾಡ್ಬೇಡಿ.

English summary
Kannada Actress Radhika Kumaraswamy has taken part as Special Guest in Colors Kannada Channel's Popular Show 'Maja Talkies'. Don't miss to Watch 'Maja Talkies' - Radhika Kumaraswamy special this Saturday (29/10/2016).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada