»   » ಆಹಾ... ಯಶ್ ಗೆ ಎಂಥಾ ಕೆಲಸ ಕೊಟ್ರಮ್ಮ ಹುಡುಗೀರಾ.!

ಆಹಾ... ಯಶ್ ಗೆ ಎಂಥಾ ಕೆಲಸ ಕೊಟ್ರಮ್ಮ ಹುಡುಗೀರಾ.!

Posted By:
Subscribe to Filmibeat Kannada
ಅಪರೂಪಕ್ಕೆ ಯಶ್ ಆದ್ರು ಫೋಟೋಗ್ರಾಫರ್ | Filmibeat Kannada

ಸ್ಯಾಂಡಲ್ ವುಡ್ ಸಿನಿ ಪ್ರಿಯರ ಮುಂದೆ ರಾಕಿಂಗ್ ಸ್ಟಾರ್ ಯಶ್ ಏನಾದರೂ ಇದಕ್ಕಿದ್ದಂತೆ ಪ್ರತ್ಯಕ್ಷವಾದರೆ, ಥಟ್ ಅಂತ ಎಲ್ಲರೂ ಮಾಡುವ ಮೊಟ್ಟ ಮೊದಲ ಕೆಲಸ 'ಯಶ್ ಜೊತೆಗೆ ಒಂದು ಫೋಟೋ/ಸೆಲ್ಫಿ' ಕ್ಲಿಕ್ ಮಾಡಿಕೊಳ್ಳುವುದು.

ಆದ್ರೆ, ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ನಿನ್ನೆ ನಡೆದಿದೆ. ಹೋಟೆಲ್ ಒಂದಕ್ಕೆ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಹೋಗಿದ್ದಾಗ, ಪಕ್ಕದ ಟೇಬಲ್ ನಲ್ಲಿ ಕುಳಿತಿದ್ದ ಇಬ್ಬರು ಹುಡುಗಿಯರು ''ನಮ್ಮದೊಂದು ಫೋಟೋ ಕ್ಲಿಕ್ ಮಾಡ್ತೀರಾ, ಪ್ಲೀಸ್'' ಎಂದು ಯಶ್ ರವರಲ್ಲಿ ಕೇಳಿಕೊಂಡಿದ್ದಾರೆ.

In pic: Radhika Pandit reveals rare pic of Yash

'ಸೆಲೆಬ್ರಿಟಿ' ಎಂಬ ಹಮ್ಮು-ಬಿಮ್ಮು ಇಲ್ಲದೆ, ಕೊಂಚ ಕೂಡ ಜಂಭ ಪಡದೆ, ಆ ಇಬ್ಬರು ಹುಡುಗಿಯರ ಫೋಟೋವನ್ನ ಮೊಬೈಲ್ ನಲ್ಲಿ ಯಶ್ ಕ್ಲಿಕ್ಕಿಸಿದ್ದಾರೆ.

ಹಾಗೆ ಇಬ್ಬರು ಹುಡುಗಿಯರಿಗೆ ಯಶ್ ಫೋಟೋಗ್ರಾಫರ್ ಆದ ಸನ್ನಿವೇಶ ಪತ್ನಿ ರಾಧಿಕಾ ಪಂಡಿತ್ ಮೊಬೈಲ್ ನಲ್ಲಿ ಸೆರೆಯಾಗಿದೆ. ಇದನ್ನೇ ತಮ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿರುವ ರಾಧಿಕಾ ಪಂಡಿತ್, ''ಹೊರ ರಾಜ್ಯದ ಇಬ್ಬರು ಹುಡುಗಿಯರು ಫೋಟೋ ತೆಗೆಯಿರಿ ಎಂದು ಯಶ್ ಬಳಿ ಕೇಳಿಕೊಂಡಾಗ ಕ್ಲಿಕ್ ಮಾಡಿದ ಅಪರೂಪದ ಫೋಟೋ ಇದು. ಅಪ್ಪಿ-ತಪ್ಪಿ ಆ ಹುಡುಗಿಯರಿಗೆ ತಮ್ಮ ಫೋಟೋಗ್ರಾಫರ್ ಯಾರು ಅಂತ ಗೊತ್ತಾದರೆ, ಅವರ ಪ್ರತಿಕ್ರಿಯೆ ಹೇಗಿರುತ್ತೋ.?!'' ಎಂದು ಬರೆದುಕೊಂಡಿದ್ದಾರೆ.

ಈ ಫೋಟೋ ನೋಡಿ 'ಯಶ್ ರವರ ಸರಳತೆ' ಬಗ್ಗೆ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

ಹಾಗೊಂದು ವೇಳೆ, ಆ ಹುಡುಗಿಯರಿಗೆ ತಮ್ಮ ಫೋಟೋಗ್ರಾಫರ್ 'ರಾಕಿಂಗ್ ಸ್ಟಾರ್ ಯಶ್' ಅಂತ ಗೊತ್ತಾದರೆ, ''ಯಶ್ ಜೊತೆ ಒಂದು ಸೆಲ್ಫಿ ಮಿಸ್ ಮಾಡಿಕೊಂಡ್ವಲ್ಲ'' ಅಂತ ಬೇಸರ ಪಡುವುದು ಗ್ಯಾರೆಂಟಿ ಅಂತಲೂ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

English summary
Kannada Actress Radhika Pandit has taken her Facebook page to reveal a rare picture of Yash, where he was requested to take a picture by two girls who were from out of the town.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada